Thursday, July 30, 2020

HAPPY BIRTHDAY - AMMA (2020)

Thursday, 30th July 2020
BirthiMane, Bengaluru / DECATHLON

It's amma's Happy Birthday,

ಮಡದಿ ನಳಿನಿಗೆ ಜನ್ಮ ದಿನದ ಶುಭಾಶಯಗಳು.💐




As it is time of COVID pandemic, no going out for dinner/lunch or get-together.

So it.s STAY HOME, STAY SAFE policy and still celebrate.




Rishikanth made a nice and tasty cake and also got pizza.


So it's amma, me, Rishikanth and Kavitha.


Cut cake, sing Happy Birthday, take photos..... eat cake and pizza...

Also we went for drive up to DECATHLON near the airport and returned.






Happy Birthday.

Lots of friends/relations have wished her on this day.

Few are posted below:

ತಿರು ಶ್ರೀಧರ್  ಅವರಿಂದ ಶುಭ ಹಾರೈಕೆಗಳು :
 ನಳಿನಿ ಸೋಮಯಾಜಿ
Happy Birth Day Nalini Somayaji Amma 🌷🙏🌷
ಸದಾ ಹಸನ್ಮುಖಿ, ಉತ್ಸಾಹಿ, ವಿವಿಧ ಸಾಂಸ್ಕೃತಿಕ ಚಟವಟಿಕೆಗಳ ಆಸಕ್ತೆ, ಪ್ರೋತ್ಸಾಹದಾಯಿನಿ, ಮಕ್ಕಳೊಂದಿಗೆ-ಹಿರಿಯರೊಂದಿಗೆ-ಎಲ್ಲರೊಂದಿಗೆ ಬೆರೆವವರು Nalini Somayaji. ನಳಿನಿ ಸೋಮಯಾಜಿ ಮತ್ತು Jayarama Somayaji ದಂಪತಿಗಳು ಯುನೈಟೆಡ್ ಅರಾಬ್ ಎಮಿರೇಟ್ಸ್ ದೇಶದಲ್ಲಿ ಕನ್ನಡ ಸಾಂಸ್ಕೃತಿಕ ವಾತಾವರಣ ನಿರ್ಮಿಸುವಲ್ಲಿ ವಹಿಸಿದ ಪಾತ್ರವನ್ನು ಇಲ್ಲಿನ ಜನ ಆಪ್ತವಾಗಿ ಸ್ಮರಿಸುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿಯೂ ಅಪಾರ ಕೆಲಸ ಮಾಡಿರುವ ಈ ದಂಪತಿಗಳು ಇಂದೂ ಆ ಕ್ಷೇತ್ರದಲ್ಲಿ ಸಾಕಷ್ಟು ಆಪ್ತತೆಯಿಂದ ಆಸಕ್ತಿವಹಿಸಿದ್ದಾರೆ. ಪಾಕ ವಿಚಾರದಲ್ಲಾಗಲಿ, ಪ್ರಾಣಿ - ನಿಸರ್ಗ ವಿಚಾರದಲ್ಲಾಗಲಿ, ಮಕ್ಕಳಿಗೆ ಕಥೆ ಹೇಳುವುದರಲ್ಲಾಗಲಿ, ಸಾಂಸ್ಕೃತಿಕ ಚಟುವಟಿಕೆಗಳ ಭಾಗವಹಿಕೆಯನ್ನು ಅಭಿವ್ಯಕ್ತಿಸುವುದರಲ್ಲಾಗಲಿ ಈ ಹಿರಿಯ ದಂಪತಿಗಳ ಮನೋಧರ್ಮ ಮೆಚ್ಚುಗೆ ಹುಟ್ಟಿಸುತ್ತದೆ. ಈ ಹಿರಿಯ ದಂಪತಿಗಳಿಗೆ ಮತ್ತು ಅವರ ಕುಟುಂಬವರ್ಗದವರಿಗೆ ಶುಭಕೋರುತ್ತಾ, ನಳಿನಿ ಸೋಮಯಾಜಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಸಲ್ಲಿಸೋಣ.

