ಸೋಮವಾರ, 11 ಅಕ್ಟೋಬರ್ 2026
ಶ್ರೀಮತಿ ಸಹನಾ ವಿಜಯಕುಮಾರ್ ಅವರ ಬ್ರಹತ್ ಕಾದಂಬರಿ "ಮಾಗಧ" ದ ನಂತರ ಬರೂವುಟ್ಟಿರುವುದು ಈ ಕಾದಂಬರಿ "ಅಪರೋಕ್ಷ". ಸುಮಾರು 280 ಪುಟಗಳ ಈ ಕಾದಂಬರಿ ಓದಿಸಿಕೊಂಡು ಹೋಗುತ್ತದೆ. ಶ್ರೀ ಎಸ್. ಎಲ್ ಬೈರಪ್ಪನವರ ಶಿಷ್ಯೆಯಾದ ಸಹನಾ ಅವರ ಶೈಲಿಯಲ್ಲಿ ಕಥೆ ಮುಂದುವರಿಯುತ್ತದೆ.
ಕೃತಿಯು ಸಮಕಾಲೀನ ವಸ್ತುವನ್ನು ಆಧರಿಸಿದೆ. ಪ್ರಮಾ , 37 ವರ್ಷದ ಯುವತಿ, ಸಾಫ್ಟ್ ವೇರ್ ಕಂಪನಿಯಲ್ಲಿ ಉನ್ನತ ಹುದ್ದೆ, ಕೈ ತುಂಬಾ ಸಂಬಳ, ಮದುವೆ ಬೇಡ, 30 ವರ್ಷದ ಯುವಕ ಶಾಂತನು ಒಂದಿಗೆ "ಲಿವ್ ಇನ್" ಸಂಬಂಧ . ಆತ್ಮೀಯರು, ಒಬ್ಬರನ್ನೊಬ್ಬರು ಪ್ರೀತಿಸುವವರು.
ಕೊನೆಯಲ್ಲಿ ಖಿನ್ನತೆಯಿಂದ ಹಿಮಾಲಯಕ್ಕೆ ಚಾರಣಕ್ಕೆ ಹೋಗಿ ತನ್ನ ಮನಸನ್ನು ಬದಲಾಯಿಸುವಳೋ ಎಂಬುದನ್ನು ಓದುಗರಿಗೆ ಬಿಟ್ಟಿರುವುದು.
ಅಪರೋಕ್ಷ ಜ್ಞಾನವೆಂದರೆ ಅನುಭವದಿಂದ ಲಭಿಸುವ ಸ್ವರೂಪ ಜ್ಞಾನ. ಇದು ಕಣ್ಣೆದುರಿಗಿನ ಪ್ರಾಪಂಚಿಕ ವಿಷಯಗಳ ಪ್ರತ್ಯಕ್ಷಯವೂ ಅಲ್ಲ. ಅವ್ಯಸ್ತರತ್ರಯದಿಂದ ಅರಿಯಬಹುದಾದ ಅದ್ಯಾತ್ಮ ಜ್ಞಾನ. ಗಾಡ ನಿದ್ರೆಯಿಂದ ಸಾರ್ವತ್ರಿಕ ನಿಸಸ್ಯಮಾನ್ಯ ಅನುಭವವನ್ನು ಜಾಗ್ರತಿನಲ್ಲಿ ಪ್ರತ್ಯಯಬಿ ಜ್ಞಾನ ಮಾಡಿಕೊಳ್ಳುವುದು. ಅಂದರೆ ಗಾಢ ನಿದ್ರೆಯಲ್ಲಿ ಉಂಟಾಗುವ ಅಪರೋಕ್ಷಾ ಅನುಭವದ ಜ್ಞಾನ ವನ್ನು ಎಚ್ಚರದಲ್ಲೂ ಸಾಕ್ಷಾ ತಕರಿಸಿ ಕೊಳ್ಳಬೇಕೆಂಬುದು ತಾತ್ಪರ್ಯ- ಮುನ್ನುಡಿಯಲ್ಲಿ ಬರೆಯುತ್ತಾರೆ ಸಹನಾ ವಿಜಯಕುಮಾರ್ ..
ಅರ್ಥ ಮಾಡಿಕೊಳ್ಳಲು ಕಠಿಣವಾದ ಸಾಲುಗಳು..
Posted 15/10/2026




No comments:
Post a Comment