Saturday, 24th October 2026
Salekeri DurgaPrameshwari Devasthana Sabhangana, Brahmavara.
Second part of SANGEETHA MALIKE 2026, was Yakshagana Prasanga, RATNAVATHI KALYANA, presented by Sujayeendra Hande and his team.
![]() |
| SUDHINDRA HOLLA |
MEMORIES OF BIRTHIMANE,BIRTHDAYS, POOJA, CELEBRATIONS, FESTIVALS, VISITS, DRAMA, MUSIC, YAKSHAGANA, GET-TOGETHERS, WEDDING ENGAGEMENTS, WEDDINGS, WEDDING ANNIVERSARY, BRAHMOPADESHA, NAMAKARANA, SEEMANTHA, BOOK RELEASE, BOOK REVIEW, AND SHRADDHANJALI....
Saturday, 24th October 2026
Salekeri DurgaPrameshwari Devasthana Sabhangana, Brahmavara.
Second part of SANGEETHA MALIKE 2026, was Yakshagana Prasanga, RATNAVATHI KALYANA, presented by Sujayeendra Hande and his team.
![]() |
| SUDHINDRA HOLLA |
Saturday, 24th October 2026
Salekeri Durgaparameshwari Devasthana Sabhangana, Brahmavara,
In memory of Late Srikanth Somayaji, music program was organized at the above venue, as there was likely rain.
![]() |
| ABHILASHA |
Friday, 23rd Oct. 2026
ಕೂಟಮಹಾಜಗತ್ತು, ಸಾಲಿಗ್ರಾಮ (ಆರ್), ಉತ್ತರ ಹಳ್ಳಿ ಅಂಗಸಂಸ್ಥೆಯ ಹಿರಿಯ ಸದಸ್ಯರಾದ
ಪಣಂಬೂರು ಹೆಸರಾಂತ ಐತಾಳ ಮನೆತನದ ಜ್ಯೋತಿಷಿ ಶ್ರೀಯುತ ಬಾಬು ಯಾನೆ ನಾರಾಯಣ ಐತಾಳರ ಸುಪುತ್ರ ಹೈಕೋರ್ಟ್ ಅಡ್ವಕೇಟ್ ವಾಸುದೇವ ಐತಾಳ ತಮ್ಮ 95ನೇ ವಯಸ್ಸಿನಲ್ಲಿ ಇದೀಗ ಬೆಂಗಳೂರಿನ ಸ್ವಗ್ರಹ ದಲ್ಲಿ ನಿಧನ ಹೊಂದಿದರು. ಅವರು ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ದೇವರು ಇವರ ಆತ್ಮಕ್ಜೆ ಸದ್ಗತಿಯನ್ನು ನೀಡುವುದರೊಂದಿಗೆ ಮಕ್ಕಳಿಗೆ ಮತ್ತು ಮನೆ ಯವರೆಲ್ಲರಿಗೂ ದು:ಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಶ್ರದ್ಧಾಂಜಲಿ ಪೂರ್ವಕ ಪ್ರಾರ್ಥಿಸುತ್ತೇವೆ.
ಓಂ ಶಾಂತಿಃ.
ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹಾಗೂ ಕಾರ್ಯಕಾರಿ ಸಮಿತಿ
ಕೂಟಮಹಾಜಗತ್ತು, ಸಾಲಿಗ್ರಾಮ (ಆರ್), ಉತ್ತರ ಹಳ್ಳಿ ಅಂಗಸಂಸ್ಥೆ
VISITING OORU
21 - 26 OCT. 2026
Visiting ooru is always happy ocassion, with attending various functions, visiting temples and visiting friends relations after a long time.
Day 1: Wednesday 21st Oct.
Having left from Bengaluru, the previous evening by Panchaganga Express Train, reached early mornig 4.30 to Udupi station, from there engaged Auto and went to Udyavara.
Sunday, 18th October 2026
Granthalaya, TaralaBalu Kendra, R.T. Nagara, Bengaluru.
ಶಿವರಾಮ ಕಾರಂತ ವೇದಿಕೆಯು ಡಾ. ಕೋಟಾ ಶಿವರಾಮ ಕಾರಂತರ 125 ನೇ ಹುಟ್ಟುಹಬ್ಬವನ್ನು ವಿಜರಂಭಣೆಯಿಂದ ಆಚಾರಿಸಿತು.
