Monday, 31st August 2020
ಬಿ.ಜಿ. ಮೋಹನದಾಸರು (ಬೀಜಿ ಎಂದು ಹೆಸರುವಾಸಿ) ಸುಮಾರು 30 ವರ್ಷಗಳಿಂದ ಪರಿಚಯ, ತೊಂಬತ್ತರ ದಶಕದಲ್ಲಿ ನಾನು ದುಬೈಯಲ್ಲಿ ಕೆಲಸ ಮಾಡುತ್ತಿರುವಾಗ, ಕರ್ನಾಟಕ ಸಂಘ, ದುಬೈ ಯ ಕಾರ್ಯಕ್ರಮಗಳಿಗೆ ಹಾಜರಗುತಿದ್ದ ಸಮಯ. ಹೀಗೆ ಪರಿಚಯವಾಗಿ ಆತ್ಮೀಯರೂ ಆದೆವು. ನಂತರ 1990 -91 ಸಮಯದ ಕರ್ನಾಟಕ ಸಂಘದ ಕಾರ್ಯಕಾರಿಣಿ ಸಮಿತಿಯ ಸದಸ್ಯರನ್ನಾಗಿ ಮಾಡಿ ಅದರ ಕಾರ್ಯದರ್ಶಿಯನ್ನಾಗಿ ಸಹಾ ನೇಮಕವಾಯಿತು.
ಹಿಂದಿನ ವರ್ಷ ಬೀಜಿಯವರು ಸಂಘದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.
ಹೀಗೆ ಅವರ ಪರಿಚಯ, ಒಡನಾಟ, ಸಂಘದ ಚಟುವಟಿಕೆಗಳಲ್ಲಿ ಒಟ್ಟಾಗಿ ಸಹಕರಿಸುವುದು, ಆಗಿದ್ದು ಅತ್ಮೀಯರಾಗಿದ್ದೆವು. ಹಲವು ಬಾರಿ ಬಿನ್ನಾಭಿಪ್ರಾಯದಿಂದ ಮುನಿಸು ಕೊಂಡದ್ದೂ ಇದೆ. ಅದರೂ ಮುಂದಿನ ಸಭೆಯಲ್ಲಿ ಆತ್ಮೀಯರಾಗಿ ಚರ್ಚೆ ಮಾಡಿದ್ದೂ ಇದೆ.
ನಂತರವೂ ಹಲವಾರು ವರ್ಷಗಳ ಕಾಲ ಸಂಘದ ಸಾಮಾನ್ಯ ಸದಸ್ಯರಾಗಿಯೂ, ಮಡದಿ ನಳಿನಿಯವರು ಕಾರ್ಯಕಾರಿ ಸಮಿತಿಯಲ್ಲಿದ್ದು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಚಿರಪರಿಚಿತರಾಗಿದ್ದೆವು.
ಅವರ ಮಡದಿ ಯಶೋದ, ಮಕ್ಕಳು ಅಖಿಲ್ ಹಾಗೂ ಯಶಸ್ವಿ ಪರಿಚಿತರು.
ಸುಮಾರು ಎಂಟು/ಒಂಬತ್ತು ವರ್ಷಗಳ ಹಿಂದೆ ಅವರು ವಾಪಸ್ಸು ದುಬೈಯಿಂದ ತಾಯ್ನಾಡಿಗೆ ಮರಳಿ, ಮಣಿಪಾಲದಲ್ಲಿ ಒಳ್ಳೆಯ ಮನೆಯೊಂದನ್ನು ಕಟ್ಟಿ ಅಲ್ಲಿ ವಾಸವಾಗಿದ್ದರು. ಎರಡು ವರ್ಷಗಳ ಹಿಂದೆ ನಾವು ಊರಿಗೆ ಹೋಗಿದ್ದಾಗ ಅವರ ಮನೆಗೆ ಭೇಟಿಗೂ ಹೋಗಿದ್ದೆವು.
ನಿನ್ನೆಯಷ್ಟೇ ವಾಟ್ಸ್ ಅಪ್ ಮೂಲಕ ಬಂದ ಸಂದೇಶದಿಂದ "ಅವರು ಇನ್ನಿಲ್ಲ" ಎಂದು ತಿಳಿದು ದುಃಖವಾಯಿತು.