ಅಮ್ಮಾ, ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.
🎂🎉🍰🎁🍦💐😊

ಜಯರಾಂ ಪಣಿಯಾಡಿ:
ಶ್ರೀಮತಿ ಸೋಮಯಾಜಿ ಯವರಿಗೆ
ಜನುಮ ದಿನದ ಶುಭಾಶಯಗಳು
🌹🌹🌹🌹🌹🌺🌺🌹🌹🌹🌹🌹

ರಾಜೇಶ್ವರ ಲತಾ ಹೊಳ್ಳ :
Happy birthday dear Nalini akka 🎂🎂..stay blessed.
- Latha & Raj

ಗಣೇಶ್ ರೈ:
ಶತಮಾನಂ ಭವತಿ ಶತಾಯುಃ ಪುರುಷಃ ಶತೇಂದ್ರಿಯಃ ಆಯುಷ್ಯೆವೆಂದ್ರಿಯೆ ಪ್ರತಿತಿಷ್ಠತಿ.
ಶಶಿಕಲಾ ಗೌಡ :
ಮೇಡಂ ಜನುಮ ದಿನದ ಶುಭಾಶಯಗಳು💐💐💐
ನೀವು ಸಾಗಿ ಬಂದ ಮಜಲುಗಳು, ದಂಪತಿಗಳೀರ್ವರ ಮನೋಧರ್ಮ, ಆಸಕ್ತಿಗಳು, ಕ್ರಿಯಾಶೀಲ ಬದುಕು ನಮ್ಮೆಲ್ಲರಿಗೂ ಸ್ಫೂರ್ತಿ.

