ಮಂಗಳವಾರ, ಮಾರ್ಚ್ 17, 2026
ಮಂಗಳಾ ವೆಂಕಟೇಶ ಅವರ ಮನೆ, ಗೋವಿಂದರಾಜ ನಗರ, ಬೆಂಗಳೂರು.
ಸಮಾನ ಮನಸ್ಕರು ಸೇರಿ ಮಹಾ ಚೈತನ್ಯ ಡಿವಿಜಿಯವರ ನುಡಿ ನಮನ ಕಾರ್ಯಕ್ರಮ ಅದ್ಭುತವಾಗಿ ಸಂಪನ್ನಗೊಂಡಿತು. ರೂವಾರಿ ಶ್ರೀಪಾದ ರಾವ್ ಮಂಜುನಾಥ್, ಮಂಗಳಾವೆಂಕಟೇಶ್ ಅವರಿಗೆ ಧನ್ಯವಾದಗಳು.
ಭಾಗವಹಿಸಿದ್ದ ಇತರರ ಪ್ರತಿಕ್ರಿಯೆಗಳು:
ಒಂದು ಸುಂದರ ಸಂಜೆ...
ಈ ಕಾರ್ಯ ಕ್ರಮ ಆಯೋಜಿಸಿದ ಮಂಜಣ್ಣ ಮತ್ತು ಸ್ನೇಹಿತರ ಸ್ನೇಹ ಸೇತು ಬಳಗಕ್ಕೆ ಮನಪೂರ್ಣ, ಭಾವಪೂರ್ಣ ಧನ್ಯವಾದಗಳು 🙏🏻.ಮಾಹಿತಿ ಪೂರ್ಣ ವಿಷಯಗಳು ಹಾಗೂ ಮನಸಿಗಾನಂದ ನೀಡುವ ಹಾಡುಗಳನ್ನು ಹಾಡಿದ ಅಂಜಲಿ ಹಾಗೂ ರೇಖಾ ಅವರಿಗೆ ರುಚಿ ರುಚಿಯಾದ ಊಟ. ಅನ್ನದಾತ ಸುಖೀಭವ ವೆಂಕಟೇಶ್ - ಮಂಗಳಾ ದಂಪತಿಗಳಿಗೆ. ಪ್ರತಿಯೋರ್ವರಿಗೂ ಧನ್ಯವಾದಗಳು 🙏🏻 🙏🏻
ಸ್ನೇಹ ಸೇತು ಬಳಗದ Sripadarao Sir, Krishnamurthy Sir ಮತ್ತು ಶಶಿಧರನ್ ಮತ್ತು ಈ ಬಳಗದ ಎಲ್ಲ ಆತ್ಮೀಯ ಬಂಧುಗಳಿಗೆ ನನ್ನ ನಮನಗಳು. ಅದ್ಭುತ ಕಾರ್ಯಕ್ರಮ. ಮಂಗಳ ಲಕ್ಷ್ಮಿಯವರ ಮನದುಂಬಿದ ಆತಿಥ್ಯ, ಎಲ್ಲರೊಡನೆ ಮಾತು ಹರಟೆ, ಹಾಡು ಕಗ್ಗ... ಎಲ್ಲವೂ ಮನಕೆ ಮುದ ತಂದವು.. ಧನ್ಯವಾದಗಳು ಎಲ್ಲರಿಗೂ ಧನ್ಯವಾದಗಳು 🙏
ಡಿವಿಜಿಯವರ ಜನ್ಮದಿನದ ನೆಪದಲ್ಲಿ ನೆನಪಲ್ಲಿ ಅವರ ಚಿಂತನೆಗಳ ತುಂತುರಲ್ಲಿ ಒಂದಷ್ಟು ಸಜ್ಜನರು ಕಲೆತು ಸ್ನೇಹದ ಪರಿಸರದೊಂದಿಗೆ ಪರಸ್ಪರ ಖುಷಿಯಿಂದ ರುಚಿಕಟ್ಟಾದ ಭೋಜನವನ್ನೇ ಸೇವಿಸಿ ಮಂಗಳಾ- ವೆಂಕಟೇಶ್ ದಂಪತಿಗಳ ಆತ್ಮೀಯ ಸತ್ಕಾರದ ಸವಿಯೊಂದಿಗೆ ದಿನವನ್ನು ಸಂಪನ್ನಗೊಳಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು 🙏. ಸ್ನೇಹಸೇತುವಿನ ಸದಸ್ಯಳಲ್ಲದೆಯೂ, ನನ್ನನ್ನೂ ಮಂಜುನಾಥ್ ಸರ್ ಈ ಸುಂದರ ಬಳಗದ ಸುಂದರ ಕ್ಷಣಗಳಲ್ಲಿ ಭಾಗಿಯಾಗಲು ಅವಕಾಶವಿತ್ತಿದ್ದಕ್ಕಾಗಿ ಅವರಿಗೆ ವಿಶೇಷ ಧನ್ಯವಾದಗಳು. ಎಂದಿನಂತೆ ಅಂಜಲಿಯವರ ಅತ್ಯದ್ಭುತ ಗಾಯನ, ನಮ್ಮ ನೀಲಿಚಿಟ್ಟೆಯ ಲವಲವಿಕೆಯ ಉಪಸ್ಥಿತಿ ಕಾರ್ಯಕ್ರಮಕ್ಕೆ ಹೆಚ್ಚು ಜೀವಂತಿಕೆ ತಂದಿತು ❤💚. ನನಗೆ ಮನೆಯ ಕಡೆ ಹೆಚ್ಚು ಒತ್ತಡವಿದ್ದುದರಿಂದ ಎಲ್ಲರೊಡನೆ ವೈಯಕ್ತಿಕವಾಗಿ ಸಾವಕಾಶವಾಗಿ ಇದ್ದು ಮಾತಾಡಿಕೊಂಡು ಬರುವ ನಿರಾಳ ಮನಸ್ಥಿತಿ ಇರಲಿಲ್ಲವಾದ್ದರಿಂದ , ಅಷ್ಟರ ಮಟ್ಟಿನ ಕೊರತೆ ನನಗೆ ಉಂಟಾಗಿತ್ತು. ಇಲ್ಲದಿದ್ದರೆ ಸುಧಾ ಅಂಜಲಿ ಮಂಗಳಾ ನಳಿನಿ ಮತ್ತೆಲ್ಲರೊಂದಿಗೆ ಮತ್ತಷ್ಟು ಸಮಯ ಕಳೆಯಬಹುದಿತ್ತು ಅನಿಸಿದ್ದು ಸುಳ್ಳಲ್ಲ.
ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು. ಸದಾ high thinking simple living ಅಲ್ಲದೆ , ತಮ್ಮ ಸ್ನೇಹವಲಯದಲ್ಲಿ ಬಂದವರಲ್ಲೆಲ್ಲಾ ಉತ್ತಮ ಚಿಂತನೆಗಳೇ ಉಂಟಾಗುವಂತೆ ಕಾಳಜಿ ವಹಿಸುವ , ಸದಾ ಹಸನ್ಮುಖಿ ಮಂಜುನಾಥ್ ಸರ್ ಈ ಕಾರ್ಯಕ್ರಮದ ಹಿಂದಿನ ಶಕ್ತಿ ಎಂಬುದು ಗಣನೀಯ ಅಂಶ. ಸ್ನೇಹಸೇತು ಸದಾ ಹೀಗೇ ಸ್ನೇಹಪರವಾಗಿ ಮುಂದುವರೆಯಲಿ ಎಂದು ಆಶಿಸುವೆ...
