Sunday, December 27, 2020

ಸಂಬಂಧಗಳು ಮಧುರವಾಗಿರಲಿ

ಸೋಮವಾರ, 28 ದಶಂಬರ 2020 

 ಸಂಬಂಧಗಳು ಮಧುರವಾಗಿರಲಿ


ಮನೆಯ ಒಳಗೆ ಹಾಗೂ ಹೊರಗೆ ಸಂಬಂಧಗಳನ್ನು ಮಧುರವಾಗಿರಿಸಿಕೊಳ್ಳಲು ಸೂತ್ರಗಳು...

🔸ನಾನೇ ದೊಡ್ಡವನು, ನಾನೇ ಹೆಚ್ಚು ತಿಳಿದವನು, ನನಗಿಂತ ಉತ್ತಮವಾದವರು ಇಲ್ಲ ಎನ್ನುವ ಅಹಂಕಾರ ಬಿಡಿ.

🔹ಮುಂದೆ ಆಗುವ ಪರಿಣಾಮವನ್ನು ಯೋಚಿಸದೇ, ವಿಷಯಕ್ಕೆ ಸಂಬಂಧಿಸದ, ಅರ್ಥವಿಲ್ಲದ ಮಾತುಗಳನ್ನು ಆಡಬೇಡಿ.

🔸 ನಾನು ಸರಿ; ನಾನು ಹೇಳುವುದೇ ಸರಿ; ನಾನು ಮಾಡಿದ್ದೇ ಸರಿ ಎಂದು ವಾದ ಮಾಡಬೇಡಿ.

🔹  ಸಂಬಂಧ ಪಡದವರ ಜೊತೆಯಲ್ಲಿ ಸಂಬಂಧ ಪಡದ ವಿಷಯಗಳನ್ನು ಮಾತನಾಡಬೇಡಿ.

🔸 ಮಿತಿಗಿಂತ ಅತಿಯಾಗಿ, ಅವಶ್ಯಕತೆಗಿಂತ ಅಧಿಕವಾಗಿ ಆಸೆ ಪಡಬೇಡಿ.

🔹 ಬೇರೆಯವರ ಕೆಲಸ ಕಾರ್ಯಗಳನ್ನು ಮತ್ತು ಅಭಿಪ್ರಾಯಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ.

🔸 ಅಸಭ್ಯವಾಗಿ ಮಾತನಾಡುವುದು ಮತ್ತು ಅಸಭ್ಯವಾಗಿ ನಡೆದುಕೊಳ್ಳುವುದು ಬಿಡಿ,

🔹 ನಾಟಕೀಯವಾಗಿ ಮಾತನಾಡುವುದು ಹಾಗೂ ನಾಟಕೀಯವಾಗಿ ನಡೆದುಕೊಳ್ಳುವುದನ್ನು ಬಿಡಿ. 

🔸 ಸಮಸ್ಯೆಗಳು ಎದುರಾದಾಗ ಸೂಕ್ಷ್ಮವಾಗಿ ಪರಿಹಾರ ಹುಡುಕಿಕೊಳ್ಳಿ ಹೊಂದಾಣಿಕೆ ಮಾಡಿಕೊಳ್ಳಿ. 

🔹 ನನ್ನದೇ ನಡೆಯಬೇಕೆಂದು ಹಠ ಹಿಡಿಯಬೇಡಿ. 

🔸 ಕಷ್ಟಗಳಿಂದ ಸಂಪೂರ್ಣವಾಗಿ ತಪ್ಪಿಸಿಕೊಳ್ಳಲಾಗುವುದಿಲ್ಲ; ಅವುಗಳು ಸಹಜವೆಂದು ಒಪ್ಪಿಕೊಂಡು ಅವುಗಳನ್ನು ಅನುಭವಿಸಲು ಮಾನಸಿಕವಾಗಿ ಸಿದ್ಧರಾಗಿರಿ.

🔹 ನೀವು ಕೇಳಿದ ವಿಷಯ ಸತ್ಯವೋ, ಸುಳ್ಳೋ ಎಂದು ವಿಮರ್ಶೆ ಮಾಡದೇ ಇಲ್ಲಿ ಕೇಳಿರುವುದನ್ನು ಅಲ್ಲಿ ಹೇಳಬೇಡಿ.

🔸 ನಗು-ನಗುತ್ತಾ ಮುಕ್ತ ಮನದಿಂದ ಹಿತವಾಗಿ ಇತರರನ್ನು ಮಾತನಾಡಿಸಿ. ಆಡುವ ಮಾತುಗಳನ್ನು ಸರಳವಾಗಿ, ನೇರವಾಗಿ, ಮನಃಪೂರ್ವಕವಾಗಿ ಮಾತನಾಡಿ.

🔹 ಎಲ್ಲರನ್ನು ಗೌರವದಿಂದ ನೋಡಿ; ಬೇರೆಯವರ ಅಭಿಪ್ರಾಯಗಳನ್ನು, ಕೆಲಸಗಳನ್ನು ಗೌರವಿಸಲು ಕಲಿಯಿರಿ.

🔸 ಕಲಹಗಳು, ಸಮಸ್ಯೆಗಳು ಏರ್ಪಟ್ಟಾಗ ಮತ್ತೊಬ್ಬರು ನಿಮ್ಮ ಹತ್ತಿರ ಬರಲಿ ಎಂದು ಕಾಯದೇ ಮಾತನಾಡಲು ನೀವೇ ಮುಂದೆ ಬನ್ನಿ:

🔹 ಇತರರ ಅಲ್ಪದೋಷವನ್ನು ಸಹ ದೊಡ್ಡದು ಮಾಡಬೇಡಿ.

ದೋಷಗಳು ಅಳಿಯಲಿ... ಗುಣಗಳು ಬೆಳೆಯಲಿ.... ಸಂಬಂಧ ಮಧುರವಾಗಿರಲಿ.

No comments:

Post a Comment