ಮದುವೆಯ ಸವಿ ನೆನಪುಗಳು
1991 ಏಪ್ರಿಲ್ 8 ನನ್ನ ಹಾಗೂ ರವಿಯ ಮದುವೆ ನಡೆದ ದಿನ. ಎಂಟು ವರ್ಷಗಳ ಪ್ರೇಮ ಸಂಬಂಧದ ನಂತರದಲ್ಲಿ ನಡೆದ ಮದುವೆ ನಮ್ಮದು.
ಆಗ ನವೋದಯದಲ್ಲಿ ಕೆಲಸ ಮಾಡುತ್ತಿದ್ದ ನನಗೆ ಏಪ್ರಿಲ್ ತಿಂಗಳಲ್ಲಿಯೂ ತರಗತಿಗಳು ನಡೆಯುತ್ತಿದ್ದವು. ನಮಗೆ ರಜೆ ದೊರೆಯುತ್ತಿದ್ದದ್ದು ಮೇ ಹಾಗೂ ಜೂನ್ ತಿಂಗಳುಗಳಲ್ಲಿ. ಆದರೆ ಉಳಿದವರಿಗೆಲ್ಲರಿಗೂ ಏಪ್ರಿಲ್ ತಿಂಗಳು ಅನುಕೂಲಕರವಾದ ಕಾರಣವೋ ಏನೋ ಹಿರಿಯರೆಲ್ಲರೂ ಸೇರಿ ಏಪ್ರಿಲ್ 8ಕ್ಕೆ ಮದುವೆ ಮಾಡುವುದೆಂದು ನಿಶ್ಚಯಿಸಿದರು. ಆಗ ನನಗೆ ದೊರೆತಿದ್ದು ಕೇವಲ ಎಂಟು ದಿವಸಗಳ ರಜೆ. ಹೀಗಾಗಿ ಮದುವೆಗೆ ಎರಡು ದಿವಸಗಳ ಹಿಂದೆಯಷ್ಟೇ ನಾನು ಮನೆಗೆ ಬರಲು ಸಾಧ್ಯವಾಯಿತು.ನನ್ನ ಅಪ್ಪನಿಗೆ ಮದುವೆಯನ್ನು ಯಾವುದಾದರೂ ಒಳ್ಳೆಯ ಕಲ್ಯಾಣ ಮಂಟಪದಲ್ಲಿ ಮಾಡುವ ಮನಸ್ಸಿತ್ತು. ಆದರೆ ನಾನು ನನ್ನ ಮದುವೆ ಮನೆಯಲ್ಲೇ ಆಗಬೇಕೆಂದು ಹಠ ಹಿಡಿದೆ. ಅದನ್ನು ನೆರವೇರಿಸಲು ನನ್ನಪ್ಪ ಅಜ್ಜಯ್ಯನ ಮನೆಯ ಅಂಗಳಕ್ಕೆ ಸಿಮೆಂಟ್ ಹಾಕಿಸಿದರು ಹಾಗೂ ಓಪನ್ ಆಗಿದ್ದ ಜಗುಲಿಗೆ ತಳಿ ಹಾಕಿಸಿ ಒಳಗೈ ಮಾಡಿಸಿದರು. ನನ್ನ ಮದುವೆಯ ಎಲ್ಲಾ ತಯಾರಿಗೆ ಆಚೆಮನೆ ಸಣ್ಣಮಾಣಿಯ ಪೂರ್ಣ ಸಹಕಾರ ಅಪ್ಪನಿಗೆ ಇತ್ತು. ಹೀಗಾಗಿ ಅಪ್ಪ ಸ್ವಲ್ಪ ನಿರಾಳರಾಗಿದ್ದರು.
