Saturday, March 20, 2021

ಚಾಣಕ್ಯ - ರುದ್ರಮೂರ್ತಿ ಶಾಸ್ತ್ರಿ ಕಾದಂಬರಿ

ಚಾಣಕ್ಯ - ಬೃಹತ್ ಕಾದಂಬರಿ 

 



ಅದೊಂದು 1000 ಪುಟಗಳ ಬೃಹತ್ ಕಾದಂಬರಿ . ನಾನೂ ನಿದಾನವಾದ ಓದುಗ ನಾದುದರಿಂದ ಅದನ್ನು ಓದಿ ಮುಗಿಸಲು ಹಲವಾರು ದಿನಗಳೇ ಬೇಕಾಯಿತು.
ಕಾದಂಬರಿಯು ಮೊದಲಿಂದ ಕೊನೆಯವರೆಗೆ ರೋಚಕವಾಗಿ ಮುಂದುವರಿಯುತ್ತದೆ.
ಮಗದ ಸಾಮ್ರಾಜ್ಯದ ಚಕ್ರವರ್ತಿ ದನನಂದನನ ಅತಿಯಾದ ಧನ , ವೈಭವದ ಆಸೆ , ಕಾಮ ಪಿಪಾಸಿ, ಪ್ರಜಾ ಪೀಡಕ,  ಅವನ ಮಹಾ ಮಾತ್ಯರಾದ ರಾಕ್ಷಸ ಮತ್ತು ಶ್ರೀಯಕ ಅವರ ದಬ್ಬಾಳಿಕೆ ಮತ್ತು ಕುತಂತ್ರ ಬಹಳ ಚೆನ್ನಾಗಿ ವಿವರಿಸುವರು.
ಮಹಾ ಮೇಧಾವಿ ಚಾಣಕ್ಯನ ತಂದೆ ಚಣಕನ ಪಾಟಲಿ ಪುತ್ರದಲ್ಲಿ ಕೊಲೆಯಾದುದರ ಸೇಡನ್ನು ತೀರಿಸಿಕೊಳ್ಳಲು, ಪಿಪ್ಪಿಲಿವನದ ರಾಜ ಚಂದ್ರಗುಪ್ತ ಮೌರ್ಯ ನೊಡನೆ ಸೇರಿ, ಅದ್ಭುತವಾದ ಯೋಜನೆಯನ್ನು ನಿರೂಪಿಸಿ ಧನ ನಂದನನ ಕೊಲೆ, ಚಂದ್ರಗುಪ್ತ ಮೌರ್ಯನ ಮಗಧ ಸಾಮ್ರಾಜ್ಯದ ಚಕ್ರವರ್ತಿಯಾಗಿ ಪಟ್ಟಾಭಿಶೇಕ ವನ್ನು ಅತ್ಯಂತ ಸ್ವಾರಸ್ಯಕರವಾಗಿ ವರ್ಣಿಸಲಾಗಿದೆ.

ಬರೆದಿರುವುದು 21 ಮಾರ್ಚ್ 2021  

No comments:

Post a Comment