ಭಾನುವಾರ, 28 ನವಂಬರ 2021
ತರಳಬಾಳು ಗ್ರಂಥಾಲಯ , ಅರ್.ಟಿ. ನಗರ, ಬೆಂಗಳೂರು.
ಲಕ್ಷಿನಾರಾಯಣ ಚಡಗ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಹಾಗೂ ರೂವಾರಿ ಪಾ. ಚಂದ್ರಶೇಖರ ಚಡಗ ಅವರ ನೇತೃತ್ವದಲ್ಲಿ, ಶಿವರಾಮ ಕಾರಂತ ವೇದಿಕೆ, ಮತ್ತು ತರಳಬಾಳು ಗ್ರಂಥಲಯದ ಸಹಯೋಗದಲ್ಲಿ ಎಂದಿನಂತೆ ಈ ವರ್ಷವೂ ಪುಸ್ತಕ ಸಪ್ತಾಹದ ಅಂಗವಾಗಿ ಗ್ರಂಥಾಲಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶ್ರೀ ಜಯರಾಂ ರಾಯಪುರ ಅವರಿಂದ ಕಾರ್ಯಕ್ರಮದ ಉದ್ಘಾಟನೆ, ಶ್ರೀ ಶ್ರೀನಿವಾಸ ತಿವಾರಿ, ಮತ್ತು ಶ್ರೀಮತಿ ರಾಧಾ ರಾಮಸ್ವಾಮಿ ಯವರಿಂದ ಗ್ರಂಥಾಲಯ, ಪುಸ್ತಕ ಓದುವಿಕೆಯ ಮಹತ್ವ, ಚಾರಿತ್ರ್ಯ ವಿಕಸನ, ಜ್ಞಾನಾರ್ಜನೆ,ಇತ್ಯಾದಿ ಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ಜಂಗಮವಾಣಿ (ಮೊಬೈಲ್) ಯ ವ್ಯಸನವನ್ನು ಕಡಿಮೆಮಾಡಿ ಪುಸ್ತಕ ಓದುವಿಕೆ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಶ್ರೀಮತಿ ಇಂದಿರಾ ಶರಣ್ ಅವರು ಕಾರ್ಯಕ್ರಮದ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.ಪಾ. ಚಂದ್ರಶೇಖರ ಚದಗರು, ಗ್ರಂಥಾಲಯ, ಪುಸ್ತಕ ಓದುವವರು, ಹಾಗೂ 5000 ಪುಸ್ತಕಗಳಿಂದ ಪ್ರಾರಂಭವಾದ ಗ್ರಂಥಾಲಯ ಇಂದು 26000 ಗಳಿಂದ ಕೂಡಿದ್ದು ಓದುಗರ ಸಂಖ್ಯೆ ಕಡಿಮೆಯಾಗುವುದರ ಬಗ್ಗೆ ವಿಷಾದ ವ್ಯಕ್ತ ಪಡಿಸಿದರು.
ಶ್ರೀಮತಿ ಮಂಜುಳಾ ಭಾರ್ಗವಿ ಯವರಿಂದ ಪ್ರಾರ್ಥನೆಯಾದ ನಂತರ , ಅತಿಥಿಗಳಿಂದ ದೀಪ ಬೆಳಗಿಸಿ ಕಾರ್ಯಕ್ರಮದ ಉದ್ಘಾಟನೆಯಾದ ಬಳಿಕ ಜಯರಾಂ ರಾಯಪುರ ಅವರು ತಮ್ಮ ಪುಸ್ತಕ ಪ್ರೀತಿಯನ್ನೂ ವಿವರಿಸಿ ಭಾಷಣವನ್ನು ಮಾಡಿದರು.
ಶ್ರೀ ಜಯರಾಂ ರಾಯಪುರ |
ಶ್ರೀಮತಿ ರಾಧಾ ರಾಮಸ್ವಾಮಿ |
ಶ್ರೀ ಶ್ರೀನಿವಾಸ ತಿವಾರಿಯವರೂ ಪುಸ್ತಕದ ಮಹತ್ವವನ್ನು ತಿಳಿಸಿ ಓದುವ ಹವ್ಯಾಸವನ್ನು ಬೆಳೆಸಬೇಕೆಂದು ಒತ್ತಾಯ ಮಾಡಿದರು.
