Tuesday, June 14, 2022

HOMA, SATYANARAYANA POOJA - UPADHYA/NIRMALA

 ಮಂಗಳವಾರ, 14 ಜೂನ್ 2022 

ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ, ಜಯನಗರ, ಬೆಂಗಳೂರು.



ನಿರ್ಮಲಾಳು ನನ್ನ ದೊಡ್ಡಪ್ಪ ಶಂಕರನಾರಾಯಣ ಸೋಮಯಾಜಿಯ  ಮಗಳು ಸಾವಿತ್ರಿಯ ಮಗಳು. 

ಸಂಪರ್ಕ ಇದ್ದರೆ ಮಾತ್ರ ಭಾಂದವ್ಯ ಉಳಿಯುವುದು, ಎಂಬ ಅವರ ಬಲವಾದ ನಂಬಿಕೆ.



ಕೆಲವು ವರ್ಷದ ಹಿಂದೆ, ಅವರ ಮಗಳ ಮದುವೆಯ ಸಂದರ್ಭದಲ್ಲಿ ನಮ್ಮನ್ನು ಹುಡುಕಿಕೊಂಡು ಮನೆಗೆ  ಬಂದು ಆಮಂತ್ರಣವನ್ನು ನೀಡಿದ್ದರು. ಒಳ್ಳೆಯ, ಸಾತ್ವಿಕ ದಂಪತಿಗಳು, ಇತ್ತುಮಡುವಿನಲ್ಲಿ ಅವರ ಮನೆ ಇದೆ.

ಚಂಡಿಕ ಹೋಮ, ಸತ್ಯನಾರಾಯಣ ಪೂಜೆಗೆ ಅವರ ಆತ್ಮೀಯ ಆಮಂತ್ರಣ: 

ನನ್ನ ಪ್ರೀತಿಯ ಬಂಧು ಬಾಂಧವರೇ

ಇದೇ ಜೂನ್ ತಿಂಗಳ 14 ನೇ ತಾರೀಕು ಮಂಗಳವಾರ ಬೆಳಗ್ಗೆ 9.30ಕ್ಕೆ ಈ ಕೆಳಗಿನ ವಿಳಾಸದಲ್ಲಿ ಗಣಹೋಮ, ಚಂಡಿಕಾ ಹೋಮ, ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ಗುರು ಹಿರಿಯರ ಕೃಪಾಕಟಾಕ್ಷದಿಂದ ನಿಗದಿ ಪಡಿಸಲಾಗಿದೆ ದಯವಿಟ್ಟು ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಮನ ಸಂತೋಷ ಪಡಿಸಬೇಕಾಗಿ ಕಳಕಳಿಯ ಮನವಿ

ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ

ಶ್ರೀ ಪ್ರಸನ್ನ ಕಲ್ಯಾಣ ಮಂಟಪದ ಹತ್ತಿರ, ಜಯನಗರ ಅಶೋಕ ಪಿಲ್ಲರ್ ಹಿಂಭಾಗ,10th E ಮುಖ್ಯ ರಸ್ತೆ, ಬೆಂಗಳೂರು. 

ಭೋಜನದ ಸಮಯ -12.30 ಬೆಳಿಗ್ಗೆ

ಪಿ.ಸತ್ಯನಾರಾಯಣ, ನಿರ್ಮಲಾ ಉಪಾಧ್ಯ

ಸ್ವಾಮಿ ದಂಪತಿ ಪೂಜೆ ಬೆಳಗ್ಗೆ 11.30 ಗೆ ಇರುವುದು.ದಯವಿಟ್ಟು 11.30 ಗೆ ಸರಿಯಾಗಿ ಬನ್ನಿ



ಬೆಂಗಳೂರಿನ ಟ್ರಾಫಿಕ್ ನಲ್ಲಿ ತೂರಿಕೊಂಡು ಸರಿಯಾದ ಸಮಯಕ್ಕೆ ಸೇರಿದೆವು.


ದಂಪತಿ ಪೂಜೆಯ ಗೌರವಕ್ಕೆ ನಾವು  ಭಾಜನರಾಗಿದ್ದೆವು. ಉಪಾಧ್ಯ ದಂಪತಿಗಳ ನಮ್ಮ ಬಗ್ಗೆ ವಿಶೇಷ ಭಾಂದವ್ಯ.

ಪೂಜೆ, ಚಂಡಿಕ ಹೋಮ, ಪೂರ್ಣಾಹುತಿ ಎಲ್ಲವೂ ಕ್ರಮಬದ್ಧವಾಗಿ ನಡೆದು, ವಿಶೇಷ ಭೋಜನದ ವ್ಯವಸ್ಥೆ ಇತ್ತು.


ಇತರ ಊಟದ ಜತೆಗೆ ಜಿಲೇಬಿ, ಕ್ಯಾರೆಟ್ ಹಲ್ವ ವಿಶೇಷ ಸಿಹಿ ಗಳಾಗಿತ್ತು.

ಊಟದ ನಂತರ ಹೊರಟೆವು.

ಬರೆದಿರುವುದು ಬುಧವಾರ, 15/6/2022 



No comments:

Post a Comment