Monday, May 30, 2022

ಸಾವಿರ ಕಂಬದ ಬಸದಿ(ತ್ರಿಭುವನ ತಿಲಕ ಚೂಡಾಮಣಿ) - ಮೂಡಬಿದ್ರಿ

 ಮಂಗಳವಾರ, ಮೇ 24, 2022 

ಮೂಡಬಿದ್ರಿ, ದಕ್ಷಿಣ ಕನ್ನಡ 

ಅಂದು ರಾತ್ರಿ ಸುಜಾತಳ ಮಗಳು ಡಾ ಸ್ಮಿತಾಳ ಮನೆ, ಮೂಡಬಿದ್ರಿಯಲ್ಲಿ ಇದ್ದಿದ್ದು, ಬೆಳಿಗ್ಗೆ ಸ್ನಾನ ತಿಂಡಿಯಾದ ನಂತರ ಚಾರಿತ್ರ್ಯಿಕ ಸ್ಥಳಗಳನ್ನು ನೋಡಲು ನಳಿನಿ, ಸುಜಾತರೊಂದಿಗೆ  ಹೊರಟೆವು. 



ಪ್ರಥಮವಾಗಿ, ದಕ್ಷಿಣದ ಕಾಶಿ ಎಂದೇ ಕರಯಲ್ಪಡುವ, ಮೂಡಬಿದ್ರಿಯ ನೋಡಲೇ ಬೇಕಾದ, ಪುರಾತನ ಸಾವಿರ ಕಂಬದ ಬಸದಿ, ನೂತನವಾಗಿ ಕರೆಯುವ "ತ್ರಿಭುವನ ತಿಲಕ ಚೂಡಾಮಣಿ". ಇದೊಂದು ಜೈನರ ದೇವಸ್ಥಾನ.  ಇದನ್ನು 15 ನೇ ಶತಮಾನದಲ್ಲಿ ರಾಜರಾಗಿದ್ದ ದೇವರಾಯ ವಡೆಯರ್ ಅವರು ಕಟ್ಟಿಸಿದ್ದರು.




ಇಲ್ಲಿ 8 ಆಡಿಯ ತೀರ್ಥಂಕರ ಚಂದ್ರನಾಥ  ಅವರ ಮೂರ್ತಿಯನ್ನು ಪೂಜಿಸಲಾಗುತ್ತದೆ,  ಇದನ್ನು ಚಂದ್ರನಾಥ ದೇವಸ್ಥಾನ ಎಂದೂ ಕರೆಯಲಾಗುತ್ತದೆ.



ಈ ದೇವಾಲಯವು ಆಗಿನ ಕಾಲದ ಶಿಲ್ಪಿಗಳು ರಚಿಸಿದ ಅದ್ಭುತ ಎಂದೇ ಹೇಳಲಾಗುತ್ತದೆ. ಪ್ರತೀ ಕಂಬವು ವಿಭಿನ್ನ, ಸೂಕ್ಷ್ಮವಾದ ಕೆತ್ತನೆಗಳು, ಏಳು ಮಂಟಪಗಳು, ವಿಜಯನಗರ ಶೈಲಿಯಲ್ಲಿ ಕೆತ್ತನೆ ಮಾಡಿದ ಕಂಬಗಳು, ನೋಡುಗರನ್ನು ವಿಸ್ಮಯಗೊಳಿಸುತ್ತದೆ.

ಗರ್ಭ ಗೃಹದಲ್ಲಿ ಪಂಚಧಾತುವಿನಿಂದ ತಯಾರಿಸಿದ ಎಂಟು ಅಡಿ ಎತ್ತರದ ಚಂದ್ರನಾಥ ಸ್ವಾಮಿಯ ಮೂರ್ತಿಯು ರಾರಾಜಿಸುತ್ತಿದೆ. 

ಆ ಕಾಲದಲ್ಲಿ ಅದ್ಭುತವಾದ ದೇವಾಲಯವನ್ನು ರಚಿಸಲು ಶಿಲ್ಪಿಗಳು, ಜನರು ಪಟ್ಟ ಶ್ರಮ, ಸಾಧನೆ ಯನ್ನು ಯೋಚಿಸಿದರೆ ಅಚ್ಚರಿಯಾಗುತ್ತದೆ. 

ಕಾರ್ಕಳ ಭೈರವ ರಾಣಿ ನಾಗಲಾ  ದೇವಿಯಿಂದ ವಿರಚಿತ 50 ಅಡಿ ಎತ್ತರದ ಏಕಶಿಲೆಯ ಮಹಾ ಸ್ಥಂಭ ಇದೆ.

ಸುಮಾರು ಒಂದು ಗಂಟೆಯ ಕಾಲ ಅಲ್ಲಿದ್ದು, ನಂತರ ಅಲ್ಲಿಂದ ಹೊರಟೆವು.

ಬರೆದಿರುವುದು 31/5/2022 



No comments:

Post a Comment