ಮಂಗಳವಾರ, ಜುಲೈ,14. 2020
ಅಲ್ಲಿಯೂ ಒಂಟಿ ಜೀವನ, ವಾರಾಂತ್ಯ, ರಜೆಯಲ್ಲಿ ಬೀಚ್ ನೆ ಕಡೆಗೆ ತೆರಳಿ ಸಮಯ ಕಳೆಯುವುದು. ಬಾಂಜುಲ್ ಒಂದು ಸಣ್ಣ ನಗರ, ಅಲ್ಲಿನ ರಾಷ್ಟ್ರಪತಿ ಒಮ್ಮೆ ಶಾಲೆಗೆ ಬಂದಾಗ ಭೆಟ್ಟಿ ಯಾದದ್ದೂ ಇದೆ. ಸಂಬಳವೂ ಕಡಿಮೆ. ಪುನಃ ನೈಜಿರಯಾಕ್ಕೆ ಹೋಗುವ ಅಸೆ.
ಮುಂದುವರಿಯುವುದು.....ಭಾಗ 5 ...
ಬಿರ್ತಿಮನೆ, ಬೆಂಗಳೂರು.
ಆತ್ಮ ಚರಿತ್ರೆ - (4): ಗೊಂಬೆ - ನೈಜಿರಿಯಾ ( 1974 - 79) ಬದುಕಿನ ಪಯಣ
ಈ ವಿಭಾಗದ ಆತ್ಮ ವ್ರತ್ತಾಂತ ಬರೆಯಲು ಅತ್ಯಂತ ದುಃಖವಾಗುತ್ತಿದೆ. ಕಾರಣ- ಜೀವನದ ಮರೆಯಲಾಗದ ದುರ್ಘಟನೆ.
ಉತ್ತರ ಪೂರ್ವ ನೈಜಿರಿಯಾದ, ಮೈದುಗುರಿಯಿಂದ ಗೊಂಬೆ ಎಂಬ ಸಣ್ಣ ಪೇಟೆಯಲ್ಲಿಯ ಶಾಲೆಯಲ್ಲಿ ಅಧ್ಯಾಪಕನಾಗಿ 1974 ಫೆಬ್ರವರಿ ತಿಂಗಳಲ್ಲಿ ಸೇರಿದ್ದಾಯಿತು. ಶಿಕ್ಷಣ ಇಲಾಖೆಯಿಂದ ಸಾಲ ಪಡೆದು ಹೊಸ ವೋಕ್ಸ್ ವಾಗನ್ ಬೀಟಲ್
Registration No. NEA 1471
(Volkswagen Beetle) ಕಾರಿನಲ್ಲಿ 250 ಕಿ,ಮೀ. ದೂರದ ಗೊಂಬೆಗೆ ಹೊಸ ಕಾರಿನಲ್ಲಿ ಸ್ವತಃ ಡ್ರೈವ್ ಮಾಡಿಕೊಂಡು ಬಂದ ಅನುಭವ. ಅಲ್ಲಿ ಜಿ. ಶ್ರೀರಾಮುಲು ಎಂಬವರ ಪ್ರಥಮ ಭೇಟಿ. ಅವರು ಆಂಧ್ರ ಪ್ರದೇಶದವರು, ಹೆಂಡತಿ, ಎರಡು ಮಕ್ಕಳೊಡನೆ ಗೊಂಬೆಯಲ್ಲಿ ವಾಸವಾಗಿದ್ದು ಅದೇ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು.
ಪೇಟೆಯಲ್ಲಿ ಮೂರು ಬೆಡ್ ರೂಮಿನ ಪೀತೋಕರಣ ಸಹಿತದ ಮನೆಯೊಂದು ನನಗೆ ಕೊಡಲಾಗಿತ್ತು. ಅದು ಶಾಲೆಯಿಂದ ಸುಮಾರು 4 ಕಿಲೋಮೀಟರು ದೂರದ ಮನೆ. ಬೆಳಿಗ್ಗೆ 8 ಗಂಟೆಗೆ ಶಾಲೆಗೆ ತೆರಳಿ ದಿನದ ಭೋಧನೆ ಕಾರ್ಯವನ್ನು ಮುಗಿಸಿ, ಮಧ್ಯಾಹ್ನ 2 ಗಂಟೆಗೆ ಮನೆ, ಊಟ ತಯಾರಿ. ಅಲ್ಲಿ ಭಾರತೀಯ ಸಸ್ಯಾಹಾರಿ ಹೋಟೆಲ್ ಯಾವುದೂ ಇಲ್ಲ. ಸಂಜೆ ಹೊತ್ತು ಗೊಂಬೆ ಕ್ಲಬ್ ನಲ್ಲಿ ಲಾನ್ ಟೆನ್ನಿಸ್, ಸ್ನೂಕರ್ ಆಟದಲ್ಲಿ ಸಮಯ ಕಳೆಯುವಿಕೆ.