ಶ್ರೀ ಡಿ ವಿ ಜಿ ಅವರಿಗೆ ನಮನಗಳು. ಇಂದಿಗೂ ಎಂದೆಂದಿಗೂ ಪ್ರಸ್ತುತವಾದ ಅವರ ಬರಹದ ಕೆಲವು ಹನಿಗಳು ಕೇಳಲು ಅವಕಾಶ ಮಾಡಿಕೊಟ್ಟ ನಿಮ್ಮೆಲ್ಲರಿಗೂ ಧನ್ಯವಾದಗಳು. ಮಂಜಣ್ಣ, ಮಂಗಳ ಮೇಡಂ ಮತ್ತು ಮನೆಯವರಿಗೆ ನಮನಗಳು. ನಮ್ಮಲ್ಲಿನ ಸಾತ್ವಿಕ ಸ್ವಭಾವಗಳು ಹೊರತರುವ ಈ ಕೂಟ ಒಂದು ಸುಂದರ ಅನುಭವ. ಎಲ್ಲರನ್ನು ಸೇರಿಸಿಕೊಂಡು ನಡೆದ, ಕೆಲವರ ಉತ್ತಮ ವೈಯಕ್ತಿಕ ಪ್ರತಿಭೆಗಳಿಂದ ಕಳೆ ತುಂಬಿದ ಈ ಕೂಟ ಸಂತೋಷ ತಂದಿತು. ಕಡೆಯದಾಗಿ ಏರ್ಪಡಿಸಿದ್ದ ಊಟ ತುಂಬ ಚೆನ್ನಾಗಿತ್ತು.
ನಂತರದಲ್ಲಿ ಬಂದಿರುವ ಚಿತ್ರಗಳು ಸುಂದರ ಸಂಜೆಯ ಪ್ರತಿಬಿಂಬ. ಸೊಗಸಾಗಿವೆ.
ನಿಮ್ಮೆಲ್ಲರನ್ನೂ ಹೆಚ್ಚು ಕಡಿಮೆ ಒಂದು ವರ್ಷದ ನಂತರ ಭೇಟಿಯಾಗಿ ಸಂತಸ ತಂದಿತು. ನನ್ನ ನಲವತ್ತು ವರ್ಷಗಳ ಗೆಳೆಯ ಮಂಜುನಾಥನಿಗೆ ನನ್ನ ನಮನಗಳು. ನನ್ನನ್ನು ನಂಬಿ ನನಗೆ ಕಾರ್ಯಕ್ರಮದ ಉದ್ಘೋಷಕನ ಕೆಲಸ ನೀಡಿದ್ದಕ್ಕೆ ಕೃತಜ್ಞತೆಗಳು.
ಸುಮಧುರ ಸುಮನಸ್ಸಿನ ಸಮ್ಮಿಲನದಲ್ಲಿ ಸವಿದ ಸಿಹಿ ಹೂರಣ ಸದಾಕಾಲ ನೆನಪಿಡುವಂತಹದ್ದು. ನಮಗೆಲ್ಲಾ
ಅಜ್ಜನ ಆಶೀರ್ವಾದ ದೊರಕಿಸಿಕೊಟ್ಟ ಆತ್ಮೀಯ ಮಂಜಣ್ಣನಿಗೆ ಎಷ್ಟು ಅಭಿನಂದಿಸಿದರೂ ಸಾಲದು. ಅತಿ ಕ್ರಿಯಾಶೀಲ ವ್ಯಕ್ತಿ ನಮ್ಮ ಮಂಜಣ್ಣ. ಗೆಳೆಯ ಶಶಿಧರ ಅವರ ಹುಟ್ಟು ಹಬ್ಬವನ್ನು ಆಚರಿಸಿದ್ದು ಮತ್ತೊಂದು ಸಂಭ್ರಮ.
