ಆತ್ಮ ಚರಿತ್ರೆ - ಬದುಕಿನ ಪಯಣ (7) - ದುಬೈ 1986
1986 ಜುಲೈ ತಿಂಗಳಲ್ಲಿ ನೈಜಿರಯಾದಿಂದ ಊರಿಗೆ ಬಂದು, ಕೆಲಕಾಲ ರಜೆಯನ್ನು ಕಳೆದು, ರವಿಕಾಂತ ನನ್ನು ಬ್ರಹ್ಮಾವರದ ಲಿಟಲ್ ರಾಕ್ (Little Rock Indian School ) ಶಾಲೆಯ ಯು.ಕೆ.ಜಿ. (UKG) ಕ್ಲಾಸಿಗೆ ಸೇರಿಸಿ, ನಳಿನಿಯು ಉಡುಪಿಯಲ್ಲಿಯ ಒಂದು ವರ್ಷ ಕಲಿಕೆಯ B Ed ಕಾಲೇಜಿಗೆ ಸೇರಿದ್ದಾಯಿತು. ಮನೆಯಿಂದ ಅವರಿಗೆ ಶಾಲೆ, ಕಾಲೇಜಿಗೆ ಬಸ್ಸಿನಲ್ಲಿ ಹೋಗುವ ವ್ಯವಸ್ತೆ.
ಒಂಟಿಯಾಗಿ ಸಪ್ಟಂಬರ ಮೊದಲ ವಾರದಲ್ಲಿ ಬೊಂಬಾಯಿ ನಗರಕ್ಕೆ ಬಂದು ಅಲ್ಲಿಂದ ದುಬೈ ನಗರಕ್ಕೆ ಬಂದದ್ದಾಯಿತು. ಶಾಲೆಯಿಂದ ವ್ಯವಸ್ತೆ ಮಾಡಿದ ಒಂದು ದೊಡ್ಡ ಮನೆ (Villa) ಯಲ್ಲಿ ಇತರ ನಾಲ್ಕಾರು ಶಾಲೆಯ ಅಧ್ಯಾಪಕರುಗಳೊಡನೆ ವಾಸ. ಅದು ಅಲ್ ಶಾಬ್ ಎಂಬ ಕಾಲೋನಿಯಲ್ಲಿ. ಹೋಟೆಲಿನಲ್ಲಿ ಊಟ, ಶಾಲೆಯ ಬಸ್ಸಿನಲ್ಲಿ ಇತರ ಅಧ್ಯಾಪಕರುಗಲೊಡನೆ ಶಾಲೆಗೆ ಹೋಗಿ ಬರುವ ವ್ಯವಸ್ತೆ. ಮಧ್ಯಾಹ್ನದ ಪಾಳಿಯಲ್ಲಿ ಕೆಲಸವಾದ್ದರಿಂದ, ತಡವಾಗಿ ಊಟ ಮಾಡಿ 1 ಗಂಟೆಗೆ ಶಾಲೆಗೆ ಸೇರಿ 6 ಗಂಟೆಯ ವರೆಗೆ ಶಾಲೆಯಲ್ಲಿ, ಮತ್ತೆ ಬಸ್ಸಿನಲ್ಲಿ ಮನೆಗೆ.
ಮನೆಯಲ್ಲಿ ಇತರ ಅಧ್ಯಾಪಕರು - ಪರಮಜಿತ್ ಕಾಲ್ರ, ಆತ್ಮಿಯನಾದ ಸರದಾರ್ಜಿ ರೂಮ್ ಮೇಟ್ (Room Mate). ಅವನು ಪೇಟ ಕಟ್ತುವವನು. ಅವನನ್ನು ಬೆಳಿಗ್ಗೆ ಬೇಗ ಎಬ್ಬಿಸಿ, ನಂತರ ವಾಕಿಂಗ್ (walking) ಅಥವಾ ವ್ಯಾಯಾಮ ಮಾಡಲು ಹೇಳಬೇಕು. ಅವನು ಪೇಟ ಕಟ್ಟಿದ್ದರಿಂದ ಎದ್ದೊಡನೆ ಏನೂ ಮಾಡಬೇಕೆಂದು ತಿಳಿಯದು.☺
ಇತರ ಅಧ್ಯಾಪಕರು ಪ್ರಸಾದ್, ಒಬ್ಬ ಸಾಬಿ, ಇನ್ನಿತರರ ಹೆಸರು ನೆನಪಾಗದು.