ಜುಲೈ-ಆಗೋಸ್ಟ್ ಸಮಯ ಎರಡು ತಿಂಗಳ ರಜ ಸಮಯ, ಈ ಬಾರಿಯ (1974) ರಜೆಯನ್ನು ನೈಜೆರಿಯಾದ ಇತರ ಪೇಟೆ ಗಳಿಗೆ ಕಾರಿನಲ್ಲಿ ಸುತ್ತಾಟ. ಅಲ್ಲಿಯ ಪೇಟೆಗಳು ಬಹಳಷ್ಟು ದೂರ ದೂರ. 200, 300. 400 ಕ್ಕೂ ಹೆಚ್ಚಿನ ಕಿಲೋಮೀಟರ್ ದೂರ. ಬಿಯು, ಬವುಚಿ, ಕಾನೋ, ಜೋಸ್, ಯೋಲ, ಇತ್ಯಾದಿ ನಗರಗಳು. ಅಲ್ಲಿ ಭಾರತೀಯ, ಶ್ರೀಲಂಕಾ, ಸ್ನೇಹಿತರುಗಳ ಮನೆಯಲ್ಲಿ ಊಟ, ವಸತಿ. ಸಪ್ಟಂಬರ ತಿಂಗಳಲ್ಲಿ ಶಾಲೆ ಪುನಃ ಪ್ರಾರಂಭವಾಗಿದ್ದು ಭೋಧನೆಯ ಕಾಯಕ ಮುಂದುವರಿಯುವಿಕೆ.
1975 ರ ಜುಲೈ ತಿಂಗಳಲ್ಲಿ ರಜೆಗೆ ಊರಿಗೆ ಹೋಗುವ ಸಂಭ್ರಮ , ಸರಕಾರದಿಂದ ವಿಮಾನದ ಟಿಕೆಟ್ ಗೆ ಅರ್ಜಿ ಕಳುಹಿಸಿ, ಮಂಜೂರಾತಿ ಆಗಿ, ಟಿಕೆಟ್ ಪಡೆದದ್ದೂ ಆಯಿತು. ಜುಲೈ ತಿಂಗಳಲ್ಲಿ ಕಾನೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ. (ಗೊಂಬೆ ಯಿಂದ ಸುಮಾರು 600 ಕಿ,ಮೀ ದೂರ. ) ಅಲ್ಲಿಂದ ನೈಜಿರಿಯಾ ಏರ್ ವೇಸ್ (Nigeria Airways) ನಲ್ಲಿ ಇಟಲಿಯ ರೋಮ್ ನಗರಕ್ಕೆ ಐದು ಗಂಟೆಯ ವಿಮಾನ ಪ್ರಯಾಣ. ಅಲ್ಲಿ ಕೆಲವು ಗಂಟೆಗಳ ಕಾಲ ಇದ್ದು, ಇನ್ನೂ 6 ಗಂಟೆಯ ಪ್ರಯಾಣ ಭಾರತದ ಬೊಂಬಾಯಿ ನಗರಕ್ಕೆ. ನಂತರ ನಿಲ್ದಾಣದಲ್ಲಿದ್ದು ಇಂಡಿಯನ್ ಏರ್ ಲೈನ್ಸ್ ನಲ್ಲಿ ಮಂಗಳೂರಿಗೆ ಪ್ರಯಾಣ. ಅಗ್ರಜ ಪದ್ಮನಾಭ ಅವರು ಕಾರಿನಲ್ಲಿ ಬಜಪೆ ನಿಲ್ದಾಣಕ್ಕೆ ಬಂದು, ಅವರೊಡನೆ ಮನೆ (ಬಿರ್ತಿ) ಗೆ. ಅವರಿಗೂ ಆಗ ಅದು ಹೆಮ್ಮೆಯ ವಿಷಯ - "ನನ್ನ ತಮ್ಮ ವಿದೇಶದಿಂದ ಬರುತಿದ್ದಾನೆ" ಸಂಭ್ರಮ.
"ಮದುವೆ" - ಏನೋ ಕಾತರ, ಕಳವಳ, ಅಣ್ಣನ ಬಲವಂತ, ಹುಡುಗಿ ನೋಡಬೇಕು, ಈರ್ವರಿಗೂ ಒಪ್ಪಿಗೆ ಯಾಗಬೇಕು ... ಮುಂದುವರಿಸಿದರೂ ಸಮಸ್ಯೆ ಅದೇ.... ಹೆಚ್ಚು ಸಮಯ ಕಳೆಯದಯೇ ಹೆಬ್ರಿ ವಾಸುದೇವ ಆಚಾರ್ಯರ ತಂಗಿ ಗೀತಾಬಾಲಿ ಯನ್ನು ಒಪ್ಪಿ ಮದುವೆಯೂ ಆಗೋಸ್ಟ್ 31 ರಂದು ಹೆಬ್ರಿ ದೇವಸ್ತಾನದ ಕಲ್ಯಾಣ ಮಂದಿರದಲ್ಲಿ ನಡೆದು ಹೋಯಿತು.
ನಂತರ ಮದರಾಸಿಗೆ ಎಲ್ಲೊ ಫೀವರ್ ಜ್ವರದ ಚುಚ್ಚುಮದ್ದು, ದೆಹಲಿಗೆ ನೈಜಿರಿಯಾದ ವೀಸಾ ಪಡೆದುಕೊಂಡು ಬಂದು ವಾಪಸ್ಸು ಗೊಂಬೆಗೆ ಪಯಣ.