ಮಂಗಳ ತಾಯಿಯ ಉಪಹಾರದ ಉಪಚಾರ ಅವರ ದೊಡ್ಡ ಗುಣಕ್ಕೆ ಸಾಕ್ಷಿಯಾಗಿತ್ತು. ಅವರು ಮತ್ತು ಅವರ ಪತಿ ನಮ್ಮನ್ನೆಲ್ಲಾ ವಿಶ್ವಾಸದ ನೆರಳಲ್ಲಿ ಉಪಚರಿಸಿದ ಬಗೆ ಅನನ್ಯ. ಮೇಲಿನ ಎಲ್ಲರ ಪ್ರತಿಕ್ರಿಯೆಗಳೇ ಸಾಕ್ಷಿ ಚೆಂದದ ಕ್ರಾಯಕ್ರಮ ಸಂಪನ್ನವಾದ ರೀತಿಗೆ. ಬಹಳ ದಿನಗಳ ನಂತರ ಕೆಲವು ಗೆಳೆಯರನ್ನು ಕಂಡು ಸಂಭ್ರಮಿಸಿದ್ದು ಖುಷಿ ತಂದಿದೆ. ಕಾರಣಕರ್ತ ನಮ್ಮ ಮಂಜಣ್ಣನಿಗೆ ಇವೆಲ್ಲಾ ಸಾಧ್ಯವಾಗಿಸಿದ್ದಕ್ಕೆ ಅನಂತ ನಮನಗಳು.
ನಮಗೆಲ್ಲಾ ಶುಭವಾಗಲಿ. CSK
ನಿನ್ನೆಯ ದಿನ ,ನನ್ನ ಬಾಳಿನ ಸುದಿನ.ನನ್ನ ನೊಂದ ಮನಕ್ಕೆ ನಿಮ್ಮೆಲ್ಲರ ಪ್ರೀತಿ,ಮತ್ತು ಪ್ರೋತ್ಸಾಹ ಅದಮ್ಯ ಉತ್ಸಾಹ ನೀಡಿತು.ಮಂಗಳಾ ಅವರ ಆದರಾತಿಥ್ಯ ,ಅವರ ಉದಾರ ಮನಸ್ಸು ನನಗೆ ತುಂಬ ಇಷ್ಟ ವಾಯಿತು.ನನ್ನ ಮನಸ್ಸಿಗೆ ಮುದ ನೀಡಿದ ಅದ್ಭುತವಾದ ಕಾರ್ಯಕ್ರಮ ಇದಾಗಿದ್ದು,ಇದರಲ್ಲಿ ಭಾಗವಹಿಸಿದ ಎಲ್ಲ ಸಹೃದಯ ಸಹೋದರ ಸಹೋದರಿಯರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ನೀಲಿ ಚಿಟ್ಟೆ: shammi
ನಿಂಗಮ್ಮ ಬರಲಿ ಬೇವು ಬೆಲ್ಲದೊಂದಿಗೆ.
ಈ ದುಃಖದ್ದೊಂದು ವಿಶೇಷ ಗುಣ ಬಚ್ಚಿಟ್ಟಂತೆಲ್ಲ ಅದು ಸಾಂದ್ರವಾಗಿ ನರನಾಡಿಗಳಲ್ಲಿ ಹಬ್ಬುತ್ತದೆ, ಇನ್ಯಾವುದೋ ರೋಗ ಅಥವಾ ಮಾನಸಿಕ ಖಿನ್ನತೆಯಲ್ಲಿ ಪ್ರಕಟಗೊಳ್ಳುತ್ತೆ, ಅದಕ್ಕಿರುವ ರಹದಾರಿ ಒಂದೇ 'ಅಭಿವ್ಯಕ್ತಿ' ಯಾವುದೇ ಕಲೆ ಸಾಹಿತ್ಯದ ಮೂಲಕ...
