Wednesday, August 5, 2020

ಶ್ರೀ ರಾಮ ಜನ್ಮ ಭೂಮಿ - ಭೂಮಿ ಪೂಜೆ

ಅಗಸ್ಟ್ 5, 2020,
ರಾಮ ಜನ್ಮ ಭೂಮಿಯ ಭೂಮಿ ಪೂಜೆ, 
ಅಯೋಧ್ಯ, ಉತ್ತರ ಪ್ರದೇಶ.

ಶ್ರೀ ರಾಮಾಯ, ರಾಮ ಭದ್ರಾಯ, ರಾಮಚಂದ್ರಾಯ ವೇದಸೆ, 
ರಘುನಾಥಾಯ ನಾಥಾಯ. ಸೀತಾಯ ಪತಯೇ ನಮಃ 


ಶ್ರೀ ರಾಮ ರಾಮ  ರಾಮೇತಿ, ರಮೆ ರಾಮೇ ಮನೋರಮೇ,
ಸಹಸ್ರ ರಾಮ ತತ್ತುಲ್ಯಂ, ರಾಮ ನಾಮ ವರಾನನೇ.


ಇಂದು, ಬುಧವಾರ, ಆಗೋಸ್ಟ್ 5, ನೂರಾರು ವರ್ಷಗಳಿಂದ ವಿವಾದಕ್ಕೆ ಗುರಿಯಾದ "ಶ್ರೀ ರಾಮ ಜನ್ಮ ಭೂಮಿ" ಯು ಸುಪ್ರಿಂ ಕೋರ್ಟಿನಿಂದ ತಿರ್ಮಾನವಾದ ಸ್ಥಳ, ಭೂಮಿ ಪೂಜೆಯನ್ನು ಕಾಣುತ್ತಿದೆ. ಭವ್ಯತೆ, ಧನ್ಯತೆಯ ಭಾವ ತುಂಬಿರುವ  ದಿನ ಇದನ್ನು ಸಾಕಾರ ಗೊಳಿಸಲು ಕೇಂದ್ರ ಸರಕಾರ, ಉತ್ತರ ಪ್ರದೇಶ ಸರಕಾರ ಕಟಿಬದ್ಧವಾಗಿದೆ.
ಸುಮಾರು 500 ವರ್ಷಗಳ ಹಿಂದೆ ಮುಸ್ಲಿಂ ದೊರೆ ಬಾಬರನು    ರಾಮ ಜನ್ಮ ಭೂಮಿಯಲ್ಲಿದ್ದ ಮಂದಿರವನ್ನು  ಧ್ವಂಸ ಮಾಡಿ, ಬಾಬ್ರೀ ಮಸಿದಿಯನ್ನು ಕಟ್ಟಿ, ಅ ಸ್ಥಳವು ವಿವಾದದ ಭೂಮಿಯಾಗಿತ್ತು. 1991 ರಲ್ಲಿ ಶ್ರೀ ಲಾಲ್ ಕೃಷ್ಣ ಅಡ್ವಾಣಿ ಯವರ ನೇತ್ರತ್ವ ದಲ್ಲಿ ಬಾಬ್ರೀ  ಮಸೀದಿಯನ್ನು ಒಡೆದು, ಶ್ರೀ ರಾಮ ಲಲ್ಲಾ ಮಂದಿರವನ್ನು ಕಟ್ಟುವ ಪ್ರಯತ್ನ ಮಾಡಲಾಗಿತ್ತು. ಕೋರ್ಟಿನ ವಿಚಾರನೆಯಿಂದಾಗಿ, ಕೊನೆಯ ತೀರ್ಮಾನ ಕಳೆದ ನವಂಬರ್ ತಿಂಗಳಲ್ಲಿ ಹೊರಬಂದು,
ಬಿರ್ತಿಮನೆ , ಬೆಂಗಳೂರು.

ರಾಮ ಮಂದಿರವನ್ನು ಕಟ್ಟಲು ಅವಕಾಶವನ್ನು ಮಾಡಲಾಯಿತು. ಹಿಂದಿನ ಕಾಂಗ್ರಸ್ ಸರಕಾರದ ಹಿಂದೂ ವಿರೋದ ಧೋರಣೆಯಿಂದ ರಾಮ ಮಂದಿರವನ್ನು ಕಟ್ಟಲು ಇಚ್ಚಾ ಶಕ್ತಿ ಇಲ್ಲವಾಯಿತು.  ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಭಾರತೀಯ ಜನತಾ ಪಾರ್ಟಿಯ ಸರಕಾರದ ಸತತ ಪರಿಶ್ರಮದಿಂದ, ಶ್ರೀ ರಾಮ ಜನ್ಮ ಭೂಮಿ ವಿವಾದ ಅಂತ್ಯ ಗೊಂಡಿತು. ಅದರಿಂದಾಗಿ ಭವ್ಯವಾದ ಶ್ರೀರಾಮ ಮಂದಿರವನ್ನು ಕಟ್ಟಲು ಭೂಮಿ ಪೂಜೆಯು ಇಂದು ಅಯೋಧ್ಯೆಯಲ್ಲಿ ನಡೆಯಲಿದೆ. ಇದಕ್ಕೆ ಇಡೀ ದೇಶವೇ ಸಂಭ್ರಮಾಚರಣೆ ಮಾಡುತ್ತಿದೆ. ಮನೆ ಮನೆಗಳಲ್ಲಿ ದೀಪ ಬೆಳಗಿಸಿ, ಭಜನೆ ಮೂಲಕ ರಾಮ ನಾಮ ವನ್ನು ಹಾಡಲಿದ್ದಾರೆ.