ಅಲ್ಲಿಯ ಬದುಕು ಮುಂದುವರಿಕೆ, ರಜೆಯಲ್ಲಿ ಕಾರಿನಲ್ಲಿ ಸಾಕಸ್ತು ನೈಜಿರಿಯಾ ಸುತ್ತಾಟ, ಜೋಸ್, ಮಕುರ್ಡಿ, ಇಬಾದನ್, ಲಾಗೊಸ್(ರಾಜಧಾನಿ), ಜಾರಿಯಾ, ಇತ್ಯಾದಿ ದೂರ ದೂರ ಊರುಗಳು, ಪೇಟೆಗಳು. ರಾಜಧಾನಿ ಲಾಗೊಸ್ ನಗರದಲ್ಲಿ ಪೆಲತ್ತುರು ಡಾ ಅನಂತ್ ಆಚಾರ್ಯರ ಭೇಟಿ, 10 ದಿನಗಳ ರಜೆಯಲ್ಲಿ 4000 ಕಿ.ಮೀ.ಕಾರಿನಲ್ಲಿ ಸುತ್ತಾಟ. ವಾಪಸ್ಸು ಬಂದ ನಂತರ ಗೀತಾಳಿಗೆ ಅದೇ ಶಾಲೆಯಲ್ಲಿ ಅಧ್ಯಾಪಕಿಯಾಗಿ ಸರಕಾರದಿಂದ ನೇಮಕ.
1977 ರ ಬೇಸಗೆ ರಜೆಗೆ ಊರಿಗೆ ಹೋಗುವ ತಯಾರಿ, ಆವಳು ಗರ್ಭಿಣಿ, ಕಾನೋ ಅಂತರ ರಾಷ್ರಿಯ ವಿಮಾನ ನಿಲ್ದಾಣದಿಂದ ಹೊರಟು ರೋಮ್ ನಗರ, ಬೊಂಬಾಯಿಗೆ ಬಂದು ಅಲ್ಲಿಂದ ಮಂಗಳೂರಿಗೆ ವಿಮಾನ. ಪದ್ಮನಾಭ ಅಣ್ಣಯ್ಯ ಮನೆಯವರು, ಹೆಬ್ರಿಯಿಂದ ಕೆಲವರನ್ನು ಕರೆದುಕೊಂಡು ಬಜಪೆ ನಿಲ್ದಾಣಕ್ಕೆ ಬಂದಿದ್ದ ನೆನಪು. ನಾವು ಕೊನೆಯದಾಗಿ ವಿಮಾನದಿಂದ ಇಳಿದದ್ದು ಕಾದು ಕಾದು ಅವರಿಗೆಲ್ಲಾ ನಿರಾಸೆ, ಕಾತುರ. ಕೊನೆಗೂ ಬಂದ್ರು, ಬಂದ್ರು... ಬಂದಿದ್ದಾಯಿತು.
ತದನಂತರ ಬಿರ್ತಿಗೆ ಬಂದು ಅವಳನ್ನು ಹೆಬ್ರಿಯಲ್ಲಿ ಬಿಟ್ಟು ಸ್ವಲ್ಪ ದಿನಗಳ ನಂತರ ಒಂಟಿಯಾಗಿ ವಾಪಸ್ಸು ನೈಜಿರಿಯಾ ದೇಶಕ್ಕೆ ಪಯಣ ಸಪ್ಟಂಬರ 29, 1977 ರಂದು ಹೆಬ್ರಿಯಲ್ಲಿ ಮಗಳ ಜನನ, ಶುಭಾ ಅವಳ ಹೆಸರು.
ಸುಮಾರು ನಾಲ್ಕು ತಿಂಗಳ ನಂತರ ಜನವರಿ 1978, ಆವಳು ಶುಭಾಳೋಡನೆ ಗೊಂಬೆ, ನೈಜಿರಿಯಾ ದೇಶಕ್ಕೆ ಪಯಣ.
ಹೀಗೆಯೇ ದಿನಗಳು ಕಳೆದವು. ಶುಭಾಳನ್ನು ನೋಡಿಕೊಳ್ಳಲು ನೈಜಿರಿಯಾದ ಪ್ರಜೆ ಅಜ್ಜಿಯೊಬ್ಬಳನ್ನು ನೇಮಕ ಮಾಡಿಕೊಂಡದ್ದು ಆಯಿತು. ಒಳ್ಳೆಯ ಅಜ್ಜಿ.
ಸಪ್ಟಂಬರ 1978, ಶುಭಾಳಿಗೆ ಒಂದು ವರ್ಷದ ಸಂಭ್ರಮ, ಅಲ್ಲಿಯ ಸುಮಾರು 30 ಭಾರತೀಯ ಕುಟುಂಬಗಳೊಂದಿಗೆ ಹುಟ್ಟು ಹಬ್ಬದ ಸಂಭ್ರಮಾಚರಣೆ. ಸುಂದರೇಶನ್, ರಾಮಚಂದ್ರ, ಗೋಸ್ವಾಮಿ, ಉಷಾ ಬೋಪಯ್ಯ, ಪರಮೇಶ್ವರಪ್ಪ ಹೀಗೆ ಕೆಲವರ ನೆನಪು. ಅಲ್ಲಿಯ ಭಾರತೀಯ, ಶ್ರೀಲಂಕಾ ಸ್ನೇಹಿತರುಗಳಿಗೆ ಒಟ್ಟು ಸೇರುವ ಒಂದು ಅವಕಾಶವಾಗಿತ್ತು.
ನವಂಬರ 1978 ದುರಂತ ... ಗೀತಾಳಿಗೆ ಆರೋಗ್ಯದಲ್ಲಿ ಏರುಪೇರು. ತಲೆನೋವು, ಶುಭಾಳನ್ನು ಸುಂದರೇಶನ್ ಅವರ ಮನೆಯಲ್ಲಿ ಬಿಟ್ಟು 150 ಕಿ.ಮೀ. ದೂರದ ಬವುಚಿ ಆಸ್ಪತ್ರೆಗೆ ತಪಾಸಣೆಗೆ, ಅಲ್ಲಿಯ ವೈದ್ಯರ ಸಲಹೆಯ ಮೇರೆಗೆ, ಅವಳನ್ನು 1000 ಕಿ.ಮೀ. ದೂರದ ಇಬಾದನ್ ಎಂಬ ನಗರಕ್ಕೆ ಸ್ನೇಹಿತರ ಕಂಪೆನಿಯ ಚಿಕ್ಕ ವಿಮಾನದಲ್ಲಿ ವೈದ್ಯರೊಬ್ಬರೊಡನೆ ಪಯಣ, ಆಸ್ಪತ್ರೆಗೆ ದಾಖಲು. ಅಲ್ಲಿಯ ಕೊಡಗಿನ ಒಬ್ಬ ವೈದ್ಯರ ಆಶ್ವಾಸನೆ, ಮರುದಿನ ಅವಳಿಗೆ ಮಿದುಳಿನ ಆಪರೇಶನ್. ಅಲ್ಲಿಯ ಒಬ್ಬ ಶ್ರೀಲಂಕ ಸ್ನೇಹಿತ, ಆಶ್ಲೆ ಎಂಬವರ ಮನೆಯಲ್ಲಿ ನಾನಿದ್ದು, ನವಂಬರ 9, 1978, ಬೆಳಿಗ್ಗೆ ಪುನಃ ಆಸ್ಪತ್ರೆಗೆ ತಲುಪುವಾಗ ಆವಳು ನನ್ನಗಲಿ ಇಹಲೋಕವನ್ನು ತ್ಯಜಿಸಿಯಾಗಿತ್ತು.
ಅದೊಂದು ನನ್ನ ಬದುಕಿನ ಅತ್ಯಂತ ದುರದೃಷ್ಟಕರವಾದ ಘಟನೆ. ಒಂಟಿಯಾಗಿ ದಿಕ್ಕು ತೋಚದವನಾಗಿದ್ದೆ. ಮುಂದೆ ಏನು ಮಾಡುವುದು? ಯಾವುದೂ ತಿಳಿಯುತ್ತಿರಲಿಲ್ಲ. ಅಲ್ಲಿಯ ಭಾರತೀಯ ಸಮುದಾಯದವರು, ಶ್ರೀಲಂಕಾದ ಸ್ನೇಹಿತರು, ಅಲ್ಲಿಯೇ ಹತ್ತಿರವಿದ್ದ ಹಿರಿಯಡಕದ ಡಾ. ಆಚಾರ್ಯರು, ಇವರ ಸಹಕಾರದಿಂದ ಅವಳ ಕೊನೆಯ ಕಾರ್ಯವನ್ನು ಮುಗಿಸಿಯಾಯ್ತು.
ಮುಂದೇನು? ಇಬಾದನ್ ನಗರದಿಂದ ಒಂಟಿಯಾಗಿ ವಿಮಾನದಲ್ಲಿ ಜೋಸ್ ನಗರವನ್ನು ತಲುಪಿ ಕಾರಿನಲ್ಲಿ ಅಲ್ಲಿಂದ ಬವುಚಿ ನಗರ ನಂತರ ನಾನಿದ್ದ ಸ್ಥಳ ಗೊಂಬೆಗೆ ತಲುಪಿದ್ದಾಯಿತು. ಮಗಳು ಶುಭಾ 14 ತಿಂಗಳ ಬಾಲೆ, ಇನ್ನು ನಡೆಯುತ್ತಾ ಇರಲಿಲ್ಲ, ಅಮ್ಮನನ್ನು ಹುಡುಕುವ ಕಣ್ಣುಗಳು, ಸಾಂತ್ವನ ಪಡಿಸದಿರುವಂಥ ಸನ್ನಿವೇಶ. ಸುಂದರೇಶ್ ಅವರ ಹೆಂಡತಿ ಪ್ರೇಮ, ಮಕ್ಕಳು ಪ್ರಿಯ, ಉಷಾ ಚೆನ್ನಾಗಿ ನೋಡಿಕೊಂಡಿದ್ದರು. ಅವಳನ್ನು ಕೂಡಿಕೊಂಡು ಭಣ ಗುಟ್ಟುತ್ತಿರುವ ಮನೆಯನ್ನು ಸೇರಿದ್ದಾಯಿತು.
ಶಾಲೆಯ ಕ್ವಾರ್ಟರ್ಸ್ ಮನೆಯೆಲ್ಲಿ ಎಲ್ಲವು ಭಣ ಭಣ. ಶಾಲಾ ಅಧ್ಯಾಪಕರುಗಳು, ಸ್ನೇಹಿತರುಗಳು ಬಂದು ಸಾಂತ್ವನ ಮಾಡಿದ್ದೂ ಆಯಿತು. ಮನಸಿನಲ್ಲಿ ದುಗುಡ, ದುಮ್ಮಾನ, ಯಾಕೆ ಹೀಗಾಯಿತು? ಊರಲ್ಲಿ ವಿಷಯ ಹೇಗೆ ತಿಳಿಸಲಿ?
ಶುಭಾಳನ್ನು ನೋಡಿಕೊಳ್ಳುವ ಅಜ್ಜಿಯನ್ನು ಇಟ್ಟುಕೊಂಡು ಒಂದು ತಿಂಗಳು ಕಳೆದು ರಜೆಗೆ ಅರ್ಜಿಯನ್ನು ಕಳುಹಿಸಿ, ಅದು ಮಂಜುರಾತಿಯಾಗಿ ಊರಿಗೆ ಹೋಗುವ ತಯಾರಿ ನಡೆಯಿತು.
