Monday, March 15, 2021

ನಾಯಿ ಕಳೆದಿದೆ - ಕನ್ನಡ ನಾಟಕ

 ಭಾನುವಾರ, 14 ಮಾರ್ಚ್ 2021

ಕೆ. ಇ. ಎ. ರಂಗಮಂದಿರ, ಬಸವೇಶ್ವರನಗರ, ಬೆಂಗಳೂರು 

"ನಾಯಿ ಕಳೆದಿದೆ" - ಭಾವನಾತ್ಮಕವಾದ, ಹಾಸ್ಯ, ಗಂಭೀರ ವಿಚಾರಗಳಿಂದ ಕೂಡಿದ ರಾಜೇಂದ್ರ ಕಾರಂತ್ ಅವರ ನಿರ್ದೇಶನದ ಸುಂದರವಾದ ಸಾಮಾಜಿಕ ಕನ್ನಡ ನಾಟಕ. 

ಸುಮಾರು 11 ಪಾತ್ರಧಾರಿಗಳನ್ನು ಒಳಗೊಂಡ, 90 ನಿಮಿಷದ ನಗೆ/ಗಂಬೀರ/ಹಾಸ್ಯ ನಾಟಕವು ಆಕರ್ಷಕವಾಗಿ ಮುಂದುವರಿಯುತ್ತದೆ.

ಕಲಾವಿದರು 
37 ವರ್ಷಗಳ ಕೆಲಸ ಮಾಡಿ, ಬೆಂಗಳೂರಿನಲ್ಲಿ ಮನೆಯೊಂದು ಮಾಡಿ, ಮಗನನ್ನು ಶಾಲೆ, ಕಾಲೇಜಿಗೆ ಓದಿಸಿ ಅವನನ್ನು ಸಾಫ್ಟವೇರ್ ಇಂಜಿನಿಯರ್ ಮಾಡಿ ಕೈ ತುಂಬಾ ಸಂಬಳ ಬರುವ ಕೆಲಸ ಸಿಕ್ಕಿದ್ದೂ ಆಯಿತು.

ಅವನು ಮದುವೆಯಾದ ಹುಡುಗಿಯೂ ಸಾಫ್ಟ್ ವೇರ್ ಕೆಲಸ, ಅತ್ತೆ ಮಾವನೊಂದಿಗೆ ಇರಲು ಇಷ್ಟ ಪಡದೇ , ದೂರದ ಅಪಾರ್ಟಮೆಂಟ್  ನಲ್ಲಿ ಅವರ ವಾಸ. ಈರ್ವರೂ ನಾಯಿ ಪ್ರಿಯರು, "ರಾಗಾ" ಅವರ ನಾಯಿಯ ಹೆಸರು.

ಅತ್ತೆಯು, ಸಂಸ್ಕಾರವುಳ್ಳ ಮಡಿವಂತ ಬ್ರಾಹ್ಮಣ ಮಹಿಳೆ, ವಾರಾಂತ್ಯಕ್ಕೆ ಮಗ ಸೊಸೆ ನಾಯಿಯೊಂದಿಗೆ ಬರುವಾಗ ಮನೆಯೊಳಗೆ ನಾಯಿ ತರುವುದಕ್ಕೆ ಅವಳ ವಿರೋಧ, ಮಗನ ಮೇಲಿನ ಮಮತೆ, ಮಾವನ ಅಸಹಾಯಕತೆ.




