Saturday, 17th September 2022
K H Kalasoudha, Hanumanthanagar, Bnegaluru.
"ನನಗ್ಯಾಕೋ ಡೌಟು" - ಲಕ್ಷ್ಮಣ ರಾವ್ ವಿರಚಿತ ಸಾಮಾಜಿಕ , ನಗೆ ನಾಟಕ ರಂಗತಂತ್ರ ಕಲಾವಿದರಿಂದ.
ಕಲಾವಿದರು |
ಸುಮಾರು ಆರು ಜನ ಕಲಾವಿದರಿಂದ ಪ್ರಸ್ತುತ ಪಡಿಸಿದ ಒಂದೂವರೆ ಗಂಟೆಗಳ ಕಾಲದ ನಾಟಕ ಅಷ್ಟೊಂದು ಪರಿಣಾಮಕಾರಿಯಗಿಲ್ಲ.
ಆದರೂ ಕಲಾವಿದರಿಂದ ಪ್ರಯತ್ನ ಶ್ಲಾಘನೀಯವಾದದ್ದು.
ಗಂಡ (ಡಾಕ್ಟರ್) ಹೆಂಡತಿಯ ಮೇಲೆ ಡೌಟು, ಹೆಂಡತಿ (ಅರುಂದತಿ) ಗಂಡನ ಮೇಲೆ ಡೌಟು, ಪ್ರಿಯಕರ (ಆಕಾಶ್) ಪ್ರೇಯಸಿಯ ಮೇಲೆ ಡೌಟು, ....... ಹೀಗೆ ಕತೆ ಮುಂದುವರಿಯುತ್ತಾ, ಆಕಾಶ್ ಡಾಕ್ಟರ್ ಮನೆಗೆ ಬಂದು ಘರ್ಷಣೆ, ನಂತರ ವಿಷಯ ಗೊತ್ತಾದ ಮೇಲೆ ಎಲ್ಲ ಸಂಶಯವೂ ನಿವಾರಣೆ.
ಡಾಕ್ಟರ್ ಅವರ ಕಾಂಪೌಂಡರ್, ಮನೆ ಕೆಲಸದಾಕೆ ಪುಟ್ಟ ಗೌರಿ, ಆಕಾಶನ ಸ್ನೇಹಿತ ಆನಂದ್ ಇತರ ಪಾತ್ರದಾರಿಗಳು.
ಬಹಳ ಹೊತ್ತು ಪ್ರೇಕ್ಷಕರನ್ನು ಹಿಡಿದಿತ್ತು ಕೊಳ್ಳುವ ಸಾದ್ಯತೆ ಇಲ್ಲದ ನಾಟಕ.
ಕಲಾವಿದರ ಅಭಿರುಚಿ, ಆಸಕ್ತಿ, ಪ್ರಯತ್ನಕ್ಕೆ ಭೇಶ್ ಎನ್ನಲೇ ಬೇಕು.
ರಂಗಸಜ್ಜಿಕೆ, ಬೆಳಕು ಇತ್ಯಾದಿ ಸಾಮಾನ್ಯ.
ಬರೆದಿರುವುದು 18/9/2022
No comments:
Post a Comment