ಓ.ಎಲ್. ಹೆಂಡರ್ಸನ್ ಪ್ರಾಂಶುಪಾಲ ರಾಗಿದ್ದ ಕಾಲ. ಕೆ.ಬಿ. ರಿಖಾರಿ, ಸುನಿಲ್ ಜೋಸೆಫ್, ಸೂಪರ್ವೈಸರ್, ಕಾಶ್ಮೀರದ ಡಾ. ಫರುಕ್ ವಾಸಿಲ್ ಉಪ ಪ್ರಾಂಶು ಪಾಲ. ಮೈಸೂರಿನ ಗೋವಿಂದ ಪ್ರಸಾದ ಅವರು ಅದೇ ಶಾಲೆಯಲ್ಲಿ ಗಣಿತ (Maths)) ಅಧ್ಯಾಪಕ ರಾಗಿದ್ದರು. ಅವರ ಹೆಂಡತಿ ನಾಗಮಣಿ ಅವರು ಸಹಾ ಪ್ರೈಮರಿ ವಿಭಾಗದಲ್ಲಿ ಅಧ್ಯಾಪಕಿ ಯಾಗಿದ್ದರು. ನಾನು ಹತ್ತು, ಹನ್ನೊಂದು, ಹನ್ನೆರಡು ಕ್ಲಾಸಿನ ಮಕ್ಕಳಿಗೆ ವಿಜ್ಞಾನ, ಭೌತ ಶಾಸ್ತ್ರದ ಭೋದನೆ. ಹುಡುಗರಿಗೆ ಮಧ್ಯಾಹ್ನದ ನಂತರದ (Afternoon shift) ಕ್ಲಾಸುಗಳು ಆದ್ದರಿಂದ ಒಂದು ಗಂಟೆಗೆ, ಪಾಠ. ಪ್ರವಚನ ಶುರು ಆಗಿ ಆರು ಗಂಟೆಯ ವರೆಗೆ ಭೋದನೆ. ನಂತರ ವಾಪಸ್ಸು ಶಾಲೆಯ ಬಸ್ಸಿನಲ್ಲಿ ಮನೆಗೆ. ಊಟಕ್ಕೆ ಹೆಚ್ಚಾಗಿ ಹೊರಗೆ ಹೋಟೆಲಿನಲ್ಲಿ.
ದುಬೈ ಯಲ್ಲಿ ಡ್ರೈವಿಂಗ್ ಲೈಸನ್ಸ್ (Driving Licence) ಪಡೆಯಲು ಜನರು ಹರಸಾಹಸ ಪಡುತ್ತಾರೆ. ಭಾರತದಲ್ಲಿ ಹಲವಾರು ವರ್ಷ ಕಾರೋ/ಬಸ್ಸೋ ಚಾಲನೆ ಮಾಡಿದವರೂ ಕೆಲವು ಬಾರಿ ಅನುತ್ತೀರ್ಣರಾಗುತ್ತಾರೆ. ಟೆಸ್ಟ್ (Test) ಗೆ ದಿನಾಂಕ ಪಡೆಯಲು ಕೆಲವು ವಾರಗಳೇ ಕಾಯಬೇಕಾಗಿತ್ತು. ಟೆಸ್ಟ್ ನಲ್ಲಿ ಐದು ಭಾಗ ಗಳಿವೆ. 1. Garage Parking, 2. side parking, 3. Hill test 4. Signal Test 5. Road Test (ಅತ್ಯಂತ ಕಠಿಣ ವಾದ ಪರೀಕ್ಷೆ)
ಮೊದಲ ಬಾರಿ ಹೋದಾಗ ಮೂರನೇ ಟೆಸ್ಟಿನಲ್ಲಿ (Hill Test ) ಫೇಲ್ ಆಗಿದ್ದೆ. ಎರಡನೇ ಬಾರಿ ಹೋದಾಗ ಎಲ್ಲಾ test ಗಳಲ್ಲಿ ಒಮ್ಮೆಲೇ ಪಾಸಾಗಿದ್ದೆ. ಅಲ್ಲಿ ಎಲ್ಲರಿಗೂ ಅದೊಂದು ಬಹಳ ಆಶ್ಚರ್ಯದ ಸುದ್ದಿ. ಅಷ್ಟು ಬೇಗನೆ ನಿಮಗೆ ಲೈಸೆನ್ಸ್ ಸಿಕ್ಕಿತಾ? ಡ್ರೈವಿಂಗ್ ಲೈಸೆನ್ಸ ಸಹಾ ಆಯ್ತು.
