Wednesday, November 17, 2021

ತುಳಸಿ ಹಬ್ಬ - ಉತ್ಥಾನ ದ್ವಾದಶಿ

 ಮಂಗಳವಾರ, ನವಂಬರ 16, 2021 

ಬಿರ್ತಿಮನೆ, ಬೆಂಗಳೂರು 


ಎಲ್ಲೆಡೆ ತುಳಸಿ ಹಬ್ಬದ ಸಂಭ್ರಮ. ಕಾರ್ತಿಕ ಮಾಸದಲ್ಲಿ ಬರುವ ದೀಪಾವಳಿಯ ನಂತರ ಬರುವ ಹಬ್ಬ ತುಳಸಿ ಹಬ್ಬ 

ಉತ್ಥಾನ ದ್ವಾದಶಿ ಎಂದೂ ಈ ಹಬ್ಬವನ್ನು ಕರೆಯುತ್ತಾರೆ. ಇದು ಹೆಂಗಳೆಯರ ಹಬ್ಬ ಎಂದರೂ ತಪ್ಪಾಗಲಾರದು. ಉತ್ಥಾನ ಎಂದರೆ ಏಳು, ಎಚ್ಚರಗೊಳ್ಳು ಎಂದು ಅರ್ಥ. ಚಾತುರ್ಮಾಸದ ಕಡೆಯ ದಿನವಾದ ಇದು ವಿಷ್ಣುವನ್ನು ಜಾಗೃತಗೊಳಿಸುವ ದಿನ.


ಬೆಂಗಳೂರಿನ ನಮ್ಮ ಮನೆ "ಬಿರ್ತಿಮನೆ" ಯಲ್ಲಿಯೂ ತುಳಸಿ ಹಬ್ಬದ ಸಂಭ್ರಮ.

ತುಳಸಿ ಕಟ್ಟೆ ಗೆ ನೆಲ್ಲಿ ಗಿಡವನ್ನು ಜೋಡಿಸಿ, ದೀಪ, ಹೂವುಗಳಿಂದ ಅಲಂಕರಿಸಿ ಪೂಜೆಯನ್ನು ಮಾಡಿದ್ದಾಯಿತು.


ಹಿಂದೆ ಅಮೃತಪ್ರಾಪ್ತಿಗಾಗಿ ದೇವದಾನವರು ಕ್ಷೀರಸಮುದ್ರದಲಿ ಮಂದರಪರ್ವತವನ್ನು ಕಡುಗೋಲಾಗಿಯೂ, ವಾಸುಕಿಯನ್ನು ಹಗ್ಗವನ್ನಾಗಿಯೂ, ಮಾಡಿಕೊಂಡು ಶ್ರೀಹರಿಯ ಅದ್ಭುತ ಮಹಿಮೆಯ ಸಹಾಯದಿಂದ ಸಮುದ್ರಮಥನ ಮಾಡಿದರು. ಆಗ ಅಮೃತಕಲಶವನ್ನು ಹಿಡಿದುಕೊಂಡು ಶ್ರೀಹರಿಯು ವೈದ್ಯರೂಪನಾಗಿ ಸಮುದ್ರಮಧ್ಯದಿಂದ ಧನ್ವಂತರೀರೂಪದಿಂದ ಅವತರಿಸಿದನು. ಆ ದಿನ ಕಾರ್ತಿಕ ಹುಣ್ಣಿಮೆಯಾಗಿತ್ತು. ತಕ್ಷಣ ಅವನ ಕಣ್ಣಿಂದ ಆನಂದಾಶ್ರುವಿನ ಹನಿಗಳು ಅಮೃತಕಲಶದಲ್ಲಿ, ಬೀಳಲು ತುಳಸಿಯ ಜನನವಾಯ್ತು.

ಈ ದಿನವನ್ನು " ಉತ್ಥಾನ ದ್ವಾದಶಿ" ಎಂದೂ ಕರೆಯುತ್ತಾರೆ.


ತನ್ನಿಮಿತ್ತ ನಿಮಗೆ ತುಲಸಿಯ ಕತೆ.