Wednesday, July 29, 2020

SHOBHA'S FB POST - ABOUT US

Thursday, 29 July 2020


ಚಿಕ್ಕವಳಿದ್ದಾಗ ಹೆಬ್ರಿಯಿಂದ ಉಡುಪಿಗೆ ಹೋಗುವಾಗ ಮಣಿಪಾಲದ ಎಂಐಟಿಯನ್ನು ನೋಡಿ ನಾನ್ಯಾವಾಗಲೂ "ಚಿಕ್ಕಪ್ಪ ಕಾಲೇಜು" ಅಂತ ಕರೆಯುತ್ತಿದ್ದೆ. ಏಕೆಂದರೆ ನನ್ನ ಚಿಕ್ಕಪ್ಪ ಜಯರಾಮ ಸೋಮಯಾಜಿ ಆ ಕಾಲೇಜಿನಲ್ಲಿ ಕೆಲವು ಕಾಲ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು.
ಆರು ಅಡಿಗೂ ಮೀರಿ ಎತ್ತರವಿರುವ ನನ್ನ ಚಿಕ್ಕಪ್ಪ ಬಹಳ ಬುದ್ಧಿವಂತರು. ಹಾರಾಡಿ ಶಾಲೆಯಲ್ಲಿ ಪ್ರೈಮರಿ, ಉಪ್ಪಿನಕೋಟೆ ಶಾಲೆಯಲ್ಲಿ ಮಿಡಲ್ ಸ್ಕೂಲ್, ಬ್ರಹ್ಮಾವರದಲ್ಲಿ ಹೈಸ್ಕೂಲ್, ಪಿಯುಸಿ ಓದಿದ ನನ್ನ ಚಿಕ್ಕಪ್ಪ ಉಡುಪಿಯ ಎಂಜಿಎಂ ನಲ್ಲಿ ಬಿ.ಎಸ್ಸಿಯನ್ನು rank ಪಡೆದು ಮುಗಿಸಿದರು. ತದನಂತರ ಮೈಸೂರು ಯೂನಿವರ್ಸಿಟಿ ಯಲ್ಲಿ rankನೊಂದಿಗೆ ಫಿಸಿಕ್ಸ್ ಎಂ.ಎಸ್ಸಿ ಮುಗಿಸಿ ಮಣಿಪಾಲದ ಎಂಐಟಿಯಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ಅಪ್ಪನ ಸ್ನೇಹಿತರಾದ ಪದಕಣ್ಣಾಯರು ಆಫ್ರಿಕಾದಲ್ಲಿ ಇದ್ದ ಕಾರಣ ನನ್ನಪ್ಪ ಚಿಕ್ಕಪ್ಪನಿಗೆ ಹೊರದೇಶಕ್ಕೆ ಪ್ರಾಧ್ಯಾಪಕರಾಗಿ ಹೋಗಲು ಒತ್ತಾಸೆ ನೀಡಿದರು. ನಮ್ಮ ಕುಟುಂಬದಲ್ಲಿ ಹೊರದೇಶಕ್ಕೆ ಹೋದ ಪ್ರಪ್ರಥಮ ವ್ಯಕ್ತಿ ನನ್ನ ಚಿಕ್ಕಪ್ಪ. ಅವರನ್ನು ವಿಮಾನ ಹತ್ತಿಸಲು ನಾವೆಲ್ಲ ಬಜ್ಪೆ ಏರ್ ಪೋರ್ಟ್ ಗೆ ಹೋಗಿದ್ದದ್ದು ನನಗಿನ್ನೂ ನೆನಪಿದೆ. ಪ್ರಾಯಶಃ ಆಗ ನಾನಿನ್ನೂ ಮೂರ್ನಾಲ್ಕು ವರ್ಷದವಳಿರಬಹುದು. ಆಫ್ರಿಕಾದಲ್ಲಿ 15 ವರ್ಷಗಳಿದ್ದ ಚಿಕ್ಕಪ್ಪ ಕೊನೆಗೆ ದುಬಾಯಿಗೆ ಬಂದು 24 ವರುಷ ನೆಲೆಸಿ ಈಗ ಬೆಂಗಳೂರಿನಲ್ಲಿ ತಮ್ಮ ಪತ್ನಿ, ಮಕ್ಕಳೊಡನೆ ವಾಸವಾಗಿದ್ದಾರೆ.
ಎಂಟು ಮಕ್ಕಳಲ್ಲಿ ಕೊನೆಯವರಾದ ಚಿಕ್ಕಪ್ಪ ತುಂಬಾ ಮೃದು ಮನಸ್ಸಿನವರು. ಬಂಧು ಬಳಗದವರ ನಂಟು ಜಾಸ್ತಿ. ನನ್ನ ಅಪ್ಪನಿಗೆ ಅವರು ಮಗನಿದ್ದ ಹಾಗೆ. ಅವರಿಬ್ಬರ ನಡುವೆ ಸುಮಾರು ಇಪ್ಪತ್ತು ವರ್ಷಗಳ ಅಂತರವಿತ್ತು. ಅವರಿಬ್ಬರ ಮಧ್ಯೆ ಹಲವಾರು ವಿಷಯಗಳ ಬಗ್ಗೆ ಅಭಿಪ್ರಾಯ ಭೇದವಿದ್ದರೂ ಅವರಿಬ್ಬರ ಸಂಬಂಧ ಬಹಳ ಆಪ್ತವಾಗಿತ್ತು.
ಆ ಸಮಯದಲ್ಲಿ ಎರಡು ವರ್ಷಕ್ಕೊಮ್ಮೆ ಊರಿಗೆ ಬರುತ್ತಿದ್ದ ಚಿಕ್ಕಪ್ಪನನ್ನು ನಾವೆಲ್ಲ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆವು. ನನ್ನ ಕಸಿನ್ಸ್ ಗೆ ಸಣ್ಣಮಾವಯ್ಯನಾಗಿದ್ದ ಅವರು ಹೊರದೇಶದಿಂದ ತರುತ್ತಿದ್ದ ಬಟ್ಟೆಗಳು, ಚಾಕೊಲೇಟ್ ಗಳು, ಇತರೆ ವಸ್ತುಗಳು ನಮ್ಮ ಮುಂದೆ ಹೊಸ ಲೋಕವನ್ನು ತೆರೆದಿಡುತ್ತಿದ್ದವು. ಚಿಕ್ಕಪ್ಪ ಕೊಡುಗೈ ದೊರೆ. ಎಲ್ಲಾ ಮಕ್ಕಳಿಗೂ ಅವರವರಿಗೆ ಪ್ರಿಯವಾದ ವಸ್ತುಗಳನ್ನು ತರುತ್ತಿದ್ದರು. ನನ್ನ ಮೇಲೆ ಜಾಸ್ತಿ ಪ್ರೀತಿ ಇದ್ದ ಕಾರಣ ನನಗೆ ಸ್ವಲ್ಪ extra gifts ಸಿಗುತ್ತಿತ್ತು. ಅವರೊಮ್ಮೆ ತಂದು ಕೊಟ್ಟಿದ್ದ ಆಫ್ರಿಕನ್ನರ ದಿರಿಸನ್ನು ನಾನು ಸುಮಾರು ಹತ್ತು ವರ್ಷಗಳ ಕಾಲ ಬಳಸಿದ್ದೆ. ಆದರೂ ಅದು ಹೊಸದರ ಹಾಗೇ ಕಾಣುತ್ತಿತ್ತು. ಕಡು ನೀಲಿ ಬಣ್ಣದ ಆ ದಿರಿಸು ನನಗೆ ಬಹಳ ಪ್ರಿಯವಾಗಿತ್ತು.
ಮೊದಲಿನಿಂದಲೂ ತಿರುಗಾಟಪ್ರಿಯರಾದ ಚಿಕ್ಕಪ್ಪ ಈಗ ಎಪ್ಪತ್ತು ವರ್ಷ ದಾಟಿದರೂ ತಮ್ಮ ತಿರುಗಾಟವನ್ನು ನಿಲ್ಲಿಸಿಲ್ಲ. ಅವರ ಜೀವನೋತ್ಸಾಹವನ್ನು ಮೆಚ್ಚಲೇ ಬೇಕು. ಈಗಲೂ ಕೂಡ ನಮ್ಮೆಲ್ಲರ ಅದೇ ಹಳೆಯ ಚಿಕ್ಕಪ್ಪನಾಗಿ, ನನ್ನ ಕಸಿನ್ಸ್ ಗಳಿಗೆ ಅದೇ ಸಣ್ಣ ಮಾವಯ್ಯನಾಗಿ ನಮ್ಮೆಲ್ಲರೊಡನೆ ಒಡನಾಟವನ್ನಿಟ್ಟುಕೊಂಡಿರುವ ಚಿಕ್ಕಪ್ಪ ಇನ್ನಷ್ಟು ಕಾಲ ಸಂತೃಪ್ತವಾದ ತುಂಬು ಜೀವನವನ್ನು ನಡೆಸಲಿ ಎನ್ನುವ ಹಾರೈಕೆ ನಮ್ಮೆಲ್ಲರದು.