ಹೇಳಿಕೊಂಡು ಹಗುರಾಗುತ್ತೇವೆ, ನಮ್ಮ ದುಃಖ ನಮ್ಮದೊಂದೆ ಅಲ್ಲ ಎನ್ನುವ ಭಾವ ಬರುತ್ತಿದ್ದಂತೆ, ನೋವು ಸಾರ್ವತ್ರಿಕವಾಗಿ ಕಾಣಸಿಗುವ ಪದಾರ್ಥ ಅನ್ನೋದು ಅರಿವಾಗುತ್ತದೆ, ಇದು ಬದುಕಿನಲ್ಲಿ ಸಮೀಕರಿಸಿ ನೋಡಿದಾಗ, ಒಳ ಮನಸ್ಸಿನ ಆಳದಲ್ಲಿ ಇರುವ ಆನಂದ ನಿಧಾನವಾಗಿ ಹೊರಹೊಮ್ಮುತ್ತದೆ,ಬದುಕು ಮತ್ತೊಮ್ಮೆ ಉತ್ಸಾಹದಿಂದ ಚಿಮ್ಮುತ್ತದೆ
ಬಚ್ಚಿಟ್ಟುಕೊಂಡದ್ದು ಭಾರ...ಹೊರಗೆ ತೋರಿದಂತೆಲ್ಲ ಕತ್ತಲಮೂಲೆಗಳೆಲ್ಲ ಬೆಳಕಾಗಿ ನಿಚ್ಚಳ ಬದುಕು ಹಗೂssರಾ... ❤❤😍😍
ಕಾರಣಾಂತರಗಳಿಂದ ಶ್ರೀ ಶ್ರೀಪಾದರಾವ್ ಮಂಜುನಾಥ್ ಅವರು ನಡೆಸಿಕೊಡುತ್ತಿದ್ದ ಎರಡು ಕಾರ್ಯಕ್ರಮಗಳು ನೆನ್ನೆ ಮತ್ತೆ ಚಾಲನೆ ಪಡೆಯಿತು. ಮೊದಲನೆಯದು ಡಿವಿಜಿ ಕುರಿತು ವಾರ್ಷಿಕ ಕಾರ್ಯಕ್ರಮ, ಮತ್ತೊಂದು 'ಸ್ನೇಹ ಸೇತು ಬಳಗ'ದ ಕಾರ್ಯಕ್ರಮ. ಡಿವಿಜಿ ೧೩೯ ಎಂಬ ಶೀರ್ಷಿಕೆಯಡಿ 'ಸ್ನೇಹ ಸೇತು ಬಳಗ'ದ ಮೂಲಕ ನೆನ್ನೆ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮ ಶ್ರೀಮತಿ ಮಂಗಳಾಲಕ್ಷ್ಮಿ ಅವರ ಮನೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರೆಂದರೆ, ಶ್ರೀ ಕೃಷ್ಣಮೂರ್ತಿ ಚಿಕ್ಕನಹಳ್ಳಿ, ಶ್ರೀ ಶ್ರೀಪಾದರಾವ್ ಮಂಜುನಾಥ್, ಶ್ರೀ ಯತಿರಾಜ್ ವೀರಾಂಬುಧಿ, ಶ್ರೀ ಲೋಕೇಶ್, ಶ್ರೀಮತಿ ಮಂಗಳಾ ಲಕ್ಷ್ಮಿ ದಂಪತಿಗಳು, ಶ್ರೀಮತಿ ಸುಧಾ ಸರ್ನೋಬಾತ್, ಶ್ರೀಮತಿ ಅಂಜಲಿ ಹಲ್ಯಾಳ್ ದಂಪತಿಗಳು, ಶ್ರೀಮತಿ ಅನುಪಮಾ ದಂಪತಿಗಳು, ಶ್ರೀಮತಿ ರೇಣುಕಾ ಮಂಜುನಾಥ್, ಶ್ರೀ ವೆಂಕಟೇಶಮೂರ್ತಿ ಕನಕಪುರ, ಶ್ರೀಮತಿ ನೀಲಿ ಚಿಟ್ಟೆ (ಶಮ್ಮಿ), ಶ್ರೀಮತಿ ರೇಖಾ ವಾಸು, ಶ್ರೀಮತಿ ನಳಿನಿ ಸೋಮಯಾಜಿ, ಶ್ರೀ ಜಯರಾಮ ಸೋಮಯಾಜಿ ಅವರುಗಳು.