ನಾಟಕದ ಕೆಲವು ದೃಶ್ಯಗಳು 

ಮಗ, ಸೊಸೆಗೆ ಎರಡು ವರ್ಷಕ್ಕೆ ಅಮೆರಿಕಾಗೆ ಕೆಲಸದ ಮೇಲೆ ಹೋಗುವ ಅವಕಾಶ. ನಾಯಿಯ ವ್ಯವಸ್ಥೆ?
ಅಶೋಕ ಎಂಬಾತ, ಮಾವನ ಮನೆಯ ಹತ್ತಿರ ಇರುವ ದಿನಸಿ ಅಂಗಡಿ ಇಟ್ಟುಗೊಂಡು ಜೀವನ ಸಾಗಿಸುವವ, ಅತ್ತೆ ಮಾವನಿಗೆ ಅತ್ನೀಯ.  ಅವನು ನಾಯಿಯನ್ನು ನೋಡಿಕೊಳ್ಳುವ ಭರವಸೆ ನೀಡಿದ.
ಮಗ-ಸೊಸೆ ಅಮೇರಿಕದಿಂದ ಫೋನಾಯಿಸಿದಾಗ "ರಾಗ" ನನ್ನೇ ವಿಚಾರಿಸುವ ಮನೋಭಾವ, ನಾಯಿಯ ಬೊಗಳುವಿಕೆಯನ್ನು ಕೇಳುವ ಆತುರ.

ನಾಟಕದ ಅಶೋಕ (ಮಹೇಶ್ ಸತೀಶ್ ಐತಾಳ್))

ರಾಜೇಂದ್ರ ಕಾರಂತ, ನಾಟಕದ ನಾಗವೇಣಿಯಮ್ಮ 

ಬೀದಿ ಗುಡಿಸುವ ಮುನಿಯಮ್ಮ, ಬಿಗ್ ಬಾಸ್ ಗೆ ಹೋಗಿ, ನಾಗವೇಣಿಯಮ್ಮ ಆಗಿರುವುದು, ಅವಳ ಬಿಬಿಎಂಪಿ ಕಾರ್ಪೋರೇ ಟರ್ ಆಗುವ ಕನಸು, ಅವಳ ಚಮಚ ದೊಂದಿಗೆ ಅತ್ತೆಮಾವನ ಮನೆಗೆ ಬಂದು ನಾಯಿಯ ಬಗ್ಗೆ ರಾದ್ಧಾಂತ, ಸುಲಿಗೆ ಇತ್ಯಾದಿ ಅಭಿನಯವು ಹಾಸ್ಯ ಪೂರ್ಣವಾಗಿದೆ.
ಅಶೋಕನ ವೈಯುಕ್ತಿಕ ಕಥೆ, ನಾಯಿಯನ್ನು ನೋಡಿಕೊಳ್ಳುವಲ್ಲಿ ಅವನ ಪಾತ್ರ, ಮಗ ಸೊಸೆ ಅಮೇರಿಕದಿಂದ ವಾಪಸ್ಸು ಬಂದ ನಂತರದ ಸನ್ನಿವೇಶ, ಸೊಸೆಯ ರೋಷ, ಕ್ರೋಧ, ಮಾವನ ಅಸಹಾಯಕತೆಯಿಂದ ಅವರು ದೂರ ಹೋಗುವ ನಿರ್ಧಾರ ಹೃದಯಸ್ಪರ್ಶಿಯಾಗಿದೆ.
ಕಥೆಯು ಹಲವಾರು ಮನೆಗಳಲ್ಲಿ ಆಗುತ್ತಿರುವ ವಿಷಯವಾಗಿದ್ದರಿಂದ, ವೇದಿಕೆಯ ಮೇಲೆ ಸುಂದರವಾಗಿ ಪ್ರಸ್ತುತ ಪಡಿಸಿರುವುದು ಆಕರ್ಷಕವಾಗಿತ್ತು.
ನಾಟಕವು ಮೊದಲಿಂದ ಕೊನೆಯ ವರೆಗೆ ಸಭಿಕರನ್ನು ಸೆರೆ ಹಿಡಿದು ಕೊಳ್ಳುತ್ತದೆ. ಎಲ್ಲಾ ಪಾತ್ರಧಾರಿಗಳ ಅಭಿನಯ, ಸಂಭಾಷಣೆ, ರಂಗ ಸಜ್ಜಿಕೆ, ಬೆಳಕು,ಎಲ್ಲವೂ ಚೆನ್ನಾಗಿತ್ತು. 
ನಾವುಗಳು 

ರಾಜೇಂದ್ರ ಕಾರಂತ ಮತ್ತು ಅವರ ತಂಡದವರಿಗೆ ಅಭಿನಂದನೆಗಳು.
ಬರೆದಿರುವುದು. ಮಂಗಳವಾರ, 16/3/2021 

No comments:

Post a Comment