Sunday, March 14, 2021

SHRADDHANJALI - SUNDARESAN - PREMA

 Long time friend, well wisher family SUNDARESANS passed away 





V. SUNDARESAN (12/3/2021)


PREMA SUNDARESAN (13/3/ 2021)


It's surprising, shocking and coincidental that they passed away almost together.

Sundaresan had COVID19 , stayed in the hospital for 5 days and on ventilator, breathed his last on 12th March 2021, evening.
Prema Sundaresan had brain damage and was in coma for last two years, and breathed her last on the night of 13th March 2021. Probably she had the intuition that her husband is no more, 

They were our close family friend, well wishers and felt the close binding since the days of my working in Gombe, Nigeria in 1978.
In 1980, I started working again in Yola, where Sundaresan also shifted to Yola to work as Professor of Maths in Polytechnique.
His family, wife Prema and two daughters Priya and Usha joined them we became very close as one family, as they were speaking Kannada. His son Srinivasan (Chini) was studying in India. 

Nalini Somayaji (Wife) wrote in her Facebook page as tribute:


ಸುಂದರೇಶನ್ ದಂಪತಿಗಳು.
ನನ್ನ ಈ ದಂಪತಿಗಳ ಸಂಬಂದ, ನಾನು ಆಫ್ರೀಕಾದ, ನೈಜೀರಿಯಾ ದೇಶದ ಗಂಗೋಲ ರಾಜ್ಯದ ರಾಜಧಾನಿ ಯೋಲ ನಗರಕ್ಕೆ ಕಾಲಿಟ್ಟ ದಿನದಿಂದ ಪ್ರಾರಂಭವಾಯಿತು. (ಜನವರಿ 1981).
ನಮ್ಮ ಇವರ ಸಂಬಂಧ ಯಾವ ಕೊಂಡಿಯಿಂದ ಬೆಸೆದಿತ್ತೊ?
ನೈಜೀರಿಯಾದ ಯೋಲದಲ್ಲಿ ನನ್ನ ನೋಡಿಕೊಂಡವರು.ಮಗ ರವಿಯನ್ನು ಹೆರುವ ಸಂದರ್ಭದಲ್ಲಿ ನನ್ನೊಡನೆ ಇದ್ದವರು. ಹೆರಿಗೆ ನೋವನ್ನು ತಾಳಲಾರದೆ ಅವರ ಕೈ ಮೈ ಪರಚಿದರೂ ರಾತ್ರಿಯಿಡೀ ಸಹಿಸಿ ನೋಡಲು ಬಂದ ಡಾಕ್ಟರ್ ಗೇ ಜೋರು ಮಾಡಿದವರು. ಕಡೆಗೆ ಸಿಸೇರಿಯನ್ ನನಗೆ ಆಗಿ ನಾ ಅನಸ್ಥೇಶಿಯ ಅಮಲಿನಿಂದ ಹೊರ ಬಂದು ಕಣ್ಣು ತೆರೆದ ನಂತರವೇ ಮನೆಗೆ ಹೋಗಿ ಸ್ನಾನ ಮುಗಿಸಿ ಕಾಫಿ ಕುಡಿದ ಮಾತೆ. ಅಲ್ಲಿಯವರೆಗೆ ನಿರಾಹಾರಿ. ಎಂಥಾ ಋಣಾಣುಬಂಧ.
ಚೆನ್ನೈ ನಲ್ಲಿ ನೆಲೆಸಿದ ಅವರು, ಭಾರತಕ್ಕೆ ಬಂದನಂತರವೂ ನಾವು ಅವರು ಒಟ್ಟಾಗಿದ್ದಿದೆ.
ಪ್ರೇಮಕ್ಕಎರಡು ವರುಷದ ಹಿಂದೆ ಕೋಮಾದಲ್ಲಿ ಮುಳುಗಿದ್ದರು.
ಮನೆಯಲ್ಲಿಯೇ ಅವರಿಗೆ ನರ್ಸ್ ಸೇವೆ ಇಟ್ಟು ಮಕ್ಕಳು ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿದ್ದರು ಮಗ ಶ್ರೀನಿವಾಸ ಹಾಗೂ ಸೊಸೆ ಭುವನ.
ಪ್ರೇಮಕ್ಕನ ಕತೆ ಹೀಗಾದರೆ
ಅಪ್ಪ ಎಂದೇ ನಾ ಕರೆಯುತ್ತಿದ್ದ ಪ್ರೇಮಕ್ಕನ ಗಂಡ ಸುಂದರೇಶನ್. ತಾಳ್ಮೆಯ ಪ್ರತಿ ಅವತಾರ. ಸಿಟ್ಟು ಮಾಡಿದ್ದೇ ನಾ ಕಂಡಿಲ್ಲ. ನಮ್ಮೊಡನೆ ಹಿರಿಯರಾಗಿ ನೋಡುತ್ತಿದ್ದು ಆಗಾಗ ಫೋನಾಯಿಸಿ ಮಾತನಾಡುತ್ತಿದ್ದ ಅಪ್ಪ ಒಂದು ಕಾರ್ಯಕ್ರಮಕ್ಕೆ ಹೋದವರು ಒಂದು ವಾರದ ಹಿಂದೆ ಈ ಕೊರೋನಾ ಮಹಾ ಮಾರಿಗೆ ಬಲಿಯಾಗಿ ಶುಕ್ರ ವಾರದ ರಾತ್ರಿ, ತಮ್ಮ ಮದುವೆಯ ವಾರ್ಷಿಕೋತ್ಸವದ ದಿನದಂದೆ ತಮ್ಮ ಕೊನೆಯುಸಿರು ಎಳೆದೇಬಿಟ್ಟರೆ, (ಎಂಥಾ ವಿಚಿತ್ರ), ಪ್ರೇಮಕ್ಕ ಅವರು ಹೋದ ಮೇಲೆ ನನಗೇನು ಉಳಿದಿದೆ ಎಂಬಂತೆ ನಿನ್ನೆ ತಾವೂ ಅವರ ಹಾದಿ ಹಿಡಿದರಂತೆ.
ಮನ ಡೋಲಾಯಮಾನ. ನಮಗೇ ಈ ವಿಷಯ ತಡೆಯಲಾರದ ನೋವು. ಇನ್ನು ತಂದೆ ತಾಯಿಯನ್ನು ಒಟ್ಟಿಗೆ ಕಳೆದುಕೊಂಡ ಮಕ್ಕಳ ಸ್ಥಿತಿ ನಾ ಊಹಿಸಲೂ ನಿಶಕ್ತಳು.
ನಮ್ಮನ್ನೆಲ್ಲ ಅಗಲಿದ ಸುಂದರೇಶನ್ -ಪ್ರೇಮಕ್ಕ ದಂಪತಿಗಳ ಆತ್ಮಕ್ಕೆ ಶಾಂತಿ ಸಿಗಲಿ.
ಮಕ್ಕಳಿಗೆ ಆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದೇ ಭಗವಂತನಲ್ಲಿ ನಮ್ಮ ಪ್ರಾರ್ಥನೆ.
ಓಂ ಶಾಂತಿ ಶಾಂತಿ ಶಾಂತಿಃ.
Mysore Govind Prasad wrote:

ಹೃದಯ ಸ್ಪರ್ಶಿ ಲೇಖನ. ಮನದಾಳದಿಂದ ಬಂದುದು ಮನಸ್ಸನ್ನು ಮುಟ್ಟುತ್ತದೆ ಎಂತಹ ಜೀವನ. ಎಂತಹ ಅಂತ್ಯ. ಮಾನಸಿಕ ಖಿನ್ನತೆ ಉಂಟಾಗುತ್ತಿದೆ. ನಾನು ಸುಂದರೇಶನ್ ಹುಟ್ಟಿದ್ದು ಒಂದೇ ವರ್ಷ. ನಮ್ಮ ವಿವಾಹ ತಿಂಗಳೂ ಮಾರ್ಚ್. ನಾವಿಬ್ಬರೂ ಗಣಿತ ಅಧ್ಯಾಪಕರು. ಇದರಿಂದ ನಮ್ಮಿಬ್ಬರ ಬಾಂಧವ್ಯ ಗಾಢವಾಗಿ ಮತ್ತು ದೃಢವಾಗಿ ಇದ್ದಿತು. ಅವರ ಮೃತ್ಯುವಿಂದ ನನಗೆ ಅಪಾರ ನಷ್ಟವಾಗಿದೆ. ಅವರ ಆತ್ಮಗಳಿಗೆ  ಶಾಂತಿ ಕೋರವುದನ್ನು ಬಿಟ್ಟು ನಾವು ಇನ್ನೇನು ಮಾಡಲು ಸಾಧ್ಯ?
SHRI. SUNDARESAN
My association with  Sundaresan and family is for over four decades. We were more like a famly than friends. Sundaresan and I were born in the same year. Our marriage was also in March. Ours was 8th and theirs 12th. Both of us  had our Masters in Mathematics and taught that subject. We always kept ourselves in touch even after we left Nigeria. My wife and I made it a point to visit them, whenever we were in Chennai and they visited us when they were in Bengaluru. Even of late we constantly exchanged forwarded messages of mutual interest. Their hospitable nature particularly, of Smt. Prema was out of this world. She was an excellent cook too. Cannot help blaming the  cruel hand of destiny. In their loss, I have lost a part of myself. My wife would  have been shattered if she had lived to see this day. 
Their children were like ours and our son was like theirs.
It was our fortune, that Usha lived in Dubai during our stay there, and we could meet often.She has imbibed their hospitality trait. 
I remember our frequent trips to Ministry of Education, Bauchi from Gombe either in his car or in mine. We used to  have get together parties on the smallest pretext. We went on family picnics every now and then. Distances would not deter our urge to meet each other.
With their encouraging appreciative words, I started assumimg that I am a good singer! 
Dear Bhuvana, Srini, Priya and Usha, I know it is futile to even attempt to console you and ask you to accept the reality, because I am unable to come to terms with fate myself.

