Monday, November 1, 2021

ಕನ್ನಡ ರಾಜ್ಯೋತ್ಸವ - 2021

 ನವಂಬರ 01 , 2021 

ಕನ್ನಡದ ಕಟ್ಟೆ, ಕಾಫಿ ಬೋರ್ಡ್ ಉದ್ಯಾನವನ, ಕೆಂಪಾಪುರ, ಬೆಂಗಳೂರು.


ನವಂಬರ ತಿಂಗಳಲ್ಲಿ ಕರ್ನಾಟಕದಲ್ಲಿ ಎಲ್ಲೆಡೆ ರಾಜ್ಯೋತ್ಸವ ಸಮಾರಂಭ.

1956 ನವಂಬರ ಒಂದರಂದು ಭಾಷಾವಾರು ರಾಜ್ಯಗಳಾಗಿ ಮೈಸೂರು ರಾಜ್ಯವಾಗಿ, 1971 ರಲ್ಲಿ ಅದು ಕರ್ನಾಟಕ ರಾಜ್ಯ ಎಂದು ಮರು ನಾಮಕರಣ ಮಾಡಲಾಯಿತು.



ಶಾಲಾ ಕಾಲೇಜುಗಳಲ್ಲಿ, ತಾಲೂಕು, ಜಿಲ್ಲೆಗಳಲ್ಲಿ ಹೊರ ರಾಜ್ಯಗಳಲ್ಲಿ, ಹೊರ ದೇಶಗಳಲ್ಲಿ ಕನ್ನಡಿಗರ ಸಂಭ್ರಮಾಚರಣೆ.



ಕನ್ನಡ ಉಳಿಸಿ, ಕನ್ನಡ ಬಳಸಿ, ಕನ್ನಡ ಬೆಳಸಿ ಎಂಬ ಕೂಗು.

ಆದರೆ, ದುರಂತವೆಂದರೆ, ಬೆಂಗಳೂರಿನಲ್ಲಿ ಕನ್ನಡೇತರರ ಸಂಖ್ಯೆ ಜಾಸ್ತಿ ಆಗುವುದು.

ಈ ಬಾರಿ "ಮಾತಾಡ್ ಮಾತಾಡ್ ಕನ್ನಡ" ಎಂಬ ಅಭಿಯಾನ.

ಕರ್ನಾಟಕವು ಇತರರಿಗೆ ಕೈಸೇರುವ ಮುನ್ನ ಎಚ್ಚತ್ತ ಕೊಳ್ಳಬೇಕಾಗಿದೆ.

ಕಾಫಿ ಬೋರ್ಡ್ ಉದ್ಯಾನವನದಲ್ಲಿ ಎಂದಿನಂತೆ ಬೆಳಿಗ್ಗೆ ದ್ವಜಾರೋಹನ ಮತ್ತು ಕನ್ನಡ ಹಾಡುಗಳ ಸಮೂಹ ಗಾನ. 


ಕರ್ನಾಟಕದ ಸಂಸ್ಕೃತಿಯನ್ನು ಎಚ್ಚರಿಸುವ ("ಬಾರಿಸು ಕನ್ನಡ ಡಿಂಡಿಮವ", "ಜೋಗದ ಸಿರಿ ಬೆಳೆಕಿನಲ್ಲಿ", "ಹುಟ್ಟಿದರೇ ಕನ್ನಡ ನಾಡು ಹುಟ್ಟಬೇಕು" ಹಾಡುಗಳಿಗೆ ಸಾಮೂಹಿಕ ನೃತ್ಯ.

ರಸ್ತೆಯಲ್ಲೇ ನಿಂತು ಸುಮಾರು ಒಂದು ಗಂಟೆಯ ಕಾರ್ಯಕ್ರಮ 




ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ವಿಭಾಗದಿಂದ ರವಿಂದ್ರ ಕಲಾಕ್ಷೇತ್ರದಲ್ಲಿ ರಾಜ್ಯೋತ್ಸವ ಸಮಾರಂಭ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 66 ಸಾಧಕರಿಗೆ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಯವರಿಂದ ಸಮ್ಮಾನ.


ಜೈ ಕರ್ನಾಟಕ.


ಬರೆದಿರುವುದು ನವಂಬರ 2 , 2021 


No comments:

Post a Comment