ಹೀಗೆ ಎರಡು/ಮೂರು ತಿಂಗಳಾದ ನಂತರ ಒಂದು second hand ಕಾರನ್ನೂ ಖರಿದಿಸಿಯಾಯ್ತು. ಸುಮ್ಮನೆ ಅಲ್ಲಿ ಇಲ್ಲಿ ತಿರುಗಾಡಲು. ನೈಜೇರಿಯಾ ದಲ್ಲಿ ಇದ್ದಂತೆ ದುಬೈಯಲ್ಲಿ ಕಾರು ಚಾಲನೆ ಮಾಡುವುದು ರಸ್ತೆಯ ಬಲಭಾಗದಲ್ಲಿ.ಅದು ಅಭ್ಯಾಸ ಬಲದಿಂದ ಕೂಡಲೇ ಅನುಭವಕ್ಕೆ ಬರುತ್ತದೆ.
ಸಮಯ ಕಳೆಯಲು ಅಂಥಹ ಹವ್ಯಾಸ ಏನೂ ಇದ್ದಿರಲಿಲ್ಲ. ಪ್ರಸಾದ್ ಅವರ ಮನೆಗೆ ಆಗಾಗ ಭೇಟಿ. ಅವರೊಂದಿಗೆ ಕೆಲವೊಮ್ಮೆ ಸತ್ಸಂಗಕ್ಕೆ ಹಾಜರಿ. ಇತರ ಸ್ನೇಹಿತರುಗಳ ಭೇಟಿ. ಪ್ರಥಮವಾಗಿ ಭೇಟಿಯಾದವರಲ್ಲಿ ಜಗದೀಶ್ ಶೆಟ್ಟಿ, ಪಿ.ಎಸ.ರಾವ್, ಡಾ. ಮೋಹನ್, ಪ್ರಭಾಕರ ಉಪಾಧ್ಯ.
ಊರಲ್ಲಿ ನಳಿನಿ ಬಿ.ಎಡ್. ಕಾಲೇಜು, ರವಿ little rock ಶಾಲೆ. 1986 ರ ದಶಂಬರ ರಜೆಗೆ 10 ದಿನಗಳಿಗೆ ಊರಿಗೆ ಹೋಗಿ ಬಂದಾಯ್ತು. ಪುನ ಶಾಲೆಯ ಎಂದಿನಂತೆ ಕಾಯಕ.
1987 ರ ಜುಲೈ ತಿಂಗಳಲ್ಲಿ ಊರಿಗೆ ಹೋಗುವ ಹೋಗುವ ಸಂಭ್ರಮ.
ಮುಂದುವರಿಯುವುದು ....ಭಾಗ 8
1986 ಜುಲೈ ತಿಂಗಳಲ್ಲಿ ನೈಜಿರಯಾದಿಂದ ಊರಿಗೆ ಬಂದು, ಕೆಲಕಾಲ ರಜೆಯನ್ನು ಕಳೆದು, ರವಿಕಾಂತ ನನ್ನು ಬ್ರಹ್ಮಾವರದ ಲಿಟಲ್ ರಾಕ್ (Little Rock Indian School ) ಶಾಲೆಯ ಯು.ಕೆ.ಜಿ. (UKG) ಕ್ಲಾಸಿಗೆ ಸೇರಿಸಿ, ನಳಿನಿಯು ಉಡುಪಿಯಲ್ಲಿಯ ಒಂದು ವರ್ಷ ಕಲಿಕೆಯ B Ed ಕಾಲೇಜಿಗೆ ಸೇರಿದ್ದಾಯಿತು. ಮನೆಯಿಂದ ಅವರಿಗೆ ಶಾಲೆ, ಕಾಲೇಜಿಗೆ ಬಸ್ಸಿನಲ್ಲಿ ಹೋಗುವ ವ್ಯವಸ್ತೆ.