ಮದುವೆಯ ಹಿಂದಿನ ಎರಡು ದಿವಸಗಳು ಜಿರಾಪತಿ ಮಳೆ. ಮದುವೆಯ ದಿನವೂ ಹೀಗೆ ಮಳೆ ಸುರಿದರೆ ಎಂತ ಕಥೆ ಎಂದು ಎಲ್ಲರಿಗೂ ತಲೆಬಿಸಿ. ನಾನು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಆರಾಮದಲ್ಲಿದ್ದೆ. ಮದುವೆಯ ದಿವಸ ಮಳೆ ಬಂದು ತೊಂದರೆ ಕೊಡುವುದಿಲ್ಲ ಎನ್ನುವುದು ನನ್ನ ದೃಢ ನಂಬಿಕೆಯಾಗಿತ್ತು. ಅಂದು ಮಳೆ ಬರಲಿಲ್ಲ ಕೂಡಾ!
1981ರಲ್ಲಿ ಉಷಕ್ಕ ಹಾಗೂ ಸುರೇಶನ ಮದುವೆ ಮನೆಯಂಗಳದಲ್ಲೇ ಆಗಿತ್ತು. ತದನಂತರದಲ್ಲಿ ಮನೆಯಂಗಳದಲ್ಲಿ ನಡೆದ ಮದುವೆ ನನ್ನದೇ ಸೈ. ಮನೆ ತುಂಬಾ ಬಂಧು ಬಳಗದವರು ತುಂಬಿದ್ದರು. ಆಚೆಮನೆಯಲ್ಲಿ ಗಂಡಿನ ಕಡೆಯವರು ಬಂದು ಕೂರಲು ಹಾಗೂ ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮದುವೆಗೆ ಸುಮಾರು ಏಳೆಂಟು ನೂರು ಜನ ಬಂದಿದ್ದರು. ಅಪ್ಪನಿಗೆ ಆತ್ಮೀಯರಾಗಿದ್ದ ಕೋಟ ಶಿವರಾಮ ಕಾರಂತರು ಬಂದಿದ್ದರು. ನಮ್ಮ ಬಂಧು ಬಳಗದವರಲ್ಲದೆ ನನ್ನ ಸ್ನೇಹಿತರು, ಸಹೋದ್ಯೋಗಿಗಳು, ಶಿಕ್ಷಕರು, ಊರಿನವರು ಎಲ್ಲರೂ ಬಂದಿದ್ದರು.
ಆಗಿನ್ನೂ ಮದುವೆಯ ವೀಡಿಯೋ ಮಾಡುವುದು ಪ್ರಾರಂಭವಾಗಿತ್ತು. ನನಗೆ ವೀಡಿಯೋ ಕ್ಯಾಮರವೆಂದರೆ ಒಂದು ರೀತಿಯ ಹೇವರಿಕೆಯ ಭಾವವಿದ್ದ ಕಾರಣ ನಾನು ಬರೀ ಫೋಟೊ ತೆಗೆದರೆ ಸಾಕು ಎಂದಿದ್ದೆ. ಹೀಗಾಗಿ ಮದುವೆಯ ವೀಡಿಯೋ ಚಿತ್ರೀಕರಣ ಆಗಲಿಲ್ಲ
ಮದುವೆಯ ದಿನ ಮೂರು ಗಂಟೆಯ ನಂತರ ಸಾಗರದೆಡೆಗೆ ಗಂಡನ ಮನೆಯವರ ಜೊತೆ ನನ್ನ ಪಯಣ. ರಾತ್ರಿ ವಧು ಪ್ರವೇಶ. ಅಲ್ಲಿ ಮರುದಿನ ದೊಡ್ಡ ಪ್ರಮಾಣದಲ್ಲಿ ವಧು ಪ್ರವೇಶದ ಔತಣ. ಪೂಜೆ ಪುನಸ್ಕಾರ, ಹಿರಿಯರಿಗೆ ನಮಸ್ಕಾರ ಎಂದು ಮಾರನೇ ದಿನವಿಡೀ ಆಚರಣೆಗಳಲ್ಲೇ ಕಳೆದು ಹೋಯಿತು. ಅಲ್ಲೂ ಸುಮಾರು ಏಳೆಂಟು ನೂರು ಜನ ಸೇರಿದ್ದರು. ಕೆಳಮನೆಯ ಅಂಗಳದಲ್ಲೇ ದೊಡ್ಡ ಚಪ್ಪರ ಹಾಕಿ ವಧು ಪ್ರವೇಶದ ಔತಣವನ್ನು ಭರ್ಜರಿಯಾಗಿ ನಡೆಸಿದರು.