Reply:
ಧನ್ಯವಾದಗಳು ಶೋಭ ನಿನ್ನ ಅಕ್ಕರೆಯ ನುಡಿಗಳಿಗೆ. ದುಬೈಯಲ್ಲಿ ನಮ್ಮ ಬದುಕು ಸುಮಾರು 24 ವರ್ಷ ಗಳಾಗಿತ್ತು. ಅಲ್ಲಿಯೂ ಕರ್ನಾಟಕ ಸಂಘ, ಬ್ರಾಹ್ಮಣ ಸಮಾಜ ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದೆವು

Posted 29th July 2020

Sunday, July 26, 2020

AUTOBIOGRAPHY (5) - LIFE JOURNEY -YOLA

ಆತ್ಮ ಚರಿತ್ರೆ - ಭಾಗ 5 - (1980 - 1986 )
ಯೋಲ, (ರಾಜಧಾನಿ) ಗೊಂಗೊಲ ರಾಜ್ಯ, ನೈಜಿರಿಯಾ 
ಬಾಂಜುಲ್ ನಗರದ ಶಾಲೆ, ಅಲ್ಲಿಯ ಸಂಬಳ ಹಾಗೂ ಜೀವನ ಬಹಳ ಅತೃಪ್ತಿ ಯಾಗಿತ್ತು. ಪದಕನ್ನಾಯ ಪರಿವಾರವೂ ಅಲ್ಲೇ ಇದ್ದರೂ ಮುಂದುವರಿಸಲು ಮನಸ್ಸು ಕೇಳಲಿಲ್ಲ.  ಹತ್ತು ತಿಂಗಳೊಳಗೆ ಅಲ್ಲಿಯ ಕೆಲಸಕ್ಕೆ ರಾಜೀನಾಮೆ ಇತ್ತು ಪುನ ನೈಜೆರಿಯಾದ ಕಡೆಗೆ ಪಯಣ.
ನೈಜಿರಿಯಾದ ಗೊಂಗೊಲ ರಾಜ್ಯದ ರಾಜಧಾನಿ ಯೋಲ ನಗರಕ್ಕೆ ವಿಸಿಟ್  ವಿಸಾದಲ್ಲಿ ಬಂದು  ಅಲ್ಲಿಯ ಶಿಕ್ಷಣ ಸಚಿವಾಲಯದಲ್ಲಿ ಇಂಟರ್ ವ್ಯೂ ಗೆ ಹಾಜರಾಗಿ ಕೆಲಸವನ್ನೂ ಪಡೆದದ್ದಾಯಿತು. ಅದು ಜುಲೈ 1980 ರ ಸಮಯ.
ಆಗ ಶಾಲೆಗಳಿಗೆ ರಜಾ ಕಾಲವಾದ್ದರಿಂದ ಊರಿಗೆ ಹೋಗುವ ಸಂಭ್ರಮ. ಆಗೋಸ್ಟ್ ತಿಂಗಳಲ್ಲಿ ಊರಿಗೆ ಬಂದದ್ದಾಯಿತು.
ಹೆಬ್ರಿಯಲ್ಲಿ ಮಗಳು ಶುಭಾಲೊಡನೆ ಕೆಲದಿನಗಳು ಕಳೆದದ್ದೂ ಆಯಿತು.
ನಳಿನಿ 11/09/1980





