Monday, March 22, 2021

SHIVARAMA KARANTHA VEDIKE - A R KRISHNASHASTRY SMARANE

 Sunday, 21st March 2021

Google Meet Virtual Meeting.

ಕನ್ನಡ ಸಾರಸ್ವತ ಲೋಕದ ದಿಗ್ಗಜ ಡಾ ಎ.ಅರ್. ಕೃಷ್ಣ ಶಾಸ್ತ್ರಿಯವರ ಸ್ಮರಣಾರ್ಥವಾಗಿ ಶಿವರಾಮ ಕಾರಂತ ವೇದಿಕೆ, ಅರ್.ಟಿ.ನಗರ, ಬೆಂಗಳೂರು, ವರ್ಚುವಲ್ ಕಾರ್ಯಕ್ರಮವನ್ನು ಏರ್ಪಡಿಸಿತ್ತು.


ಡಾ ಅನ್ನದಾನೇಶ್ ಹರೀಶ್ 


ಡಾ ಎಸ್.ಎಲ್. ಶ್ರೀನಿವಾಸಮೂರ್ತಿ 

ಶಿವರಾಮ ಕಾರಂತ ವೇದಿಕೆ ಯಿಂದ "ಡಾ  ಎ ಅರ್ ಕೃಷ್ಣ ಶಾಸ್ತಿಯವರ ಸ್ಮರಣೆ" ಕಾರ್ಯಕ್ರಮ, ದಿನಾಂಕ  ಮಾರ್ಚ್ 21, 2021 ರಂದು ಸಂಜೆ 4.30 ಗಂಟೆಗೆ ಗೂಗಲ್ ಮೀಟ್ ವರ್ಚುವಲ್ ಸಭೆಯ ಮೂಲಕ ಸಂಪನ್ನ ಗೊಂಡಿತು.


ಮಗ ರಿಶಿಕಾಂತನ ಸಹಾಯದಿಂದ ಜಯರಾಮ ಸೋಮಯಾಜಿಯವರ ಬಿರ್ತಿಮನೆ ಯಿಂದ ಕಾರ್ಯಕ್ರಮವನ್ನು ಆನ್ಲೈನ್ ಮೂಲಕ ಯಶಸ್ವಿಯಾಗಿ ನಡೆಸಲಾಯಿತು.

ಶ್ರೀಮತಿ ಇಂದಿರಾ ಶರಣ್ 

ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಇಂದಿರಾ ಶರಣ್ ಅವರು ಕಾರ್ಯಕ್ರಮವನ್ನು ಪ್ರಾರಂಬಿಸಿ, ಅತಿಥಿಗಳು ಡಾ ಅನ್ನದಾನೇಶ್ ಹರೀಶ್ ಹಾಗೂ ಡಾ ಎಸ್.ಎಲ್. ಶ್ರೀನಿವಾಸಮೂರ್ತಿ ಯವರ ಪರಿಚಯ ಹಾಗೂ ಸ್ವಾಗತವನ್ನು ಕೋರಿದರು.



ಡಾ ಅನ್ನದಾನೇಶ್ ಹರೀಶ್ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಡಾ ಎ ಅರ್ ಕೃಷ್ಣಮೂರ್ತಿ (1890 - 1968) ಅವರ ಬದುಕು ಬರಹ, ಸಾಧನೆ, ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಇತ್ಯಾದಿ ವಿಷಯಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.



ಮುಖ್ಯ ಅತಿಥಿಗಳಾದ ಡಾ ಎಸ್.ಎಲ್. ಶ್ರೀನಿವಾಸಮೂರ್ತಿ ಯವರು ಎ ಅರ್ ಕೃಷ್ಣಮೂರ್ತಿಯವರ ಕೃತಿಗಳಾದ  "ಕಥಾಮೃತ" ಮತ್ತು "ವಚನ ಭಾರತ" ದ ವಿಷಯವಾಗಿ ಸವಿಸ್ತಾರವಾದ. ಸುದೀರ್ಘವಾದ ಭಾಷಣವನ್ನು ಮಾಡಿದರು.

ಶ್ರೀ ವೀರ ಶೇಖರ ಸ್ವಾಮಿ 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವೇದಿಕೆಯ ಉಪಾಧ್ಯಕ್ಷ  ಶ್ರೀ ವೀರಶೇಖರ ಸ್ವಾಮಿಯವರು ಡಾ ಕೃಷ್ಣ ಶಾಸ್ತ್ರಿಯವರ ಬಗ್ಗೆ ಒಂದೆರಡು ಮಾತುಗಳನ್ನು ಆಡಿದರು.