ಮೂವತ್ಮೂರು ವರುಷಗಳ ಹಿಂದೆ ದಕ್ಷಿಣ ಕನ್ನಡ ಹಾಗೂ ಮಲೆನಾಡಿನ ಎರಡು ವಿಭಿನ್ನ ಸಂಸ್ಕೃತಿಗಳ ಮಿಳಿತದ ಮದುವೆ ನಮ್ಮದಾಗಿತ್ತು!
ಪ್ರತಿಕ್ರಿಯೆಗಳು:
ಎಂಥ ಚಂದದ ಫೋಟೋಗಳು - ಅನಿಲ್ ಕುಮಾರ್
ಸವಿ ನೆನಪುಗಳ ಶುಭಾಶಯಗಳು ಮೇಡಂ ತುಂಬಾ ಉತ್ತಮ ಬರಹ ಜಗದೀಶ್ ನಾಗೇಂದ್ರಪ್ಪ
Happy Anniversary Madam --- ಚನ್ನ ಮಲ್ಲಿಕಾರ್ಜುನಪ್ಪ
Nenapu Kanu tumbutade - ವರದಾಕ್ಷಿ ಭಟ್
ಅಯ್ಯೋ ನಮ್ಮ ಗುರುಗಳು ಎಷ್ಟು ಚಂದ , ಪ್ರೇಮ ಕುರುಡು ಅಂತ ಹೇಳೋದು ನಿಜ
ವಾರ್ಷಿಕೋತ್ಸವದ ಶುಭಾಶಯಗಳು
ವಿನಯ್ ನಾಡಿಗ್
Very happy to see u both together madam....i know u know that my english is very poor madam i use to be always in English remidial class madam...raveendranth sir use to love us a lot mam....madam di u remember our yakshagana show did on principle shobha mams send off program...sir directed it ganapath bhat is use to teach us bagavatharu iddaru.....vinay anna did bhagavathige for that madam...very happy to see u....still I am improving my english madam need some more remedial classes ....ಪ್ರಶಾಂತ್ ನಾಗರಾಜಪ್ಪ
Wish you happy anniversary and many more to come in your life stay safe with lots of happiness together with love, laughter and happiness stay safe enjoy your day with happiness in Madam.
ವಿರೂಪಾಕ್ಷ ಬಸವರಾಜಯ್ಯ
Happy anniversary Shobha chikki ಧರಿತ್ರಿ ವೆಂಕಟೇಶ್
ಸವಿ ನೆನಪು ಜನಾರ್ಧನ ಹಂದೆ
Nice recap. Dad is there in one photo !!!
33 yrs !!! God bless you Shobha and stay blessed with the memories.....ವಿ.ಎಸ.ಎಸ. ಐತಾಲ್
ಕಣ್ಮುಂದೆ ನಡೆದಂತೆ ಈ ಚಿತ್ರಣ . ನೆನಪುಗಳು ಬಾಳಿನ ನಂದಾದೀಪ ತಿರುಮಲ ರಾವ್
ಮದುವೆಯ ಸಂಭ್ರಮದ ಸವಿ ಸವಿ ನೆನಪುಗಳು ಜಯರಾಮ ಸೋಮಯಾಜಿ
ಚಂದದ ನೆನಪಿನ ಬುತ್ತಿ..ನಳಿನಿ ಸೋಮಯಾಜಿ
Shobha aunty, I have very fond memories of attending your wedding along with my grand parents! ಸ್ವಾತಿ ಐತಾಲ್
Ninna maduvege banda nenapide nanage.
Savi nenapugalu beku saviyalee baduku.....ಆಶಾ ರಾವ್
No comments:
Post a Comment