Wednesday, January 13, 2021

ಮಧು - ಪುಷ್ಪ : ಮನೆ ಭೇಟಿ

 ಬುಧವಾರ, 13 ಜನವರಿ 2021

ಆದರ್ಶ ರೆಸಿಡೆನ್ಸಿ, ಬನಶಂಕರಿ.




ಪುಷ್ಪ ಮಧುಸೂದನ ತಾಳಿತ್ತಾಯ ಅವರು ನಮ್ಮ ಹಳೆಯ ದೋಸ್ತಿ. ನಾವು ದುಬೈ ಯಲ್ಲಿ ಇರುವ ವರ್ಷಗಳಲ್ಲಿ ಅವರೂ ಇದ್ದು ಹಲವಾರು ಕಾರ್ಯಕ್ರಮಗಳಲ್ಲಿ ಭೇಟಿಯಾಗುತಿದ್ದೆವು. ಮನೆ ಭೇಟಿಯೂ ಸಾಮಾನ್ಯವಾಗಿತ್ತು. 

ನಾವು ಭಾರತಕ್ಕೆ ಬಂದು ನೆಲೆಸಿದ ಮೇಲೆ ಅವರೂ ಒಂದೆರಡು ವರ್ಷದ ನಂತರ ಬೆಂಗಳೂರಿಗೆ ಬಂದು ತಮ್ಮ ಮನೆಯಲ್ಲಿ ನೆಲೆಸಿರುವರು. ತುಂಬಾ ಸಮಯದ ನಂತರ ಅವರ ಭೇಟಿಯಾಗಿತ್ತು. ಒಂದೆರಡು ಗಂಟೆಗಳ ಕಾಲ ಅವರ ಮನೆಯಲ್ಲಿ ಕುಳಿತಿದ್ದು ಲೋಕಾಭಿರಾಮವಾಗಿ ಬಹಳಷ್ಟು ವಿಷಯಗಳನ್ನು ಮಾತನಾಡಿದೆವು. ದೋಸೆ, ಬನ್ಸ್,ಗುಲಾಬ್ ಜಾಮೂನ್ ತಿಂದು ಚಾ ವನ್ನು ಕುಡಿದೆವು. 

ಅವರರೊಡನೆ ಆರು ದಿನಗಳ ಕಾಲದ ವಾರಾಣಸಿ, ಗಯಾ, ಆಯೋದ್ಯ, ಪ್ರಯಗರಾಜ್ ಪ್ರವಾಸಕ್ಕೆ ಹೋಗಿದ್ದ ದಿನಗಳನ್ನೂ ನೆನಪಿಸಿಕೊಂಡೆವು.

ಅವರು ಮಕ್ಕಳು ದೀಪಕ್, ದಿನೇಶ್ ಅವರನ್ನು ಬಾಲ್ಯದಿಂದ ನೋಡಿದ್ದು, ಒಂದು ತರಹ ಅನ್ಯೋನ್ಯತೆ ಇದ್ದು, ಸ್ನೇಹತ್ವ ಮುಂದುವರಿಯುತ್ತಿತ್ತು. 




ದೀಪಕನು ಡಾಕ್ತರಾಗಿ ಹಲವು ವರ್ಷ ಇಂಗ್ಲಂಡ್ ನಲ್ಲಿ ಇದ್ದು, ಈಗ ದುಬೈ ಯಲ್ಲಿ ಕೆಲಸ ಮಾಡುತ್ತಿರುವನು.  ಮದುವೆಯಾಗಿ 12 ವರ್ಷದ ಒಬ್ಬಳು ಮಗಳು.

ದಿನೇಶನು ಆರ್ಕಿಟೆಕ್ಟ್ ಆಗಿ ದುಬೈ ಯಲ್ಲೇ ಕೆಲಸ ಮಾಡುತ್ತಿರುವನು. ಹೆಂಡತಿ ಶರ್ಮಿಳ, ಎರಡು ಗಂಡು ಮಕ್ಕಳು- ಒಮ್ ಮತ್ತು ದೇವ್.

ಹೀಗೆ ಅವರ ಸ್ನೇಹ ಮುಂದುವರಿಯುತ್ತಿರುವುದು ಸಂತಸದ ವಿಚಾರ. 

ಸುಮ್ಮನೆ ಬರೆದಿರುವುದು 14/1/2021


No comments:

Post a Comment