Vijaya Lakshmi wrote:
ತುಂಬಾ ದುಃಖಕರ ಸಂಗತಿ..........ಅವರ ಮಕ್ಕಳಿಗೆ, ನಿಮಗೂ, ಶ್ರೀಕೃಷ್ಣ ಮುಖ್ಯ ಪ್ರಾಣ ದೇವರು ದುಃಖ ಶಮನ ಮಾಡುವ ಶಕ್ತಿ. ಕೊಡಲಿ......

Shashikala Gowda:
ಸುಂದರೇಶ್ ಸರ್ ದಂಪತಿಗಳು
ಅವರು ಪುಣ್ಯ.ಭಗವಂತನ ಪಾದ ಸೇರುವಾಗಲೂ ಜೊತೆಯಾಗಿದ್ದಾರೆ.
ನಿಮ್ಮ ಅವರ ನಡುವಿನ ಆ ಬಂಧ, ನಿಜಕ್ಕೂ ಅದ್ಭುತ. ಇಲ್ಲಿಯವರೆಗೂ ಜೊತೆಯಾಗಿಯೇ ಇದ್ದುದು. ಭಾವಗಳ ಮೀಟಿ ಮಿಣುಕಾಡುವ ಹೃದಯದ ನೋವಿಗೆ ಪದಗಳಿಲ್ಲದೇ ಇರಬಹುದು ಅಂದುಕೊಳ್ಳುತ್ತಾ.
ಆ ದುಃಖದ ಛಾಯೆಯಿಂದ ನೀವುಗಳು, ಅವರ ಕುಟುಂಬ ಆದಷ್ಟು ಹೊರಬರುವಂತಾಗಲಿ. ಹಿರಿಯ ಜೀವಾತ್ಮಗಳು ಸ್ವರ್ಗ ಸೇರಲಿ.🙏
ಓಂ ಶಾಂತಿ🙏

Srinidhi T K reacted:
ಮಾನವೀಯ ಮೌಲ್ಯಗಳನ್ನು ಎತ್ತ ಹಿಡಿದ ಇಂತಹ ಹಿರಿಯರು ಸದಾ ಅನುಕರಣೀಯರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮೆಲ್ಲರಿಗೂ ದುಃಖ ಭರಿಸುವ ಶಕ್ತಿ ಕೊಡಲಿ.
Mangala Lakshmi reacted:
ಸಾವು ಅನ್ನೋದು ಒಬ್ಬೊಬ್ಬರಿಗೂ ವಿಭಿನ್ನ, ಈ ಹಿರಿಯರ ಸಾವು ಬಹಳ ನೋವುತರಿಸಿತು. ಆದರೂ ಇಬ್ಬರಿಗೂ ಒಟ್ಟಿಗೇ ಮುಕ್ತಿ ಸಿಕ್ಕಿದ್ದು ಸಮಾಧಾನವೇ ಅಲ್ವಾ
,ಅದಕ್ಕೂ ಪುಣ್ಯ ಮಾಡಿರಬೇಕು. ಅವರಿಬ್ಬರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ 🙏🙏

MAHABALIPURAM VISIT MAY 2016





Their family visit to Birthimane, Bengaluru, in May 2013


Daughter Shubha's house


Priya, Nalini, Bhuvana, Usha

Sundaresan, Grandson Rakesh, Me, Son Srinivasan


VISIT TO CHENNAI MARCH 2019

MAY THEIR SOULS REST IN PEACE.... ಓಂ ಶಾಂತಿ, ಓಂ ಶಾಂತಿ, ಓಂ ಶಾಂತಿ ....

ಬರೆದಿರುವುದು, ಸೋಮವಾರ, 15 ಮಾರ್ಚ್ 2021 








2 comments:

  1. Dear Uncle &aunty,
    Deeply touched by your emtional write up🙏🙏,took us down the memory lane. Thanks for posting wonderful photos too🙏🙏
    Thank you so much🙏
    Dear Prasad uncle,
    Touched by your emotional write up too,🙏🙏,yes,still can't believe,parents are no more.
    Thanks dear all🙏🙏

    ReplyDelete
  2. Namaskarams & thanks from
    Srini,Priya &Usha🙏🙏

    ReplyDelete