ಅಯೋಧ್ಯೆ ಪ್ರವಾಸ, ಫೆಬ್ರವರಿ 2019 

2019 ರ ಫೆಬ್ರವರಿ ತಿಂಗಳಲ್ಲಿ ವಾರಾಣಸಿ ಪ್ರವಾಸಕ್ಕೆ ಹೋದಾಗ ಅಯೋಧ್ಯೆಗೂ ಹೋಗಿ ಒಂದು ರಾತ್ರಿ ಅಲ್ಲಿ ಇದ್ದು, ಮಾರನೇ ದಿನ ಸರಯೂ ನದಿಯಲ್ಲಿ ಸ್ನಾನ ಮಾಡಿ, ಶ್ರೀರಾಮ ಜನ್ಮ ಭೂಮಿಗೆ ಭೇಟಿ ಮಾಡಿದ್ದೆವು. ಆಗಿನ ಸ್ಥಳ ಒಂದು ಸಣ್ಣ ಡೇರೆಯಲ್ಲಿ ಇದ್ದು, ಅದರ ದರ್ಶನ ಪಡೆಯಲು ಹಲವಾರು security check ಗಳನ್ನೂ ದಾಟಿ, ಪಂಜರದ ಒಳಗೆ ಸಾಲಿನಲ್ಲಿ ಹೋಗಬೇಕಾಗಿತ್ತು. ಮೇಲಿನದ್ದೆಲ್ಲ ಹಳೆಯ ನೆನಪು.





ಇಂದು, ಏನೋ ಒಂದು ತರದ ಸಂಭ್ರಮ, ಸಡಗರ, ದೇಶದ, ಹಿಂದೂ ಸಮಾಜದ, ಸನಾತನ ಧರ್ಮದ ಸಾಧನೆ. ಮನೆ ಮನೆಗಳಲ್ಲಿ ದೀಪವನ್ನು ಬೆಳಗಿ, ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದೊಂದಿಗೆ ನಾವೂ ಭಾಗಿಯಗಿದ್ದೆವೋ ಎನ್ನುವ ಭಾವನೆ. ಆಲ್ಲಿ ನಡೆಯುತ್ತಿರುವ ಭೂಮಿ ಪೂಜೆ ಕಾರ್ಯಕ್ರಮವನ್ನು ಟಿ.ವೀ ಯಲ್ಲಿ ಕಣ್ತುಂಬಿ ನೋಡಿ ಕೊಂಡಾಯಿತು. ಪ್ರಧಾನಿ ನರೇಂದ್ರ ಮೋದಿಯವರ ಶ್ರದ್ಧೆ, ಪರಿಶ್ರಮ, ಭದ್ದತೆ ನಿಜಕ್ಕೂ ಶ್ಲಾಘನೀಯ. ಅಪ್ಪಟ ದೇಶಭಕ್ತನಾಗಿ, ಅವರ ಭಾಷಣದಲ್ಲಿ ಶ್ರೀ ರಾಮನ ಗುಣಗಾನ, ಭಾರತೀಯ ಸಂಸ್ಕೃತಿ, ಪರಂಪರೆ, ಆದರ್ಶ, ಎಲ್ಲವೂ ಅನುಕರಣೀಯ. ಅದ್ಭುತ.




ಸಂಜೆ ಸುಮಾರು ಒಂದು ಗಂಟೆಯ ಕಾಲ ರಾಮ ಭಜನೆಯನ್ನು ಮಾಡಲಾಯಿತು. ಅಮ್ಮ, ರಿಷಿ, ಕವಿತಾ ಅವರೂ ಭಜನೆಯಲ್ಲಿ ಪಾಲ್ಗೊಂಡಿದ್ದರು.


ಅದೊಂದು ಸುದಿನ. 2023 ರಲ್ಲಿ ಐಶ್ವ ವಿಖ್ಯಾತ ರಾಮ ಮಂದಿರ ಅಯೋಧ್ಯೆಯಲ್ಲಿ ಪೂರ್ಣ ಗೊಳ್ಳಲಿದೆ ಎಂಬ ಭರವಸೆ ಇದೆ. ಇದು ನಿರ್ವಿಘ್ನವಾಗಿ ನೆರವೇರಲಿ ಎಂದು ನಮ್ಮೆಲ್ಲರ ಪ್ರಾರ್ಥನೆ. ಮುಂದೊಂದು ದಿನ ಆ ಮಂದಿರವನ್ನು ನೋಡುವ ಭಾಗ್ಯ ನಮ್ಮದಾಗಲಿ ಎಂಬ ಆಶಯ.


ಬರೆದಿರುವುದು  6 ಆಗೋಸ್ಟ್ 2020

No comments:

Post a Comment