ಸಂದೇಶ:
ವಿಶ್ವ ಕನ್ನಡಿಗರ ಆತ್ಮೀಯರಾದ ಬೀಜಿ ಇನ್ನಿಲ್ಲ.
ವಿಶ್ವದಾದ್ಯಂತ ನೆಲೆಸಿರುವ ಸಮಸ್ತ ಕನ್ನಡಿಗರ ಆತ್ಮೀಯರಾಗಿದ್ದ ಶ್ರೀ ಬಿ. ಜಿ. ಮೋಹನ್ ದಾಸ್ ಆಗಸ್ಟ್ 31ನೇ ತಾರೀಕು ಈ ದಿನ ಮಧ್ಯಾಹ್ನ 1.45 ಕ್ಕೆ ತಮ್ಮ 70ನೇ ವಯಸ್ಸಿನಲ್ಲಿ ಇಹಲೋಕವನ್ನು ತ್ಯಜಿಸಿದ್ದಾರೆ.
ಮಣಿಪಾಲ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಚಿಕಿತ್ಸೆಯಲ್ಲಿ ಐ. ಸಿ. ಯು. ನಲ್ಲಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದ ಬೀಜಿಯವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಪತ್ನಿ, ಮಗ, ಸೊಸೆ, ಮಗಳು ಮತ್ತು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿರುವ ಮಹಾ ಚೇತನಕ್ಕೆ ಪರಮಾತ್ಮನು ಚಿರಶಾಂತಿ ಕರುಣಿಸಲಿ ಎಂದು ನಮ್ಮೆಲ್ಲರ ಪ್ರಾರ್ಥನೆಗಳು.
ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸೋಣ.
Sorry to inform you that our close friend BG Mohandas popularly known as Beeji is no more. He was the Former President of Dubai Karnataka Sangha and had worked for the welfare of UAE KANNADIGAS. Founder of several websites Gulfkannadiga.com, devadiga.com & Byndoor.com. Born in 1950 in Bijoor of Kundapura and he was a very good social worker. I knew him personally and he was the main man to start "Gulf Vartha Sanchay" of UDAYAVANI daily. Well known Kannada activist, Karnataka State Rajyotsava Awardee, he was the winner of Vishwa Manava Award, Da Ra Bendre Award of Abu Dhabi Karnataka Sangha & Mayura Award of Sharjah Karnataka Sangha. He got married to Lns Yashoda in 1986 and the couple has 2 children, son Akil and daughter Yashaswi. Our heartfelt condolences to his bereaved family and may his departed soul rest in eternal peace.
ಈರಣ್ಣ ಮೂಲಿಮನಿ:
ಶಾಕಿಂಗ್ ನ್ಯೂಸ್.
ಕೇಳಿ ಶಾಕ್ ಆಯ್ತು.
ಬೀಜಿಯವರಿಗೆ ವಾರದ ಹಿಂದೆ ಕರೆ ಮಾಡಿದ್ದೆ.ಕರೆಗೆ ಸಿಗಲಿಲ್ಲ.
"ಗಲ್ಫ ಕನ್ನಡಿಗ" ಬೀಜಿ ವಿದೇಶದ ಕನ್ನಡಿಗರ ಆಸ್ತಿ ಆಗಿದ್ರು.
"ಶಿವಸಾಯುಜ್ಯ" ಸೇರಿದ ವಿಷಯ ತಿಳಿದು ಬೇಸರ ಆಯ್ತು. ಆ ದಿವ್ಯಾತ್ಮಕ್ಕೆ ದೇವರು
ಚಿರಶಾಂತಿ ನೀಡಲಿ.
ನೊಂದ ಮನದೊಂದಿಗೆ...
ಈರಣ್ಣ ಮೂಲೀಮನಿ.
ನಿತ್ಯಾನಂದ ಬೆಸ್ಕುರ್:
ಪಂಚ ಭೂತಗಳಲ್ಲಿ ಲೀನರಾದ ಸಮಾಜದ ಹಿರಿಯ ಚೇತನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಬಿ. ಜಿ ಮೋಹನ್ ದಾಸ್
ಬಿ. ಜಿ ಮೋಹನದಾಸ್ ಅವರ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರಾದ ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಅರೆಕಲ್ಲಿನಲ್ಲಿ ನೆರವೇರಿತು.ಅವರ ಆಶೆಯಂತೆ ತಂದೆ-ತಾಯಿ ಸಮಾಧಿ ಪಕ್ಕದಲ್ಲೇ ಚಿತೆ ಸಿದ್ದಪಡಿಸಲಾಗಿತ್ತು. ಅವರ ಪುತ್ರ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯ ಸಂಸ್ಕಾರ ನೆರವೇರಿಸಿದರು.