ಶ್ರೀ ಸಿ. ಅರ್. ಸತ್ಯ ಅವರು ಪುಸ್ತಕದ ದಿಜಿಟಲೀಕರಣದಿಂದ ಗ್ರಂಥಾಲಯದ ಮಹತ್ವ ಕಡಿಮೆಯಗುತಿದ್ದು ಹೆಚ್ಚು ಹೆಚ್ಚು ಓದುಗರು ಮನೆಯಿಂದಲೇ ಕಂಪ್ಯೂಟರ್, ಮೊಬೈಲ್ ಮೂಲಕ ಓದುವ ಹವ್ಯಾಸ ಬಳಸಿಕೊಳ್ಳುವುದೂ ಸಂತೋಷದ ವಿಷಯ ಎಂದೂ ತಿಳಿಸಿದರು.
ಇಂದಿರಾ ಶರಣ್ ಅವರಿಂದ ಧನ್ಯವಾದ ಸಮರ್ಪಣೆ ಯೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯವಾಯಿತು.
ಬರೆದಿರುವುದು 29 ನವಂಬರ 2021
ವೇದಿಕೆಯ ಪರವಾಗಿ ವರದಿ :
ಶಶಿಕಲಾ ಆರ್
ಸಹ ಕಾರ್ಯದರ್ಶಿ, ಶಿವರಾಮ ಕಾರಂತ ವೇದಿಕೆ
ಆತ್ಮೀಯರೇ,
ದಿನಾಂಕ 28.11.2021 ಸಂಜೆ 4.30ಕ್ಕೆ, ತರಳಬಾಳು ಗ್ರಂಥಾಲಯ, ಆರ್ ಟಿ ನಗರ ಇಲ್ಲಿ
ಲಕ್ಷೀನಾರಾಯಣ ಚಡಗ ಮೆಮೋರಿಯಲ್ ಟ್ರಸ್ಟ್ ಮತ್ತು ತರಳಬಾಳು ಕೇಂದ್ರ ಸಂಯುಕ್ತ ಆಶ್ರಯ ಹಾಗೂ ಥೋರೋ ಫೌಂಡೇಶನ್ ಸಹಕಾರ ದಲ್ಲಿ ಶಿವರಾಮ ಕಾರಂತ ವೇದಿಕೆಯಿಂದ "ಗ್ರಂಥಾಲಯ ದಿನ " ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪಾ.ಚಂದ್ರಶೇಖರ್ ಚಡಗರವರು, ಮ್ಯಾನೇಜಿಂಗ್ ಟ್ರಸ್ಟಿ ಇವರ ನೇತೃತ್ವದಲ್ಲಿ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಜಯರಾಮ್ ರಾಯಪುರ ರವರು, ಮುಖ್ಯ ಅತಿಥಿಗಳಾಗಿ ಶ್ರೀಮತಿ ರಾಧಾ ರಾಮಸ್ವಾಮಿ, ಶಿಕ್ಷಣ ತಜ್ಞೆ ಮತ್ತು ಶ್ರೀ ಶ್ರೀನಿವಾಸ ತಿವಾರಿ, ಸಹಾಯಕ ಪ್ರಾಧ್ಯಾಪಕರು, ಸಂಜಯಗಾಂಧಿ ಬಿಎಡ್ ಕಾಲೇಜು ಇವರುಗಳು ಭಾಗವಹಿಸಿದ್ದರು. ವೇದಿಕೆಯ ಅಧ್ಯಕ್ಷತೆಯನ್ನು ಡಾ. ನಿರ್ಮಲ ಪ್ರಭು ವಹಿಸಿದ್ದರು.
