Thursday, May 12, 2022

ಬನ್ನಂಜೆ ಗೋವಿಂದಾಚಾರ್ಯ - ವ್ಯಾಖ್ಯಾನ

 ಶುಕ್ರವಾರ, 13 ಮೇ 2022 

ಬನ್ನಂಜೆ ಗೋವಿಂದಾಚಾರ್ಯ - ವ್ಯಾಖ್ಯಾನ 


ನಮ್ಮಲ್ಲಿ ಪ್ರಾತಃ ಸ್ಮರಣೀಯರಾದ ಕೆಲವು ಮಹಾಮಹಿಳೆಯರನ್ನು ನಿತ್ಯವೂ ನೆನೆಯುವ ವಾಡಿಕೆ ಇದೆ...

ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಶ್ಲೋಕ ಇದು ಆದರೆ ಅನೇಕರು ತಪ್ಪಾಗಿ ಗ್ರಹಿಸಿರುವ ಶ್ಲೋಕವೂ ಇದೇ ಆಗಿದೆ :

ಅಹಲ್ಯಾ ದ್ರೌಪದಿ ಸೀತಾ ತಾರಾ ಮಂಡೋದರೀ ತಥಾ |

ಪಂಚಕನ್ಯಾ ಸ್ಮರೇನ್ನಿತ್ಯಂ ಮಹಾ ಪಾತಕ ನಾಶನಮ್ ||

ಈ ಶ್ಲೋಕದಲ್ಲಿ ಬರುವ ಐದು ಮಂದಿ ಮಹಾಮಹಿಳೆಯರಲ್ಲಿ ಅಹಲ್ಯಾ, ದ್ರೌಪದಿ, ಸೀತಾ, ತಾರಾ, ಮಂಡೋದರೀ 

ಯಾರೊಬ್ಬರೂ ಕನ್ಯೆಯರಲ್ಲ... ನಮ್ಮಲ್ಲಿ ಕನ್ಯಾ ಶಬ್ದ ಯಾವ ಅರ್ಥದಲ್ಲಿ ಬಳಕೆಯಲ್ಲಿದೆ ಹೇಳಿ?... ಇನ್ನೂ ಮದುವೆಯಾಗದ ಸ್ತ್ರೀಯರನ್ನು ನಾವು ಕನ್ಯೆಯರು ಅಂತೀವಲ್ವೇ... ಈ ಶ್ಲೋಕದಲ್ಲಿ ಬಂದ ಯಾರೊಬ್ಬರೂ ಕನ್ಯೆಯರಲ್ಲ, ಎಲ್ಲರೂ ಮದುವೆಯಾದ ಮುತ್ತೈದೆಯರು... 

ಮತ್ತೆ ಯಾಕೆ ಪಂಚಕನ್ಯಾ ಅಂತ ಬಳಸಿದರು...?

ಹಾಗಾದರೆ, ಶ್ಲೋಕದಲ್ಲಿ ಏನೋ ತಪ್ಪಿರಬೇಕು... ಆಗ ನೆನಪಾಗುವವರು... 🙏ಬನ್ನಂಜೆಯವರು🙏... ಅವರು ತಪ್ಪು ತೋರಿಸಿ, ತಿದ್ದಿ ನಾವು ಮರೆತ ಅರ್ಥವನ್ನು ಮತ್ತೆ ಪರಿಚಯಿಸಿದ್ದಾರೆ...

ಅದು "ಪಂಚಕನ್ಯಾ ಸ್ಮರೇನ್ನಿತ್ಯಂ" ಅಲ್ಲ..... 

"ಪಂಚಕಂ ನಾ ಸ್ಮರೇನ್ನಿತ್ಯಂ" ಆಗಬೇಕು ಅಂತ ತಿಳಿಸಿಕೊಟ್ಟಿದ್ದಾರೆ...

ಹಾಗಾದಾಗ ಮಾತ್ರ ಶ್ಲೋಕ ಸರಿಯಾಗುತ್ತದೆ...

ಇದು ಯಾರೋ ಪಂಡಿತರಿಂದಾದ ಪ್ರಮಾದ... "ನಾ" ಶಬ್ದದ ಅರ್ಥ ತಿಳಿಯಲಿಲ್ಲ ಯಾರೋ ಪಂಡಿತರು "ಪಂಚಕನ್ಯಾ" ಅಂತ ಶ್ಲೋಕವನ್ನೇ ತಿದ್ದಿದರು ಅದೇ ಜನರ ಬಾಯಲ್ಲಿ ತಪ್ಪು ಶ್ಲೋಕವಾಯಿತು...

"ನಾ" ಅಂದರೆ ಸಂಸ್ಕೃತದಲ್ಲಿ "ಗಂಡಸು" ಅನ್ನುವ ಅರ್ಥ ಇದೆ...

"ಪಂಚಕಂ ನಾ ಸ್ಮರೇನ್ನಿತ್ಯಂ" ಅಂದರೆ... ಅಹಲ್ಯಾ, ದ್ರೌಪದಿ, ಸೀತಾ, ತಾರಾ, ಮಂಡೋದರೀ ಈ ಐದು ಮಹಾಮಹಿಳೆಯರನ್ನ ಬೆಳಗಾತ ಎದ್ದು ಪ್ರತಿಯೊಬ್ಬ "ಗಂಡಸು" ಕೂಡ ನೆನೆಯಬೇಕು ಅನ್ನುತ್ತದೆ ಈ ಶ್ಲೋಕದ ಅರ್ಥ.... 