ಪಾ. ಚಂದ್ರಶೇಖರ ಚಡಗ 

ಕಾರ್ಯಾಧ್ಯಕ್ಷ ರಾದ ಪಾ. ಚಂದ್ರಶೇಖರ ಚದಗರು, ಕಳೆದ 27 ವರ್ಷಗಳಿಂದ ವೇದಿಕೆಯು ನಡೆದು ಬಂದ ದಾರಿ, ಉತ್ತಮವಾದ ಸಾಹಿತ್ಯಿಕ ಕಾರ್ಯಕ್ರಮಗಳನ್ನು ನೀಡಿ ಪ್ರತಿಷ್ಟಿತ ಸಂಸ್ಥೆ ಎನ್ನಿಸಿದೆ. ತರಳಬಾಳು ಕೇಂದ್ರದ ಗ್ರಂಥಾಲಯವು ಸಾವಿರಾರು ಉತ್ತಮ ಕನ್ನಡ ಪುಸ್ತಕಗಳನ್ನು ಹೊಂದಿದೆ ಎಂದೂ ತಿಳಿಸಿದರು.

ಶ್ರೀಮತಿ ಶಶಿಕಲಾ 

ಸಹ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಅವರು, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೆ ಧನ್ಯವಾದ ಸಮರ್ಪಿಸಿದರು.


ಸುಮಾರು ಎರಡು ಗಂಟೆಗಳ ಕಾಲ ಅನ್ ಲೈನ್ ನಲ್ಲಿ ನಡೆದ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

https://www.youtube.com/watch?v=8843SxiCig4

ಕಾರ್ಯಕ್ರಮವನ್ನು ಮೇಲಿನ ಲಿಂಕ್ ಮೂಲಕ ಯು-ಟ್ಯೂಬ್ ನಲ್ಲಿ ವೀಕ್ಸಿಸಬಹುದು.

ಬರೆದಿರುವುದು ಮಂಗಳವಾರ, 23 ಮಾರ್ಚ್ 2021 

ಶಶಿಕಲಾ ಅವರ ವರದಿ:

ಶಿವರಾಮ ಕಾರಂತ ವೇದಿಕೆ (ರಿ)  ಆರ್. ಟಿ ನಗರ ಮತ್ತು ತೇಜಸ್ವಿ ಕನ್ನಡ ಸಂಶೋಧನಾ ಕೇಂದ್ರ, ಕನ್ನಡ ವಿಭಾಗ, ಮಹಾರಾಣಿ ಅಮ್ಮಣ್ಣಿ ಕಾಲೇಜು, ಬೆಂಗಳೂರು ಇವರ ಸಹಯೋಗದಲ್ಲಿ 

ಸಾಹಿತ್ಯ ಕಾರ್ಯಕ್ರಮ "ದಿ|| ಡಾ.ಎ.ಆರ್ ಕೃಷ್ಣ ಶಾಸ್ತ್ರಿಯವರ ಸ್ಮರಣೆ' ವರ್ಚುವಲ್ ಸಭೆ , ದಿನಾಂಕ 21.03.2021, ಭಾನುವಾರ, ಸಮಯ 4.30 ಗಂಟೆಯಿಂದ ನಡೆಯಿತು

ಉದ್ಘಾಟನೆ: ಡಾ.ಬಿ.ಎ ಅನ್ನದಾನೇಶ್ ಹರೀಶ್, ನಿರ್ದೇಶಕರು,ತೇಜಸ್ವಿ ಕನ್ನಡ ಸಂಶೋಧನಾ ಕೇಂದ್ರ ಮತ್ತು ಮುಖ್ಯಸ್ಥರು, ಕನ್ನಡ ವಿಭಾಗ, ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜು, ಬೆಂಗಳೂರು 

ಮುಖ್ಯ ಅತಿಥಿಗಳು: ಡಾ.  ಎಸ್ ಎಲ್ ಶ್ರೀನಿವಾಸ ಮೂರ್ತಿ, ಕನ್ನಡ ವಿಭಾಗದ ಮುಖ್ಯಸ್ಥರು, ವಿಜಯ ವಿಭಜಿತ ಪದವಿ ಪೂರ್ವ ಕಾಲೇಜು, ಬೆಂಗಳೂರು

