ಶನಿವಾರ, 13 ಫೆಬ್ರುವರಿ 2021
ಬಯಲು ರಂಗಮಂದಿರ, ರವಿಂದ್ರ ಕಲಾಕ್ಷೇತ್ರ, ಬೆಂಗಳೂರು.
ಕಳೆದ 50 ವರ್ಷಗಳಿಂದ ಪ್ರಸ್ತುತ ಪಡಿಸಿದ, 578 ನೇ ಬಾರಿ ಆಡಿದ "ಜೋಕುಮಾರಸ್ವಾಮಿ " ಕನ್ನಡ ನಾಟಕವನ್ನು ನಿನ್ನೆ ಬಯಲು ರಂಗಮಂದಿರ ದಲ್ಲಿ ನೋಡಿದೆವು.
ಡಾ. ಚಂದ್ರಶೇಕರ ಕಂಬಾರ ಬರೆದಿರುವ, ಬಿ.ವಿ.ಕಾರಂತ ಅವರು ನಿರ್ದೇಶಿಸಿದ ಈ ನಾಟಕವು ಎಲ್ಲ ಕೋನಗಳಲ್ಲಿ ಸುಂದರವಾಗಿ ಮೂಡಿಬಂದಿದೆ. ಹಳ್ಳಿಯ ಸೊಗಡಿನ ಈ ನಾಟಕ, ಅದ್ಭುತವಾಗಿ ಪ್ರಸ್ತುತ ಪಡಿಸಿದ ಬೆನಕ (ಬೆಂಗಳೂರು ನಾಟಕ ಕಲಾವಿದರು) ತಂಡದವರಿಗೆ ಅಭಿನಂದನೆಗಳು.
ಹಳ್ಳಿಯ ಗೌಡನೊಬ್ಬನ ದರ್ಪ, ಅವನ ಹೆಂಡತಿಯ ಮಕ್ಕಳಾಗದ ಅಸಹಾಯಕತೆ, ಪಕ್ಕದ ಹೊಲದ ಯುವಕ ನೊಡನೆ ಗೌಡನ ಜಗಳ, ಕೊನೆಯಲ್ಲಿ ಗೌಡನ ಜನರಿಂದ ಯುವಕನ ಕೊಲೆ, ಎಲ್ಲವೂ ಚೆನ್ನಾಗಿ ಮೂಡಿಬಂದಿದೆ.
ಹಳ್ಳಿಯ ದೇವರು "ಜೋಕುಮಾರಸ್ವಾಮಿ" ಯ ಲ್ಲಿ ಜನರ ನಂಬಿಕೆ, ಸಂಭ್ರಮ, ಹಾಡುಗಳು, ಗೌಡನ, ಅವನ ಹೆಂಡತಿಯ ಅಭಿನಯ, ಹಳ್ಳಿಯ ಹಾಡುಗಳಿಗೆ ಸೊಗಸಾದ ನೃತ್ಯ, ವೇಷಭೂಷಣ, ಸೂತ್ರದಾರನಿಂದ ನಾಟಕದ ಪ್ರಾರಂಭ, ಗೌಡನ ಆಪ್ತ ನ ತಮಾಷೆಯ ಅಭಿನಯ ಎಲ್ಲವೂ ಮನರಂಜಿಸುವುದಾಗಿತ್ತು.
ಬಯಲು ರಂಗಭೂಮಿಯ ಸುವರ್ಣ ಸಂಭ್ರಮದ ಮೂರು ದಿನಗಳ ನಾಟಕೋತ್ಸವದ ಮೊದಲ ದಿನದ ನಾಟಕವು ಇದಾಗಿತ್ತು. 50 ವರ್ಷಗಳ ಹಿಂದೆ ರಂಗಭೂಮಿಯಲ್ಲಿ ಶ್ರಮಿಸಿದ ಹಿರಿಯ ಕಲಾವಿದರಿಂದ ಮೆಲುಕು, ನೆನಪುಗಳು ಸಹ ಉದ್ಘಾಟನಾ ಸಮಾರಂಭದಲ್ಲಿ ನಡೆಯಿತು.
ಕಲಾವಿದರೊಂದಿಗೆ |
ಬರೆದಿರುವುದು ಭಾನುವಾರ, ಫೆಬ್ರುವರಿ 14, 2021
No comments:
Post a Comment