ಮಂಗಳವಾರ, 26 ಜನವರಿ, 2021
ಹೈದರಾಬಾದ್ ನಿಂದ 30 ಕಿ.ಮೀ. ದೂರದ ಪುರಾತನ, ಪ್ರಸಿದ್ಧ ಚಿಲ್ಕೂರು ಬಾಲಾಜಿ ದೇವಸ್ಥಾನಕ್ಕೆ ಇಂದು ಬೆಳಿಗ್ಗೆ ಭೆಟ್ಟಿ ಕೊಟ್ಟೆವು.
ರಿಶಿಕಾಂತನ ಬೆಲೇನೂ ಕಾರು ಇದ್ದುದರಿಂದ ಮಧುರೈ ನಿಂದ ಬಂದಿದ್ದ ಲೆನಿನ್ ದಂಪತಿಗಲೊಡನೆ ಬೆಳಿಗ್ಗೆ 10.30 ಗಂಟೆಗೆ ಹೊರಟು 11.30 ಗಂಟೆಗೆ ದೇವಸ್ಥಾನವನ್ನು ತಲುಪಿದೆವು.
ಮಂಗಳವಾರ, ಗಣ ರಾಜ್ಯೋತ್ಸವದ ರಜೆಯಾದ್ದರಿಂದ ದೇವಸ್ಥಾನದ ಸುತ್ತ ಮುತ್ತ ಜನಸಂದಣಿಯೂ ಬಹಳಷ್ಟು ಇತ್ತು. ನಮ್ಮನ್ನು ನೋಡಿ, ಹಿರಿಯ ನಾಗರಿಕರು ಎಂದು ಕೂಡಲೇ ಗೇಟನ್ನು ತೆಗೆದು ದೇವಸ್ತಾನದ ಒಳಭಾಗಕ್ಕೆ ಬಿಟ್ಟರು. ಅದು ಒಂದು 10 ಸೆಕೆಂಡಿನ ದರ್ಶನದ ಭಾಗ್ಯ, ನಂತರ ಶಿವನ ದರ್ಶನವನ್ನು ಇನ್ನೊಂದು 20 ಸೆಕೆಂಡುಗಳಲ್ಲಿ ಮಾಡಿ, ಸ್ವಲ್ಪ ಹೊತ್ತು ಆವರಣದಲ್ಲಿ ಇದ್ದು ಹೊರಬಂದು ಆಯಿತು.
ಸುಮಾರು 500 ವರ್ಷಗಳ ಇತಿಹಾಸ ಇರುವ ಚಿಲ್ಕೂರು ಬಾಲಾಜಿ ದೇವಸ್ಥಾನವು ಪ್ರಸಿದ್ಧ ಹಾಗೂ ಜನರ ಬಲವಾದ ನಂಬಿಕೆಯಿರುವ ಸ್ಥಳವಾಗಿದೆ.ದಿನವು ಸಾವಿರಾರು ಭಕ್ತರು ಬಾಲಜಿಯ ದರ್ಶನಕ್ಕೆ ದೂರ ದೂರದಿಂದ ಬರುತ್ತಾರೆ.
ಈ ಸ್ಥಳವು "ವೀಸಾ ಬಾಲಾಜಿ ದೇವಸ್ಥಾನ"ವೆಂದೂ ಪ್ರಸಿದ್ಧವಾಗಿದೆ. ಹೊರದೇಶಕ್ಕೆ ಹೋಗುವ ಆಸಕ್ತರು, ವೀಸಾ ಬೇಗನೇ ಸಿಗಲಿ ಎಂದು ಪ್ರಾರ್ಥಿಸಲು ಇಲ್ಲಿಗೆ ಬಂದು, ಬಾಲಾಜಿಗೆ 11 ಸುತ್ತು ಪ್ರದಕ್ಷಿಣೆ ಮಾಡಿ ಪ್ರಾರ್ಥನೆಯನ್ನು ಸಲ್ಲಿಸುವರು. ಸಾವಿರಾರು ಭಕ್ತರ ಬೇಡಿಕೆಯನ್ನು ಈಡೇರಿಸಿದ ನಿದರ್ಶನಗಳು ಇದೆ. ವೀಸಾ ಪಡೆದ ನಂತರ ಅವರು ಪುನಃ ಬಂದು 101 ಪ್ರದಕ್ಷಿನೆಗಳನ್ನು ಮಾಡಬೇಕೆಂಬ ನಿಯಮವೂ ಇದೆ.
ದೇವಸ್ಥಾನದ ಹೊರಭಾಗದಲ್ಲಿ ನೂರಾರು ಸಣ್ಣ ಸಣ್ಣ ಮಳಿಗೆಗಳು ಬೇರೆ ಬೇರೆ ರೀತಿಯ ಕಡಿಮೆ ಬೆಲೆಗೆ ಮಾರಾಟ ಮಾಡುತ್ತವೆ. ಸರ, ಕಿವಿಯ ಓಲೆ, ದೇವರ ಫೋಟೋಗಳು, ಗಿಫ್ಟ್ ವಸ್ತುಗಳು ಇತ್ಯಾದಿ ಇತ್ಯಾದಿ.
ಅಲ್ಲಿ ಒಂದು ಗಂಟೆ ಇದ್ದು, ವಾಪಸ್ಸು ಹೈದರಾಬಾದ್ ಗೆ 2 ಗಂಟೆಗೆ ಬಂದೆವು.
ಬರೆದಿರುವುದು ಜನವರಿ 30, 2021
No comments:
Post a Comment