Wednesday, June 22, 2022

NEELAVARA SURENDRA ADIGA - VISIT HOME

 ಬುಧವಾರ, 22 ಜೂನ್ 2022 

ಬಿರ್ತಿಮನೆ, ಭುವನೆಶ್ವರಿನಗರ, ಬೆಂಗಳೂರು.



ನೀಲಾವರ ಸುರೇಂದ್ರ ಅಡಿಗರು ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಇತ್ತೀಚಿಗೆ ನಿವೃತ್ತಿ ಹೊಂದಿ, ಕೋಟದ ಹತ್ತಿರದ ಮಣೂರಿನಲ್ಲಿ ತಮ್ಮ ಮನೆಯಲ್ಲಿ ನೆಲೆಸಿ ತಮ್ಮ ಪುಸ್ತಕ ಬರವಣಿಗೆ, ಸಾಹಿತ್ಯಭಿಸಕ್ತಿಯನ್ನು ಮುಂದುವರಿಸುತಿದ್ದು ಜನಾನುರಾಗಿಯೂ ಇದ್ದಾರೆ. 



ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇತ್ತೀಚೆಗಿನ ಚುನಾವಣೆಯಲ್ಲಿ ಉಡುಪಿ ಘಟಕದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರೆ.

ಉಡುಪಿ ಸುತ್ತಮುತ್ತಿನ ಕನ್ನಡದ ಸಾಹಿತ್ಯ, ಇತರ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. 

ಇತ್ತೀಚಿಗೆ ಉಡುಪಿ ಸಾಹಿತ್ಯ ಪರಿಷತ್ತಿನಿಂದ ನಡೆದ "ಅಕಲಂಕ ಪ್ರಶಸ್ತಿ" ಪ್ರಧಾನ ಸಮಾರಂಭದಲ್ಲಿ ಶ್ರೀ ಎಸ್.ಅರ್.ವಿಜಯಶಂಕರ್ ಅವರು ಪುರಸ್ಕೃತರಾಗಿದ್ದರು. ಸುರೇಂದ್ರ ಅಡಿಗರು ಅಧ್ಯಕ್ಷತೆಯನ್ನು ವಹಿಸಿದ್ದರು.


ಮನೆಯ ಹತ್ತಿರದ ಶ್ರೀಗಂಧ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಅವರು ಊರಿಂದ ಆಗಮಿಸಿದ್ದರು. ನಾವೂ ಸಹಾ ಅದೇ ಕಾರ್ಯಕ್ರಮಕ್ಕೆ ಹೋಗಿದ್ದರಿಂದ, ಅವರ ಭೇಟಿಯಾಗಿ ಅವರನ್ನು ಮನೆಗೆ ಆಹ್ವಾನಿಸಿ, ಒಂದು ಪಂಚೆ, ಶಾಲು ನೀಡಿ ಸಣ್ಣ ಗೌರವವನ್ನು ಕೊಟ್ಟೆವು.

ನಂತರ ಅವರನ್ನು ಎಸ್ಟೀಮ್ ಮಾಲ್ ನ ಹತ್ತಿರ ಬಿಟ್ಟು ಬಂದದ್ದಾಯಿತು.

ಬರೆದಿರುವುದು. ಗುರುವಾರ, 23 ಜೂನ್ 2022 

2 comments: