ಜನವರಿ 3 , 2021
ವಾಟ್ಸ್ ಆಪ್ ನಿಂದ ಬಂದದ್ದು:
ಎಲ್ಲರೂ ಹೇಳ್ತಾ ಇದ್ದಿದ್ದು 2020 ಮರೆಯಲಿಕ್ಕಾಗದಷ್ಟು ಕೆಟ್ಟ ವರ್ಷ ಎಂದು. ಆದರೆ ನನಗೆ ಹಾಗೆ ಅನಿಸುತ್ತಿಲ್ಲ.
🔴 ನಮ್ಮ ತಂದೆ ತಾಯಿ ಜೊತೆಗೆ, ಹೆಂಡತಿ ಮಕ್ಕಳೊಡನೆ ಅತಿ ಹೆಚ್ಚು ಕಳೆದಿದ್ದು, 2020 ರಲ್ಲಿ.
🟡 ನಮ್ಮ ದುಶ್ಚಟಗಳಾದ ಧೂಮಪಾನ ಮದ್ಯಪಾನ ಗಳನ್ನು ನಿಯಂತ್ರಿಸಿದ ವರ್ಷ 2020.
🔵 ಮೀನು ಮಾಂಸವನ್ನು ತಿನ್ನದೇ ಸುಖವಾಗಿ ಜೀವಿಸಬಹುದೆಂದು ಕಲಿಸಿಕೊಟ್ಟ ವರ್ಷ 2020.
🟠 ಸಣ್ಣ ಸಣ್ಣ ರೋಗಗಳಿಗೆ ಡಾಕ್ಟರಿಗೆ ತೋರಿಸದಯೇ ಮನೆಯ ಮದ್ದಿನಲ್ಲೇ ಗುಣಪಡಿಸಬಹುದೆಂದು ಕಲಿಸಿಕೊಟ್ಟ ವರ್ಷ 2020.
🟣 ವಿಜೃಂಭಣೆಯಿಲ್ಲದೇ ಅತಿ ಸರಳವಾಗಿ ಅತಿ ಕಡಿಮೆ ಜನಗಳನ್ನು ಕರೆದು ಮದುವೆ ಮಾಡಬಹುದೆಂದು ತೋರಿಸಿಕೊಟ್ಟ ವರ್ಷ 2020.
🟤 ಬೇಕಾಬಿಟ್ಟಿ ರಸ್ತೆ ಗಳಲ್ಲಿ ಬಿಸಿಲಿನಲ್ಲಿ ಸುತ್ತದೇ ಹಾಯಾಗಿ ಮನೆಯಲ್ಲಿ ಹೇಗೆ ಕಾಲ ಕಳೆಯಬಹುದೆಂದು ಕಲಿಸಿಕೊಟ್ಟ ವರ್ಷ 2020.
🔵 ದೇವಸ್ಥಾನಗಳಿಗೆ ಹೋಗದೆ ಅತ್ಯಂತ ಭಕ್ತಿಯಿಂದ ಮನೆಯಲ್ಲೇ ಕುಳಿತು ಪ್ರಾರ್ಥಿಸಿದ ವರ್ಷ 2020.
🔴 ಅದೆಷ್ಟೋ ಓದುವ ಹವ್ಯಾಸ ಇಲ್ಲದ ಜನರಿಗೆ ಧರ್ಮ ಗ್ರಂಥ ಗಳನ್ನು ಕೈಗೆತ್ತಿಕೊಳ್ಳುವಂತೆ ಪ್ರೇರಣೆ ತಂದುಕೊಟ್ಟ ವರ್ಷ 2020.
🟠 ದುಂದುವೆಚ್ಚ ಮಾಡದೇ ಕಡಿಮೆ ಖರ್ಚಿನಲ್ಲಿ ಹೇಗೆ ಜೀವನ ನಡೆಸ ಬಹುದೆಂದು ಎಚ್ಚರಿಸಿದ ವರ್ಷ 2020.
⚫ ವ್ಯಕ್ತಿ ಶುಚಿತ್ವದ ಬಗ್ಗೆ ಗೊತ್ತಿದ್ದರೂ ಅಷ್ಟಾಗಿ ಪಾಲಿಸದಿದ್ದ ನಾವು ಈಗ ಶುಚಿತ್ವದ ಬಗ್ಗೆ ಗಮನ ಕೊಡುವಂತಹ ಮಾಡಿದ್ದು 2020.
🟢 ಮಕ್ಕಳು ಮೊಬೈಲ್ ಫೋನ್ ಮುಟ್ಟಿದರೆ ಕೋಪಿಸಿಕೊಳ್ಳುತಿದ್ದ ತಂದೆ ತಾಯಿಗಳೇ ಅದೇ ಮಕ್ಕಳಿಗೆ ಆಂಡ್ರಾಯಿಡ್ ಫೋನ್ ಕೊಡಿಸಿದ ವರ್ಷ 2020.
🌄🌅🌠 ಹೀಗೆ ನಮ್ಮ ಬದುಕಿಗೆ ಅನೇಕ ಬೆಳಕನ್ನು ತಂದು ಕೊಟ್ಟ 2020 ನ್ನು ಹೇಗೆ ಮರೆಯುವುದು.
🌹🌹🤪
No comments:
Post a Comment