Tuesday, May 3, 2022

ಆಧ್ಯಾತ್ಮ ಕುಟೀರ - ಉದ್ಘಾಟನೆ

 ಭಾನುವಾರ, ಮೇ 1,  2022 

ತರಳಬಾಳು ಕೇಂದ್ರ, ಅರ್. ಟಿ. ನಗರ, ಬೆಂಗಳೂರು.


ಲಕ್ಸ್ಮಿನಾರಾಯಣ ಚಡಗ ಮೆಮೋರಿಯಲ್ ಟ್ರಸ್ಟ್, ಶಿವರಾಮ ಕಾರಂತ ವೇದಿಕೆ ಹಾಗೂ ತರಳಬಾಳು ಕೇಂದ್ರದ ಸಹಯೋಗದಲ್ಲಿ ಸನಾತನ ಧರ್ಮದ ವಿಚಾರಗಳ ಬಗ್ಗೆ ಚಿಂತನೆ, ಸಭೆ, ವಿದ್ವಾಂಸರುಗಳಿಂದ ಉಪನ್ಯಾಸ ಇತ್ಯಾದಿ ಗಳನ್ನು ಹಮ್ಮಿಕೊಂಡ "ಆಧ್ಯಾತ್ಮ ಕುಟೀರ"ದ ಉದ್ಘಾಟನೆಯನ್ನು ಇಂದು ತರಳಬಾಳು ಕೆಂದ್ರದ ಗ್ರಂಥಾಲಯದಲ್ಲಿ ನೆರವೇರಿಸಲಾಯಿತು.

ಡಾ ಅನಸೂಯ ದೇವಿ 


ಖ್ಯಾತ ಸಾಹಿತಿ, ಸಂಗೀತ ವಿದೂಷಿ ಡಾ ಅನಸೂಯ ದೇವಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಆಧ್ಯಾತ್ಮ ಕುಟೀರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ರೂವಾರಿ ಶ್ರೀ ಚಂದ್ರಶೇಖರ ಚಡಗ ಇವರನ್ನು ಅಭಿನಂದಿಸಿದರು.

ಶ್ರೀ ಚಂದ್ರಶೇಖರ ಚಡಗ 


ನಳಿನಿ ಚಡಗ, ರಾಧಾ ರಾಮಸ್ವಾಮಿ, ನಳಿನಿ ಸೋಮಯಾಜಿ, ಡಾ ಅನಸೂಯಾದೇವಿ 

ಕುಟೀರದಲ್ಲಿ ಎಲ್ಲಾ ವಯಸ್ಸಿನ ವ್ಯಕ್ತಿಗಳು ಭಾಗವಹಿಸಬೇಕೆಂದು ಪ್ರತಿಪಾದಿಸಿದರು.

ಶ್ರೀಮತಿ ರಾಧಾ ರಾಮಸ್ವಾಮಿ, ಶಿಕ್ಷಣ ತಜ್ಞೆ, ಭಗವದ್ಗೀತೆಯ ಸಂದೇಶವನ್ನು ಅದ್ಭುತವಾಗಿ ಸಂಕ್ಷಿಪ್ತ ವಾಗಿ  ವಿವರಿಸಿ, ಅದೊಂದು ಸರ್ವಕಾಲಿಕ ವಾದ ಗ್ರಂಥ, ಸರ್ವರೂ ಅದರ ಸಾರವನ್ನು ತಿಳಿದು ಬದುಕನ್ನು ಹಸನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.


ಶ್ರೀಮತಿ ರಾಧಾ ರಾಮಸ್ವಾಮಿ 
ಶ್ರೀ ಬಿ.ವಿ, ಕೆದಿಲಾಯರು, ಸಾಹಿತಿ, ವಾಗ್ಮಿ ತಮ್ಮ ಅಧ್ಯಕ್ಷ ಭಾಷಣದಲ್ಲಿ, ಶ್ರೀಯುತ ಚಂದ್ರಶೇಖರ ಚಡಗರು "ಅದಮ್ಯ ಚೇತನ". ಯಾವುದಾದರು ಕಾರ್ಯ ಮಾಡಲು ಯೋಚಿಸಿದರೆ, ಅದನ್ನು ಕೂಡಲೇ ಕಾರ್ಯರೂಪಕ್ಕೆ ತರಲು ಎಲ್ಲಾ ತರದ ತಯಾರಿಯನ್ನು ಮಾಡಿಕೊಂಡು ಮುಂದುವರಿಯುವವರು ಎಂದು ಚಡಗರನ್ನು ಶ್ಲಾಘಿಸಿದರು.

ಶ್ರೀ ಬಿ.ವಿ. ಕೆದಿಲಾಯರು 

ಇಂದಿನ ಕಾಲಘಟ್ಟದಲ್ಲಿ, ಧರ್ಮದ ಬಗ್ಗೆ ಕಲುಷಿತ ವಾತಾವರಣ, ಸಂಘರ್ಷ ಇರುವ ಸಮಯದಲ್ಲಿ ಆಧ್ಯಾತ್ಮ ಕುಟೀರ ಅತ್ಯಂತ ಸೂಕ್ತವಾದ ಚಿಂತನೆ ಎಂದು ತಿಳಿಸಿದರು.

ಪ್ರಾರ್ಥನೆ 

ಕಾರ್ಯಕ್ರಮದ ನಿರೂಪಣೆ, ಅತಿಥಿಗಳ ಪರಿಚಯ, ಎಲ್ಲವನ್ನು ಶ್ರೀಯುತ ಚಡಗರು ಅಚ್ಚು ಕಟ್ಟಾಗಿ ನೆರವೇರಿಸಿದರು.


ಶ್ರೀ ವೀರಶೇಖರ ಸ್ವಾಮಿಯವರು ಧನ್ಯವಾದ ಸಮರ್ಪಿಸಿದರು.

ಬರೆದಿರುವುದು ಬುಧವಾರ, 4 ಮೇ, 2022 

No comments:

Post a Comment