ಇಂದಿನ ಕಾರ್ಯಕ್ರಮದಲ್ಲಿ ನನಗೆ ಹಿರಿಯರಾದ ಶ್ರೀಮತಿ ಸುಧಾ ಸರ್ನೋಬಾತ್ ಅವರ ಆಶೀರ್ವಾದ, ಮತ್ತು ಕೆಲವು ಹೊಸ ಸ್ನೇಹಿತರ ಪರಿಚಯವಾದ್ದು ನನಗೆ ಸಂತೋಷಕೊಡುವ ಸಂಗತಿಯಾಗಿತ್ತು. ಇದಕ್ಕಾಗಿ ಮತ್ತೊಮ್ಮೆ ಶ್ರೀ ಶ್ರೀಪಾದರಾವ್ ಮಂಜುನಾಥ್ ಅವರಿಗೆ ಅನಂತ ಧನ್ಯವಾದಗಳು. ಹಾಗೆಯೇ, ಸಭೆಯಲ್ಲಿ ಎಲ್ಲರೂ ಕುಳಿತುಕೊಳ್ಳುವದಕ್ಕಾಗಿ ಆಸನಗಳನ್ನು ಒಪ್ಪ ಓರಣವಾಗಿ ಅಣಿ ಮಾಡಿಕೊಟ್ಟಿದ್ದಲ್ಲದೇ, ಬಂದವರೆಲ್ಲರನ್ನೂ ಪ್ರೀತ್ಯಾದರಗಳಿಂದ ಸತ್ಕರಿಸಿದ ಶ್ರೀ ವೆಂಕಟೇಶ್ ಅವರಿಗೂ, ಸಭೆಗೆ ಬರುತ್ತಿದ್ದಂತೆಯೇ ತಂಪು ಪಾನೀಯವನ್ನು ಕೊಡುವುದರಿಂದ ಮೊದಲ್ಗೊಂಡು, ಕೊನೆಯವರೆವಿಗೂ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಸತ್ಕರಿಸಿದ ಶ್ರೀಮತಿ ಮಂಗಳಾಲಕ್ಷ್ಮಿ ಅವರುಗಳಿಗೂ ನನ್ನ ಅನಂತ ಧನ್ಯವಾದಗಳು.
೧. ಭಗವಂತ ಡಿವಿಜಿ ರವರಂತ ಮಹನೀಯರನ್ನು ಈ ಲೋಕಕ್ಕಿತ್ತಿದ್ದಕ್ಕೆ.
೨. ಎಲ್ಲ ಹಂತದಲ್ಲೂ ನಮ್ಮೊಂದಿಗಿದ್ದು ಸೂಕ್ತ ಮಾರ್ಗದರ್ಶನ ನೀಡಿದ ನನ್ನ ಹಿರಿಯ ಮಿತ್ರ ಶ್ರೀಯುತ ಕೃಷ್ಣಮೂರ್ತಿ ಚಿಕ್ಕನಹಳ್ಳಿ ರವರಿಗೆ.
೩. ನಮ್ಮ ಮಿತ್ರ ಶಶಿಧರನ್ ರವರ ಹುಟ್ಟುಹಬ್ಬದಂದು ಅವರನ್ನು ಸನ್ಮಾನಿಸಲು ಶ್ರದ್ಧಾಪೂರ್ವಕವಾಗಿ ಸಹಕರಿಸಿದ ೩೯ ವರ್ಷದ ಸಹೋದ್ಯೋಗಿ ಮಿತ್ರ ಶ್ರೀಯುತ ಲೋಕೇಶ್ ಶ್ರೀಕಂಠಯ್ಯ ರವರಿಗೆ.
೪. ಕಾರ್ಯಕ್ರಮದ ಸಾರಥ್ಯವಹಿಸಿಕೊಂಡು ಸೊಗಸಾಗಿ ನಡೆಸಿಕೊಟ್ಟ ನನ್ನ ೩೯ ವರ್ಷದ ಗೆಳೆಯ ಶ್ರೀಯುತ ಯತಿರಾಜ್ ವೀರಾಂಬುಧಿ ರವರಿಗೆ.
೫. ನಮ್ಮ ಕರೆಗೆ ಸ್ಪಂದಿಸಿ ಬಳಗದ ವತಿಯಿಂದ ಗೌರವವನ್ನು ಸ್ವೀಕರಿಸಿದ ನಮ್ಮ ಗೆಳೆಯ ಶ್ರೀಯುತ ಶಶಿಧರನ್ ರವರಿಗೆ.
