Sunday, April 7, 2024

ಮಹಾ ಚುನಾವಣೆ---2024

 ಶ್ರೀ ಶಕೆ 1946ನೆಯ ಕ್ರೋಧಿನಾಮ ಸಂವತ್ಸರದಲ್ಲಿ ಜರುಗುವ (2024) ಮಹಾ ಚುನಾವಣೆಯ ವಿಶ್ಲೇಷಣೆ.

   ವರ್ಷಪ್ರವೇಶ ಲಗ್ನ    




[ಶ್ರೀ]    [ಶ್ರೀ]     [ಶ್ರೀ]     [ಕು ಶ] 

[ಶ್ರೀ] ಕ್ರೋಧಿ [ರ ಚಂ ಶು ರಾ][ಕೇ]   ಸಂವತ್ಸರ   [ಬು ಗು][ಲಗ್ನ]    [ಶ್ರೀ]    [ಶ್ರೀ]    [ಶ್ರೀ]

[ಶ್ರೀ]    [ಶ್ರೀ]    [ಶ್ರೀ]   [ಕು ಶ] [ಶ್ರೀ]   ಜಗಲ್ಲಗ್ನ      [ಕೇ][ರಾ]   [ಚಂ ಗು ಬು]

[ಶ್ರೀ]    [ಲಗ್ನ]   [ಶ್ರೀ]    [ಶ್ರೀ]

ದಿನಾಂಕ: 21/03/2024.

ಈ ಸಂವತ್ಸರದಲ್ಲಿ ಜರುಗಲಿರುವ ಭಾರತ ದೇಶದ ಲೋಕಸಭಾ ಚುನಾವಣೆ ಅತ್ಯಂತ ಕುತೂಹಲವೂ ಕೌತುಕಪೂರ್ಣವು ಆಗಿರುತ್ತದೆ. ಚುನಾವಣೆಯಲ್ಲಿ ಧುಮುಕುತ್ತಿರುವ ಹಳೆ ಅಲೆ ಹೊಸ ಅಲೆ ಒಂದಾಗಿ ಮಹಾ ಚುನಾವಣೆಯನ್ನು ಎದುರಿಸಿ ಅತ್ಯಂತ ಕುತೂಹಲಕರ ಫಲಿತಾಂಶ ನೀಡಲಿದೆ. ದೇಶದ 543 ಕ್ಷೇತ್ರಗಳ ಅಭೂತಪೂರ್ವ ಫಲಿತಾಂಶ ತಿಳಿಯಲು ಅತ್ಯಂತ ಕುತೂಹಲದಿಂದ ಇಡೀ ಪ್ರಪಂಚವೇ ಎದುರು ನೋಡುತ್ತಿವೆ. ಭಾರತದ ಧ್ರುವತಾರೆ ಪ್ರಸಕ್ತ ಪ್ರಧಾನಮಂತ್ರಿ ಜಗನ್ನಾಯಕ ಶ್ರೀ ನರೇಂದ್ರ ಮೋದಿಜಿಯವರು ಮೂರನೇ ಸಲ ಪ್ರಧಾನಮಂತ್ರಿ ಸ್ಥಾನಕ್ಕೆ ಸ್ಪರ್ಧೆಗಿಳಿದಿರುವುದು ಎಲ್ಲಿಲದ ಕುತೂಹಲ ಸಂಗತಿ. ಬಿಜೆಪಿ ಹಾಗೂ NDA ಮಿತ್ರ ಪಕ್ಷಗಳು ಒಂದೆಡೆಯಾದರೆ ಮೋದಿಯವರಿಗೆ ಪೈಪೋಟಿ ನೀಡಲು ಹವಣಿಸುತ್ತಿರುವ INDIA ಒಕ್ಕೂಟಗಳು ಪ್ರಬಲವಾಗಿ ಜಿದ್ದಾಜಿದ್ದಿಗೆ ಇಳಿದಿವೆ. ನಂತರ ಹಲವಾರು ಪಕ್ಷಗಳು, ಸ್ವತಂತ್ರ ಪಕ್ಷಗಳು ಬಹಳ ತುರುಸಿನಿಂದ ಕಾದಾಡಲೆಣಿಸುತ್ತಿವೆ. ಮೋದಿಜಿಯವರ ಹವೆ ಎಲ್ಲೆಡೆ ಭಾರೀ ಅಲೆಯನ್ನೇ ಸೃಷ್ಟಿ ಮಾಡುತ್ತಿದೆ. ಇವರ ಮುಖಂಡತ್ವದಲ್ಲಿ ನಡೆಯಲಿರುವ ಈ ಚುನಾವಣೆ 7 ಹಂತದಲ್ಲಿ ನಡೆಯಲಿವೆ.