ಈ ಸಂಧರ್ಭದಲ್ಲಿ ಉಪ್ಪುಂದ ದೇವಾಡಿಗರ ಸಂಘದ ಅಧ್ಯಕ್ಷರಾದ ಮಾಧವ ದೇವಾಡಿಗ, ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಗೌರಿ ದೇವಾಡಿಗ,ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾದ ಜಗದೀಶ್ ದೇವಾಡಿಗ, ಭಾರತೀಯ ಜನತಾ ಪಾರ್ಟಿ ಬೈಂದೂರು ಬ್ಲಾಕ್ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ. ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಗೋವಿಂದ ಬಾಬು ಪೂಜಾರಿ,ಗಿರೀಶ್ ಬೈಂದೂರು,ಊರಿನ ಹಿರಿಯರು, ಗಣ್ಯರು ಅವರ ಕುಟುಂಬದವರು ಉಪಸ್ಥಿತರಿದ್ದರು.
Thanks to all of you who have sent condolences at this sad time on the demise of my brother .
ಪ್ರಕಾಶ್ ರಾವ್ ಪಯ್ಯಾರ್ ಅವರ ನುಡಿ ನಮನ
ಕನ್ನಡ ಮನಸ್ಸು ಗಳನ್ನು ಜೋಡಿಸಿದ- ಬೀಜಿ
ಕನ್ನಡ ಮನಸ್ಸು ಗಳನ್ನು ಜೋಡಿಸುವ, ಸೇರಿಸುವ ಅಪರೂಪದ ಕೆಲಸದ ಹೆಸರು "ಗಲ್ಫ಼್ ಕನ್ನಡಿಗ". ಇದರ ರೂವಾರಿ ಬಿ.ಜಿ.ಮೋಹನದಾಸ್. ಬೀಜಿ ಎಂದೆ ಗಲ್ಫ಼್ ಕನ್ನಡಿಗರ ನಡುವೆ ಗುರುತಿಸಿಕೊಳ್ಳುತಿದ್ದ ಇವರನ್ನು ನಾನು ಮೊದಲು ಸಂಪರ್ಕಿಸಿದ್ದು ದಶಕಗಳ ಹಿಂದೆ ೨೦೦೩ ರಲ್ಲಿ. ಧ್ವನಿ ಪ್ರತಿಷ್ಠಾನದ ವತಿಯಿಂದ ನನ್ನ ಸಂಪಾದಕತ್ವದಲ್ಲಿ ಪ್ರಕಟ ಗೊಂಡಿರುವ ಅನಿವಾಸಿ ಕನ್ನಡಿಗರ ಕವನ ಸಂಕಲನವೊಂದರ ಬಿಡುಗಡೆಗೆ ಮುಖ್ಯ ಅತಿಥಿಯಾಗಿ ಕಾರ್ಯಕ್ರಮ ನೆರವೇರಿಸಿ ಹೊತ್ತಿಗೆ ಬಿಡುಗಡೆ ಮಾಡಿ ಕೊಡಿ ಎಂಬ ಆಶಯದೊಂದಿಗೆ ಅವರನ್ನು ಅಹ್ವಾನಿಸಲು ಭೇಟಿ ಯಾಗಿದ್ದೆ. ಆಶ್ಚರ್ಯವೆಂದರೆ ಅವರು ನಮ್ಮ ವಿನಂತಿಯನ್ನು ನಯವಾಗಿ ತಳ್ಳಿ ಹಾಕಿ ತನಗಿಂತಲು ಯೋಗ್ಯರು ಇದ್ದಾರೆ ಅವರನ್ನು ಆಹ್ವಾನಿಸಿ ಎಂದು ಸಲಹೆ ನೀಡಿದ್ದರು. ಈ ಘಟನೆ ಆವರ ಸರಳತೆ, ಸಜ್ಜನಿಕೆಗೆ ಹಿಡಿದ ಕನ್ನಡಿ.