೬. ಕಾರ್ಯಕ್ರಮವನ್ನು ತಮ್ಮ ಸ್ವಗೃಹದಲ್ಲಿ ನಡೆಸಿಕೊಡಲೆಂದು ವಿನಂತಿಸಿಕೊಂಡು, ಎಲ್ಲ ವ್ಯವಸ್ಥೆಯನ್ನೂ ಬಹಳ ಅಕ್ಕರಾಸ್ಥೆಯಿಂದ ಆಯೋಜಿಸಿ ಎಲ್ಲ ಹಂತದಲ್ಲೂ ಸಹಕಾರವಿತ್ತ ಶ್ರೀಮತಿ ಮಂಗಳಲಕ್ಷ್ಮಿ ಹಾಗೂ ಶ್ರೀಯುತ ವೆಂಕಟೇಶ್ ದಂಪತಿಗಳಿಗೆ.
೭. ನೊಂದಿದ್ದ ತಾಯಿ ತಂಗಿಯೊಂದಿಗೆ ಆಗಮಿಸಿ ಪಾಲ್ಗೊಂಡ ಗೆಳತಿ ಶ್ರೀಮತಿ ಅಂಜಲಿ - ವಾಸು, ಶ್ರೀಮತಿ ಅನುಪಮಾ - ಮಹೇಶ್ ರವರಿಗೆ. ಅಂಜಲಿ ಹಾಡಿದ ಎರಡೂ ಹಾಡು ಮುದನೀಡಿತು.
೮. ತಮ್ಮ ಕೌಟುಂಬಿಕ ಅನಿವಾರ್ಯತೆಗಳ ನಡುವೆಯೂ ಸಮಯ ಮಾಡಿಕೊಂಡು ಪಾಲ್ಗೊಂಡ ಶ್ರೀಮತಿ ರೇಣುಕಾ ಮಂಜುನಾಥ್ ರವರಿಗೂ.
೯. ನಮ್ಮ ಕರೆಗೆ ಓಗೊಟ್ಟು ಬಹಳ ದೂರದಿಂದ ಆಗಮಿಸಿ ನಮ್ಮೊಡನಿದ್ದು ಸ್ಪೂರ್ತಿನೀಡಿದ ಶ್ರೀಯುತ ಜಯರಾಮ್ ಸೋಮಯಾಜಿ ಮತ್ತು ಶ್ರೀಮತಿ ನಳಿನಿ ಸೋಮಯಾಜಿ ದಂಪತಿಗಳಿಗೂ.
೧೦. ನಮ್ಮ ಗೆಳತಿ ಶ್ರೀಮತಿ ರೇಖಾವಾಸು ರವರು ನಮ್ಮೊಂದಿಗೆ ಸಕ್ರಿಯವಾಗಿ ಪಾಲ್ಗೊಂಡು ಅದ್ಭುತವಾಗಿ ಡಿವಿಜಿ ರಚನೆಯನ್ನು ಹಾಡಿ ರಂಜಿಸಿದ್ದಕ್ಕಾಗಿ.
೧೧. ಬಹುತೇಕ ನಮ್ಮೆಲ್ಲ ಕಾರ್ಯಕ್ರಮಗಳಲ್ಲಿ ನಮ್ಮೊಡನಿದ್ದು ಪಾಲ್ಗೊಳ್ಳುವ ಚೈತನ್ಯದ ಗೊಂಬೆ ಶ್ರೀಮತಿ ಶಮ್ಮಿ ಸಂಜೀವ್ ರವರಿಗೆ.
೧೨. ನಮ್ಮ ಮಿತ್ರ ಶ್ರೀಯುತ ರಾಘವ ಶರ್ಮ ಸಮಯ ಮಾಡಿಕೊಂಡು ಪೂರ್ತಿ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಪಾಲ್ಗೊಂಡಿದ್ದು ಹರುಷ ತಂದಿದೆ.