 ಈ 2024ರಲ್ಲಿ ಜರುಗುತ್ತಿರುವ 18ನೇ ಲೋಕ ಸಮರ ಹಿಂದೆಂದೂ ಕಂಡಿರದ, ಕೇಳರಿಯದ, ಕುತೂಹಲದಿಂದ ಕೂಡಿದ್ದು ಮೋದಿಯವರ ಇಚ್ಛಾಶಕ್ತಿ, ಧೀಶಕ್ತಿ ಮತ್ತು ಆತ್ಮನಿರ್ಭರತೆಯಿಂದ ಕೂಡಿರುವುದಂತು ನಿಜವೇ. ಮೋದಿಯವರನ್ನು ಪರಾಜಯಗೊಳಿಸಲು ಏನೇನು ಮಸಲತ್ತುಗಳು ಬೇಕೋ ಅದೆಲ್ಲವನ್ನೂ ವ್ಯವಸ್ಥಿತವಾಗಿ ನಡೆಸುತ್ತಿವೆ. ಈ ಒಕ್ಕೂಟಕ್ಕೆ ವಿಪಕ್ಷಗಳಿಗೆ ಭಾರತ ವಿರೋಧಿ ರಾಷ್ಟ್ರಗಳಿಂದ ತನು ಮನ ಧನ ಸಹಾಯ, ಸಹಕಾರ ನಿರಂತರವಾಗಿ ನಡೆಯುತ್ತ ಬಂದಿರುವುದು ಸರ್ವವಿದಿತ. ಇದು ಈಗ ಆಡಳಿತ ನಡೆಸುತ್ತಿರುವ ಕೇಂದ್ರ ಸರಕಾರಕ್ಕೂ ತಿಳಿದಿದೆ. ಪರ ದೇಶದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುತ್ತಿರುವ ನಮ್ಮ ಪರಮ ಶತ್ರು ರಾಷ್ಟ್ರಗಳಿಗೆ ಭಾರತ ದೇಶದ ಜನತೆ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ. ಇನ್ನು ನಮ್ಮ ಆಂತರಿಕದಲ್ಲಿ ಮಾವೋವಾದಿಗಳು, ನಕಲಿ ದೇಶಭಕ್ತರ ಸೋಗಿನಲ್ಲಿ ಹಲವಾರು ರೀತಿಯ ಷಡ್ಯಂತ್ರಗಳು ಸೂಕ್ಷ್ಮಮತಿಗಳಿಗೆ ಗೋಚರಿಸುವುದು ಸ್ಪಷ್ಟ. ಏನೇ ಇರಲಿ ಬಲಿಷ್ಠ ಗ್ರಹಗಳ ಸಹಾಯದಿಂದ ಎದುರಿಸುವ ಶಕ್ತಿ ಆಡಳಿತಾರೂಢ ಸರಕಾರಕ್ಕೆ ಇದೆಯೆಂದು ಪ್ರಧಾನಿ ಮೋದಿಯವರು ಹೇಳಿರುವುದು ಸಹಜ.

ಈ ಮಹಾ ಚುನಾವಣೆಯಲ್ಲಿ ಶ್ರೀ ಮೋದಿಯವರದು ವಿಪರೀತ ರಾಜಯೋಗವಾಗಿದ್ದು ನಿಚ್ಚಳ ಬಹುಮತದ ಮೂಲಕ ಬಿಜೆಪಿ ಹಾಗೂ NDA ಮೈತ್ರಿಕೂಟಗಳಿಗೆ ರಾಜಯೋಗ, ಗಜಕೇಸರಿ, ಯೋಗಗಳು ಗೋಚರಿಸುತ್ತಿವೆ. ಗ್ರಹಗಳ ಬಲಾಬಲದಿಂದ ಪರಿಶೀಲಿಸಲಾಗಿ (ಜ್ಯೋತಿಷ್ಯಶಾಸ್ತ್ರ & ನ್ಯೂಮರಾಲಜಿ ಸೂಚಿಸುತ್ತಿರುವಂತೆ) ಕ್ರೋಧಿನಾಮ ಸಂವತ್ಸರದಲ್ಲಿ ಜಗಲ್ಲಗ್ನ & ವರ್ಷಪ್ರವೇಶ ಲಗ್ನದಂತೆ BJP ಹಾಗೂ NDA ಕೂಟಗಳಿಗೆ ಸ್ಪಷ್ಟ ಬಹುಮತ ಗಳಿಸುವತ್ತ ದಾಪುಗಾಲು ಹಾಕಲಿವೆ.

