Monday, August 21, 2023

ವಿಶ್ವ ಹಿರಿಯ ನಾಗರಿಕರ ದಿನ

 ವಿಶ್ವ ಹಿರಿಯ ನಾಗರಿಕರ ದಿನ (World Senior Citizens Day)



ಶ್ರೀ ತಿರು ಶ್ರೀಧರ್ ಅವರ ಲೇಖನ - "ಕನ್ನಡ ಸಂಪದ" ಮತ್ತು ಸಂಸ್ಕೃತಿ ಸಲ್ಲಾಪ  " www.sallapa.com"  ಸಾಮಾಜಿಕ ಜಾಲ ತಾಣದಲ್ಲಿ.....

ವಿಶ್ವ ಹಿರಿಯ ನಾಗರಿಕರ ದಿನವಾದ ಇಂದು ನನ್ನನ್ನು ಪ್ರತಿನಿತ್ಯ ಇಲ್ಲಿ ಪ್ರೇರಿಸುತ್ತಿರುವ ಹಿರಿಯರನ್ನು ನಮಿಸುವ ಸಲುವಾಗಿ ನನ್ನೊಡನೆ ನಿರಂತರ ಸಂಪರ್ಕದಲ್ಲಿರುವ ಕೆಲವು ಹಿರಿಯರ ಚಿತ್ರಗಳನ್ನು ಇಲ್ಲಿ ಜೋಡಿಸಿರುವೆ. ಕಡಿಮೆ ಜಾಗವಾದ್ದರಿಂದ ಮತ್ತು ಸ್ನೇಹವಲಯ ದೊಡ್ಡದಿರುವುದರಿಂದ ಎಲ್ಲ ಹಿರಿಯರ ಚಿತ್ರಗಳನ್ನೂ ಪೋಣಿಸಲಾಗಿಲ್ಲ. ಪೋಣಿಸಿರುವುದೂ ಹುಡುಕುವುದು ಕಷ್ಟ ಎಂದು ಗೊತ್ತಿದೆ. ಆದರೆ ಬದುಕಿನಲ್ಲಿ ನಿರಂತರ ಸ್ಪೂರ್ತಿ ತುಂಬುವವರನ್ನು ಸ್ಮರಿಸುವ ಅವಕಾಶ ಇದು. ವಯಸ್ಸಿನ ಲೆಕ್ಕದಲ್ಲಿ ನಾನೂ ಹಿರಿಯರ ಪಟ್ಟಿಗೆ ಸೇರಿರುವವ.

ಬದುಕೆಂಬುದೇ ಒಂದು ಸವಾಲು. ಸವಾಲುಗಳು ಎಲ್ಲ ವಯಸ್ಸಿನವರಿಗೂ ಇದೆ. ಹಾಗಾಗಿ ವಿಶ್ವ ಹಿರಿಯರ ದಿನವನ್ನು ಹಿರಿಯ ವಯಸ್ಸಿನ ಬದುಕಿಗಿರುವ ಸವಾಲುಗಳ ನಿಟ್ಟಿನಲ್ಲೇ ಕಾಣಬೇಕೆಂದೇನೂ ಇಲ್ಲ. ಬದುಕನ್ನು ಗೌರವಿಸಿ, ಆಸ್ವಾದಿಸಿ, ಮುನ್ನಡೆಯುತ್ತಾ ಸಾಗುವುದೇ ಜೀವನ.

ಹಕ್ಕಿಗಳು ಒಟ್ಟಾಗಿ ಹಾರಿದಾಗಲೇ ಹೆಚ್ಚು ಪಯಣ ಸಾಧ್ಯ. ಹಾರುವ ಹಕ್ಕಿಗಳ ರೆಕ್ಕೆಯ ತೂಗುವಿಕೆ ಪರಸ್ಪರ ಎಲ್ಲ ಹಕ್ಕಿಗಳಿಗೂ ಪಯಣಕ್ಕೆ ಪುಷ್ಟಿದಾಯಕ. ಅಂತೆಯೇ ಬದುಕಿನಲ್ಲಿ ಪ್ರತಿಯೊಂದೂ ಬಾಳು ಮತ್ತೊಂದು ಬದುಕಿಗೆ ಪುಷ್ಟಿಯ ಸೆಲೆ.

ನಾನು ಪ್ರತಿಯೊಬ್ಬ ಹಿರಿಯರ ಜೊತೆ ಸಂವಹನ ನಡೆಸುವಾಗಲೂ, ಅವರುಗಳು ವಿಚಾರಗಳನ್ನು ಗ್ರಹಿಸಿ - ಸ್ಪಂದಿಸುವ ರೀತಿ, ಅವರು ತೆರೆದಿಡುವ ವಿಶಾಲ ನೆನಪುಗಳು ಮತ್ತು ಅವರ ಆಂತರ್ಯದಲ್ಲಿ ಆರದಿರುವ ಉತ್ಸಾಹದ ಮಿನುಗುಗಳನ್ನು ಗಮನಿಸುವಾಗಲೆಲ್ಲ "ಆಹಾ, ಬದುಕೇ ನೀನೆಷ್ಟು ಭವ್ಯ" ಎಂದುಕೊಳ್ಳುತ್ತೇನೆ. ಇದೇ ಬದುಕಿನ ನಿಜವಾದ ಹಿರಿತನ. ಆ ಹಿರಿತನಕ್ಕೆ ಸಾಷ್ಟಾಂಗ ನಮನ.

(ನಮ್ಮ ಕನ್ನಡ ಸಂಪದ Kannada Sampada
ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ) 




College friends became senior citizens, celebrating at a re-union, Bnegaluru, Udupi.

Posted 22/8/2023

No comments:

Post a Comment