ಭಾರವಾದ ಮನಸ್ಸಿನಿಂದ ಶುಭಾಳನ್ನು ನೋಡಿಕೊಂಡು 600 ಕಿ.ಮೀ. ದೂರದ ಕಾನೋ ವಿಮಾನ ನಿಲ್ದಾಣ ತಲುಪಿ ರೋಮ್ ನಗರಕ್ಕೆ ತಲುಪಿದ್ದಾಯಿತು. ನಂತರ ಅಲ್ಲಿಂದ ಬೊಂಬಾಯಿ ತಲುಪಿ, ನಂತರ ಮಂಗಳೂರಿಗೆ ವಿಮಾನದಲ್ಲಿ ಪಯಣ. ಇನ್ನೂ ನಡೆಯಲು ಪ್ರಾರಂಬಿಸಿರದ ಮಗುವನ್ನು ನೋಡಿಕೊಂಡು ಮನೆಗೆ ಸುರಕ್ಷಿತವಾಗಿ ತಲುಪಿದ್ದೂ ಆಯಿತು. ಮಗಳಿಗೆ ನಾನೊಬ್ಬನೇ ಆಸರೆ. ಇತರರು ಅಪರಿಚಿತರು.
ನಂತರ ಹಲವಾರು ದಿನಗಳನ್ನು ಹೆಬ್ರಿಯಲ್ಲಿ ಕಳೆದು, ಅವಳನ್ನು ಹೊಸ ಪರಿಸರಕ್ಕೆ, ವಾತಾವರಣಕ್ಕೆ ಹೊಂದುವಂತೆ ಮಾಡಿ ಅಗಲುವಿಕೆಯನ್ನು ಸಹಿಸಿಕೊಂಡು ಒಂದೆರಡು ತಿಂಗಳು ಕಳೆದದ್ದಾಯಿತು.
ಮಾರ್ಚ್ ತಿಂಗಳಲ್ಲಿ ಪುನಃ ನೈಜಿರಿಯಾದ ಗೊಂಬೆಗೆ ತೆರಳಿ ಕೆಲಸಕ್ಕೆ ಹಾಜರು. ಮಡದಿ, ಮಗುವಿಲ್ಲದ ಒಂಟಿ ಜೀವನ. ಮನಸಿನಲ್ಲಿ ಒಂದೇ ಯೋಚನೆ. ಯಾಕೆ ಹೀಗಾಯಿತು? ಅದೇ ಸ್ತಳದಲ್ಲಿ ಮುಂದುವರಿಯಲು ಮನಸ್ಸು ಕೇಳದಾಯಿತು.
ಬಾಂಜುಲ್, ದಿ. ಗ್ಯಾಂಬಿಯಾ, ಪಶ್ಚಿಮ ಆಫ್ರಿಕಾ. 1979 - 80
ಒಂದೆರಡು ತಿಂಗಳಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಆಫ್ರಿಕ ಖಂಡದ ಇನ್ನೊಂದು ಸಣ್ಣ ದೇಶ ದಿ ಗ್ಯಾಂಬಿಯಾ (The Gambia) ಗೆ ತೆರಳಿ ಅಲ್ಲಿಯ ರಾಜಧಾನಿ ಬಾಂಜುಲ್ (Banjul) ನಗರದಲ್ಲಿ ಗ್ಯಾಂಬಿಯಾ ಮುಸ್ಲಿಂ ಹೈಸ್ಕೂಲ್ (Gambia Muslim High School) ನಲ್ಲಿ 1979 ರ ಸಪ್ಟಂಬರ ತಿಂಗಳಲ್ಲಿ ಅಧ್ಯಾಪಕನಾಗಿ ಸೇರಿದ್ದಾಯಿತು.
ದಿ ಗ್ಯಾಂಬಿಯಾ, ಸೆನೆಗಲ್ ದೇಶ ಸುತ್ತುವರಿದ, ಒಂದು ಸಣ್ಣ ದೇಶ. ಗ್ಯಾಂಬಿಯಾ ನದಿಯ ಸುತ್ತ ಸಮತಟ್ಟಾದ ಸ್ಥಳ ವಿರುವ ಜಾಗ. ಸುಮಾರು 25 - 50 ಕಿ.ಮೀ.ಅಗಲ, 300 ಕಿ,ಮೀ. ಉದ್ದ. ಮಧ್ಯದಲ್ಲಿ ನದಿ.
"ಮದುವೆ" - ಏನೋ ಕಾತರ, ಕಳವಳ, ಅಣ್ಣನ ಬಲವಂತ, ಹುಡುಗಿ ನೋಡಬೇಕು, ಈರ್ವರಿಗೂ ಒಪ್ಪಿಗೆ ಯಾಗಬೇಕು ... ಮುಂದುವರಿಸಿದರೂ ಸಮಸ್ಯೆ ಅದೇ.... ಹೆಚ್ಚು ಸಮಯ ಕಳೆಯದಯೇ ಹೆಬ್ರಿ ವಾಸುದೇವ ಆಚಾರ್ಯರ ತಂಗಿ ಗೀತಾಬಾಲಿ ಯನ್ನು ಒಪ್ಪಿ ಮದುವೆಯೂ ಆಗೋಸ್ಟ್ 31 ರಂದು ಹೆಬ್ರಿ ದೇವಸ್ತಾನದ ಕಲ್ಯಾಣ ಮಂದಿರದಲ್ಲಿ ನಡೆದು ಹೋಯಿತು.