ಶಿವರಾಮ ಕಾರಂತ ವೇದಿಕೆಯ ಸಂಸ್ಥಾಪಕರು, ಕಾರ್ಯಾಧ್ಯಕ್ಷರು ಆದ ಶ್ರೀ ಪಾ. ಚಂದ್ರಶೇಖರ ಚಡಗರವರು ವೇದಿಕೆ ನಡೆದು ಬಂದ ಹಾದಿ ಮೆಲಕು ಹಾಕಿದರು. ಸ್ವಾಗತ, ಅತಿಥಿಗಳ ಪರಿಚಯ, ನಿರೂಪಣೆ ಕಾರ್ಯದರ್ಶಿ ಗಳಾದ  ಇಂದಿರಾ ಶರಣ್ ನಡೆಸಿಕೊಟ್ಟರು. ವರ್ಚುವಲ್ ಸಭೆಯ ಯಶಸ್ವಿ ಕೋಶಾಧಿಕಾರಿ ಗಳಾದ ಜಯರಾಮ್ ಸೋಮಯಾಜಿಯವರ ಪಾತ್ರ ಬಹಳ ಹಿರಿದು. ಡಾ. ನಿರ್ಮಲಾ ಪ್ರಭುರವರು ವೇದಿಕೆಯ ಅಧ್ಯಕ್ಷರಾಗಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಶೇಖರ ಸ್ವಾಮಿಯವರು, ವೇದಿಕೆಯ ಉಪಾಧ್ಯಕ್ಷರು ನಿರ್ವಹಿಸಿದರು. ವಿಶೇಷ ಉಪಸ್ಥಿತರು ಶ್ರೀಮತಿ ಶಶಿಕಲಾ, ಪ್ರಾಂಶುಪಾಲರು, ಎಂ ಲ್ಯಾಕ್, ಶ್ರೀಮತಿ ಶರ್ಮಿಷ್ಟಾ ದತ್ತಾ ಐ.ಕ್ಯು.ಎ.ಸಿ ಎಂ. ಲ್ಯಾಕ್ . ವೇದಿಕೆಯ ಕಮಿಟಿಯ ಸದಸ್ಯರು ಮತ್ತು ಸದಸ್ಯರುಗಳು ಸಾಹಿತ್ಯ ಬಂಧುಗಳು ಉಪಸ್ಥಿರಿದ್ದರು. ವಂದನಾರ್ಪಣೆ ಶಶಿಕಲಾ, ಸಹ ಕಾರ್ಯದರ್ಶಿ ನಡೆಸಿಕೊಟ್ಟರು.

ದಿ || ಡಾ.ಎ.ಆರ್ ಕೃಷ್ಣ ಶಾಸ್ತ್ರಿಯವರ ಮೊಮ್ಮಗ ಸಿ. ಆರ್ ಸತ್ಯ ಸರ್ ವೇದಿಕೆ ನಡೆದು ಬರಲು ವೇದಿಕೆಯ ಜೊತೆಗಿದ್ದು, ಅನೇಕ ರೀತಿಯ ಜವಾಬ್ದಾರಿ ಹೊತ್ತುವರು. ಅಪಾರ ಅಭಿಮಾನದಿಂದ ವೇದಿಕೆಯ ಸಭೆಯಲ್ಲಿ ಉಪಸ್ಥಿತರಿದ್ದುದ್ದು ವೇದಿಕೆಯ ಹೆಮ್ಮೆ‌.

 ಡಾ. ಬಿ.ಎ ಅನ್ನದಾನೇಶ್ ಹರೀಶ್ , ನಿರ್ದೇಶಕರು, ತೇಜಸ್ವಿ ಕನ್ನಡ ಸಂಶೋಧನಾ ಕೇಂದ್ರ  ಇವರು ಈ ಸಭೆಯ ಉದ್ಘಾಟಕರಾಗಿ ಮಾತನಾಡುತ್ತಾ  ಈಗ ಬದುಕಿನ ರೀತಿನೀತಿಗಳು ಬದಲಾಗಿವೆ. ಶಿವರಾಮ ಕಾರಂತ ವೇದಿಕೆಯಲ್ಲಿ ಹಿರಿಯರೇ ಇರುವುದರಿಂದ ಮನೆಯಲ್ಲಿಯೇ ಕೂತು ಸಭೆ ವೀಕ್ಷಿಸುವುದು ಪ್ರಸ್ತುತ ಮುಖ್ಯ ಅನ್ನಿಸುತ್ತಿದೆ.

ಶಾಸ್ತ್ರಿಗಳು ಸಂಸ್ಕೃತ ಅಧ್ಯಾಪಕರು, ಸಂಸ್ಕೃತ ಭಾಷೆಯ ಹಿನ್ನಲೆಯ ಕಾರಣ ಕನ್ನಡಕ್ಕೆ ಬಹಳ ಅದ್ಭುತ ಕೊಡುಗೆ ನೀಡಿದರು. ಕೃಷ್ಣ ಶಾಸ್ತ್ರಿಗಳು ಮತ್ತು ಟಿ.ಆರ್ ವೆಂಕಣ್ಣಯ್ಯ ಕನ್ನಡದ ಅಶ್ವಿನಿ ದೇವತೆಗಳು, ಕನ್ನಡದ ಸೇನಾನಿಗಳು. ಕನ್ನಡ ಕಟ್ಟಲು ಬಹಳ ಮುಖ್ಯ ಪಾತ್ರ ವಹಿಸಿದರು.

ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಅವರ ಎರಡು ಮಹಾನ್ ಘಟನೆಗಳ ಮೂಲಕ ಸ್ಮರಿಸುತ್ತೇವೆ. ಅವು ಅವರು ಕಟ್ಟಿದ ಕನ್ನಡ ಸಂಘ, ಕರ್ನಾಟಕ ಸಂಘ - ಕನ್ನಡದ ಗುಡಿಗಳು. ಮುಂದೆ ಪವಿತ್ರ ಆಯಾಮಗಳಿಂದ ಪ್ರಬುದ್ಧ ಕರ್ನಾಟಕ ಕಟ್ಟಲು ಬಹಳ ಮುಖ್ಯ ಪ್ರೇರಣೆಯಾಯಿತು. ಅವರಿಗೆ ಸಂಸ್ಕೃತ, ಬಂಗಾಳಿ, ತಮಿಳು, ತೆಲುಗು, ಹಿಂದಿ  ಭಾಷೆಗಳಲ್ಲಿ ಪ್ರಾವೀಣ್ಯತೆ ಇತ್ತು ಹಾಗೂ  ಫ್ರೆಂಚ್, ಜರ್ಮನ್, ಉರ್ದು ಭಾಷೆಗಳನ್ನೂ ಸಹ  ಕಲಿಯುತ್ತಾರೆ

26ನೇ ಕನ್ನಡ ಸಾಹಿತ್ಯ ಸಮ್ಮೇಳನದ  ಹೈದರಾಬಾದ್ ನಲ್ಲಿ ನಡೆಯಿತು. ಸಮ್ಮೇಳನ ಅಧ್ಯಕ್ಷರಾಗಿದ್ದರು. ಆಗ ಇನ್ನೂ ಭಾಷಾ ಪ್ರಾಂತ್ಯ ಆಗಿರಲಿಲ್ಲ. 

ಇವರದು ಗದ್ಯ ಪ್ರಾಕಾರಕ್ಕೆ ಅತ್ಯುತ್ತಮ ಕೊಡುಗೆ. 

ಇವರು ಮಹಾಭಾರತವನ್ನು ವಚನ ಎಂದು ಕರೆದಿದ್ದಾರೆ. ಇವರು ಕನ್ನಡಕ್ಕೆ "ವಚನಭಾರತ" ಎಂಬ ಅಮೂಲ್ಯ ಕೊಡುಗೆ ನೀಡಿದರು. ಅದ್ಭುತ ಭಾಷೆ ಬಳಕೆಯಾಗಿದೆ.  1940-50 ಸಮಯದಲ್ಲಿ ಕನ್ನಡದಲ್ಲಿ ನವೋದಯದ.ಸಾಹಿತ್ಯ ಪ್ರಯೋಗಗಳು ಹುಟ್ಟುತ್ತಿತ್ತು.

ಇವರು ವಚನಭಾರತ ಬರೆಯುವಾಗ, ಆಂದು ಬರೆದಿದ್ದನ್ನು ಆಂದೇ ತನ್ನ  ಇಬ್ಬರು ಮಕ್ಕಳಿಂದ ಓದುಸುತ್ತಿದ್ದರು.   ಅವರು ಓದುವಾಗ  ಎಲ್ಲಿಯಾದರೂ ಅರ್ಥವಾಗಲಿಲ್ಲವೇ ಎಂದು ಕೇಳಿ ತಿಳಿದುಕೊಳ್ಳುತ್ತಿದ್ದರು. ಒಂದೊಂದು ಪ್ರಸಂಗ /ಪರ್ವ ಮುಗಿಸಿದಾಗಲೂ ಅವರ ಮನೆಯಲ್ಲಿ ಮಂಗಳಕಾರ್ಯ ನಡೆಯುತ್ತಿತ್ತು.


ಇಡೀ ಭಾರತಕ್ಕೆ ಒಂದು ಭಾಷೆಗೆ ತಂದಾಗ ಹೋರಾಡಿದವರು. ಇಂಡಿಯಾ ದೇಶದಲ್ಲಿ ಒಂದು ಭಾಷೆ ಅಪ್ರಿಯ. ಪ್ರಪಂಚದ ಅರ್ಧ ಭಾಷೆಗಳು ಭಾರತದಲ್ಲಿವೆ.ಉತ್ತರದ ಹಿಂದಿ ದಕ್ಷಿಣದ ಮೇಲೆ ಹೇರಬೇಕೆನ್ನುವುದು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲಾಗದು. ಭಾಷೆ ಉದ್ಯೋಗಕ್ಕೆ ಸೀಮಿತವಾಗಲಿ. ಆದರೆ ಸಂಸ್ಕೃತಿ ಉಳಿಸಿಕೊಳ್ಳಲು ಹೇಗೆ ಇದೆಯೋ ಹಾಗೆ ಇರಬೇಕು,.ಇವರ ವಾದ.  ಅಂದು ಆಕಾಶವಾಣಿಯಲ್ಲಿ ತೆಲುಗು, ತಮಿಳು ಹೆಚ್ಚಾಗಿದ್ದು, ಕನ್ನಡ ಕೇವಲ 40 ನಿಮಿಷ ಪ್ರಸಾರವಾಗುತ್ತಿದ್ದ ಕನ್ನಡ ಹೆಚ್ಚಿಸಲು ಶ್ರಮಿಸಿದರು.

ಹೊಸಗನ್ನಡ ಭಾಷಾ ಸಂಶೋಧನೆ ಗೆ ಹೊಸತನ ನಿರಂತರ ತುಂಬುತ್ತಾ ಯೋಧನಂತೆ, ಭಕ್ತನಂತೆ ಹರಕೆ ಹೊತ್ತು ದುಡಿದರು. 

ಕುವೆಂಪು ರವರ ರಕ್ತಾಕ್ಷಿ ಗೆ ಅದ್ಭುತ ಮುನ್ನುಡಿ ಬರೆದವರು. ಅವರು ಮುನ್ನುಡಿ ಬರೆಯಲು ಕೇಳಿದಾಗ "ಬಂಗಾರದ ಅರಮನೆಗೆ ಹಿತ್ತಾಳೆಯ ಕಳಸವೇ"  ಎಂದವರು. ಎಂದಾಗ ಕುವೆಂಪು ರವರಿಂಲೂ ವಿನೀತ ಉತ್ತರ.

10ಕ್ಕಿಂತ ಹೆಚ್ಚು ಸಲ ವಚನಭಾರತ ಮರುಮುದ್ರಣಗೊಂಡಿದೆ. 

ಹೀಗೆ ಇವರ ಇತರ ಕೃತಿಗಳು ಕಥಾಮೃತ, ದಡ್ಡರ ಕಥೆಗಳು ಕಥೆಗಳು ಇತ್ಯಾದಿ, ಅವರ ಭಾಷಾ ಪ್ರಯೋಗ ಇತ್ಯಾದಿ ಮಾತನಾಡಿ,.ಇಂತಹ ಮಹಾನ್ ವ್ಯಕ್ತಿಯ ಸ್ಮರಣೆ ಮಾಡಲು ವೇದಿಕೆಯ ಆಹ್ವಾನಕ್ಕೆ ಗೌರವ ಭಾವ ವ್ಯಕ್ತಪಡಿಸಿ ಉದ್ಘಾಟನಾ ಭಾಷಣ ಮುಗಿಸಿದರು. 

""""""""""""""""""

 ಮುಖ್ಯ ಅತಿಥಿಗಳಾಗಿ ಡಾ.ಎಸ್.ಎಲ್ ಶ್ರೀನಿವಾಸ ಮೂರ್ತಿ, ಉಪನ್ಯಾಸಕರು, ಕನ್ನಡ ವಿಭಾಗದ ಮುಖ್ಯಸ್ಥರು, ವಿಜಯ ವಿಭಜಿತ ಪದವಿ ಪೂರ್ವ ಕಾಲೇಜು ಇವರು ಎ.ಆರ್ ಕೃ ರವರ ಎರಡು ಕೃತಿಗಳು 'ವಚನ ಭಾರತ' ಮತ್ತು 'ಕಥಾಮೃತ' ಗಳ ಬಗ್ಗೆ ಮಾತನಾಡಿದರು.

ಎ.ಆರ್.ಕೃ ರವರ ಬಗ್ಗೆ ನಾಲ್ಕು ಮಾತನಾಡಲು ಅವಕಾಶ ಸಿಕ್ಕಿದ್ದು  ನನ್ನ ಪುಣ್ಯ ಎಂದು ಮಾತು ಆರಂಭಿಸಿದರು. ಇಡೀ ಪ್ರಪಂಚದಲ್ಲಿ ಕನ್ನಡ ಅಂತ ನೋಡುವುದು ಮುಂಗೈ ಅಗಲದ ಭೂಪ್ರದೇಶದಲ್ಲಿ ಮಾತ್ರ. ಹೈದರಾಬಾದ್ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಿಗರಿಗೆ ಕನ್ನಡದ ಬಗ್ಗೆ ಇರುವ  ಅಸಡ್ಡೆಯ  ನೊಂದು ಹತಾಶೆ ದುಃಖದಿಂದ ಕನ್ನಡ ಉಳಿಸಿಕೊಳ್ಳಲು ಅಭಿಮಾನವಿಲ್ಲದ ಕನ್ನಡಿಗರು "ಕನ್ನಡವನ್ನು ಅರಬ್ಬೀ ಸಮುದ್ರಕ್ಕೆ ಬಿಸಾಕಿ' ಅಂದರು. ಇವತ್ತಿಗೂ ಆಶಾದಾಯಕವಾಗಿಲ್ಲ. 