೧೩. ಡಿವಿಜಿ ಬಗ್ಗೆ ಅತ್ಯಂತ ಶ್ರದ್ಧೆ, ಭಕ್ತಿಯುಳ್ಳ ನನ್ನ ಯುವ ಮಿತ್ರ ಶ್ರೀಯುತ ವೆಂಕಟೇಶ ಮೂರ್ತಿ ಕನಕಪುರ ತನ್ನ ಔದ್ಯೋಗಿಕ ಅನಿವಾರ್ಯತೆಯ ನಡುವೆಯೂ ಪಾಲ್ಗೊಂಡಿದ್ದು ಮುದನೀಡಿತು.
೧೪. ಉದರ ಪೋಷಣೆಗೆ ನೆರವು ನೀಡಿದ (ಯುವಕ, ಯುವತಿ) ಹೆಸರು ಗೊತ್ತಿಲ್ಲವಾದರೂ ಅವರ ಪಾತ್ರ ಅತ್ಯಂತ ಸೊಗಸಾಗಿತ್ತು.
೧೫. ಅನಿವಾರ್ಯ ಕಾರಣದಿಂದ ಪಾಲ್ಗೊಳ್ಳಲಾಗದ ಕೆಲವು ಮಿತ್ರರಿಗೂ.
೧೬. ನೀವೆಲ್ಲರೂ ನಿಮ್ಮ ಅಮೂಲ್ಯ ಸಮಯವನ್ನು ಈ ಕಾರ್ಯಕ್ರಮಕ್ಕಾಗಿ ಮೀಸಲಿಟ್ಟಿದ್ದಕ್ಕಾಗಿ .....ಎಲ್ಲರಿಗೂ ನಮಿಸುವ.....ಮಂಜುತಿಮ್ಮ (ಸ್ನೇಹ ಸೇತು) ಪರವಾಗಿ. ಒಂದು ವೇಳೆ ಯಾರನ್ನಾದರೂ ಹೆಸರಿಸಲು ಬಿಟ್ಟಿದ್ದರೆ ನಿಮ್ಮ ಕ್ಷಮೆಯಿರಲಿ.
ರಾಘವ್ ಶರ್ಮಾ :
ಮನಕೆ ಮುದ ನೀಡಿದ ಒಂದು ಸುಂದರ ಸಂಜೆಯ ಕಾರ್ಯಕ್ರಮ. ಎಲ್ಲಾ ಮಿತ್ರವೃಂದಕ್ಕೂ ಸಸ್ನೇಹ ವಂದನೆಗಳು.
ಮಂಜಣ್ಣ, ಸಿಎಸ್ಕೆ, ಶಶಿ, ಯತಿರಾಜ್, ಲೋಕೇಶ್ ರವರಿಗೆ ಅಭಿನಂದನೆಗಳು 🙏🏼
ಮಂಗಳಾ ಮೇಡಂ ಮತ್ತು ಮನೆಯವರ ಹೃತ್ಪೂರ್ವಕ ಆತಿಥ್ಯಕ್ಕೆ ವಂದನೆಗಳು.
ಮುಂದಿನ ಭೇಟಿಗಾಗಿ ಕಾತರದಿಂದ ಕಾಯುತ್ತಿದ್ದೇನೆ. ❤️
ನನಗಂತೂ ಮರೆಯಲಾಗದ ದಿನವಿದು.ಎಲ್ಲರ ಅದ್ಭುತ ಸಹಕಾರ,ಮಾತುಗಳು,ಹಾಡುಗಳು,ಮಂಜಣ್ಣನವರ ಕಗ್ಗದ ವಾಚನ ಹಾಗೂ ಅದರ ಅರ್ಥ,,ಒಟ್ಟಿನಲ್ಲಿ ಎಲ್ಲರದ್ದೂ ಒಂದಷ್ಟು contribution ಮನಕ್ಕೆ ಮುದನೀಡಿತು, ಎಲ್ಲರಿಗೂ ಹೃತ್ಪೂರ್ವಕ ನಮನಗಳು☝️👍❤️❤️👌👌🙏🙏🙏🙏🙏

















No comments:
Post a Comment