ಉದ್ಘಾಟಕರ ಭಾಷಣ:
ಶ್ರೀ ಜಯರಾಮ್ ರಾಯಪುರ. ವಿದ್ಯಾರ್ಥಿ ಜೀವನದ ಬಹುಪಾಲು ಗ್ರಂಥಾಲಯಗಳಲ್ಲಿ ಕಳೆದಿರುವುದಾಗಿ, ಮೈಸೂರಿನಲ್ಲಿ ಗ್ರಂಥಾಲಯ ಸ್ಥಾಪಿಸಿದ್ದು, ಕನ್ನಡದಲ್ಲಿ ವೈಚಾರಿಕ ಬರಹಗಳಿಗೆ ಪೂರಕವಾದ ನಿಯತಕಾಲಿಕೆ " ಸಮಾಜಮುಖಿ" ಮಾಸ ಪತ್ರಿಕೆ ಹೊರತರುತ್ತಿರುವುದರ ಉದ್ದೇಶ ತಿಳಿಸಿದರು. ಕರ್ನಾಟಕ ಮತ್ತು ಭಾರತದ ಇತಿಹಾಸದ ಸುತ್ತ ಅನೇಕ ನಾಟಕಗಳು ಬರೆದಿದ್ದು, ಶಹಜಹಾನ್ ನ ನಾಲ್ಕು ಮಕ್ಕಳ ಮಧ್ಯೆ ಯುದ್ಧ,ಇದು ನಮ್ಮ ಮಹಾಭಾರತದ ತರ ಕಾಣಿಸಿತು. ಅಲ್ಲಿ ಕಾಣುವ ಯುದ್ಧ, ಸೋಲು, ಗೆಲವು, ಧರ್ಮ ಜಿಜ್ಞಾಸೆ ಮುಂತಾದವುಗಳ ಬಗ್ಗೆ ಅನೇಕ ತುಲನೆಗಳನ್ನು ತಾವು ಬರೆದ ಶಹಜಹಾನ್ ನಾಟಕದಲ್ಲಿ ಕಾಣಬಹುದು, ಹಲವಾರು ಪ್ರದರ್ಶನಗಳನ್ನು ಇದು ಕಾಣುತ್ತಿರುವುದಾಗಿ ಮಾತನಾಡಿದರು.
ಕರ್ನಾಟಕ ಇತಿಹಾಸಕ್ಕೆ ಬಂದರೆ ಚಾವುಂಡರಾಯ ದೊಡ್ಡ ಮಟ್ಟದ ಕವಿ. ರನ್ನನಿಗೆ ಆಶ್ರಯ ಕೊಟ್ಟವನು. ಬಾಹುಬಲಿ ವಿಗ್ರಹ ಕೆತ್ತಿಸಿ, ಅದರಲ್ಲಿ ತನ್ನತನ ಕಂಡುಕೊಂಡಿದ್ದಾನೆ. ಸಾಂಸ್ಕೃತಿಕ, ಸಾಹಿತ್ಯಿಕ ಪರಂಪರೆಗೆ ಬಹುದಾಡ್ಡ ಕೊಡುಗೆ ಕೊಟ್ಟಿದ್ದು, ಆ ವಿಷಯಗಳ ಬಗೆ ನಾಟಕ ಬರೆದಿರುವುದರ ಬಗ್ಗೆ ವಿಸ್ತಾರವಾಗಿ ಹೇಳಿದರು.