ಆವತ್ತಿನ ಕಾಲಕ್ಕೆ ನಮ್ಮ ಸ್ವಂತಿಕೆ, ಪರಂಪರೆ,.ಭಾಷಾವೈವಿಧ್ಯತೆ ಉಳಿಸಿಕೊಳ್ಳುವ.ಸಲುವಾಗಿ ಶ್ರಮಿಸಿದ ಮಹಾನ್ ಚೇತನ ಎ.ಆರಾ ಕೃ ಅಂದರು.

ಅವರ ಸಂಸ್ಕೃತ ಪಾಂಡಿತ್ಯ ಅದ್ಭುತ, ನೆನಸಿಕೊಂಡರೆ ಆಶ್ಚರ್ಯ. ಅರ್ಧಬರ್ಧ ಕಲಿತಿರುವವರನ್ನು ನೋಡಿದ್ದೇವೆ. ತೋರಿಸಿಕೊಳ್ಳಲು ಉಂಡೆ ಉಂಡೆಗಳಾಗಿ ಬಳಸುವವರಿದ್ದಾರೆ. 

ಡಿವಿಜಿ,  ಎ.ಆರ್ ಕೃಷ್ಣ ಶಾಸ್ತ್ರಿ ಗಳು

"ಹೊಸಗನ್ನಡಕ್ಕೆ ಬೇಕಾದ.ಭಾಷಾ ಸೌಂದರ್ಯ ಪುಷ್ಟಿ ಗೊಳಿಸಿದರು" ಮಾಸ್ತಿಯವರ ಮಾತು ನೆನೆದರು.

ಭಾರತೀಯ ಸಂಸ್ಕೃತಿ ಯಲ್ಲಿ ಶಿಲ್ಪಕಲೆ, ಸಂಗೀತ, ನಾಟ್ಯ ಹೀಗೆ ಎಲ್ಲಾ ಭಾಗಗಳ ಮೇಲೆ ನೇರವಾಗಿ ದಟ್ಟ ಪರಿಣಾಮ ರಾಮಾಯಣ, ಮಹಾಭಾರತ, ಭಾಗವತ್ ಗಳಿಂದಾಗಿದೆ. ಇವುಗಳ ಬಹುಮಟ್ಟಿಗೆ ಆಧರಿಸಿಯೇ ಅನೇಕ ಸಾಹಿತ್ಯ ಕೃತಿಗಳು, ಶಿಲ್ಫ, ಚಿತ್ರಕಾರರು ಬಣ್ಣಗಳ ಮೂಲಕ, ಗಾಯಕರು ಗಾಯನದ ಮೂಲಕ ಚಿತ್ರಿಸಿದ್ದಾರೆ.. ಇದು ಭಾಷಾ ಸಂಸ್ಕೃತಿಯ ಮೂಲ. ನೀತಿ ಮೌಲ್ಯಗಳ ಪ್ರಸಾರ ನಡೆದಿದೆ. ನಿತ್ಯ ಜೀವನದ ಬದುಕಿನಲ್ಲಿ ಎಷ್ಟು ಜನ ಹನುಮಂತ, ವಿಭೀಷನರು ಕಾಣಬಹುದು. ಎಲ್ಲಾ ಕಾಲದಲ್ಲೂ ಕೆಟ್ಟವರು ಒಳ್ಳೆಯವರು ಇದ್ದರು. ಕೋಲಾರದ ಕೋಲಾರಮ್ಮ ದೇವಸ್ಥಾನದ  ಎಂಟ್ರಿ ಎಡಗಡೆ ತಮಿಳು ಶಾಸನ ದಲ್ಲಿ ಕದಿಯುವವರ ಉಲ್ಲೇಖವಿದೆ. ಕುತಂತ್ರಿಗಳು ಮನೆಮುರುಕರು ಒಳ್ಳೆಯವರ ಸಂಖ್ಯೆಗಿಂತ ಜಾಸ್ತಿ ಇದ್ದರು. ಅಂತಹ ಎಲ್ಲಾ ಜನಗಳ ಬದುಕನ್ನು ಕೂಡ ಸಮಾಜದಲ್ಲಿ ಬಿತ್ತುವ ಪ್ರಯತ್ನ ಬೃಹತ್ ಕಥೆಯೇ ರಾಮಾಯಣ, ಮಹಾಭಾರತ, ಭಾಗವತ್. ಇದನ್ನು ಬರೆದ ಅವರಿಗೆ ನಮಸ್ಕಾರ.

