Wednesday, October 28, 2026

VISIT HOME - NEELAVARA SURENDRA ADIGA

 Thursday, 22 Oct. 2026

Manooru, Kota, Udupi Dist.




ದಣಿವಿರದ ಸಾಧಕ, ಕನ್ನಡದ ಕಟ್ಟಾಳು, ಆತ್ಮೀಯ ನೀಲಾವರ ಸುರೇಂದ್ರ ಅಡಿಗರ ಮನೆಗೆ ಭೇಟಿ ಕೊಡುವ ಸಂದರ್ಭ ಒದಗಿ ಬಂತು. ಅವರ ಮನೆಯಲ್ಲಿಯ ಪುಸ್ತಕ ಭಂಡಾರ, ಅಂದವಾಗಿ ಜೋಡಿಸಿಟ್ಟಿರುವ ಅವರ ಪ್ರಶಸ್ತಿ, ಪುರಸ್ಕಾರಗಳು ನೋಡಿ ಸಂತೋಷವಾಯಿತು. 



ಉಡುಪಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮತ್ತು ಕನ್ನಡದ ಅತ್ಯುತ್ತಮ ಕತೆಗಾರ, ಕಾದಂಬರಿಕಾರ, ಕವಿ, ವಿಮರ್ಶಕ, ಗ್ರಂಥ ಸಂಪಾದಕರಾಗಿ ಸಾಹಿತ್ಯ ಲೋಕದಲ್ಲಿ ಮೇರು ಸಾಧನೆ ಮಾಡಿರುವ ಸುರೇಂದ್ರ ಅಡಿಗರು. 

ಬೇರೊಂದು ಸಮಾರಂಭದಲ್ಲಿ ಅವರನ್ನು ಭೇಟಿ ಮಾಡಿದಾಗ, ನಮ್ಮನ್ನು ಖಂಡಿತವಾಗಿ ಮನೆಗೆ ಬರಬೇಕು ಎಂದು ಆಹ್ವಾನಿಸಿದಾಗ , ಇಂದು ಅವರ ಮನೆಗೆ ಹೋಗುವ ಅವಕಾಶ ಒದಗಿ ಬಂತು. 


ಅಡಿಗರ ಆತಿಥ್ಯ, ಗೌರವ, ಸನ್ಮಾನ ಎಲ್ಲದಕ್ಕೂ ನಾವು ಶರಣು, ಅನಂತಾನಂತ ಧನ್ಯವಾದಗಳು. 

ಅಡಿಗರ ಕಾಯ ಕಲ್ಪವನ್ನು ನಿರಂತರವಾಗಿ ಮುಂದುವರಿಸಲು ಶ್ರೀ ದೇವರು ಅವರಿಗೆ ಶಕ್ತಿಯನ್ನು ಕೊಡಲಿ. 


Posted 29/10/2026  














No comments:

Post a Comment