ಒಂಟಿಯಾಗಿ ಸಪ್ಟಂಬರ ಮೊದಲ ವಾರದಲ್ಲಿ ಬೊಂಬಾಯಿ ನಗರಕ್ಕೆ ಬಂದು ಅಲ್ಲಿಂದ ದುಬೈ ನಗರಕ್ಕೆ ಬಂದದ್ದಾಯಿತು. ಶಾಲೆಯಿಂದ ವ್ಯವಸ್ತೆ ಮಾಡಿದ ಒಂದು ದೊಡ್ಡ ಮನೆ (Villa) ಯಲ್ಲಿ ಇತರ ನಾಲ್ಕಾರು ಶಾಲೆಯ ಅಧ್ಯಾಪಕರುಗಳೊಡನೆ ವಾಸ. ಅದು ಅಲ್ ಶಾಬ್ ಎಂಬ ಕಾಲೋನಿಯಲ್ಲಿ. ಹೋಟೆಲಿನಲ್ಲಿ ಊಟ, ಶಾಲೆಯ ಬಸ್ಸಿನಲ್ಲಿ ಇತರ ಅಧ್ಯಾಪಕರುಗಲೊಡನೆ ಶಾಲೆಗೆ ಹೋಗಿ ಬರುವ ವ್ಯವಸ್ತೆ. ಮಧ್ಯಾಹ್ನದ ಪಾಳಿಯಲ್ಲಿ ಕೆಲಸವಾದ್ದರಿಂದ, ತಡವಾಗಿ ಊಟ ಮಾಡಿ 1 ಗಂಟೆಗೆ ಶಾಲೆಗೆ ಸೇರಿ 6 ಗಂಟೆಯ ವರೆಗೆ ಶಾಲೆಯಲ್ಲಿ, ಮತ್ತೆ ಬಸ್ಸಿನಲ್ಲಿ ಮನೆಗೆ.
ಮನೆಯಲ್ಲಿ ಇತರ ಅಧ್ಯಾಪಕರು - ಪರಮಜಿತ್ ಕಾಲ್ರ, ಆತ್ಮಿಯನಾದ ಸರದಾರ್ಜಿ ರೂಮ್ ಮೇಟ್ (Room Mate). ಅವನು ಪೇಟ ಕಟ್ತುವವನು. ಅವನನ್ನು ಬೆಳಿಗ್ಗೆ ಬೇಗ ಎಬ್ಬಿಸಿ, ನಂತರ ವಾಕಿಂಗ್ (walking) ಅಥವಾ ವ್ಯಾಯಾಮ ಮಾಡಲು ಹೇಳಬೇಕು. ಅವನು ಪೇಟ ಕಟ್ಟಿದ್ದರಿಂದ ಎದ್ದೊಡನೆ ಏನೂ ಮಾಡಬೇಕೆಂದು ತಿಳಿಯದು.☺
ಇತರ ಅಧ್ಯಾಪಕರು ಪ್ರಸಾದ್, ಒಬ್ಬ ಸಾಬಿ, ಇನ್ನಿತರರ ಹೆಸರು ನೆನಪಾಗದು.