ಈ ಮಹಾ ಚುನಾವಣೆಯಲ್ಲಿ ಭಾರತೀಯ ಜ್ಯೋತಿಷ್ಯಶಾಸ್ತ್ರ &  ನ್ಯೂಮರಾಲಜಿ ಸೂಚಿಸುವಂತೆ ಧನುರ್ಲಗ್ನ ವರ್ಷಪ್ರವೇಶ ಲಗ್ನವಾಗಿದ್ದು ಗುರು ಗ್ರಹ ಅತ್ಯಂತ ಬಲಿಷ್ಠನಾಗಿದ್ದು ಸ್ವಕ್ಷೇತ್ರದಲ್ಲಿ ಅಧಿಕಾರರೂಢ ಕೇಂದ್ರ BJP ಹಾಗೂ NDA ಮಿತ್ರ ಪಕ್ಷಗಳಿಗೆ ವಿಶೇಷ ಲಾಭದಾಯಕನಾಗಿದ್ದಾನೆ. 8ನೇ ಮನೆಯಲ್ಲಿ ಗಜಕೇಸರಿ ಯೋಗದಾಯಕನಾಗಿರುತ್ತಾನೆ. (ಕರ್ಕಾಟಕ ರಾಶಿಯಲ್ಲಿ) 9ನೇ ಸ್ಥಾನದಲ್ಲಿ ಗುರು ಬುಧರು ಅದಕ್ಕೆ ಪುಷ್ಟಿದಾಯಕರು ಆಗಿರುತ್ತಾರೆ. ಭಾರತದ ಪ್ರಧಾನಿಯಾಗಿರುವ ಲೋಕನಾಯಕರೂ ಆಗಿರುವ ಶ್ರೀ ನರೇಂದ್ರ ಮೋದಿಯವರ ಜನ್ಮಲಗ್ನವೂ ವೃಶ್ಚಿಕ ಲಗ್ನವಾಗಿರುವುದರಿಂದ ವಿಪರೀತ ರಾಜಯೋಗ ಮತ್ತು ಗಜಕೇಸರಿ ಯೋಗ ಘಟಿಸುವುದರಿಂದ ಮತ್ತೊಮ್ಮೆ ಪ್ರಧಾನಮಂತ್ರಿಯಾಗುವುದನ್ನು ತಪ್ಪಿಸಲು ಯಾವುದೇ ಶಕ್ತಿಗಳಿಂದ ಸಾಧ್ಯವಿಲ್ಲ. ಅರ್ಥಾತ್ BJP ಗೆ 543ರಲ್ಲಿ 352, NDA ಮೈತ್ರಿಕೂಟಕ್ಕೆ 38 ಕ್ಷೇತ್ರಗಳಲ್ಲಿ ಜಯಗಳಿಸಲಿವೆ. ಇನ್ನು BJP ಗೆ ಪ್ರಬಲ ವಿರೋಧಿ ಪಕ್ಷವೆನಿಸಿದ ಕಾಂಗ್ರೆಸ್ ಗೆ 38 ರಿಂದ 43 ಸ್ಥಾನಗಳು ಲಭಿಸಲಿವೆ. ಉಳಿದವು ಇನ್ನಿತರ ಪಕ್ಷೇತರ ಅಭ್ಯರ್ಥಿ ಪಾಲಾಗಲಿವೆ. 


ಇನ್ನು ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ 21 ರಿಂದ 23 ರವೆರೆಗೆ BJP ಬರುವ ಎಲ್ಲ ಸಾಧ್ಯತೆಗಳಿವೆ. ಒಳಜಗಳ, ಕಿತ್ತಾಟ ಮುಗಿಯಲಾರದ ಕಥೆಯಾಗಿದೆ. ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳಗಳಲ್ಲಿ BJP ಚೆನ್ನಾಗಿ ಚೇತರಿಸಿಕೊಳ್ಳುವುದು. ಈ ಚುನಾವಣೆಯಲ್ಲಿ ದ್ವೇಷ, ಅಸೂಯೆ, ಹಿಂಸಾಚಾರ, ಜಾತಿನಿಂದನೆ, ಕುಟುಂಬ ರಾಜಕಾರಣ, ಗೂಂಡಾಗಿರಿ ಇವೇ ಪ್ರಮುಖ ಅಸ್ತ್ರಗಳಾಗಲಿವೆ. ಅನೇಕ ಅಡೆತಡೆಗಳ ಮಧ್ಯೆ BJP ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲಿದೆ. 