ನಂತರ ಮದರಾಸಿಗೆ ಎಲ್ಲೊ ಫೀವರ್ ಜ್ವರದ ಚುಚ್ಚುಮದ್ದು, ದೆಹಲಿಗೆ ನೈಜಿರಿಯಾದ ವೀಸಾ ಪಡೆದುಕೊಂಡು ಬಂದು ವಾಪಸ್ಸು ಗೊಂಬೆಗೆ ಪಯಣ.
ಅಲ್ಲಿಯ ಬದುಕು ಮುಂದುವರಿಕೆ, ರಜೆಯಲ್ಲಿ ಕಾರಿನಲ್ಲಿ ಸಾಕಸ್ತು ನೈಜಿರಿಯಾ ಸುತ್ತಾಟ, ಜೋಸ್, ಮಕುರ್ಡಿ, ಇಬಾದನ್, ಲಾಗೊಸ್(ರಾಜಧಾನಿ), ಜಾರಿಯಾ, ಇತ್ಯಾದಿ ದೂರ ದೂರ ಊರುಗಳು, ಪೇಟೆಗಳು. ರಾಜಧಾನಿ ಲಾಗೊಸ್ ನಗರದಲ್ಲಿ ಪೆಲತ್ತುರು ಡಾ ಅನಂತ್ ಆಚಾರ್ಯರ ಭೇಟಿ, 10 ದಿನಗಳ ರಜೆಯಲ್ಲಿ 4000 ಕಿ.ಮೀ.ಕಾರಿನಲ್ಲಿ ಸುತ್ತಾಟ. ವಾಪಸ್ಸು ಬಂದ ನಂತರ ಗೀತಾಳಿಗೆ ಅದೇ ಶಾಲೆಯಲ್ಲಿ ಅಧ್ಯಾಪಕಿಯಾಗಿ ಸರಕಾರದಿಂದ ನೇಮಕ.
1977 ರ ಬೇಸಗೆ ರಜೆಗೆ ಊರಿಗೆ ಹೋಗುವ ತಯಾರಿ, ಆವಳು ಗರ್ಭಿಣಿ, ಕಾನೋ ಅಂತರ ರಾಷ್ರಿಯ ವಿಮಾನ ನಿಲ್ದಾಣದಿಂದ ಹೊರಟು ರೋಮ್ ನಗರ, ಬೊಂಬಾಯಿಗೆ ಬಂದು ಅಲ್ಲಿಂದ ಮಂಗಳೂರಿಗೆ ವಿಮಾನ. ಪದ್ಮನಾಭ ಅಣ್ಣಯ್ಯ ಮನೆಯವರು, ಹೆಬ್ರಿಯಿಂದ ಕೆಲವರನ್ನು ಕರೆದುಕೊಂಡು ಬಜಪೆ ನಿಲ್ದಾಣಕ್ಕೆ ಬಂದಿದ್ದ ನೆನಪು. ನಾವು ಕೊನೆಯದಾಗಿ ವಿಮಾನದಿಂದ ಇಳಿದದ್ದು ಕಾದು ಕಾದು ಅವರಿಗೆಲ್ಲಾ ನಿರಾಸೆ, ಕಾತುರ. ಕೊನೆಗೂ ಬಂದ್ರು, ಬಂದ್ರು... ಬಂದಿದ್ದಾಯಿತು.
ತದನಂತರ ಬಿರ್ತಿಗೆ ಬಂದು ಅವಳನ್ನು ಹೆಬ್ರಿಯಲ್ಲಿ ಬಿಟ್ಟು ಸ್ವಲ್ಪ ದಿನಗಳ ನಂತರ ಒಂಟಿಯಾಗಿ ವಾಪಸ್ಸು ನೈಜಿರಿಯಾ ದೇಶಕ್ಕೆ ಪಯಣ ಸಪ್ಟಂಬರ 29, 1977 ರಂದು ಹೆಬ್ರಿಯಲ್ಲಿ ಮಗಳ ಜನನ, ಶುಭಾ ಅವಳ ಹೆಸರು.
ಸುಮಾರು ನಾಲ್ಕು ತಿಂಗಳ ನಂತರ ಜನವರಿ 1978, ಆವಳು ಶುಭಾಳೋಡನೆ ಗೊಂಬೆ, ನೈಜಿರಿಯಾ ದೇಶಕ್ಕೆ ಪಯಣ.
ಹೀಗೆಯೇ ದಿನಗಳು ಕಳೆದವು. ಶುಭಾಳನ್ನು ನೋಡಿಕೊಳ್ಳಲು ನೈಜಿರಿಯಾದ ಪ್ರಜೆ ಅಜ್ಜಿಯೊಬ್ಬಳನ್ನು ನೇಮಕ ಮಾಡಿಕೊಂಡದ್ದು ಆಯಿತು. ಒಳ್ಳೆಯ ಅಜ್ಜಿ.
ಸಪ್ಟಂಬರ 1978, ಶುಭಾಳಿಗೆ ಒಂದು ವರ್ಷದ ಸಂಭ್ರಮ, ಅಲ್ಲಿಯ ಸುಮಾರು 30 ಭಾರತೀಯ ಕುಟುಂಬಗಳೊಂದಿಗೆ ಹುಟ್ಟು ಹಬ್ಬದ ಸಂಭ್ರಮಾಚರಣೆ. ಸುಂದರೇಶನ್, ರಾಮಚಂದ್ರ, ಗೋಸ್ವಾಮಿ, ಉಷಾ ಬೋಪಯ್ಯ, ಪರಮೇಶ್ವರಪ್ಪ ಹೀಗೆ ಕೆಲವರ ನೆನಪು. ಅಲ್ಲಿಯ ಭಾರತೀಯ, ಶ್ರೀಲಂಕಾ ಸ್ನೇಹಿತರುಗಳಿಗೆ ಒಟ್ಟು ಸೇರುವ ಒಂದು ಅವಕಾಶವಾಗಿತ್ತು.
