ಶುಕ್ರವಾರ, 12 ನವಂಬರ 2021
ಸಿ.ಎಸ್. ಅಶ್ವತ್ ಕಲಾಮಂದಿರ, ಏನ್.ಅರ್.ಕಾಲೋನಿ.ಬೆಂಗಳೂರು
ಬಸವರಾಜ್ ಕಟ್ಟಿಮನಿ ಅವರ ಕಾದಂಬರಿ ಆಧಾರಿತ ಕನ್ನಡ ನಾಟಕ " ರಕ್ತ ಧ್ವಜ".
"ದೃಶ್ಯ (ರಿ)" ನಾಟಕ ತಂಡವು ಪ್ರಥಮ ಪ್ರದರ್ಶನವನ್ನು ಯಶಸ್ವಿಯಾಗಿ ನೆರವೇಸಿತು.
ಸುಮಾರು ಮೂವತ್ತಕ್ಕೂ ಹೆಚ್ಚು ಹವ್ಯಾಸಿ ಕಲಾವಿದರು , ಮಕ್ಕಳನ್ನೂ ಒಳಗೊಂಡು ಪ್ರಸ್ತುತ ಪಡಿಸಿದ ನಾಟಕ ಪ್ರಥಮ ಪ್ರದರ್ಶನದಲ್ಲಿ ಯಶಸ್ಸನ್ನು ಕಂಡಿದೆ ಎದ್ನು ಹೇಳಬಹುದು.
ಸಂದರ್ಭ ಅದನ್ನು ಹೊರಹಾಕುತ್ತದೆ..
ಭಾರತ ಸ್ವಾತಂತ್ರದ ಮುಂಚೆ ಹಳ್ಳಿಗಳಲ್ಲಿ ಸಂಗ್ರಾಮದ ಕಿಚ್ಚನ್ನು ಒಳಗೊಂಡು , ಬ್ರಿಟಿಷರ ದಬ್ಬಾಳಿಕೆ, ಹೆಂಗಸರು, ಮಕ್ಕಳು ಹಿರಿಯರು, ಬ್ರಿಟಿಷರ ಆಳ್ವಿಕೆಯ ವಿರುದ್ಧ ಪ್ರತಿಭಟನೆ, ಕಂದಾಯ ಕೊಡದೇ ಬಾರದೆಂಬ ಹಠ, ಪೋಲಿಸರಿಂದ ಲಾತಿ ಹೊಡೆತ, ಗುಂಡಿಕ್ಕುವುದು, ಹಾಗೂ ಹಲವಾರು ನಾಗರಿಕರು ನೆೇಣು ಗಂಬಕ್ಕೆ ಎರಬೇಕಾಗಿ ಬಂದು ಹುತಾತ್ಮರಾದ ಕಥೆಯ ಹೃದಯ ಸ್ಪರ್ಶಿ ನಾಟಕ.
ವೈಷ್ಣವ ಜನತೆ, ತೆನೀ ಕಹಿಯೇ ಹಾಡಿನಿಂದ ಪ್ರಾರಂಭವಾದ ನಾಟಕ, ಸಂಗೀತ, ಹಾಡು ನೃತ್ಯವನ್ನು ಒಳಗೊಂಡು, ಪೂರಕವಾದ ರಂಗಸಜ್ಜಿಕೆಯೂ ಇದ್ದು ತಂಡದ ಪ್ರಯತ್ನ ಸಫಲವಾಗಿದೆ ಎಂದೂ ಹೇಳಬಹುದು.
ಬರೆದಿರುವುದು ಶನಿವಾರ, 13 ನವಂಬರ
No comments:
Post a Comment