Whatsapp forwarded
ರಾತ್ರಿ ಬೇಗ ಮಲಗುವವರು..
ಬೆಳಿಗ್ಗೆ ಬೇಗ ಏಳುವವರು...
ನಸುಕಿನಲ್ಲಿ ವಾಯುವಿಹಾರ ಮಾಡುವವರು..
ಅಂಗಳ ಹಾಗೂ ಗಿಡಬಳ್ಳಿಗಳಿಗೆ ನೀರುಣಿಸುವವರು...
ಮುಂಜಾನೆ ದೇವರ ಪೂಜೆಗೆ ಹೂ ಕೊಯ್ಯುವವರು..
ಪ್ರತಿದಿನ ದೇವಸ್ಥಾನ, ಮಂದಿರಗಳಿಗೆ ಹೋಗುವವರು..
ದಾರಿಯಲ್ಲಿ ಕಂಡಾಗ ಆತ್ಮೀಯವಾಗಿ ಮುಗುಳ್ನಗುವವರು..
ಜನರ ಸುಖ ದುಃಖಗಳನ್ನು ವಿಚಾರಿಸುವವರು..
ಎರಡೂ ಕೈಗಳಿಂದ ಆತ್ಮೀಯ ವಾಗಿ ನಮಸ್ಕರಿಸುವವರು....
ಹಳೆಯ ಟೆಲಿಫೋನ್ ಬಳಸುವವರು....
ದಿನಚರಿ ಬರೆಯುವವರು...
Wrong ನಂಬರ್ ಕರೆ ಬಂದರೂ ಸೌಜನ್ಯದಿಂದ ಒಂದೆರಡು ಮಾತುಗಳನ್ನು ಆಡುವವರು...
ವರ್ತಮಾನ ಪತ್ರಿಕೆಯನ್ನು ಓದುವವರು...
ವ್ರತ ನಿಯಮ ಪಾಲಿಸುವವರು.ಸಮಾಜಕ್ಕೆ ಹೆದರುವವರು....
ಹಳೆಯ ಚೆಡ್ಡಿ, ಪಂಚೆ, ಚಪ್ಪಲಿ, ಬನಿಯನ್ ಧರಿಸುವವರು..
ಉಪ್ಪಿನಕಾಯಿ,ಹಪ್ಪಳ, ಸಂಡಿಗೆ ಮನೆಯಲ್ಲೇ ಮಾಡುವವರು..
ಮನೆಯಲ್ಲೇ ಮಸಾಲೆ ರುಬ್ಬುವವರು....
ಕುಂಕುಮದ ನೀರಲ್ಲಿ ದೃಷ್ಟಿ ತೆಗೆಯುವವರು..
ಬೀದಿ ಬದಿಯ ವ್ಯಾಪಾರದವರೊಡನೆ ಚೌಕಾಸಿ ಮಾಡುವವರು...
ಇಂಥವರು ಇನ್ನು ಹೆಚ್ಚು ವರ್ಷ ನಮ್ಮೊಂದಿಗಿರುವುದಿಲ್ಲ...
ಅವರೊಂದಿಗೆ ... ಅವರ ಜೊತೆಜೊತೆಗೇ ಅಮೂಲ್ಯವಾದ ಜೀವನಪಾಠಗಳೂ ಕಣ್ಮರೆ ಯಾಗುತ್ತವೆ...
ಸರಳ ಸುಂದರ ಬದುಕು...ಪ್ರೇರಣೆ ತುಂಬುವ ಬದುಕು...
ನಾಟಕೀಯತೆಯಿಲ್ಲದ ಬದುಕು, ಧರ್ಮದ ದಾರಿ ತೋರುವ ಬದುಕು, ಇತರರಿಗಾಗಿ
ಸ್ಪಂದಿಸುವ ಹಸನ್ಮುಖೀ ಬದುಕು.
ಈ ಸ್ವಭಾವದ ಒಂದು ತಲೆಮಾರಿನ ಜನರೆಲ್ಲ ಇನ್ನು ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಸಂಪೂರ್ಣ ಕಾಣೆಯಾಗುತ್ತಾರೆ. ಆದ್ದರಿಂದ ಇಂಥವರಿಂದ ಜೀವನಾನುಭವ ಕಲಿಯುವ ಮೂಲಕ ಸಂಸ್ಕ್ರತಿ ಉಳಿಸೋಣ
ಬರೆದಿರುವುದು 18/2/2021
No comments:
Post a Comment