ಸಾಧನೆ? ಯಾವುದು ನನ್ನ ಸಾಧನೆ ಆಗಬೇಕು. ಮಕ್ಕಳಿಗೆ ತಿಳುವಳಿಕೆ ಬರಬೇಕು ಅಂದರೆ ಗ್ರಂಥಗಳನ್ನು ಓದಬೇಕು, ಅದು ಸಾಧಿಸುವ ಜ್ಞಾನ ಕೊಡುತ್ತದೆ. ಗ್ರಂಥಾಲಯ ನಮ್ಮ ಮನಸ್ಸಿನ ಅವಾಸಸ್ಥಾನವಾಗಬೇಕು ಎಂದು ಮಕ್ಕಳನ್ನುದ್ದೇಶಿಸಿ ಹೇಳಿ ಮಾತು ಮುಗಿಸಿದರು
ಅತಿಥಿ ಭಾಷಣ:
ರಾಧಾ ರಾಮಸ್ವಾಮಿಯವರು ಶಿಕ್ಷಣ ತಜ್ಞೆ, ಮಾತನಾಡುತ್ತ ಪುಸ್ತಕಗಳು ನಮ್ಮ ಜೀವನದ ಅವಿಭಾಜ್ಯ ಅಂಗ, ಅತ್ಯುತ್ತಮ ಸ್ನೇಹಿತ ಕೂಡ. ವೇದಿಕೆಯಲ್ಲಿ ಮಕ್ಕಳಿದ್ದೀರಿ ನೀವು ಪುಸ್ತಕಗಳನ್ನು ಓದಿ, ಅಯಸ್ಕಾಂತದಂತೆ ನಿಮ್ಮನ್ನು ಸೆಳೆಯುತ್ತವೆ. ಓದುವ ಹವ್ಯಾಸ ಮಾಡಿಕೊಳ್ಳಿ ಮನಸ್ಸು ತೀಕ್ಷ್ಣವಾಗುತ್ತೆ, ತೀಡಿದಂತೆ ಆಗುತ್ತೆ, ಸಾಕಷ್ಟು ಕ್ರಿಯಾಶೀಲತೆಯಾಗುತ್ತೆ. ಪುಸ್ತಕದ ಮೂಲಕ ಪರಿಹಾರ ಇದೆ ಎಂಬ ಸತ್ಯವನ್ನು ತಾವು ಕಂಡುಕೊಂಡಿದ್ದು, ಮೊಬೈಲ್ ಕಡಿಮೆ ಉಪಯೋಗಿಸಿ, ಪುಸ್ತಕ ಜಾಸ್ತಿ ಓದಿ ಅದ್ಭುತ ನಾಗರೀಕರಾಗುತ್ತೀರಿ ಹೀಗೆ ಅದ್ಭುತ ವಾಗಿ ಮಕ್ಕಳಿಗಗ ಮಾರ್ಗದರ್ಶನ ನೀಡಿದರು.
ಅತಿಥಿ ಭಾಷಣ:
ಶ್ರೀನಿವಾಸ ತಿವಾರಿ, ಸಹಾಯಕ ಪ್ರಾಧ್ಯಾಪಕರು
ವೇದಿಕೆಯಲ್ಲಿ ಪ್ರಜ್ಞಾವಂತ ಹಿರಿಯರಿದ್ದೀರಿ, ಆದ್ದರಿಂದ ನಾನು ಮಕ್ಕಳನುದ್ದೇಶಿಸಿ ನಾಲ್ಕು ಮಾತು ಆಡುವೆ ಎನ್ನುತ್ತಾ ವಿಧ್ಯಾರ್ಥಿಗಳು ಪಠ್ಯಪುಸ್ತಕಗಳ ಜೊತೆಗೆ ಇತರೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ಅಂತಹ ಹವ್ಯಾಸ ನಿಮ್ಮನ್ನು ರೂಪಿಸುತ್ತದೆ. ಮೊಬೈಲ್ addiction ಜಾಸ್ತಿ ಆಗಿದ್ದು, ಅದು ಡ್ರಗ್ಸ್ addictionಗೆ ಸಮವಾಗಿದೆ. ಕೆಲವರು ನಿದ್ದೆ ಬರುವುದಿಲ್ಲ ಎಂದು ಏನೇನೋ ಪ್ರಯತ್ನಗಳನ್ನು ಮಾಡ್ತಾರೆ. ಓದುತ್ತಾ ಮಲಗಿಕೊಳ್ಳಿ, ನಿದ್ದೆ ತಾನಾಗಿಯೇ ಬರುವುದು. ಮಕ್ಕಳಿಗೆ ಬಡತನದ ಬೆಲೆ ಗೊತ್ತಾಗಬೇಕು. ಆಗ ಹಣಕ್ಕೆ, ಸಮಯಕ್ಕೆ ಬೆಲೆ ಕೊಡುವುದು ತಿಳಿಯುತ್ತಾರೆ. ಗ್ರಂಥಾಲಯಗಳನ್ನು ಬಳಸಿಕೊಳ್ಳಿ, ಹವ್ಯಾಸವಾಗಿ ರೂಢಿಸಿಕೊಳ್ಳಿ, ವ್ಯಕ್ತಿತ್ವ ರೂಪಿತವಾಗುತ್ತದೆ. ಶಿಕ್ಷಣದ ಮೂಲಕ ನಿರಂತರ ಓದುವ ಸಮಾಜ ಸೃಸ್ಠಿಸಬೇಕು. ಅದೇ ನಮ್ಮ ರಾಷ್ಟ್ರೀಯ ಗುರಿ. ಹೀಗೆ ಮಕ್ಕಳು ತಮ್ಮನ್ನು ರೂಪಿಸಿಕೊಳ್ಳಲು ಗ್ರಂಥಾಲಯ ಮತ್ತು ಓದಿನ ಪ್ರಾಮುಖ್ಯತೆಯ ಬಗ್ಗೆ ಮಾತನಾಡಾದರು.