ವಾಚಮನ್ ಜಾವೇದ್ |
ದುಬೈ ಯಲ್ಲಿ ಡ್ರೈವಿಂಗ್ ಲೈಸನ್ಸ್ (Driving Licence) ಪಡೆಯಲು ಜನರು ಹರಸಾಹಸ ಪಡುತ್ತಾರೆ. ಭಾರತದಲ್ಲಿ ಹಲವಾರು ವರ್ಷ ಕಾರೋ/ಬಸ್ಸೋ ಚಾಲನೆ ಮಾಡಿದವರೂ ಕೆಲವು ಬಾರಿ ಅನುತ್ತೀರ್ಣರಾಗುತ್ತಾರೆ. ಟೆಸ್ಟ್ (Test) ಗೆ ದಿನಾಂಕ ಪಡೆಯಲು ಕೆಲವು ವಾರಗಳೇ ಕಾಯಬೇಕಾಗಿತ್ತು. ಟೆಸ್ಟ್ ನಲ್ಲಿ ಐದು ಭಾಗ ಗಳಿವೆ. 1. Garage Parking, 2. side parking, 3. Hill test 4. Signal Test 5. Road Test (ಅತ್ಯಂತ ಕಠಿಣ ವಾದ ಪರೀಕ್ಷೆ)
ಮೊದಲ ಬಾರಿ ಹೋದಾಗ ಮೂರನೇ ಟೆಸ್ಟಿನಲ್ಲಿ (Hill Test ) ಫೇಲ್ ಆಗಿದ್ದೆ. ಎರಡನೇ ಬಾರಿ ಹೋದಾಗ ಎಲ್ಲಾ test ಗಳಲ್ಲಿ ಒಮ್ಮೆಲೇ ಪಾಸಾಗಿದ್ದೆ. ಅಲ್ಲಿ ಎಲ್ಲರಿಗೂ ಅದೊಂದು ಬಹಳ ಆಶ್ಚರ್ಯದ ಸುದ್ದಿ. ಅಷ್ಟು ಬೇಗನೆ ನಿಮಗೆ ಲೈಸೆನ್ಸ್ ಸಿಕ್ಕಿತಾ? ಡ್ರೈವಿಂಗ್ ಲೈಸೆನ್ಸ ಸಹಾ ಆಯ್ತು.
ಹೀಗೆ ಎರಡು/ಮೂರು ತಿಂಗಳಾದ ನಂತರ ಒಂದು second hand ಕಾರನ್ನೂ ಖರಿದಿಸಿಯಾಯ್ತು. ಸುಮ್ಮನೆ ಅಲ್ಲಿ ಇಲ್ಲಿ ತಿರುಗಾಡಲು. ನೈಜೇರಿಯಾ ದಲ್ಲಿ ಇದ್ದಂತೆ ದುಬೈಯಲ್ಲಿ ಕಾರು ಚಾಲನೆ ಮಾಡುವುದು ರಸ್ತೆಯ ಬಲಭಾಗದಲ್ಲಿ.ಅದು ಅಭ್ಯಾಸ ಬಲದಿಂದ ಕೂಡಲೇ ಅನುಭವಕ್ಕೆ ಬರುತ್ತದೆ.
ಸಮಯ ಕಳೆಯಲು ಅಂಥಹ ಹವ್ಯಾಸ ಏನೂ ಇದ್ದಿರಲಿಲ್ಲ. ಪ್ರಸಾದ್ ಅವರ ಮನೆಗೆ ಆಗಾಗ ಭೇಟಿ. ಅವರೊಂದಿಗೆ ಕೆಲವೊಮ್ಮೆ ಸತ್ಸಂಗಕ್ಕೆ ಹಾಜರಿ. ಇತರ ಸ್ನೇಹಿತರುಗಳ ಭೇಟಿ. ಪ್ರಥಮವಾಗಿ ಭೇಟಿಯಾದವರಲ್ಲಿ ಜಗದೀಶ್ ಶೆಟ್ಟಿ, ಪಿ.ಎಸ.ರಾವ್, ಡಾ. ಮೋಹನ್, ಪ್ರಭಾಕರ ಉಪಾಧ್ಯ.
ಊರಲ್ಲಿ ನಳಿನಿ ಬಿ.ಎಡ್. ಕಾಲೇಜು, ರವಿ little rock ಶಾಲೆ. 1986 ರ ದಶಂಬರ ರಜೆಗೆ 10 ದಿನಗಳಿಗೆ ಊರಿಗೆ ಹೋಗಿ ಬಂದಾಯ್ತು. ಪುನ ಶಾಲೆಯ ಎಂದಿನಂತೆ ಕಾಯಕ.
1987 ರ ಜುಲೈ ತಿಂಗಳಲ್ಲಿ ಊರಿಗೆ ಹೋಗುವ ಹೋಗುವ ಸಂಭ್ರಮ.
ಮುಂದುವರಿಯುವುದು ....ಭಾಗ 8
No comments:
Post a Comment