ಕನ್ನಡಿಗರಿಗೆ ಇವನಾರವ ಇವನಾರವ ಎಂದು ಕೇಳದೆ ಇವ ನಮ್ಮವ ಇವ ನಮ್ಮವ ಎಂದು ಹೇಳಿ ಕೊಳ್ಳಲು ಯು.ಎ.ಇ.ಯಲ್ಲಿ ಅಸ್ತಿತ್ವಕ್ಕೆ ಬಂದ ಗಲ್ಫ಼್ ಕನ್ನಡಿಗ ಗಲ್ಫ಼್ ನ ಎಲ್ಲಾ ರಾಷ್ಟ್ರದೊಂದಿಗೆ ವಿಶ್ವದ ಎಲ್ಲಾ ಕನ್ನಡಿಗರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಗರಿಮೆ ಗೆ ಪಾತ್ರವಾಗಿದೆ. ಈ ಪ್ರದೇಶದಲ್ಲಿ ನಡೆಯುವ ಸಾಹಿತ್ಯ, ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಯಾವುದೆ ಮಹತ್ವ ಕರ್ನಾಟಕದ ವೃತ್ತ ಪತ್ರಿಕೆ ಗಳಿಂದ ದೊರೆಯದಿದ್ದಾಗ ಪ್ರೋತ್ಸಾಹಿಸಿದ ಹೆಗ್ಗಳಿಕೆ ಗಲ್ಫ಼್ ಕನ್ನಡಿಗ ಕ್ಕೆ ಸಲ್ಲುತ್ತದೆ. ಗಲ್ಫ಼್ ಕನ್ನಡಿಗ ಇಲ್ಲಿ ನೆಲೆಸಿರುವ ಕನ್ನಡಿಗರ ರಾಯಭಾರಿ ಹಾಗು ಚರಿತ್ರೆಯ ಪುಟಗಳು ಅಗಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಕಳೆದ ಹಲವಾರು ವರ್ಷಗಳಿಂದ ಈ ಪ್ರದೇಶದಲ್ಲಿ ನಡೆದ ಕನ್ನಡ ಚಟುವಟಿಕೆಗಳ ವರದಿ ಅದರಲ್ಲಿ ದಾಖಲೆಗೊಂಡಿದೆ. ಪತ್ರಿಕೆಗೆ ಬಿಜಿ ತನ್ನ ಸ್ವಂತ ಅದಾಯವನ್ನು ಧಾರೆ ಎರೆದು ಅಹೊರಾತ್ರಿ ದುಡಿದಿದ್ದಾರೆ ಎಂಬ ಮಾತನ್ನು ಅಲ್ಲಗಳೆಯಲಾಗುವುದಿಲ್ಲ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯಲ್ಲದೆ ಹಲವಾರು ಇತರ ಪ್ರಶಸ್ತಿಗಳಿಗೆ ಭಾಜಕರಾಗಿದ್ದ ಬೀಜಿ ಅವರು ಧ್ವನಿ ಪ್ರತಿಷ್ಠಾನದ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭದಲ್ಲಿ (೨೦೧೧) ಪ್ರತಿಷ್ಠಿತ ’ಧ್ವನಿ ಪುರಸ್ಕಾರ’ವನ್ನು ಅತಿಥಿಗಳಾದ ಅಂದಿನ ಇಂಧನ ಸಚಿವೆ ಕು. ಶೋಭಾ ಕರಂದ್ಲಾಜೆ ಅವರಿಂದ ಸ್ವೀಕರಿಸಿದ್ದರು. ಇಂದು ನಮ್ಮನ್ನಗಲಿದ ಅವರಿಗೆ ಧ್ವನಿ ಪ್ರತಿಷ್ಠಾನದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ.
ಪ್ರಕಾಶ್ ರಾವ್ ಪಯ್ಯಾರ್
ಅಧ್ಯಕ್ಷರು ಮತ್ತು ಸದಸ್ಯರು
ಧ್ವನಿ ಪ್ರತಿಷ್ಠಾನ
ಇನ್ನೊಮ್ಮೆ ಶ್ರೀ ಬೀಜಿಯವರ ಆತ್ಮಕ್ಕೆ ಆ ಭಗವಂತನು ಚಿರಶಾಂತಿಯನ್ನು ನೀಡಲಿ.