ಸಪ್ಟಂಬರ 11, 1980 ಉಡುಪಿ ಪುತ್ತಿಗೆ ಮಠ 
ಪದ್ಮನಾಭ ಅಣ್ಣಯ್ಯ ನವರ ಮರು ಮದುವೆಯ ಪ್ರಸ್ತಾಪ. ಉದ್ಯಾವರದಲ್ಲಿ ದೊಡ್ಡಮ್ಮನ ಮನೆಯಲ್ಲಿ ಇದ್ದ, ಮಾಧವ  ರಾವ್ ಬಡೆಕಿಲ್ಲಾಯರ ಮಗಳು ನಳಿನಿಯನ್ನು ನೋಡಿ ಒಪ್ಪಿದ್ದಾಯಿತು. ಸಪ್ಟಂಬರ 11, 1980, ರಂದು ಉಡುಪಿಯ ಪುತ್ತಿಗೆ ಮಠದಲ್ಲಿ ಮದುವೆಯೂ ನಡೆದು ಹೋಯಿತು.
ನಂತರ ಅವಳ ಪಾಸ್ಪೋರ್ಟ್, ವೀಸಾ ಇತ್ಯಾದಿಗಳಿಗೆ ಓಡಾಟ, ಆಗ ಪಾರ್ಲಿಮೆಂಟ್ ಸದಸ್ಯರಾಗಿದ್ದ ಆಸ್ಕರ್ ಫಾರ್ನಂದೆಸ್ ಅವರೊಡನೆ ಪಾಸ್ಪೋರ್ಟ್ ಅರ್ಜಿಗೆ ಸಹಿ ಪಡೆದು ಪಾಸ್ಪೋರ್ಟ್ ಕಚೇರಿಗೆ ಕಳುಹಿಸಲಾಯಿತು.
ಇತ್ತ ನಾನು ಪುನಃ ನೈಜೆರಿಯಾದ, ಗೊಂಗೊಲ ರಾಜ್ಯದ  ಯೋಲ ನಗರಕ್ಕೆ ಬಂದು ಸಚಿವಾಲಯಕ್ಕೆ ರಿಪೋರ್ಟ್ ಮಾಡಿ, ಯೋಲದಲ್ಲಿ ಇರುವ ಹೈಸ್ಕೂಲ್, ಜನರಲ್ ಮುರ್ತಾಲ ಮೊಹಮದ್ ಕಾಲೇಜು  (General Murtala Mohammed College), ಭೌತಶಾಸ್ತ್ರದ ಅಧ್ಯಾಪಕನಾಗಿ ಪೋಸ್ಟಿಂಗ್ ಆಯಿತು. (ಜನರಲ್ ಮುರ್ತಾಲ ಮೊಹಮ್ಮದ್ ಅವರು ಕೆಲ ಸಮಯದ ಹಿಂದೆ ನೈಜೇರಿಯಾ ದೇಶದ ಸೈನಿಕರ ದಂಗೆಯಲ್ಲಿ (Military Coup) ಹತನಾಗಿದ್ದ.)
ಯೋಲದಲ್ಲಿ ಕೆಲಸ ಸಿಕ್ಕಿರುವುದು ನನ್ನ ಅದೃಸ್ಥ (Lucky) ಯಾಕೆಂದರೆ ರಾಜ್ಯದ ಹಲವಾರು ಭಾಗದ ಶಾಲೆಗಳಲ್ಲಿ ನೀರು, ವಿದ್ಯುತ್ ಅಭಾವ, ದೂರ ದೂರದ ಸ್ಥಳಗಳಿಗೆ ಸರಿಯಾದ ರಸ್ತೆಗಳೂ ಇರದ ಜಾಗಗಳು ಇದೆ.  ಕೆಲದಿನಗಳ ನಂತರ ಕಾಲೇಜಿನ ಆವರಣದಲ್ಲಿ ಒಂದು ಮನೆಯನ್ನೂ ನನಗೆ ನೀಡಲಾಯಿತು. ಅದು ಮರಗಳ ಮಧ್ಯ ಇರುವ, ಹಕ್ಕಿಗಳ ಚಿಲಿಪಿಲಿ ರಾಗ ಇರುವ prefabricated ಎರಡು ಕೋಣೆಯ  ಅಚ್ಚು ಕಟ್ಟಾದ ಮನೆ. ಹೀಗೆ ಕಾಲೇಜಿನಲ್ಲಿ ಭೋದನೆಯ ಕೆಲಸವೂ ಪ್ರಾರಂಭವಾಯಿತು.
ಯೋಲ ಕುಟೀರ 
ಇನ್ನು ಮಡದಿ ನಳಿನಿಯ ನೈಜಿರಿಯಗೆ ಬರುವ ಕಾತರ. ನಾಲ್ಕು ತಿಂಗಳ ನಂತರ ಜನವರಿ 29, 1981, ಅವಳು ಬೊಂಬಾಯಿ ಯಿಂದ ನೈರೋಬಿ, ಲಾಗೊಸ್ ಬಂದಾಗಿತ್ತು. ಅವಳನ್ನು ವಿದೇಶಕ್ಕೆ (foreign) ಗೆ ಕಳುಹಿಸಿಕೊಡಲು  ಪದ್ಮನಾಭ ಅಣ್ಣಯ್ಯ ಅವರ ಕಾರಿನಲ್ಲಿ ಊರಿಂದ ಒಂದು ದಂಡೇ ಬೊಂಬಾಯಿಗೆ ಬಂದಿತ್ತು. ಅವಳು ಪ್ರಥಮವಾಗಿ ವಿಮಾನದಲ್ಲಿ, ಅದೂ ಹೊರದೇಶಕ್ಕೆ ಪ್ರಯಾಣಿಸುವ ಸಂದರ್ಭ. ಕಾಣದ ಊರಿಗೆ ಅವಳನ್ನು ಒಂಟಿಯಾಗಿ ಕಳುಹಿಸಿ ಕೊಡುವುದನ್ನು ಅಣ್ಣಯ್ಯ ಬಹಳ ಬೇಸರಿಸಿ ಕೊಂಡಿದ್ದರು.
ಆಗ ನೈಜಿರಿಯಾದ ರಾಜಧಾನಿ (Capital) ಲಾಗೊಸ್ ಆಗಿತ್ತು. ಕೆಲ ವರ್ಷಗಳ ನಂತರ ಅದು ದೇಶದ ಮಧ್ಯ ಭಾಗದ ಅಭುಜ (Abhuja) ಎಂಬ ನಗರಕ್ಕೆ ಸ್ತಲಾಂತರ ವಾಯಿತು. ಲಾಗೊಸ್ ನಲ್ಲಿ ಸ್ನೇಹಿತ ರಾಮಚಂದ್ರ ಅವರು ವಿಮಾನ ನಿಲ್ದಾಣದಿಂದ ಅವರ ಮನೆಗೆ ಕರೆದು ಕೊಂಡು ಹೋಗಿ, ನಾನೂ ಅದೇ ದಿನ ಯೋಲದಿಂದ ವಿಮಾನದಲ್ಲಿ ಲಾಗೊಸ್ ಗೆ ಹೋಗಿ ಅವಳನ್ನು ಸೇರಿಕೊಂಡೆ. ನಂತರ ಒಟ್ಟಿಗೆ ವಿಮಾನದಲ್ಲಿ ಯೋಲ ಕ್ಕೆ ಬಂದು ಶಾಲೆಯಲ್ಲಿಯ ನಮ್ಮ ಕುಟಿರವನ್ನು ಸೇರಿದೆವು.