ವಿಶೇಷ ಭಾಷಣ:
ಸಿ.ಆರ್. ಸತ್ಯ ರವರು ವಿಜ್ಞಾನಿ, ಸಾಹಿತಿ ಇವರು
ಕನ್ನಡ ಪುಸ್ತಕಗಳ ಓದುವುದು, ಕೊಂಡುಕೊಳ್ಳುವುದರ ಬಗ್ಗೆ ಬಹಳ ವ್ಯತ್ಯಾಸ ಬರ್ತಾ ಇರುವುದು ಸಾಮಾನ್ಯವಾಗಿದೆ. ನಮ್ಮ ಕನ್ನಡಿಗರು ದೇಶದ ಮತ್ತು ಪ್ರಪಂಚದಾದ್ಯಂತ ಹರಡಿಕೊಂಡರು. ಇರುವಲ್ಲಿಯೇ ಕನ್ನಡ ಸಂಘಗಳ ಕಟ್ಟಿಕೊಂಡರು. ನಮ್ಮ ಹಾಗೆ ಪುಸ್ತಕ ಭಂಡಾರ ಉಪಯೋಗಿಸಲು ಅವರಿಗೆ ಸಾದ್ಯವಿಲ್ಲ. ಗಣಕೀಕರಣ (ಡಿಜಿಟಲೀಕರಣ), ದಿಂದ upload ಮಾಡುವ ವಿಷಯ ಹತ್ತೇ ನಿಮಿಷದಲ್ಲಿ (ಮೊಬೈಲ್ ಮತ್ತು ಲ್ಯಾಪ್ಟಾಪ್ ಗಳ ಮೂಲಕ) ಸಾವಿರಾರು ಓದುಗರು ಓದುತ್ತಾರೆ. ಬರುವ ಐದು ಹತ್ತು ವರ್ಷಗಳಲ್ಲಿ ವಿಧ್ಯಾಭ್ಯಾಸ, ಸಾಹಿತ್ಯಾಭ್ಯಾಸ ಮೊಬೈಲ್ ಅಥವಾ ಲ್ಯಾಪ್ಟಾಪ್ ಮೂಲಕವೇ ಆಗಬಹುದು. ಬದಲಾಗುವ ಪದ್ಧತಿಯನ್ನು ಒಪ್ಪಿಕೊಳ್ಳಬೇಕು ಎಂದು ಆಧುನಿಕ ಸಮಾಜದ ಓದು ಮತ್ತು ತಾಂತ್ರಿಕತೆಯ ಮಹತ್ವ ತಿಳಿಸಿದರು.
