Sunday, April 26, 2020

SHRADDHANJALI - SUNANDA HEBBAR

Thursday, 23rd April 2020
Bengaluru

SUNANDA HEBBAR
Sunanda is the daughter of Radha-IPS Nagappaya at Shivamogga.

Radhakka is one of seven daughters, of my doddappa, Shankaranarayana Somayaji



Sunanda's husband is Dr. Hebbar, retired from services at Agricultural University, Bengaluru.

at a function in Vidyapeetha, Bengaluru

She passed away last Thursday, 23th April, due to cardiac arrest at the age of 67 years.

ನಮ್ಮನ್ನಗಲಿದ ಸೌಮ್ಯ ವದನೆ, ಮೃದುಭಾಷಿ, ಸಹನಾಶೀಲೆ.. 
ಸುನಂದಕ್ಕಳಿಗೆ ಅರ್ಪಿತವಾದ ಶ್ರದ್ಧಾಂಜಲಿ ಕವನ... 

1950ರ ಆಸು - ಪಾಸಿನಲಿ ಶ್ರೀ ನಾಗಪ್ಪಯ್ಯ - ಶ್ರೀಮತಿ ರಾಧಾ ದಂಪತಿಗಳ
ಮಡಿಲಲ್ಲಿ ಉದಯಿಸಿತು ದಿವ್ಯ ಜ್ಯೋತಿಯ ಹಾಗೆ ಒಂದು ಪುಟ್ಟ ಕಂದ ll
ಹರುಷದ ಹೊನಲು ಹರಿಸಿ ಆಗಮಿಸಿದ ಈ ಕನ್ನಿಕೆಯ
ಆಟ-ಪಾಠಗಳ ನೋಡುವುದರಲ್ಲೇ ಪಾಲಕರಿಗಾಯಿತು ನಿತ್ಯ ಆನಂದ ll1ll

ವರುಷಗಳು ಕಳೆದಂತೆ ನೋಡ ನೋಡುತ್ತಲೇ ಬೆಳೆದು ನಿಂತ ಮಗಳ
ಕುರಿತು ಹೆತ್ತವರು ಬಣ್ಣಿಸಲಾರಂಭಿಸಿದರು ಅವಳ ಅಂದ-ಚಂದ ll
ಆದರೇನು ಮಾಡುವುದು..? ಜನನಿ-ಜನಕರಿಗೆ ಅನಿವಾರ್ಯವಾಯಿತು
ಪ್ರೀತಿಯ ಪುತ್ರಿಗೆ ಹುಡುಕುವುದು ಅನುರೂಪನಾದ ಸಂಬಂಧ ll2ll

ದ್ವಾರಕಾಧೀಶ ಸಮಾನ ಪತಿಯ ಕೈ ಹಿಡಿದ ಬಳಿಕ ಈಕೆಗೆ ಎದುರಾಯಿತು
ಕುಟುಂಬ ನಿರ್ವಹಣೆಯ ಜೀವನ ಮಾರ್ಗದ ಬೇಕು-ಬೇಡಗಳ ಪದಬಂಧ ll
ವರುಷ ತುಂಬಿತು ಎನಲು ರತ್ನ ಸಮಾನ ಸುಪುತ್ರಿಯು ಜನಿಸಿ,
ಬೆಳಕ ಹೊತ್ತು ಬಂದಂತೆ ಮಾತೃ ಹೃದಯಕೆ ತಂದಳು ನಿತ್ಯ ಸೌಗಂಧ ll3ll

ಹೀಗೆ ಬದುಕು ಸಾಗಿರಲು, ಅಸಾಮಾನ್ಯ ಮುತ್ತು-ರತ್ನಗಳಂತೆ ಕಂಗೊಳಿಸುವ
ದ್ವಿ-ಪುತ್ರರು ಆಗಮಿಸಿ, ಮನೆಯನ್ನು ಪರಿವರ್ತಿಸಿದರು ಗೋಕುಲದ ನಂದ ll
ಪತಿಗೆ ನೆಚ್ಚಿನ ಸತಿಯಾಗಿ, ಕೈ ಜೋಡಿಸಿ ಮೆಲ್ಲನೆ ಉನ್ನತಿಯೆಡೆಗೆ ಹೆಜ್ಜೆಯ ಇಡುತ,
ಸದ್ದು ಮಾಡದೇ, ಮುದ್ದಿನ ಮಕ್ಕಳಿಗೆ ಅಕ್ಕರೆಯ ಅಮ್ಮನಾಗಿ ತುಂಬಿದಳು ಮಕರಂದ ll4ll

ಒಡಹುಟ್ಟಿದವರುಗಳು ಬದುಕು ಕಟ್ಟಿಕೊಳ್ಳಲು ಹಂತ-ಹಂತವಾಗಿ ಭದ್ರ ಬುನಾದಿ ರೂಪಿಸುತ್ತಾ,
ಸಂಸಾರ-ಸಂಸ್ಕಾರಗಳ ಅರಿವು ಮೂಡಿಸಿ, ನಾಂದಿ ಹಾಡಿದಳು ಕಲಿಸುತ್ತ ಅನುಬಂಧ ll
ತುಂಬಿದ ಮನೆಯಲ್ಲಿ ಮಕ್ಕಳು- ಮೊಮ್ಮಕ್ಕಳು- ನೆಂಟರಿಷ್ಟರು- ಪ್ರೀತಿ ಪಾತ್ರರಿಗೆ ಸಲಹುತ್ತ,
ಬಿಡುವಿನ ವೇಳೆಯಲ್ಲಿ ಭಗವನ್ನಾಮ ಸ್ಮರಿಸುತ್ತಾ, ನೆಮ್ಮದಿಯ ಮುಕ್ತಿ ಬೇಡಿದಳು ಸುದೈವದಿಂದ ll5ll

ಅದೇಕೋ ಕಾಣೆ..? ಇನ್ನೂ ಈಕೆಯ ಆಕಾಂಕ್ಷೆಗಳ ಪಟ್ಟಿ ತಯಾರಾಗುತ್ತಿದೆ ಎಂದೆಣಿಸಿರುವಾಗಲೇ..,
ಈಕೆ ಅಸೌಖ್ಯದೆಡೆಗೆ ಹೆಜ್ಜೆ ಇಡುವುದನ್ನು ಬಲ್ಲವನಾಗಿರುವಂತೆ ತೋರುತ್ತದೆ ದೇವ ಗೋವಿಂದ ll
ಅನಂತ ಮಮತಾಮಯಿ, ಅನನ್ಯ ವಾಮನಮೂರ್ತಿಯ "ಪ್ರಾಣ ವನ್ನು ಸ್ವರ್ಗದಲ್ಲಿ ಸ್ಥಾಪಿಸಲು ಸಿದ್ಧರಾಗಿ"
ಬಂದ ಕಾಲದೂತರು, ನಂಬಿದವರಿಗೆ ಸಿಡಿಲಾಘಾತ ನೀಡಿ, "ದೇವಿ ಸುನಂದೆ" ಯನು ಕರೆದೊಯ್ದರು ಅವಸರದಿಂದ.. ll6ll
🕯️🕯️💐💐🙏🙏
✍️ ಗೋಪಾಲ ರಾವ್ ಬಿ.ಎಸ್., ಶಿಕಾರಿಪುರ.

She has a daughter Roopa, owner and CEO of Wellness Center at SahakaraNagara, Bengaluru and two sons, one working in Australia and the other working in Bengaluru.


We missed their son's wedding couple of years ago, at Tamarind Tree Resort.


May her soul rest in Peace.

Posted 27th April 2020

No comments:

Post a Comment