ಬರೆದಿರುವುದು: ಮಂಗಳವಾರ, ಸಪ್ಟಂಬರ 1, 2020
ಬಿ.ಜಿ. ಮೋಹನದಾಸ್ (ಬೀಜಿ) |
1990 -91 ಕಾರ್ಯಕಾರಿ ಸಮಿತಿ ಸದಸ್ಯರು. |
ಹೀಗೆ ಅವರ ಪರಿಚಯ, ಒಡನಾಟ, ಸಂಘದ ಚಟುವಟಿಕೆಗಳಲ್ಲಿ ಒಟ್ಟಾಗಿ ಸಹಕರಿಸುವುದು, ಆಗಿದ್ದು ಅತ್ಮೀಯರಾಗಿದ್ದೆವು. ಹಲವು ಬಾರಿ ಬಿನ್ನಾಭಿಪ್ರಾಯದಿಂದ ಮುನಿಸು ಕೊಂಡದ್ದೂ ಇದೆ. ಅದರೂ ಮುಂದಿನ ಸಭೆಯಲ್ಲಿ ಆತ್ಮೀಯರಾಗಿ ಚರ್ಚೆ ಮಾಡಿದ್ದೂ ಇದೆ.
ನಂತರವೂ ಹಲವಾರು ವರ್ಷಗಳ ಕಾಲ ಸಂಘದ ಸಾಮಾನ್ಯ ಸದಸ್ಯರಾಗಿಯೂ, ಮಡದಿ ನಳಿನಿಯವರು ಕಾರ್ಯಕಾರಿ ಸಮಿತಿಯಲ್ಲಿದ್ದು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಚಿರಪರಿಚಿತರಾಗಿದ್ದೆವು.
ಅವರ ಮಡದಿ ಯಶೋದ, ಮಕ್ಕಳು ಅಖಿಲ್ ಹಾಗೂ ಯಶಸ್ವಿ ಪರಿಚಿತರು.
ಮಣಿಪಾಲದಲ್ಲಿ ಬೀಜಿಯವರ ಮನೆಗೆ ಭೇಟಿ ನೀಡಿದ ಸಂದರ್ಭ ದಶಂಬರ 2016 |
ನಿನ್ನೆಯಷ್ಟೇ ವಾಟ್ಸ್ ಅಪ್ ಮೂಲಕ ಬಂದ ಸಂದೇಶದಿಂದ "ಅವರು ಇನ್ನಿಲ್ಲ" ಎಂದು ತಿಳಿದು ದುಃಖವಾಯಿತು.
ಸಂದೇಶ:
ವಿಶ್ವ ಕನ್ನಡಿಗರ ಆತ್ಮೀಯರಾದ ಬೀಜಿ ಇನ್ನಿಲ್ಲ.
ವಿಶ್ವದಾದ್ಯಂತ ನೆಲೆಸಿರುವ ಸಮಸ್ತ ಕನ್ನಡಿಗರ ಆತ್ಮೀಯರಾಗಿದ್ದ ಶ್ರೀ ಬಿ. ಜಿ. ಮೋಹನ್ ದಾಸ್ ಆಗಸ್ಟ್ 31ನೇ ತಾರೀಕು ಈ ದಿನ ಮಧ್ಯಾಹ್ನ 1.45 ಕ್ಕೆ ತಮ್ಮ 70ನೇ ವಯಸ್ಸಿನಲ್ಲಿ ಇಹಲೋಕವನ್ನು ತ್ಯಜಿಸಿದ್ದಾರೆ.
ಮಣಿಪಾಲ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಚಿಕಿತ್ಸೆಯಲ್ಲಿ ಐ. ಸಿ. ಯು. ನಲ್ಲಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದ ಬೀಜಿಯವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಪತ್ನಿ, ಮಗ, ಸೊಸೆ, ಮಗಳು ಮತ್ತು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿರುವ ಮಹಾ ಚೇತನಕ್ಕೆ ಪರಮಾತ್ಮನು ಚಿರಶಾಂತಿ ಕರುಣಿಸಲಿ ಎಂದು ನಮ್ಮೆಲ್ಲರ ಪ್ರಾರ್ಥನೆಗಳು.
ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸೋಣ.