ಶಿವರಾಮ ಕಾರಂತರ 125 ನೇ ಹುಟ್ಟುಹಬ್ಬ ಆಚರಣೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ವೀರಪ್ಪ ಮೊಯ್ಲಿ ಯವರು ಆಗಮಿಸಿದ್ದರು. ಜೊತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಬಿಳಿಮಲೆಯವರು ಹಾಗೂ ಖ್ಯಾತ ಸಾಹಿತಿ, ವಿಮರ್ಶಕರು, ವೇದಿಕೆಯ ಗೌರವಧ್ಯಕ್ಷರು ಆದ ಶ್ರೀ ಎಸ್. ಆರ್. ವಿಜಯ ಶಂಕರ ಅವರು ಆಗಮಿಸಿದ್ದರು ವೇದಿಕೆಯ ಸಂಸ್ಥಾಪಕರಾದ ಪಾ. ಚಂದ್ರಶೇಖರ ಚಡಗರವರು ಮತ್ತು ಅಧ್ಯಕ್ಷರಾದ ಶ್ರೀ ವೀರಶೇಖರ ಸ್ವಾಮಿಯವರು ಹಾಗೂ ವೇದಿಕೆಯ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರು, ಸರ್ವ ಸದಸ್ಯರು ಹಾಜರಿದ್ದರು
ನಂತರ ಶ್ರೀ ಚಿದಂಬರ ಕೋಟೆಯವರು ಪ್ರಾರ್ಥನೆಯನ್ನು ಪ್ರಸ್ತುತಿ ಪಡಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡಿದ ಶ್ರೀ ಪಾ. ಚಂದ್ರಶೇಖರ ಚಡಗರು ಮಾತನಾಡಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಆಹ್ವಾನಿತರನ್ನು ಮತ್ತು ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ವೀರಪ್ಪಮೊಯ್ಲಿ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಮಾಡಿ ಶಿವರಾಮ ಕಾರಂತ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ಶ್ರೀ ಚಂದ್ರಶೇಖರ ಚಡಗರು ಸಂಪಾದಿಸಿದ " ಕಾರಂತರ ನೂರಾರು ಮುಖಗಳು " ಎಂಬ ಕೃತಿಯ ಮೊದಲನೇ ಭಾಗವನ್ನು ಎಲ್ಲಾ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.
ನಂತರ ಶ್ರೀ ವೀರಪ್ಪ ಮೊಯ್ಲಿಯವರು ಉಪನ್ಯಾಸ ಮಾಡುತ್ತಾ
" ಶಿವರಾಮ ಕಾರಂತರು ಸಾಹಿತಿ ಮಾತ್ರವಲ್ಲ, ತಮ್ಮ ಬದುಕಿನ ಕೊನೆಯವರೆಗೂ ಸೃಜನಶೀಲತೆಯನ್ನು ಉಳಿಸಿಕೊಂಡ ಅಪರೂಪದ ವ್ಯಕ್ತಿ, ಕಾಲಾತೀತ ವಿಸ್ಮಯ ಎಂದು ಅಭಿಪ್ರಾಯಪಟ್ಟರು.
ಕಾರಂತರ ಸಾಹಿತ್ಯ, ಚಿಂತನೆ ಮತ್ತು ಜೀವನ ದೃಷ್ಟಿಯನ್ನು ಇಂದಿನ ಮಕ್ಕಳು ಹಾಗೂ ಯುವಜನರು ಆಳವಾಗಿ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು. ತಮ್ಮ ಅಧಿಕಾರದ ಅವಧಿಯಲ್ಲಿ ಸಾಹಿತಿಗಳ ಮನೆಗಳನ್ನು ಸ್ಮಾರಕಗಳನ್ನಾಗಿ ಮಾಡಲು ಪಟ್ಟ ಶ್ರಮದ ಬಗ್ಗೆ ತಿಳಿಸಿದರು. ಕೆಳವರ್ಗದ ಅಸಹಾಯಕರ ಬಗ್ಗೆ ಕಾರಂತರಿಗೆ ಇದ್ದ ಕಾಳಜಿಯನ್ನು ಹೇಳುತ್ತಾ ಈ ಎಲ್ಲವನ್ನೂ ಅವರ ಕಾದಂಬರಿಗಳಲ್ಲಿ ಕಾಣಬಹುದೆಂದರು.
