ಗುರುವಾರ , 31 - ದಶಂಬರ 2020
ಬಿರ್ತಿಮನೆ ಟೆರೆಸ್ ಕಂಫರ್ಟ್, ಬೆಂಗಳೂರು
2020 ರ ವರ್ಷ ಕಳೆದು, ಹೊಸ ವರ್ಷ 2021 ದ ಆಗಮನದ ಸಂಭ್ರಮ.
ಬಿರ್ತಿಮನೆಯ ಮೇಲ್ಛಾವಣಿಯಲ್ಲಿ ಪಾರ್ಟಿ, ಮಕ್ಕಳು - ರವಿ ವಿದ್ಯಾ, ರಿಷಿ ಕವಿತಾ, ಮತ್ತು ನಾವು.
ಕಳೆದ ವರ್ಷದ ದುರಿತ ದುಮ್ಮಾನಗಳನೆಲ್ಲವನ್ನು ಮರೆತು ಹೊಸ ವರ್ಷದ ಅಗಮನ್ನು ಸಂಭ್ರಮಿಸುವುದು.
ದುಬೈ ಯಲ್ಲಿ ಹಿಂದಿನ ವರ್ಷಗಳಲ್ಲಿ ಸ್ನೇಹಿತ ರೊಡಗೂಡಿ, ಹೊರ ಪ್ರದೇಶಗಳಿಗೆ ಹೋಗಿ, ರಿಸಾರ್ಟ್. ವಿಲ್ಲಗಳಲ್ಲಿ ಸಂಬ್ರಮಿಸಿದ ನೆನಪು.
ಕೊರೋನ ಸಂಕ್ರಾಮಿಕ ವನ್ನು ಮರೆತು, "ನಾಳೆ ನಮ್ಮದು" ಎಂಬ ಸುಬ್ರಾಯ ಚೊಕ್ಕಾಡಿ ಯವರ ಈ ಕೆಳಗಿನ ಕವನದಿಂದ ಮೆರ್ಯೋಣ.
ದುರಿತಗಳ ನದಿಯನ್ನು ಈಜಿ ದಾಟಿದ್ದೇವೆ, ಕಲ್ಲು ಮುಳ್ಳಿನ ಹಾದಿ ತುಳಿದು ಬಂದಿದ್ದೇವೆ,
ನಾವು ಕಟ್ಟಿದ ಮಜಲು ನಮ್ಮ ಕಣ್ಣೆದುರಲ್ಲೇ , ಕುಸಿದು ಬೀಳುವುದನ್ನು ಕಂಡು ನೋಡಿದ್ದೇವೆ,
ನಾವು ಬಗೆದದ್ದೊಂದು, ಇಲ್ಲಿ ನಡೆದದ್ದೊಂದು, ಆದರೂ ಧೃತಿ ಗೆಡದೆ, ಅಳು ನುಂಗಿ, ನಗು ಹೊತ್ತು,
ಕಳೆದ ನಿನ್ನೆಯ ಮರೆತು, ಇಂದಿನೀ ನೆಲೆಯಲ್ಲಿ,, ನಾಳೆ ನಮ್ಮದು ಎಂದು ನಂಬಿ ಹೊರಟಿದ್ದೇನೆ.
ಬಾಳಿಗಿರಲೊಂದು ನಂಬಿಕೆಯೆಂದು ನಿರ್ಧರಿಸಿ, ಹೊಸ ಕನಸು, ಹೊಸ ರೂಪ ತಳೆಯೇ ಕಾದಿದ್ದೇನೆ
ವಿದಾಯ ಹೇಳುವ ಈಗ ಕಳೆದ ಈ ವರ್ಷಕ್ಕೆ, ಸ್ವಾಗತವ ಬಯಸೋಣ ಬರುವ ಹೊಸ ವರ್ಷಕ್ಕೆ.
ಬಹು ಸುಂದರವಾದ ಯೋಚನೆಗಳು, 2021 ರ ವರ್ಷ ಎಲ್ಲರಿಗೂ ಶುಭವನ್ನು ತರಲಿ ಎಂದು ಹಾರೈಸೋಣ.
ಹೊಸ ವರ್ಷದ ಪಾರ್ಟಿಯ ವಿಶೇಷ ಎಂದರೆ "ಅಗ್ನಿ ಕುಂಡ" (Bonfire), ಮತ್ತು ಅದರ ಸುತ್ತ ಸಂಭ್ರಮದ, ಹಾಡಿಗೆ ನೃತ್ಯ. ಎಲ್ಲರಿಗೆ ಹೊಸ ಹುರುಪು,.
ಅಮ್ಮ ತಯಾರಿಸಿದ "ಪುಲಾವ್" ತಿಂದ ಮೇಲೆ, ಹೊಸ ರೀತಿಯ ನೃತ್ಯದ ಪ್ರದರ್ಶನ.
12 ಗಂಟೆಗೆ ಹೊಸ ವರ್ಷದ ಕೇಕ್, ಕತ್ತರಿಸಿ, ಎಲ್ಲರಿಗೂ ಶುಭ ಕೋರಿ, ಪಾರ್ಟಿಯ ಮುಕ್ತಾಯ.
ಎಲ್ಲರಿಗೂ ಹೊಸ ವರ್ಷ 2021 ರ ಹಾರ್ದಿಕ ಶುಭಾಶಯಗಳು.
No comments:
Post a Comment