ಅದಾಗಲೇ ಸರಕಾರದ ವತಿಯಿಂದ ಸಾಲ ಪಡೆದುಕೊಂಡು ಇನ್ನೊಂದು ವೋಕ್ಸ್ ವಾಗನ್ (Volkswagen Beetle) ಬೀಟಲ್ ಕಾರೊಂದನ್ನು ಖರೀದಿಸಿಯಾಗಿತ್ತು. (Registration No. GG 9250 Y) GG ಅಂದರೆ ಗೊಂಗೊಲ ರಾಜ್ಯ, Y ಅಂದರೆ ಯೋಲ. ಅದೇ ಸಮಯಕ್ಕೆ Maths Professor ಸುಂದರೇಶನ್ ಅವರು ಸಹ ಯೋಲ ಪೋಲಿಟೆಕ್ನಿಕ್  (Yola Polytechnic) ಕಾಲೇಜಿನಲ್ಲಿ ಲೆಕ್ಚರರ್ (Lecturer) ಆಗಿ ಸೇರಿ ಅವರ ಕುಟುಂಬವೂ ಅಲ್ಲಿಯೇ ಮನೆ ಮಾಡಿದ್ದರು.
ರವಿ - ಬಾಲ್ಯ 
ಭಾರತೀಯರು ಅಲ್ಲಿ ಬಹಳಷ್ಟು ಮಂದಿ ಇದ್ದಿರಲಿಲ್ಲ. ಅಲ್ಲಿ ಕೆಲಸ ಮಾಡುತ್ತಿರುವ ಶ್ರೀಲಂಕಾದ ಪ್ರಜೆಗಳು ಸಹ ಆತ್ಮೀಯ ರಾಗಿರುತಿದ್ದರು. ಟೆಲಿಫೋನ್, ಮೊಬೈಲ್, ಇಂಟರ್ನೆಟ್ (Internet) ಯಾವುದೂ ಆವಿಷ್ಕಾರ ಆಗಿರದ ಕಾಲವಾಗಿತ್ತು.
ಹೀಗೆಯೇ ಕಾರಿನಲ್ಲಿ ಅಲ್ಲಿ, ಇಲ್ಲಿ ಸುತ್ತಾಟ, ಸ್ನೇಹಿತರೊಡನೆ ಹೊರಸಂಚಾರ (Picnic), ಬರ್ತ್ ಡೇ ಪಾರ್ಟಿ (Birthday Party) ಇತ್ಯಾದಿಗಳು. ತಿಂಗಳುಗಳು ಕಳೆಯಿತು, ನಳಿನಿಯು  ಗರ್ಭಿಣಿ. ಊರಿಗೆ ಹೋಗುವ ಯೋಚನೆ ಮಾಡಿಲ್ಲ. ಅಲ್ಲಿಯೇ ಸರಕಾರಿ ಆಸ್ಪತ್ರೆಯಲ್ಲಿ ಇರುವ ಡಾ. ಮಹಾಪಾತ್ರ ಸ್ನೇಹಿತ ವರ್ಗ ದಲ್ಲಿ ಇರುವವರಾದುದರಿಂದ ಯೋಲದಲ್ಲಿಯೇ ಇರುವ ನಿರ್ಧಾರ. ಪ್ರೇಮ ಸುಂದರೇಶನ್ ಅವರು ಅಮ್ಮನ ಸ್ಥಾನದಲ್ಲಿದ್ದು ಸಹಕರಿಸು ತಿದ್ದರು.