ಕಾರಂತರು ನಿರ್ದಿಷ್ಟ ಸಿದ್ಧಾಂತಕ್ಕೆ ಬದ್ಧರಾಗದೆ, ತಮ್ಮ ಅನುಭವ ಮತ್ತು ಆತ್ಮಸಾಕ್ಷಿಗೆ ನಿಷ್ಠರಾಗಿ ಸಾಹಿತ್ಯ ರಚಿಸಿದವರು. ಅವರ ಸಾಹಿತ್ಯದಲ್ಲಿ ಅಸಹಾಯಕರು ಮತ್ತು ಬದುಕಿನ ಮುಸ್ಸಂಜೆಯಲ್ಲಿರುವ ವ್ಯಕ್ತಿಗಳಿಗೆ ಮಹತ್ವದ ಸ್ಥಾನವಿದೆ ಎಂದರು
ಕಾರಂತರ ‘ಚೋಮನ ದುಡಿ’ ಮತ್ತು ‘ಮರಳಿ ಮಣ್ಣಿಗೆ’ ಬೆಟ್ಟದ ಜೀವ ಸೇರಿದಂತೆ ಹಲವು ಕೃತಿಗಳು ಬದುಕಿನ ವಾಸ್ತವಗಳನ್ನು ಅನಾವರಣಗೊಳಿಸುತ್ತವೆ ಮತ್ತು ಸಮಾಜದಲ್ಲಿ ಹಾಗೂ ರಾಜಕೀಯದಲ್ಲಿ ಜಾತಿ ಮತ್ತು ಧರ್ಮಗಳು ಸದಾ ಕಾಲದಲ್ಲಿ ಮುನ್ನಲೆಯಲ್ಲಿವೆ ಎಂದರು.
ಶಿವರಾಮ ಕಾರಂತರ ಕುರಿತ ಚಿಂತನೆಗಳು ಪಠ್ಯಪುಸ್ತಕಗಳಲ್ಲಿ ಹಾಗೂ ಕಾಲೇಜುಗಳ ಅಧ್ಯಯನದಲ್ಲಿ ಸ್ಥಾನ ಪಡೆಯಬೇಕು. ಮಕ್ಕಳನ್ನು ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಿದ್ಧಪಡಿಸುವುದರ ಜೊತೆಯಲ್ಲಿ ಕಾರಂತರ ಚಿಂತನೆಗಳ ಮೂಲಕ ಬೆಳೆಸಿದರೆ ಅವರಲ್ಲಿ ವಿಶಾಲ ಜ್ಞಾನ ಮತ್ತು ಉನ್ನತ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ " ಎಂದರು.
ಶ್ರೀ ಪುರುಷೋತ್ತಮ ಬಿಳಿಮಲೆಯವರು ಮಾತನಾಡಿ ಕಾರಂತರ ಖ್ಯಾತ ಕೃತಿಗಳಾದ ಮೂಕಜ್ಜಿಯ ಕನಸುಗಳು, ಚೋಮನದುಡಿ, ಮರಳಿ ಮಣ್ಣಿಗೆ, ಹುಚ್ಚು ಮನಸಿನ ಹತ್ತು ಮುಖಗಳು, ಸರಸಮ್ಮನ ಸಮಾಧಿ, ಹೀಗೇ ಹಲವು ಕೃತಿಗಳ ಬಗ್ಗೆ ವಿಶ್ಲೇಷಣೆ ಮಾಡುತ್ತಾ
ಕಾರಂತರು ಇಂದಿಗೂ ಜನಮಾನಸದಲ್ಲಿ ಉಳಿದು ಕೊಂಡಿರುವ ಬಗ್ಗೆ ಅತ್ಯಂತ ಸ್ವಾರಸ್ಯಕರವಾಗಿ ಮಾತನಾಡಿದರು. ಖ್ಯಾತ ವಿಮರ್ಶಕರಾದ ಶ್ರೀ
ಎಸ್. ಆರ್ ವಿಜಯಶಂಕರರವರು ಚೋಮನದುಡಿ ಕೃತಿಯ ಬಗ್ಗೆ ಉಲ್ಲೇಖಿಸುತ್ತ, ಕಾರಂತರ ಕಾಲಘಟ್ಟದ ನೆಲೆಯಲ್ಲಿ ಸಾಮಾಜಿಕ ಸಮಾನತೆಗಳ ಮಧ್ಯೆ, ಕಾರಂತರ ಸಮಕಾಲೀನರ ನಡುವೆ ಭಾಷೆಗಳ ನಡುವಿನ ಹಾಸ್ಯಭರಿತ ಮಾತುಗಳು ಹೇಗೆ ಇದ್ದವು ಎಂಬುದನ್ನು ಅತ್ಯಂತ ಕುತೂಹಲಕರವಾಗಿಯೂ, ಸ್ವಾರಸ್ಯಕರವಾಗಿಯೂ, ಹಾಸ್ಯಮಯವಾಗಿ ವಿವರಿಸಿದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶ್ರೀ ವೀರಶೇಖರ ಸ್ವಾಮಿಯವರು ಶಿವರಾಮ ಕಾರಂತ ವೇದಿಕೆಯ ನಡೆದು ಬಂದ ಹಾದಿಯ ಬಗ್ಗೆ ಮಾತನಾಡುತ್ತಾ ವೇದಿಕೆ ಕಳೆದ 33 ವರ್ಷಗಳಿಂದ ನಿರಂತರವಾಗಿ ಪ್ರತಿ ತಿಂಗಳು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ, ಸಾಹಿತಿ, ಸಂಗೀತ, ನಾಟಕ ಮತ್ತು ಯಕ್ಷಗಾನ ಮುಂತಾದ ಕಲಾ ಪ್ರಕಾರಗಳನ್ನು ಆಯೋಜಿಸುತ್ತಿದೆ. ಅನೇಕ ಮಹನೀಯರು ಜ್ಞಾನಪೀಠ ಭಾಜನರು, ಕೇಂದ್ರ ರಾಜ್ಯ ಪ್ರಶಸ್ತಿ ಪಡೆದ ಗಣ್ಯರು, ಖ್ಯಾತ ಕಲಾವಿದರು, ಚಿಂತಕರು ಸಾಹಿತಿಗಳು ವೇದಿಕೆಗೆ ಬಂದು ಹಿರಿಮೆಯನ್ನು ಹೆಚ್ಚಿಸಿದ್ದಾರೆ ಎಂದರು. ಮಕ್ಕಳಿಗೆ ಮತ್ತು ಅಸ್ತರಿಗೆ ಕಥಾ ಕಮ್ಮಟಗಳನ್ನು ಮತ್ತು ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿದೆ , ಒಳ್ಳೆಯ ನಾಟಕಗಳನ್ನು ಮತ್ತು ಯಕ್ಷಗಾನಗಳನ್ನು ವೇದಿಕೆ ಆಯೋಜಿಸಿದೆ.ಕನ್ನಡೇತರರು ಇರುವ ಈ ಪ್ರದೇಶದಲ್ಲಿ ಇಷ್ಟು ಸುದೀರ್ಘವಾಗಿ ಈ ಸಂಸ್ಥೆ ನಡೆಯಲು ಶ್ರೀ ಚಡಗರ ಶ್ರಮ, ಪರಿಶ್ರಮ ಮತ್ತು ಛಲಗಳೇ ಕಾರಣ ಎಂದರು. ಮುಂಬರುವ ದಿನಗಳಲ್ಲಿ ತಮ್ಮ ವೇದಿಕೆಯನ್ನು ಮುನ್ನಡೆಸುವ,ಕನ್ನಡವನ್ನು ಉಳಿಸಿ ಬೆಳೆಸುವ ಕೆಲವು ಅಂಶಗಳನ್ನು ಚರ್ಚಿಸಿ, ತಮ್ಮೇಲ್ಲರ ಸಹಾಯ, ಸಹಕಾರ ಮತ್ತು ಪ್ರೋತ್ಸಾಹಗಳು ಬೇಕೆಂದರು. ಖ್ಯಾತ ಸಾಹಿತಿಗಳಾಗಿದ್ದ ವಿ.ಸೀತಾರಾಮಯ್ಯು ಅವರ ಹೆಸರಿನ ಸಂಸ್ಥೆವತಿಯಿಂದ ವೇದಿಕೆಯ ಸಂಸ್ಥಾಪಕರಾದ ಶ್ರೀ ಚಡಗ ಅವರಿಗೆ ಸಂಸ್ಥೆಯ ಹಿರಿಯರೊಬ್ಬರಿಂದ ಗೌರವ ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಬಂದು ಉದ್ಘಾಟನೆ ಮತ್ತು ಉಪನ್ಯಾಸ ಮಾಡಿದ ಶ್ರೀ ವೀರಪ್ಪ ಮೊಯಿಲಿಯವರಿಗೆ, ಶ್ರೀ ಪುರುಷೋತ್ತಮ ಬಿಳಿಮಲೆ ಯವರಿಗೆ ಹಾಗೂ ಶ್ರೀ ವಿಜಯ ಶಂಕರ್ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಮಧ್ಯಾಹ್ನದ
ಭೋಜನ ವಿರಾಮದ ನಂತರ
ಆನಂತರ
👆ಮೇಲಿನ ಕಾರ್ಯಕ್ರಮದ ವರದಿಯನ್ನು ರಂಗಾಭರಣ ಪತ್ರಿಕೆಗೆ ಪ್ರಕಟಿಸಲು ವಿನಂತಿಸಿ ಕಳಿಸಲಾಗಿದೆ. 🙏
Posted 20/10/2026