ಶುಕ್ರವಾರ, 20 ಅಕ್ಟೋಬರ್ 2023
ನವರಾತ್ರಿಯ ಆರನೇ ದಿನ - ಕಾತ್ಯಾಯನಿ ದೇವಿ
ಕಾತ್ಯಾಯಿನಿಯ ಮಹತ್ವ
ಕಾತ್ಯಾಯಿನಿಯು ಗುರು ಗ್ರಹವನ್ನು ಆಳುತ್ತಾಳೆ. ಗುರುಗ್ರಹದ ದೃಷ್ಟಿ ಹಾಗೂ ಪ್ರಭಾವ ಉತ್ತಮವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಪ್ರಯೋಜನ, ಸಮೃದ್ಧಿ ಹಾಗೂ ಯಶಸ್ಸನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹದಿಂದ ಪಡೆಯಬಹುದಾದ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಜನ್ಮಕುಂಡಲಿಯಲ್ಲಿ ಗುರು ದೋಷವಿದ್ದರೂ ಪರಿಹಾರವಾಗುವುದು.
ಕಾತ್ಯಾಯಿನಿ ದೇವಿ ಮಂತ್ರ
- ''ಯಾ ದೇವಿ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ|
ನಮಸ್ತ್ಯೈ ನಮಸ್ತ್ಯೈ ನಮಸ್ತ್ಯೈ ನಮೋ ನಮಃ||''
- ''ಓಂ ಕಾತ್ಯಾಯಿನಿ ದೇವ್ಯೇ ನಮಃ''
ಪ್ರಾರ್ಥನೆ
''ಚಂದ್ರಹಾಸೋಜ್ವಲಕರಾ ಶಾರ್ದೂಲ್ವರ್ವಾಹನಾ ಕಾತ್ಯಾಯಿನಿ
ಶುಭಂ ದದ್ಯಾದ್ ದೇವೀ ದಾನವಗತಿನೀ''
ಕಾತ್ಯಾಯಿನಿ ಸ್ತುತಿ
"ಯಾ ದೇವಿ ಸರ್ವಭೂತೇಷು ಮಾ ಕಾತ್ಯಾಯಿನಿ ರೂಪೇಣ ಸಂಸ್ಥಿತಾ
ನಮಸ್ತಸ್ತೈ ನಮಸ್ತಸ್ತೈ ನಮಸ್ತಸ್ತೈ ನಮೋ ನಮಃ''
ಧ್ಯಾನ ಮಂತ್ರ
" ವಂದೇ ವಂಚಿತ ಮನೋರಥಾರ್ಥ ಚಂದ್ರದ್ರಕೃತಾಶೇಖರಂ
ಸಿಂಹಾರುಧ ಚತುರ್ಭುಜ ಕಾತ್ಯಾಯಿನಿ ಯಶಸ್ವಿನೀಂ
ಸ್ವರ್ಣವರ್ಣ ಆಜ್ಞಾಚಕ್ರಂ ಸ್ಥಿತಂ ಶಾಶ್ತಮಾ ದುರ್ಗಾ ತ್ರಿನೇತ್ರಂ
ವರಭಿತ ಕರಂ ಶಗಪದಾಧರಂ ಕಾತ್ಯಾಯನಸುತಂ ಭಜಾಮಿ
ಪತಂಬರಾ ಪರಿಧನಂ ಸ್ಮೇರಮುಖಿ ನಾನಾಲಂಕಾರ ಭೂಷಿತಂ
ಮಂಜೀರಾ, ಹರಾ, ಕೇಯುರಾ, ಕಿಂಕಿಣಿ, ರತ್ನಕುಂಡಲ ಮಂಡಿತಂ
ಪ್ರಸನ್ನವದನಾ ಪಲ್ಲವಧಾರಂ ಕಾಂತ ಕಪೋಲಂ ತುಗಂ ಕುಚಂ
ಕಾಮನೀಯಂ ಲಾವಣ್ಯಂ ತ್ರಿವಲ್ಲಿವಿಭೂಷಿತ ನಿಮ್ನ ನಾಭೀಂ''
ಕಾತ್ಯಾಯಿನಿ ಸ್ತೋತ್ರ