ದಶಂಬರ 2019 ರಲ್ಲಿ ಬ್ರಹ್ಮಾವರದಲ್ಲಿ ಒಂದು ಮದುವೆಯ ಸಂದರ್ಭದಲ್ಲಿ ಭೇಟಿಯಾದ ಬೀಜಿ.
ಇತರ ಸಂದೇಶಗಳು:
ಜಯರಾಮ ಸೋಮಯಾಜಿ:
ಆತ್ಮೀಯರಾದ ಬೀಜಿಯವರು ನಮ್ಮನ್ನೆಲ್ಲ ಅಗಲಿದ ಸುದ್ದಿ ಕೇಳಿ ಅತ್ಯಂತ ದುಃಖವಾಯಿತು. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಹಾಗೂ ಅವರ ಕುಟುಂಬದವರಿಗೆ ನೋವನ್ನು ಸಹಿಸುವ ಶಕ್ತಿ ಯನ್ನು ಕರುಣಿಸಲಿ.
ಬೀಜಿಯವರು ಪ್ರಾರಂಬಿಸಿದ ಗಲ್ಫ್ ವಾರ್ತಾ ಸಂಚಯ:
ಅಬುಧಾಬಿಯ ಜನಪ್ರಿಯ ಸರ್ವೋತಮ ಶೆಟ್ಟಿಯವರ ಸಂದೇಶ:ಬೀಜಿಯವರು ಪ್ರಾರಂಬಿಸಿದ ಗಲ್ಫ್ ವಾರ್ತಾ ಸಂಚಯ:
Sorry to inform you that our close friend BG Mohandas popularly known as Beeji is no more. He was the Former President of Dubai Karnataka Sangha and had worked for the welfare of UAE KANNADIGAS. Founder of several websites Gulfkannadiga.com, devadiga.com & Byndoor.com. Born in 1950 in Bijoor of Kundapura and he was a very good social worker. I knew him personally and he was the main man to start "Gulf Vartha Sanchay" of UDAYAVANI daily. Well known Kannada activist, Karnataka State Rajyotsava Awardee, he was the winner of Vishwa Manava Award, Da Ra Bendre Award of Abu Dhabi Karnataka Sangha & Mayura Award of Sharjah Karnataka Sangha. He got married to Lns Yashoda in 1986 and the couple has 2 children, son Akil and daughter Yashaswi. Our heartfelt condolences to his bereaved family and may his departed soul rest in eternal peace.
ಶಾಕಿಂಗ್ ನ್ಯೂಸ್.
ಕೇಳಿ ಶಾಕ್ ಆಯ್ತು.
ಬೀಜಿಯವರಿಗೆ ವಾರದ ಹಿಂದೆ ಕರೆ ಮಾಡಿದ್ದೆ.ಕರೆಗೆ ಸಿಗಲಿಲ್ಲ.
"ಗಲ್ಫ ಕನ್ನಡಿಗ" ಬೀಜಿ ವಿದೇಶದ ಕನ್ನಡಿಗರ ಆಸ್ತಿ ಆಗಿದ್ರು.
"ಶಿವಸಾಯುಜ್ಯ" ಸೇರಿದ ವಿಷಯ ತಿಳಿದು ಬೇಸರ ಆಯ್ತು. ಆ ದಿವ್ಯಾತ್ಮಕ್ಕೆ ದೇವರು
ಚಿರಶಾಂತಿ ನೀಡಲಿ.
ನೊಂದ ಮನದೊಂದಿಗೆ...
ಈರಣ್ಣ ಮೂಲೀಮನಿ.
ನಿತ್ಯಾನಂದ ಬೆಸ್ಕುರ್:
ಪಂಚ ಭೂತಗಳಲ್ಲಿ ಲೀನರಾದ ಸಮಾಜದ ಹಿರಿಯ ಚೇತನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಬಿ. ಜಿ ಮೋಹನ್ ದಾಸ್
ಬಿ. ಜಿ ಮೋಹನದಾಸ್ ಅವರ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರಾದ ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಅರೆಕಲ್ಲಿನಲ್ಲಿ ನೆರವೇರಿತು.ಅವರ ಆಶೆಯಂತೆ ತಂದೆ-ತಾಯಿ ಸಮಾಧಿ ಪಕ್ಕದಲ್ಲೇ ಚಿತೆ ಸಿದ್ದಪಡಿಸಲಾಗಿತ್ತು. ಅವರ ಪುತ್ರ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯ ಸಂಸ್ಕಾರ ನೆರವೇರಿಸಿದರು.