ನಾವೆಲ್ಲ ಕೇಳಿರಬಹುದಾದ ಪುಸ್ತಕ ಚಂದಮಾಮ. ಬೇತಾಳ ಕಥೆಗಳ ಮೂಲ ಕಥಾಸರಿತ್ಸಾಗರ. ಬೃಹತ್  ಮಾನುಷ, ಅತಿಮಾನುಷ, ದೈವಿಕ ಎಲ್ಲಾ ಗುಣಗಳನ್ನು ಒಳಗೊಂಡಿರುವುದು. ಸೋಮದೇವನ."ಕಥಾಸರಿತ್ಸಾಗರ' ಸಂಸ್ಕೃತದಲ್ಲಿರುವ ದೊಡ್ಡ ಕಾವ್ಯ. ಇಪ್ಪತ್ತೆರಡು ಸಾವಿರ ಶ್ಲೋಕಗಳ  ಬೃಹತ್ ಗಾತ್ರದ ಗ್ರಂಥ. ಯಾವ ಸ್ವಾರಸ್ಯವೂ ಕೆಡದಂತೆ ಅನುವಾದವನ್ನು ಕೇವಲ ಬುದ್ಧಿಯನ್ನೇ ಉಪಯೋಗಿಸದೆ ಹೃದಯವನ್ನೂ ಉಪಯೋಗಿಸಿ ಬಹಳ ಸುಂದರವಾಗಿ ಕನ್ನಡೀಕರಿಸಿದ್ದಾರೆ.

ಅವರ ಪಾಂಡಿತ್ಯದ ಮಟ್ಟ, ಓದುಗಾರಿಕೆಯ ವಿಸ್ತೀರ್ಣ, ತಲಸ್ಪರ್ಶಿಯಾದ ಅಧ್ಯಯನ ಅವರು ಬರೆದ ಪುಸ್ತಕಗಳ ಪೀಠಿಕೆಗಳಲ್ಲಿ ಕಾಣಬಹುದು. ಜನಸಾಮಾನ್ಯರು ಕಲಿತುಕೊಳ್ಳಬಹುದಾದ ಹಿತನುಡಿಗಳನ್ನು  ಕೊಟ್ಟಿದ್ದಾರೆ. ಅವರು ಬರೆದಿರುವ ಪೀಠಿಕೆಗಳನ್ನು ಓದಿದರೇ ಸಾಕು, ಕೌನ್ಸಲರ್ ಮುಂದೆ ಕುಳಿತು ಸಮಸ್ಯೆ ಬಗೆಹರಿಸಿಕೊಂಡಂತಾಗುತ್ತದೆ. 

ಅತಿಥಿಗಳು ವಿಷಯಕ್ಕೆ ಜೋಡಣೆಯಿಗಿ ಧೀರ್ಘವಾದ ಕಥೆಯನ್ನು  ನಮಗೆ ತಿಳಿಸಿದರು. ಅದೋಂದು ರಸಾನುಭವ. ಒಂದು ಬಾರಿ ಕೈಲಾಸದಲ್ಲಿ ಶಿವಪಾರ್ವತಿಯವರು ಏಕಾಂತದಲ್ಲಿರುವ ಸಮಯದಲ್ಲಿ, ಪಾರ್ವತಿ ದೇವಿ ಯಾರಿಗೂ ಗೊತ್ತಿರದಂತಹ ಕಥೆ ಹೇಳಲು ಶಿವನಲ್ಲಿ ಬೇಡಿಕೆ ಇಟ್ಟಾಗ. ಶಿವ ಕೈಲಾಸದ ಬಾಗಿಲುಗಳನ್ನು ಭದ್ರಪಡಿಸಿ, ನಂದಿಗೆ ಕಾವಲಿರಲು ಹೇಳಿ ಕಥೆ ಹೇಳುತ್ತಿರಲು. ಒಳಗೆ ಏನೋ ನಡೆಯುತ್ತಿದೆ ತಿಳಿಯುವ ಹುಚ್ಚಿಗೆ ದಂಬಿಯಾಗಿ ಬಾಗಿಲ ಸಂಧಿಯಿಂದ ಒಳಹೋಗಿ ಕೇಳಿಸಿಕೊಂಡ ಬೃಂದಿ, ಹೊರ ಬಂದು ಹೆಂಡತಿಗೆ, ಅವಳಿಂದ ಎಲ್ಲರಿಗೂ ಕಥೆ ಗೊತ್ತಾಗುವಂತಾಗಿ, ಶಿವನು ಶಾಪಕ್ಕೆ ಗುರಿಯಾಗಿ, ಭೂಲೋಕದಲ್ಲಿ ದಕ್ಷಿಣ ದೇಶದಲ್ಲಿ ಹುಟ್ಟಿ 9 ಲಕ್ಷ ರಸಭರಿತ ಕಥೆಗಳನ್ನು ಬರೆಯಬೇಕು. ಕಥೆ ಮುಂದುವರೆದು ಕೊನೆಯಲ್ಲಿ  ಸಂಸ್ಕೃತದಲ್ಲಿ "ಕಥಾಸರಿಸ್ಸಾಗರ" ಇಪ್ಪತ್ತೆರಡು ಸಾವಿರ ಶ್ಲೋಕಗಳ ಬೃಹತ್ ಸೋಮಕವಿಯ ಸಂಸ್ಕೃತ ಬೃಹತ್ ಗ್ರಂಥವನ್ನು ಕನ್ನಡಕ್ಕೆ ಕೈಗೊಂಡ ಎ.ಆರ್ ಕೃ ರವರ ಸಾಮಾರ್ಥ್ಯ ಯಾವ ಮಟ್ಟದಿರಬೇಕು ಎನ್ನುವುದಕ್ಕೆ 1950ನೇ ಇಸವಿಯಲ್ಲಿ "ವಚನಭಾರತ"  ಬರೆದ ಎ.ಆರ್ ಕೃ ಕೇವಲ ಎರಡು ವರ್ಷಗಳ ಅಂತರದಲ್ಲಿ ಐನೂರು ಪುಟಗಳ "ಕಥಾಮೃತ" ಬರೆದರು. 

