Monday, March 9, 2026
A man who was full of life, laughs and make others to laugh, sad to hear is no more.
ಎಲ್ಲರಿಗೂ ಅಚ್ಚು ಮೆಚ್ಚಿನವರಾಗಿದ್ದ ಜಯಪ್ರಕಾಶ್ ಇನ್ನಿಲ್ಲ ಎಂಬುವುದು ನಂಬಲು ಅಸಾಧ್ಯ
ಫೆಬ್ರುವರಿ 2022 ರಲ್ಲಿ ಆರತಿ ಘಟಿಕರ ಅವರ ಮಗನ ಮದುವೆಯ ಸಂದರ್ಭದಲ್ಲಿ ತೆಗೆದ ಜೆಪಿ ಅವರೊಡನೆ ತೆಗೆದ ಫೋಟೋಗಳು....
ತಿರು ಶ್ರೀಧರ್ ಅವರ ನುಡಿ ನಮನ
ಇ. ಜಯಪ್ರಕಾಶ್ ಇನ್ನೆಲ್ಲಿ!
Respects to departed friend Jayaprakasha E


ಈ (ಇ) ಜಯಪ್ರಕಾಶ್ ಸದಾ ಹೃದಯಾಳದಿಂದ ನಗುತ್ತಿದ್ದ ಸುಂದರ ಹೃದಯಿ. ಅಂತೆಯೇ ಇವರ ಕಂಗಳು, ಅಂತರಂಗದ ಆಳದಿಂದ ಹೊರಹೊಮ್ಮುವ ಕಾಂತಿಯಿಂದ, ಎಲ್ಲೆಡೆ ಬೆಳಕು ಚೆಲ್ಲುತ್ತಿದ್ದವು.
'ಜಹಾಪನ' ಹೆಸರಿನಲ್ಲಿ ಮೊನ್ನೆ ಮೊನ್ನೆಯವರೆಗೆ ಬರೆಯುತ್ತಿದ್ದ ಜಯಪ್ರಕಾಶ್ ಅವರು ಎಲ್ಲರೊಂದಿಗೆ ನಸು ನಗುತ್ತ ಬೆರೆಯುತ್ತ, ಯಾವುದನ್ನೂ ಟೀಕಿಸದೆ, ತಮಗೆ ಇಷ್ಟವಾದದ್ದನ್ನು ಮೆಚ್ಚುತ್ತ, ಬರೆಯುತ್ತ ಬದುಕುವ ರೀತಿಯೇ ಸೊಗಸಿನದಾಗಿತ್ತು. ಹೀಗೆ ಜಹಾಪನ, ನಿಜ ಜಯಪ್ರಕಾಶರೇ ಆಗಿದ್ದರು.
"ಜಯಪ್ರಕಾಶ್ ಹೋಗಿಬಿಟ್ರು" ಎಂಬ ಸುದ್ದಿ ಕೆಲವು ನಿಮಿಷದೆ ಹಿಂದೆ ಓದಿದಾಗ ಅದನ್ನು ನಂಬದೆ ಅವರ ಮೆಸೆಂಜರಿಗೆ ಹೋಗಿ 'ಹಲೋ" ಎಂದೆ. ಎಂದೂ ತಡಮಾಡದೆ ಉತ್ತರಿಸುತ್ತಿದ್ದ ಅಲ್ಲಿಂದ ಉತ್ತರ ಬರಲಿಲ್ಲ!
ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ನನ್ನ ಜೊತೆ ಇರುತ್ತಿದ್ದರು. ನನ್ನ ಅನೇಕ ಪರಿಚಯಸ್ಥರೊಡನೆ ಫೋಟೊ ಕ್ಲಿಕ್ ಮಾಡಿಕೊಟ್ಟವರು ಅವರೆ. ನಾವಿಬ್ಬರೂ ಕಾರ್ಯಕ್ರಮದಲ್ಲಿ ಭೇಟಿ ಆದಾಗ ಒಂದು ಸೆಲ್ಫಿ ತೊಗೊಂಡು, "ಇರಿ ಇಂದು ಇಲ್ಲಿಗೆ ಬಂದಿಲ್ಲದೆ ಇರುವ ನಮ್ಮ ಕಾಮನ್ ಗೆಳೆಯ ಗೆಳತಿಯರಿಗೆ ಕಳಿಸಿ ಹೊಟ್ಟೆ ಉರಿಸುತ್ತೇನೆ ಅಂತಿದ್ರು".
ಅತಿಯಾದ ವಿಚಾರವಂತಿಕೆಗೆ ಎಡೆಕೊಡದೆ, ಸದಾ ಸರಳಮುಖಿಯಾಗಿ ಗುರುತು ಪರಿಚಯ ಯಾವುದೇ ಇಲ್ಲದಿದ್ದರೂ ಕ್ಷಣಮಾತ್ರದಲ್ಲಿ ಎಲ್ಲರೊಂದಿಗೆ ಹಸನ್ಮುಖಿಯಾಗಿ ನಲಿಯುತ್ತಿದ್ದ ಜಯಪ್ರಕಾಶ್ ಅವರ ಬದುಕು ಅಮರವೇ ಸರಿ.
ನಾನು ಅವರು ಬಂದಿಲ್ಲದ ಕಾರ್ಯಕ್ರಮಕ್ಕೆ ಹೋಗಿ ಫೇಸ್ಬುಕ್ನಲ್ಲಿ ಫೋಟೊ ಹಾಕಿದರೆ, "ಬ್ರೊ, ನನಗೆ ತಿಳಿಸದೆ ಹೀಗೆ ಕಾರ್ಯಕ್ರಮಕ್ಕೆ ಹೋಗೋದು ನ್ಯಾಯಾನಾ?" ಅಂತ ಮೆಸೇಜ್ ಮಾಡ್ತಿದ್ರು.
"ಜಹಾಪನ ಬ್ರೊ, ನೀವು ನನಗಿಂತ ಇಷ್ಟು ಚಿಕ್ಕವರು, ಹೀಗೆ ಹೋದದ್ದು ನ್ಯಾಯಾನ?"





No comments:
Post a Comment