ಈ ಸಂಧರ್ಭದಲ್ಲಿ ಉಪ್ಪುಂದ ದೇವಾಡಿಗರ ಸಂಘದ ಅಧ್ಯಕ್ಷರಾದ ಮಾಧವ ದೇವಾಡಿಗ, ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಗೌರಿ ದೇವಾಡಿಗ,ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾದ ಜಗದೀಶ್ ದೇವಾಡಿಗ, ಭಾರತೀಯ ಜನತಾ ಪಾರ್ಟಿ ಬೈಂದೂರು ಬ್ಲಾಕ್ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ. ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಗೋವಿಂದ ಬಾಬು ಪೂಜಾರಿ,ಗಿರೀಶ್ ಬೈಂದೂರು,ಊರಿನ ಹಿರಿಯರು, ಗಣ್ಯರು ಅವರ ಕುಟುಂಬದವರು ಉಪಸ್ಥಿತರಿದ್ದರು.
Thanks to all of you who have sent condolences at this sad time on the demise of my brother .
ಪ್ರಕಾಶ್ ರಾವ್ ಪಯ್ಯಾರ್ ಅವರ ನುಡಿ ನಮನ
ಕನ್ನಡ ಮನಸ್ಸು ಗಳನ್ನು ಜೋಡಿಸಿದ- ಬೀಜಿ
ಕನ್ನಡ ಮನಸ್ಸು ಗಳನ್ನು ಜೋಡಿಸುವ, ಸೇರಿಸುವ ಅಪರೂಪದ ಕೆಲಸದ ಹೆಸರು "ಗಲ್ಫ಼್ ಕನ್ನಡಿಗ". ಇದರ ರೂವಾರಿ ಬಿ.ಜಿ.ಮೋಹನದಾಸ್. ಬೀಜಿ ಎಂದೆ ಗಲ್ಫ಼್ ಕನ್ನಡಿಗರ ನಡುವೆ ಗುರುತಿಸಿಕೊಳ್ಳುತಿದ್ದ ಇವರನ್ನು ನಾನು ಮೊದಲು ಸಂಪರ್ಕಿಸಿದ್ದು ದಶಕಗಳ ಹಿಂದೆ ೨೦೦೩ ರಲ್ಲಿ. ಧ್ವನಿ ಪ್ರತಿಷ್ಠಾನದ ವತಿಯಿಂದ ನನ್ನ ಸಂಪಾದಕತ್ವದಲ್ಲಿ ಪ್ರಕಟ ಗೊಂಡಿರುವ ಅನಿವಾಸಿ ಕನ್ನಡಿಗರ ಕವನ ಸಂಕಲನವೊಂದರ ಬಿಡುಗಡೆಗೆ ಮುಖ್ಯ ಅತಿಥಿಯಾಗಿ ಕಾರ್ಯಕ್ರಮ ನೆರವೇರಿಸಿ ಹೊತ್ತಿಗೆ ಬಿಡುಗಡೆ ಮಾಡಿ ಕೊಡಿ ಎಂಬ ಆಶಯದೊಂದಿಗೆ ಅವರನ್ನು ಅಹ್ವಾನಿಸಲು ಭೇಟಿ ಯಾಗಿದ್ದೆ. ಆಶ್ಚರ್ಯವೆಂದರೆ ಅವರು ನಮ್ಮ ವಿನಂತಿಯನ್ನು ನಯವಾಗಿ ತಳ್ಳಿ ಹಾಕಿ ತನಗಿಂತಲು ಯೋಗ್ಯರು ಇದ್ದಾರೆ ಅವರನ್ನು ಆಹ್ವಾನಿಸಿ ಎಂದು ಸಲಹೆ ನೀಡಿದ್ದರು. ಈ ಘಟನೆ ಆವರ ಸರಳತೆ, ಸಜ್ಜನಿಕೆಗೆ ಹಿಡಿದ ಕನ್ನಡಿ.