ಯಾಕೆಂದರೆ ಈ ಐವರೂ ಕೂಡ ಮಹಾಮಹಿಳೆಯರೆನಿಸಿದ್ದು ಹೇಗೆ ? 

ಅವರು ತಮ್ಮ ತಮ್ಮ ಬದುಕಿನಲ್ಲಿ ತಾವು ಎದುರಿಸಿದ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ಕೂಡ ಧೃತಿಗೆಡದೆ, ಅವಮಾನಗಳನ್ನು ಸಹಿಸಿಕೊಂಡು, ಸಂಕಷ್ಟಗಳನ್ನು ನುಂಗಿಕೊಂಡು, ಧೈರ್ಯದಿಂದ ಪರಿಸ್ಥಿತಿಗಳನ್ನು ಎದುರಿಸಿ, ಜೀವನದ ಅಧೋಗತಿಯಿಂದ ಮೇಲೆದ್ದು ಬಂದು ಪಾರಾದವರು ....

ಅದರಿಂದ ಸರಿಯಾದ ಶ್ಲೋಕ ಹೀಗಿದೆ :

ಅಹಲ್ಯಾ ದ್ರೌಪದಿ ಸೀತಾ ತಾರಾ ಮಂಡೋದರೀ ತಥಾ |

ಪಂಚಕಂ ನಾ ಸ್ಮರೇನ್ನಿತ್ಯಂ ಮಹಾಪಾತಕ ನಾಶನಮ್ ||

ಕೆಲವು ಕಡೆ ಸೀತಾ ಬದಲು ಕುಂತಿಯನ್ನು ಇಟ್ಟುಕೊಂಡು ಕೂಡ ಶ್ಲೋಕ ಮಾಡಿದ್ದಾರೆ... 

ಸೀತೆ ಸಾಕ್ಷಾತ್ ಲಕ್ಷ್ಮೀಯೇ ಆದ್ದರಿಂದ ಸೀತೆಯ ಬದಲಿಗೆ ಕುಂತಿಯನ್ನು ಸೇರಿಸುತ್ತಾರೆ.. ಕುಂತಿ, ಗಾಂಧಾರಿಯರು ಕೂಡ ಮಹಾಮಹಿಳೆಯರೆ... 

"ಅಹಲ್ಯಾ ದ್ರೌಪದಿ ತಾರಾ ಕುಂತೀ ಮಂಡೋದರೀ ತಥಾ"

ಹೀಗೂ ಆಗುತ್ತದೆ...‌

ಇದರಂತೆ ನಾವು ನಿತ್ಯ ಸ್ನಾನ ಮಾಡುವಾಗ ಹೇಳುವ ಶ್ಲೋಕದಲ್ಲಿ ಮರೆತ ಒಂದು ನದಿಯ ಹೆಸರನ್ನು ಕೂಡ ಬನ್ನಂಜೆಯವರು ತಿಳಿಸಿಕೊಟ್ಟು ಆ ಶ್ಲೋಕವನ್ನು ಸರಿಮಾಡಿದ್ದಾರೆ :

ಈಗ ನಾವು ಹೇಳುವ ಶ್ಲೋಕ : 

ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ |

ನರ್ಮದಾ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||

ಅಲ್ಲಿ ಗಂಗೇ ಆದಮೇಲೆ, "ಚ" ಬಂದಿದೆ... ಒಮ್ಮೆ ಚಕಾರ ಬಂದ ಮೇಲೆ ಮತ್ತೆ ಯಾಕೆ ಯಮುನೇ ಆದಮೇಲೆ "ಚೈವ" ಬರಬೇಕು.... ನದಿಯ ಹೆಸರು ಮರೆತ ಯಾರೋ ಪಂಡಿತರು "ಚೈವ" ಸೇರಿಸಿದರು... ಮತ್ತೇ ಮುಂದೆ ಅದೇ ಪ್ರಾಕ್ಟೀಸ್ ಆಯಿತು ತಪ್ಪು ಶ್ಲೋಕವಾಯಿತು... 

ಅದು "ಚೈವ" ಅಲ್ಲ "ಕೃಷ್ಣಾ" ನದಿಯ ಹೆಸರು ಬಿಟ್ಟಿದೆ ಸೇರಿಸಿ ಹೇಳಿಕೊಳ್ಳಿ ಆಗ ಶ್ಲೋಕ ಸರಿಯಾಗುತ್ತದೆ ಅಂತ ಅಂದವರು ಬನ್ನಂಜೆಯವರು ಮಾತ್ರ

ಗಂಗೇ ಚ ಯಮುನೇ ಕೃಷ್ಣೇ ಗೋದಾವರೀ ಸರಸ್ವತಿ |

ನರ್ಮದಾ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||

ಇದು ಸರಿಯಾದ ಶ್ಲೋಕ...

ವಾಟ್ಸ್ಅಪ್ ನಿಂದ ಬಂದಿದ್ದು 


No comments:

Post a Comment