ಅಧ್ಯಕ್ಷೀಯ ಭಾಷಣ :
ನಿರ್ಮಲ ಪ್ರಭು ಬರಹಗಾರರು, ಶಿ.ರಾ ಕಾರಂತ ವೇದಿಕೆ ಅಧ್ಯಕ್ಷರು
ಪುಸ್ತಕಗಳ ಬಗ್ಗೆ ಜನಜಾಗೃತಿ ಮೂಡಿಸಬೇಕು, ಸದ್ಭಳಕೆ ಮಾಡಿಕೊಳ್ಳಬೇಕು, ಓದಬೇಕು. ನಮ್ಮ ಮಕ್ಕಳಿಗೂ ಅಭಿರುಚಿ ಹುಟ್ಟಿಸುವ ಪ್ರಯತ್ನವನ್ನು ಮಾಡಬೇಕು. ಜ್ಞಾನಕ್ಕೆ ಸಮಾನವಾದುದು ಮತ್ತೊಂದಿಲ್ಲ. ಜ್ಞಾನ ಬರುವುದು ಪುಸ್ತಕಗಳಿಂದ, ಪುಸ್ತಕಾಲಯಗಳಿಂದ. ಇದರ ಉತ್ತಮ ಸದುಪಯೋಗವಾಗಬೇಕು ಮುಂತಾಗಿ ಮಾತನಾಡಿದರು, ವೇದಿಕೆಯ ಭಾಷಣಕಾರರ ಮಾತುಗಳನ್ನು ಪ್ರಶಂಸಿಸಿದರು.
ವೇದಿಕೆಯಲ್ಲಿ ಹಿಂದಿನ ದಿನ ಶಾಲಾ ಮಕ್ಕಳಿಗೆ
ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಪ್ರಬಂಧ ಹಾಗೂ ರಸಪ್ರಶ್ನೆ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿತ್ತು. ಎಲ್ಲದರಲ್ಲೂ ಮೊದಲ ಮೂರು ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನದ ರೂಪವಾಗಿ ಸ್ವಪ್ನ ಬುಕ್ ಹೌಸ್ ನ (ಹಣದ ಮೌಲ್ಯದ) ವೋಚರ್ ಗಳನ್ನು ನೀಡಿ ವೇದಿಕೆಯಲ್ಲಿ ಮಕ್ಕಳನ್ನು ಅಭಿನಂದಿಸಲಾಯಿತು.
ಎಂದಿನಂತೆ ಅರ್ಥಪೂರ್ಣವಾದ ನಿರೂಪಣೆ ಶ್ರೀಮತಿ ಇಂದಿರಾ ಶರಣ್ ರವರಿಂದ, ಪ್ರಾರ್ಥನೆ ಶ್ರೀಮತಿ ಮಂಜುಳಾ ಭಾರ್ಗವಿಯವರಿಂದ, ವೇದಿಕೆಯಲ್ಲಿ ಸ್ವಾಗತ ಮತ್ತು ಅತಿಥಿಗಳ ಪರಿಚಯ ಮತ್ತು ತಮ್ಮ ಗ್ರಂಥಾಲಯದ ಹುಟ್ಟು ಮತ್ತು ಇಲ್ಲಿಯವರೆಗೂ ನಡೆದುಬಂದ ಹಾದಿಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು ತರಳಬಾಳು ಕೇಂದ್ರದ ಗ್ರಂಥಾಲಯ ಸ್ಥಾಪಕರು, ಮ್ಯಾನೇಜಿಂಗ್ ಟ್ರಸ್ಟಿ ಆದಂತಹ ಹಿರಿಯರಾದ ಶ್ರೀ ಪಾ. ಚಂದ್ರಶೇಖರ ಚಡಗರವರು.
ಕಮಿಟಿಯ ಸದಸ್ಯರು, ಸಂಸ್ಥೆಗಳ ಮುಖ್ಯಸ್ಥರು, ಸಭಿಕರು, ಶಾಲಾಮಕ್ಕಳು ಮತ್ತು ಪೋಷಕರಿಂದ ಗ್ರಂಥಾಲಯ ಸಭಾಂಗಣ ತುಂಬಿ ವಿಶೇಷ ಕಳೆಯಿಂದ ಕಂಗೊಳಿಸುತ್ತಿತ್ತು.
ಧನ್ಯವಾದಗಳು🙏
No comments:
Post a Comment