ತುಳಸೀ ಕಟ್ಟೆಯಲ್ಲಿ ವಿಷ್ಣು ಸ್ವರೂಪವಾದ ನೆಲ್ಲಿ ಕೊಂಬೆಯನ್ನು ನೆಟ್ಟು "ತುಲಸೀ ಪೂಜೆ" ಮಾಡುವ ಸಂಪ್ರದಾಯ ಎಲ್ಲಕಡೆಗಳಲ್ಲಿದೆ.

ಆಷಾಢ ಶುದ್ಧ ಏಕಾದಶಿಯ "ಶಯನೈಕಾದಶಿ" ಯಂದು ಮಲಗಿದ ಮಹಾವಿಷ್ಣುವು ಇಂದು ಏಳುತ್ತಾನೆ.

ಆದ್ದರಿಂದ ಇದಕ್ಕೆ "ಉತ್ಥಾನ (ಏಳುವುದು) ದ್ವಾದಶಿ" ಎಂದು ಹೇಳುತ್ತಾರೆ.

ವಿಷ್ಣುವಿನ ಯೋಗನಿದ್ರಾಕಾಲದ ಆಷಾಢ ಶುದ್ಧ ದ್ವಾದಶಿಯಿಂದ,ಕಾರ್ತೀಕ ಶುದ್ಧ ದ್ವಾದಶಿವರೆಗಿನ ಈ ನಾಲ್ಕು ತಿಂಗಳು ಮದುವೆ ಮುಂತಾದ ಶುಭಕಾರ್ಯಗಳನ್ನು ಮಾಡುವುದಿಲ್ಲ.

ಉತ್ತರ ಕರ್ನಾಟಕ ಮತ್ತು ಕರಾವಳಿಯಲ್ಲಿ ಈಗಲೂ ಇದು ಚಾಲ್ತಿಯಲ್ಲಿದೆ.

ತುಲನೆ ಇಲ್ಲದ ಸಸ್ಯವಾದ್ದರಿಂದ ತುಲಸೀ ಎಂಬ ಹೆಸರು ಬಂದಿದೆ.

ತುಳಸಿಯಲ್ಲಿ ಬಿಳಿ ಮತ್ತು ಕರಿ_ತುಳಸಿ ಎಂದು ಎರಡು ಪ್ರಭೇದಗಳಿವೆ.

ರಾಮತುಳಸಿ,ಕೃಷ್ಣತುಳಸಿ ಎಂಬ ಹೆಸರುಗಳೂ ಇವೆ.

ಔಷಧೀಯ ಗುಣ ಎರಡಲ್ಲೂ ಒಂದೇ ರೀತಿ ಇದೆ.

ಸುಮಂಗಲಿಯರು ಪ್ರತಿದಿನ ತುಳಸಿ ಪೂಜೆ ಮಾಡುತ್ತಾರೆ.

ಶಾಲಗ್ರಾಮ ಮತ್ತು ಶಂಖದ ಮೇಲೆ ತಪ್ಪದೆ ತುಳಸಿಯ ಕುಡಿ ಇರಲೇ ಬೇಕು ಎಂದು ಶಾಸ್ತ್ರಗಳು ಸಾರಿವೆ.

ತುಳಸೀದಳ ಮಿಶ್ರಿತ ತೀರ್ಥ ಸೇವನೆಯು ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.




ಸಂಜೆಯ ಸಮಯ ರವಿ ವಿದ್ಯಾ ಮತ್ತು ಊರ್ವಿ ಮನೆಗೆ ಬಂದಿರುವುದೂ ವಿಶೇಷ.

ನಂತರ ದೀಪ ಹಚ್ಚುವಿಕೆ, ಪಟಾಕಿ, ನಕ್ಷತ್ರ ಕಡ್ಡಿ, ನೆಲಚಕ್ರ ಇತ್ಯಾದಿ ಸಂಭ್ರಮ.




ಹಾಗೇ ಊರ್ವಿಯ ಏಳು ತಿಂಗಳು ಹುಟ್ಟಿದ ದಿನದ ಸಂಭ್ರಮ.




ಅದೊಂದು ವಿಶೇಷವಾದ ದಿನ. ಸಂಭ್ರಮಿಸಿದ್ದೂ ಆಯಿತು.


ಸಂಗ್ರಹಿಸಿದ್ದು/ಬರೆದಿರುವುದು, ಗುರುವಾರ ನವಂಬರ 18.


No comments:

Post a Comment