ಮಂಗಳವಾರ, 16 ಮಾರ್ಚ್ 2021
ವೈದಿಕ ಮಂದಿರ, ಚಾಮರಾಜಪೇಟೆ, ಬೆಂಗಳೂರು
ಅಕ್ಕ ನಾಗವೇಣಿ ನಮ್ಮನ್ನೆಲ್ಲಾ ಅಗಲಿ ಒಂದು ವರ್ಷವೇ ಕಳೆಯಿತು. ಕಳೆದ ವರ್ಷ ಕೊರೋನ ಪ್ರಾರಂಭವಾದ ಸಮಯದಲ್ಲಿ (ಮಾರ್ಚ್ 27, 2020) ಅವಳು ತುಮಕೂರಿನಲ್ಲಿ ಸ್ವ್ರಗಸ್ಥಳಾಗಿದ್ದಳು.
ನೀರಜ್,ಜಯಂತಿ,ನಳಿನಿ, ನಟರಾಜ |
ನಾಗರಾಜ, ಶಾಂತಲಾ |
ಧಾರ್ಮಿಕ ವಿಧಿ ವಿಧಾನದ ಪ್ರಕಾರ ವರ್ಷದ ಅಂತ್ಯದ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ "ವರ್ಷಾಂತಿಕ" ಎಂದು ಕರೆಯಲಾಗುತ್ತದೆ.
ನಟರಾಜ, ಜಯಂತಿ, ನೀರಜ್ |
ನಾಗರಾಜ, ನಟರಾಜ (ಮಗಂದಿರು) ಈ ಕಾರ್ಯಕ್ರಮವನ್ನು ಶ್ರದ್ಧಾ ಪೂರ್ವಕವಾಗಿ ವೈದಿಕ ಮಂದಿರದಲ್ಲಿ ಬಂಧು ಬಾಂಧವರನೆಲ್ಲ ಆಮಂತ್ರಿಸಿ, ಸಂಪನ್ನಗೊಳಿಸಿದ್ದಾರೆ. ಅಗಲಿದ ಆತ್ಮಕ್ಕೆ ಚಿರಶಾಂತಿ, ಸದ್ಗತಿ ಕೋರಲು ಪವಮಾನ ಹೋಮ, ಶ್ರಾದ್ಧ, ದಾನದಕ್ಷಿಣೆ ಗಳನ್ನು ಪೂರೈಸಿ, ವಿಶೇಷ ಭೋಜನವನ್ನೂ ಏರ್ಪಡಿಸಿದ್ದಾರೆ.
ನಳಿನಿ, ವಿನಯ |
ಸುಮಾರು 70 ಜನ ಬಂಧುಗಳು, ಹಿತೈಷಿಗಳು, ಪುರೋಹಿತ ವರ್ಗದವರಿಗೆ ಭರ್ಜರಿ ಊಟ (ಹೋಳಿಗೆ, ಜಿಲೇಬಿ) ದ ವ್ಯವಸ್ಥಯನ್ನೂ ಮಾಡಲಾಗಿತ್ತು.
ನಾಗವೇಣಿಗೆ ಅ ಭಗವಂತನು ಸದ್ಗತಿಯನ್ನು ಕರುಣಿಸಲಿ ಎಂದೂ ಪ್ರಾರ್ಥಿಸಿದ್ಧಾಯಿತು.
ಬರೆದಿರುವುದು ಬುಧವಾರ 17/2021
No comments:
Post a Comment