18ನೇ ಈ ಮಹಾ ಚುನಾವಣೆಯಲ್ಲಿ ದೇಶ ವಿದೇಶಗಳ ಕೈವಾಡ ಎದ್ದು ಕಾಣುತ್ತದೆ. ಜಾಗತಿಕ ಮಟ್ಟದಲ್ಲಿ ಅತೀ ಶ್ರೀಮಂತ ರಾಷ್ಟ್ರಗಳ ಒಕ್ಕೂಟ ಮುಖ್ಯವಾಗಿ ಇಂಗ್ಲೆಂಡ್, ಅಮೆರಿಕ, ಜರ್ಮನಿ, ಚೀನಾ ಮುಂತಾದ ಶ್ರೀಮಂತ ರಾಷ್ಟ್ರಗಳ ದುಷ್ಟಕೂಟಗಳು (Deep State) ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕಟ್ಟಿಹಾಕಲು ಬೇರೆ ಬೇರೆ ದೇಶಗಳಿಗೆ ಕುಮ್ಮಕ್ಕು ನೀಡುತ್ತಾ ವಿವಿಧ ಹಂತಗಳಲ್ಲಿ ದುರ್ಬಲಗೊಳಿಸುವ ಹುನ್ನಾರ ನಡೆಸುತ್ತಿವೆ. BJP ಸರಕಾರ ಬಂದರೆ ಅದು ಅಸಾಧ್ಯವೆಂದು ವಿಶ್ವಸಂಸ್ಥೆಯವರೆಗೆ ಹಣ ಹಂಚಿ ಷಡ್ಯಂತ್ರ ನಡೆಸುತ್ತಿರುವುದು ಸರ್ವಥಾ ಖಂಡನೀಯ. ಇದಕ್ಕೆ ವಿಪಕ್ಷಗಳು ಬಳಿ ಬೀಳುತ್ತಾ ಗುಲಾಮಿ ಸಂಸ್ಕೃತಿಗೆ ಕುಮ್ಮಕ್ಕು ನೀಡುತ್ತಿರುವುದು ಗೋಚರಿಸುತ್ತಿದೆ. 

ಇನ್ನು ಹೆಸರೇ ಹೇಳುವಂತೆ ಈ ಕ್ರೋಧಿ ಸಂವತ್ಸರದಲ್ಲಿ ರಕ್ತಪಾತ, ಯುದ್ಧ, ಭೂಕಂಪ, ಕ್ರೋಧಾಗ್ನಿ, ಅವಘಡ, ಸುನಾಮಿ, ಬಿರುಗಾಳಿ, ಬೇರೆ ಬೇರೆ ರೀತಿಯ ರಕ್ತ ಸಂಬಂಧಿ ಕಾಯಿಲೆಗಳು, ದೋಂಬಿ, ಅಶಾಂತಿ, ಜ್ವಾಲಾಮುಖಿ, ಹಿಮಸ್ಫೋಟ, ಬೇರೆ ಬೇರೆ ದೇಶಗಳಲ್ಲಿ ಭಯೋತ್ಪಾದನೆಯಂಥ ಭಯಾನಕ ಸನ್ನಿವೇಶಗಳು ಜರುಗಲಿವೆ. ಜಲ ಪ್ರಳಯ, ಖಂಡಮಳೆ, ಧೂಳಿನ ಆರ್ಭಟ ಹೆಚ್ಚಲಿವೆ. ಇದಕ್ಕೆಲ್ಲಾ ಸರ್ವಶಕ್ತ ಭಗವಂತನನ್ನು ಮೊರೆ ಹೋದರೆ ಶಾಂತಿ, ನೆಮ್ಮದಿ ಸಾಧ್ಯ. 

|


ಲೋಕಾ ಸಮಸ್ಥಾ ಸುಖಿನೋ ಭವಂತುlಮಂಗಳಾನಿ ಭವಂತುl. 

ದಿನಾಂಕ: 21/03/2024.

ಕಾಲಜ್ಞಾನಿ ಡಾ. ವಿಷ್ಣು ನಾರಾಯಣ ಭಟ್

9901158474

ಉಳ್ಳಾಲ, ಬೆಂಗಳೂರು ©️.

No comments:

Post a Comment