ನವಂಬರ 1978 ದುರಂತ ... ಗೀತಾಳಿಗೆ ಆರೋಗ್ಯದಲ್ಲಿ ಏರುಪೇರು. ತಲೆನೋವು, ಶುಭಾಳನ್ನು ಸುಂದರೇಶನ್ ಅವರ ಮನೆಯಲ್ಲಿ ಬಿಟ್ಟು 150 ಕಿ.ಮೀ. ದೂರದ ಬವುಚಿ ಆಸ್ಪತ್ರೆಗೆ ತಪಾಸಣೆಗೆ, ಅಲ್ಲಿಯ ವೈದ್ಯರ ಸಲಹೆಯ ಮೇರೆಗೆ, ಅವಳನ್ನು 1000 ಕಿ.ಮೀ. ದೂರದ ಇಬಾದನ್ ಎಂಬ ನಗರಕ್ಕೆ ಸ್ನೇಹಿತರ ಕಂಪೆನಿಯ ಚಿಕ್ಕ ವಿಮಾನದಲ್ಲಿ ವೈದ್ಯರೊಬ್ಬರೊಡನೆ ಪಯಣ, ಆಸ್ಪತ್ರೆಗೆ ದಾಖಲು. ಅಲ್ಲಿಯ ಕೊಡಗಿನ ಒಬ್ಬ ವೈದ್ಯರ ಆಶ್ವಾಸನೆ, ಮರುದಿನ ಅವಳಿಗೆ ಮಿದುಳಿನ ಆಪರೇಶನ್. ಅಲ್ಲಿಯ ಒಬ್ಬ ಶ್ರೀಲಂಕ ಸ್ನೇಹಿತ, ಆಶ್ಲೆ ಎಂಬವರ ಮನೆಯಲ್ಲಿ ನಾನಿದ್ದು, ನವಂಬರ 9, 1978, ಬೆಳಿಗ್ಗೆ ಪುನಃ ಆಸ್ಪತ್ರೆಗೆ ತಲುಪುವಾಗ ಆವಳು ನನ್ನಗಲಿ ಇಹಲೋಕವನ್ನು ತ್ಯಜಿಸಿಯಾಗಿತ್ತು.
NEW NIGERIAN NEWSPAPER 20/11/1978 |
ಮುಂದೇನು? ಇಬಾದನ್ ನಗರದಿಂದ ಒಂಟಿಯಾಗಿ ವಿಮಾನದಲ್ಲಿ ಜೋಸ್ ನಗರವನ್ನು ತಲುಪಿ ಕಾರಿನಲ್ಲಿ ಅಲ್ಲಿಂದ ಬವುಚಿ ನಗರ ನಂತರ ನಾನಿದ್ದ ಸ್ಥಳ ಗೊಂಬೆಗೆ ತಲುಪಿದ್ದಾಯಿತು. ಮಗಳು ಶುಭಾ 14 ತಿಂಗಳ ಬಾಲೆ, ಇನ್ನು ನಡೆಯುತ್ತಾ ಇರಲಿಲ್ಲ, ಅಮ್ಮನನ್ನು ಹುಡುಕುವ ಕಣ್ಣುಗಳು, ಸಾಂತ್ವನ ಪಡಿಸದಿರುವಂಥ ಸನ್ನಿವೇಶ. ಸುಂದರೇಶ್ ಅವರ ಹೆಂಡತಿ ಪ್ರೇಮ, ಮಕ್ಕಳು ಪ್ರಿಯ, ಉಷಾ ಚೆನ್ನಾಗಿ ನೋಡಿಕೊಂಡಿದ್ದರು. ಅವಳನ್ನು ಕೂಡಿಕೊಂಡು ಭಣ ಗುಟ್ಟುತ್ತಿರುವ ಮನೆಯನ್ನು ಸೇರಿದ್ದಾಯಿತು.
ಶಾಲೆಯ ಕ್ವಾರ್ಟರ್ಸ್ ಮನೆಯೆಲ್ಲಿ ಎಲ್ಲವು ಭಣ ಭಣ. ಶಾಲಾ ಅಧ್ಯಾಪಕರುಗಳು, ಸ್ನೇಹಿತರುಗಳು ಬಂದು ಸಾಂತ್ವನ ಮಾಡಿದ್ದೂ ಆಯಿತು. ಮನಸಿನಲ್ಲಿ ದುಗುಡ, ದುಮ್ಮಾನ, ಯಾಕೆ ಹೀಗಾಯಿತು? ಊರಲ್ಲಿ ವಿಷಯ ಹೇಗೆ ತಿಳಿಸಲಿ?
ಶುಭಾಳನ್ನು ನೋಡಿಕೊಳ್ಳುವ ಅಜ್ಜಿಯನ್ನು ಇಟ್ಟುಕೊಂಡು ಒಂದು ತಿಂಗಳು ಕಳೆದು ರಜೆಗೆ ಅರ್ಜಿಯನ್ನು ಕಳುಹಿಸಿ, ಅದು ಮಂಜುರಾತಿಯಾಗಿ ಊರಿಗೆ ಹೋಗುವ ತಯಾರಿ ನಡೆಯಿತು.