ಸ್ನೇಹ ಕೂಟ, ಯೋಲ 
ಜನವರಿ 6 , 1982, ಬೆಳಿಗ್ಗೆ  ಪುತ್ರನ ಜನನ. ಅವನು ರವಿಕಾಂತ ಎಂದು ಆಮೇಲೆ ಹೆಸರಿಸಿದೆವು. ಹಿಂದಿನ  ದಿನದ ರಾತ್ರಿ ನಳಿನಿಯು ಬಹಳಷ್ಟು ಪ್ರಸವ ವೇದನೆಯನ್ನು ಅನುಭವಿಸಿ, ರಾತ್ರಿಯಿಡೀ ಪ್ರೇಮಕ್ಕ ಹತ್ತಿರದಲ್ಲಿ ಇದ್ದು ಸಹಕರಿಸುತಿದ್ದರು. ಬೆಳಿಗ್ಗೆ ಸಿಸೇರಿಯನ್ ಅಪರೇಷನ್ ಮೂಲಕ ರವಿಯ ಜನನವಾಯಿತು. ಆತ್ಮಿಯ ಸ್ನೇಹಿತರಾಗಿದ್ದ ಜೂಡಿ ಮತ್ತು ಜಾಕೊಬ್ ಪ್ರಥಮವಾಗಿ ಸಂಭ್ರಮಿಸಿದವರು. ಈಗ ಹಲವಾರು ವರ್ಷಗಳಿಂದ ಜಾಕೊಬ್ ಅವರು ಕೇರಳದ ಅಲೆಪ್ಪಿ ನಗರದಲ್ಲಿ ನೆಲೆಸಿ, Exchange ಕಂಪೆನಿ ನಡೆಸುತ್ತಿರುವರು. ಇತ್ತೀಚಿಗೆ ನಾವು ಅಲ್ಲಿಗೆ ಭೇಟಿಗೆ ಹೋಗಿದ್ದೆವು.