ಸಂಸ್ಕೃತದಲ್ಲಿದ್ದ  "ಮಹಾಭಾರತ" ವನ್ನು ಹೊಸಗನ್ನಡ ದಲ್ಲಿ "ವಚನಭಾರತ" ರಚಿಸಿದರು. ಕನ್ನಡದ ವಚನಭಾರತ ಏಕೆ  ಓದಬೇಕು ಎಂಬುದನ್ನು ತಮ್ಮ ಪೀಠಿಕೆಯಲ್ಲಿ ತಿಳಿಸಿದ್ದಾರೆ. ಅವರ ಭಾಷಾಂತರದ ಗುಣಮಟ್ಟ ದ ಬಗ್ಗೆ ಮಾತನಾಡಿದರು. ಇವರು ಬೇಸಿಕಲಿ ಮೇಸ್ಟ್ರು ಮುಂದೆ ಇರುವವರಿಗೆ ಸರಿಯಾಗಿ ಅರ್ಥಮಾಡಿಸಬೇಕು.  ವಚನಭಾರತವನ್ನು  ಮಗಳು ಶಾಂತಾ, ಕಾಲೇಜು ಹುಡುಗಿ, ಮೊಮ್ಮಗಳು ಲೀಲಾ, ಹೈಸ್ಕೂಲು ವಿದ್ಯಾರ್ಥಿನಿಯರು ಹಸ್ತಪ್ರತಿ ಓದಲು ಹೇಳಿ ಈ ಎರಡು ಗ್ರೂಫ್ ಗಳ ಓದುಗರನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆದಿರುತ್ತಾರೆ. ಅದರ ಪೀಠಿಕೆ ಯಾವ ರೀತಿ ದೊಡ್ಡಮಟ್ಟದ್ದೆಂದು ವಿವರಿಸಿದರು. 

ಕನ್ನಡ ಸಾಹಿತ್ಯ ಲೋಕವನ್ನು ಬೆಳಗುತ್ತಿರುವ  ಎರಡು ದೀಪಗಳಲ್ಲಿ ಎ.ಆರ್ ಕೃ ರವರು ಎಂಬ ಮಹಾನ್ ವ್ಯಕ್ತಿಯ ಬಗ್ಗೆ ಜ್ಞಾಪಕ ಮಾಡಿಕೊಳ್ಳಲು ಅವಕಾಶ ಕೊಟ್ಟ ವೇದಿಕೆಗೆ ಧನ್ಯವಾದಗಳನ್ನು ತಿಳಿಸಿ ಮಾತು ಮುಗಿಸಿದರು.

**     **     **     **   **   **  ***

(ದಿ| ಡಾ. ಎ.ಆರ್ ಕೃಷ್ಣಶಾಸ್ತ್ರಿಗಳು ಎಂಬ  ಅಪಾರ ಪಾಂಡಿತ್ಯದ ಕನ್ನಡ ಸಾಹಿತ್ಯ ಲೋಕದ ಮಿನುಗು ತಾರೆಯನ್ನು ತಮ್ಮ ಆಳವಾದ ಅಧ್ಯಯನ ಪಾಂಡಿತ್ಯದಿಂದ ಸಭೆಯಲ್ಲಿ ಮಾತನಾಡಿದ ಅತಿಥಿಗಳ ಮಾತುಗಳನ್ನು ನನ್ನ ಅಲ್ಪಮತಿಯಲ್ಲಿ ಸೆರೆಸಿಕ್ಕ ಪದಗಳನ್ನು ಕಟ್ಟಿಕೊಡಲು ಪ್ರಯತ್ನಿಸಿರುವೆ. ಅಭಿಮಾನದಿಂದ ಬೆರೆಯವ ಹುಚ್ಚಿನಲಿ,  ತಪ್ಪುಗಳಿದ್ದಿರಬಹುದು ಕ್ಷಮೆ ತೋರಿ ಎಂದು ಕೇಳಿಕೊಳ್ಳುವೆ)


- ಶಶಿಕಲಾ

ಸಹ ಕಾರ್ಯದರ್ಶಿ

ಶಿ.ಕಾ‌.ವೇದಿಕೆ



No comments:

Post a Comment