ಕಂಚನಾಭ ವರಾಭಯಂ ಪದ್ಮಧಾರಾ ಮುಖತೋಜ್ಜವಲಂ
ಸ್ಮೇರಮುಖಿ ಶಿವಪತ್ನೀ ಕಾತ್ಯಾಯನೇಸುತೇ ನಮೋಸ್ತುತೇ
ಪತಂಬರಾ ಪರಿಧನಂ ನಾನಾಲಂಕಾರ ಭೂಷಿತಂ
ಸಿಂಹಸ್ಥಿತಂ ಪದ್ಮಹಸ್ತಂ ಕಾತ್ಯಾಯನಸ್ತುತೇ ನಮೋಸ್ತುತೇ
ಪರಮಾನಂದಮಯೀ ದೇವೀ ಪರಬ್ರಹ್ಮಾ ಪರಮಾತ್ಮ
ಪರಮಶಕ್ತಿ, ಪರಮಭುಕ್ತಿ ಕಾತ್ಯಾಯನಸ್ತುತೇ ನಮೋಸ್ತುತೇ
ವಿಶ್ವಕಾರ್ತಿ, ವಿಶ್ವಭಾರತೀ, ವಿಶ್ವಹಾರ್ತಿ, ವಿಶ್ವಪ್ರತಿಮ
ವಿಶ್ವಾಚಿಂತ, ವಿಶ್ವಾತೀತ ಕಾತ್ಯಾಯನಸ್ತುತೇ ನಮೋಸ್ತುತೇ
ಕಾಂ ಬಿಜಂ ಕಾಂ ಜಪನಂದಕಂ ಬಿಜಾ ತೋಶಿತೇಕಂ
ಕಾಂ ಬೀಜಂ ಜಪದಾಶಕ್ತಕಾಂ ಕಾಂ ಸಂತುತಾ
ಕಾಮ್ಕರಹಾರ್ಶಿ ನಿಕಂ ಧನದಾಧಾನಮಸಾನಕಂ
ಬೀಜ ಜಪಕಾರಿನಿಕಾಂ ಬಿಜಾ ತಪ ಮಾನಸಕಂ
ಕಾರಿಣಿ ಕಾಂ ಮಂತ್ರಪೂಜಿತಕಂ ಬೀಜ ಧಾರಿಣಿಕಂ
ಕಿಂ ಕುಂಕೈ ಕಾಹ್ ಥಾಹ್ ಚಾಹ್ ಸ್ವಾಹರೂಪಿಣಿ
ಕಾತ್ಯಾಯಿನಿ ಕವಚ
ಕಾತ್ಯಾಯನೌಮುಕ್ತ ಪಾತು ಕಂ ಸ್ವಾಹಸ್ವರೂಪಿಣಿ
ಲಲಾಟೇ ವಿಜಯ ಪಾತು ಮಾಲಿನಿ ನಿತ್ಯ
ಸುಂದರಿಕಲ್ಯಾಣಿ ಹೃದಯಂ ಪಾತು ಜಯ ಭಾಗಮಾಲಿನಿ
ಕಾತ್ಯಾಯಿನಿ ಕಥೆ
ಮಹರ್ಷಿ ಕಾತ್ಯಾಯನನು ದೇವಿಯು ಆದಿಶಕ್ತಿಗಾಗಿ ತೀವ್ರ ತಪಸ್ಸು ಮಾಡಿದನು. ಪರಿಣಾಮವಾಗಿ ಅವನು ದೇವಿಯನ್ನು ತನ್ನ ಮಗಳಾಗಿ ಸ್ವೀಕರಿಸಿದನು. ದೇವಿ ಮಹರ್ಷಿ ಕಾತ್ಯಾಯನ ಅವರ ಆಶ್ರಮದಲ್ಲಿ ಜನಿಸಿದಳು. ಅವರ ಮಗಳ ಕಾರಣದಿಂದ ಅವಳನ್ನು ಕಾತ್ಯಾಯನಿ ಎಂದು ಕರೆಯಲಾಗುತ್ತದೆ. ದೇವಿಯು ಜನಿಸಿದಾಗ, ಮಹಿಷಾಸುರನೆಂಬ ರಾಕ್ಷಸನ ದೌರ್ಜನ್ಯವು ಬಹಳಷ್ಟು ಹೆಚ್ಚಾಯಿತು. ರಾಕ್ಷಸರು ಸ್ವರ್ಗ ಹಾಗೂ ಭೂಮಿಯಲ್ಲಿ ಗದ್ದಲ ಸೃಷ್ಟಿಸಿದರು. ಆಶ್ವೀಜ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯಂದು ಕಾತ್ಯಾಯನ ಮುನಿ ಮನೆಯಲ್ಲಿ ತ್ರಿದೇವರ ಪ್ರಕಾಶಮಾನವಾದ ದೇವತೆ ಜನಿಸಿದಳು.
Posted 20/10/2023
No comments:
Post a Comment