ಪಾರ್ಟಿ 
ಕೆಲ ದಿನಗಳ ನಂತರ ತಾಯಿ ಮಗುವನ್ನು ಮನೆಗೆ ಕರೆದು ಕೊಂಡು ಬರಲಾಯಿತು. ಕೆಲ ದಿನಗಳ ಕಾಲ ಅಲ್ಲೇ ಹತ್ತಿರದಲ್ಲೇ ಇದ್ದ ಬೆಂಗಳೂರಿನ ಪ್ರೊಫೆಸರ್ ಪಂಡಿತ್ (ಯೋಲ ಪಾಲಿಟೆಕ್ನಿಕ್ ನಲ್ಲಿ ಕೆಲಸ ಮಾಡುತಿದ್ದರು) ಅವರ ಪತ್ನಿ ಪದ್ಮ ಅವರು ಮನೆಗೆ ಕಾಲ್ನಡಿಗೆಯಲ್ಲಿ ಬಂದು ಮಗುವಿಗೆ ಸ್ನಾನ ಮಾಡಿಸಿ ಹೋಗುತಿದ್ದರು.


ರವಿಯು ಆರೋಗ್ಯದಿಂದ ಬೆಳೆಯುತ್ತಿರುವುದರಿಂದ ದಿನಗಳು ಬಹಳ ಬೇಗ ಕಳೆಯುತಿದ್ದವು. ಸ್ನೇಹಿತರ ಮನೆಗಳಿಗೆ ಭೇಟಿ, ಹೊರಸಂಚಾರ (picnic), ಹೀಗೆ ಕಾಲ ಕಳೆಯುತ್ತಿತ್ತು.
ಗಣತಂತ್ರ ದಿವಸ, ಸಾಂಸ್ಕೃತಿಕ ಕಾರ್ಯಕ್ರಮ ,ಯೋಲ 
ಅಲ್ಲ್ಲಿಯ ಶಾಲೆಗಳಿಗೆ ಜುಲೈ - ಆಗೋಸ್ಟ್ ಬೇಸಿಗೆ ರಜೆ. ಎರಡು ವರ್ಷಕ್ಕೊಮ್ಮೆ ಸರಕಾರದಿಂದ ಊರಿಗೆ ಹೋಗಿ ಬರಲು ವಿಮಾನದ ಟಿಕೆಟನ್ನು ಕೊಡುತ್ತಿರುವರು, ಹಾಗೇ  1982 ರ ಜುಲೈ ತಿಂಗಳ ರಜೆಗೆ ಊರಿಗೆ ಹೋಗುವ ಮುನ್ನ ಲಂಡನ್ ನಲ್ಲಿ ಕೆಲವು ದಿನ ಇದ್ದು, ಅಲ್ಲಿಯ ಪ್ರೇಕ್ಷಣಿಯ ಸ್ತಳಗಳನ್ನು ನೋಡಿ ಬೊಂಬಾಯಿ ಹಾದಿಯಾಗಿ ಊರಿಗೆ ತೆರಳಿದೆವು.

ರವಿ  ನಾಮಕರಣ, ಬಿರ್ತಿ, ಸಾಲಿಕೇರಿ  2/10/1982 


ಲಂಡನ್ ಭೇಟಿ 
ಹಾಗೆಯೇ ಸಪ್ಟಂಬರ ತಿಂಗಳಲ್ಲಿ ವಾಪಸ್ಸು ನೈಜೆರಿಯಾದ ಯೋಲ ಪೇಟೆಗೆ ತೆರಳಿ , ಪುನ ಭೋದನೆಯ ಕಾಯಕ ಪ್ರಾರಂಭವಾಯಿತು. ಅಲ್ಲಿರುವ ಭಾರತೀಯರೊಡನೆ ಒಮ್ಮೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಡಿದ್ದ ನೆನಪು. ಅದು ಗಣತಂತ್ರ ಸಂಭ್ರಮಾಚರಣೆ ಇರಬೇಕು. ಹಾಡುಗಳು, ನೃತ್ಯ, ಫಲಾಹಾರ ಇತ್ಯಾದಿ.
1983 ರ ಜುಲೈ ತಿಂಗಳಲ್ಲಿ ಯೋಲದಿಂದ ಸುಮಾರು 120 ಕಿ.ಮೀ. ದೂರದ ಗುಯುಕ್ ಎಂಬ ಹಳ್ಳಿಯ ಶಾಲೆಗೆ ವರ್ಗಾವಣೆ ಆಯಿತು.

ಮುಂದುವರಿಯುದು....... ಭಾಗ 6