ಭಾರವಾದ ಮನಸ್ಸಿನಿಂದ ಶುಭಾಳನ್ನು ನೋಡಿಕೊಂಡು 600 ಕಿ.ಮೀ. ದೂರದ ಕಾನೋ ವಿಮಾನ ನಿಲ್ದಾಣ ತಲುಪಿ ರೋಮ್ ನಗರಕ್ಕೆ ತಲುಪಿದ್ದಾಯಿತು. ನಂತರ ಅಲ್ಲಿಂದ ಬೊಂಬಾಯಿ ತಲುಪಿ, ನಂತರ ಮಂಗಳೂರಿಗೆ ವಿಮಾನದಲ್ಲಿ ಪಯಣ. ಇನ್ನೂ ನಡೆಯಲು ಪ್ರಾರಂಬಿಸಿರದ ಮಗುವನ್ನು ನೋಡಿಕೊಂಡು ಮನೆಗೆ ಸುರಕ್ಷಿತವಾಗಿ ತಲುಪಿದ್ದೂ ಆಯಿತು. ಮಗಳಿಗೆ ನಾನೊಬ್ಬನೇ ಆಸರೆ. ಇತರರು ಅಪರಿಚಿತರು.
ನಂತರ ಹಲವಾರು ದಿನಗಳನ್ನು ಹೆಬ್ರಿಯಲ್ಲಿ ಕಳೆದು, ಅವಳನ್ನು ಹೊಸ ಪರಿಸರಕ್ಕೆ, ವಾತಾವರಣಕ್ಕೆ ಹೊಂದುವಂತೆ ಮಾಡಿ ಅಗಲುವಿಕೆಯನ್ನು ಸಹಿಸಿಕೊಂಡು ಒಂದೆರಡು ತಿಂಗಳು ಕಳೆದದ್ದಾಯಿತು.
ಮಾರ್ಚ್ ತಿಂಗಳಲ್ಲಿ ಪುನಃ ನೈಜಿರಿಯಾದ ಗೊಂಬೆಗೆ ತೆರಳಿ ಕೆಲಸಕ್ಕೆ ಹಾಜರು. ಮಡದಿ, ಮಗುವಿಲ್ಲದ ಒಂಟಿ ಜೀವನ. ಮನಸಿನಲ್ಲಿ ಒಂದೇ ಯೋಚನೆ. ಯಾಕೆ ಹೀಗಾಯಿತು? ಅದೇ ಸ್ತಳದಲ್ಲಿ ಮುಂದುವರಿಯಲು ಮನಸ್ಸು ಕೇಳದಾಯಿತು.
ಬಾಂಜುಲ್, ದಿ. ಗ್ಯಾಂಬಿಯಾ, ಪಶ್ಚಿಮ ಆಫ್ರಿಕಾ. 1979 - 80
ಒಂದೆರಡು ತಿಂಗಳಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಆಫ್ರಿಕ ಖಂಡದ ಇನ್ನೊಂದು ಸಣ್ಣ ದೇಶ ದಿ ಗ್ಯಾಂಬಿಯಾ (The Gambia) ಗೆ ತೆರಳಿ ಅಲ್ಲಿಯ ರಾಜಧಾನಿ ಬಾಂಜುಲ್ (Banjul) ನಗರದಲ್ಲಿ ಗ್ಯಾಂಬಿಯಾ ಮುಸ್ಲಿಂ ಹೈಸ್ಕೂಲ್ (Gambia Muslim High School) ನಲ್ಲಿ 1979 ರ ಸಪ್ಟಂಬರ ತಿಂಗಳಲ್ಲಿ ಅಧ್ಯಾಪಕನಾಗಿ ಸೇರಿದ್ದಾಯಿತು.
ದಿ ಗ್ಯಾಂಬಿಯಾ, ಸೆನೆಗಲ್ ದೇಶ ಸುತ್ತುವರಿದ, ಒಂದು ಸಣ್ಣ ದೇಶ. ಗ್ಯಾಂಬಿಯಾ ನದಿಯ ಸುತ್ತ ಸಮತಟ್ಟಾದ ಸ್ಥಳ ವಿರುವ ಜಾಗ. ಸುಮಾರು 25 - 50 ಕಿ.ಮೀ.ಅಗಲ, 300 ಕಿ,ಮೀ. ಉದ್ದ. ಮಧ್ಯದಲ್ಲಿ ನದಿ.
ಅಲ್ಲಿಯೂ ಒಂಟಿ ಜೀವನ, ವಾರಾಂತ್ಯ, ರಜೆಯಲ್ಲಿ ಬೀಚ್ ನೆ ಕಡೆಗೆ ತೆರಳಿ ಸಮಯ ಕಳೆಯುವುದು. ಬಾಂಜುಲ್ ಒಂದು ಸಣ್ಣ ನಗರ, ಅಲ್ಲಿನ ರಾಷ್ಟ್ರಪತಿ ಒಮ್ಮೆ ಶಾಲೆಗೆ ಬಂದಾಗ ಭೆಟ್ಟಿ ಯಾದದ್ದೂ ಇದೆ. ಸಂಬಳವೂ ಕಡಿಮೆ. ಪುನಃ ನೈಜಿರಯಾಕ್ಕೆ ಹೋಗುವ ಅಸೆ.
ಮುಂದುವರಿಯುವುದು.....ಭಾಗ 5 ...
No comments:
Post a Comment