ಕನ್ನಡಿಗರಿಗೆ ಇವನಾರವ ಇವನಾರವ ಎಂದು ಕೇಳದೆ ಇವ ನಮ್ಮವ ಇವ ನಮ್ಮವ ಎಂದು ಹೇಳಿ ಕೊಳ್ಳಲು ಯು.ಎ.ಇ.ಯಲ್ಲಿ ಅಸ್ತಿತ್ವಕ್ಕೆ ಬಂದ ಗಲ್ಫ಼್ ಕನ್ನಡಿಗ ಗಲ್ಫ಼್ ನ ಎಲ್ಲಾ ರಾಷ್ಟ್ರದೊಂದಿಗೆ ವಿಶ್ವದ ಎಲ್ಲಾ ಕನ್ನಡಿಗರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಗರಿಮೆ ಗೆ ಪಾತ್ರವಾಗಿದೆ. ಈ ಪ್ರದೇಶದಲ್ಲಿ ನಡೆಯುವ ಸಾಹಿತ್ಯ, ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಯಾವುದೆ ಮಹತ್ವ ಕರ್ನಾಟಕದ ವೃತ್ತ ಪತ್ರಿಕೆ ಗಳಿಂದ ದೊರೆಯದಿದ್ದಾಗ ಪ್ರೋತ್ಸಾಹಿಸಿದ ಹೆಗ್ಗಳಿಕೆ ಗಲ್ಫ಼್ ಕನ್ನಡಿಗ ಕ್ಕೆ ಸಲ್ಲುತ್ತದೆ. ಗಲ್ಫ಼್ ಕನ್ನಡಿಗ ಇಲ್ಲಿ ನೆಲೆಸಿರುವ ಕನ್ನಡಿಗರ ರಾಯಭಾರಿ ಹಾಗು ಚರಿತ್ರೆಯ ಪುಟಗಳು ಅಗಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಕಳೆದ ಹಲವಾರು ವರ್ಷಗಳಿಂದ ಈ ಪ್ರದೇಶದಲ್ಲಿ ನಡೆದ ಕನ್ನಡ ಚಟುವಟಿಕೆಗಳ ವರದಿ ಅದರಲ್ಲಿ ದಾಖಲೆಗೊಂಡಿದೆ. ಪತ್ರಿಕೆಗೆ ಬಿಜಿ ತನ್ನ ಸ್ವಂತ ಅದಾಯವನ್ನು ಧಾರೆ ಎರೆದು ಅಹೊರಾತ್ರಿ ದುಡಿದಿದ್ದಾರೆ ಎಂಬ ಮಾತನ್ನು ಅಲ್ಲಗಳೆಯಲಾಗುವುದಿಲ್ಲ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯಲ್ಲದೆ ಹಲವಾರು ಇತರ ಪ್ರಶಸ್ತಿಗಳಿಗೆ ಭಾಜಕರಾಗಿದ್ದ ಬೀಜಿ ಅವರು ಧ್ವನಿ ಪ್ರತಿಷ್ಠಾನದ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭದಲ್ಲಿ (೨೦೧೧) ಪ್ರತಿಷ್ಠಿತ ’ಧ್ವನಿ ಪುರಸ್ಕಾರ’ವನ್ನು ಅತಿಥಿಗಳಾದ ಅಂದಿನ ಇಂಧನ ಸಚಿವೆ ಕು. ಶೋಭಾ ಕರಂದ್ಲಾಜೆ ಅವರಿಂದ ಸ್ವೀಕರಿಸಿದ್ದರು. ಇಂದು ನಮ್ಮನ್ನಗಲಿದ ಅವರಿಗೆ ಧ್ವನಿ ಪ್ರತಿಷ್ಠಾನದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ.
ಪ್ರಕಾಶ್ ರಾವ್ ಪಯ್ಯಾರ್
ಅಧ್ಯಕ್ಷರು ಮತ್ತು ಸದಸ್ಯರು
ಧ್ವನಿ ಪ್ರತಿಷ್ಠಾನ
ಇನ್ನೊಮ್ಮೆ ಶ್ರೀ ಬೀಜಿಯವರ ಆತ್ಮಕ್ಕೆ ಆ ಭಗವಂತನು ಚಿರಶಾಂತಿಯನ್ನು ನೀಡಲಿ.
ಬರೆದಿರುವುದು: ಮಂಗಳವಾರ, ಸಪ್ಟಂಬರ 1, 2020
No comments:
Post a Comment