ಸೋಮವಾರ, 5 ಸಪ್ಟಂಬರ 2022
ಶಿಕ್ಷಕರಾಗಿದ್ದ, ಮಾಜಿ ರಾಷ್ಟ್ರಪತಿ ಸರ್ವೆಪಲ್ಲಿ ರಾಧಾಕ್ರಷ್ಣನ್ ಅವರ ಜನ್ಮದಿನ.
ಶ್ರೀ ತಿರು ಶ್ರೀಧರ್ ಅವರ ಫೇಸ್ ಬುಕ್ ಬರಹ :
ಬದುಕಿನಲ್ಲಿ ಒಂದು ರೀತಿಯಲ್ಲಿ ಎಲ್ಲರೂ ಶಿಕ್ಷಕರು
ಎಲ್ಲರೂ ಶಿಷ್ಯರು. ಬದುಕೇ ಒಂದು ಶಾಲೆ.
ಶಿಕ್ಷಣ ಕ್ಷೇತ್ರದಲ್ಲಿ ದುಡಿದ - ದುಡಿಯುತ್ತಿರುವ ಅನೇಕರನ್ನು ನನ್ನ ಸ್ನೇಹ ಬಳಗದಲ್ಲಿ ಕಂಡಿದ್ದೇನೆ. ಅಂತಹವರಲ್ಲಿ ನನಗೆ ಸಾಧ್ಯವಾದ ಮಟ್ಟಿಗೆ ಇಲ್ಲಿ ಒಂದೆಡೆ ಸೇರಿಸಿದ್ದೇನೆ.
ಆದರೆ ಶಿಕ್ಷಕರಾದ ಎಲ್ಲರ ಬಗ್ಗೆಯೂ ಗೌರವ ಇಲ್ಲಿದೆ. ಹಾಗಾಗಿ ಇದು ಇಡೀ ಶಿಕ್ಷಕ ವೃತ್ತಿಗೆ ಗೌರವ ಎಂದು ಪರಿಗಣಿಸಬೇಕಾಗಿ ಕೋರುವೆ
ಸಕಲ ಶಿಕ್ಷಕರಿಗೂ ಗೌರವಪೂರ್ವಕ ಶುಭಹಾರೈಕೆಗಳು.
ಹಿಂದಿನ ವರ್ಷಗಳಲ್ಲಿ ಮಕ್ಕಳೊಡನೆ ಸಂಭ್ರಮ, ಕೇಕ್ ಕತ್ತರಿಸುವಿಕೆ....
ಹಲವಾರು ಸಂದೇಶಗಳು, ಶುಭ ಹಾರೈಕೆಗಳು.....
ಜಯರಾಮ ಸೋಮಯಾಜಿ:
ಅನಂತಾನಂತ ಧನ್ಯವಾದಗಳು...ನೀವಂದಂತೆ ಬದುಕಿನಲ್ಲಿ ಎಲ್ಲರೂ ಶಿಕ್ಷಕರು.
ನಳಿನಿ ಸೋಮಯಾಜಿ:
ಧನ್ಯವಾದಗಳು Tiru Sridhara Sir.
ಶಿಕ್ಷಕರ ದಿನದ ಹಾರ್ದಿಕ ಶುಭಾಶಯಗಳು. ದಿನನಿತ್ಯ ಸಾಧಕರು ಅವರು ಸಾಧನೆಯನ್ನು ತಿಳಿ ಪಡಿಸುವ ನೀವೂ ಶಿಕ್ಷಕರು ನಮಗೆಲ್ಲರಿಗೆ.
'ಶಿಕ್ಷಕರು ಮತ್ತು ಶಿಕ್ಷೆ' ಇದೇಕೆ ಹತ್ತಿರವಿದೆಯೋ ಗೊತ್ತಿಲ್ಲ. ಅನೇಕ ಸಾಧಕರ ಬಗ್ಗೆ ಓದುವಾಗ ಅವರು ಕಠಿಣ ಶಿಕ್ಷಣ ಪದ್ಧತಿಯಲ್ಲಿ ಮಿಂದೆದ್ದು ಸಾಧನೆ ಮಾಡಿದವರು ಎಂದು ಓದುತ್ತೇವೆ. ಶಿಕ್ಷಣದಲ್ಲಿ ಒಂದು ರೀತಿಯ ಶಿಸ್ತು ದೊಡ್ಡ ಸಾಧನೆಗೆ ಕಾರಣವಾಗುತ್ತದೆ. ಆದರೆ ಸಾಧನೆಯೇ ಮುಖ್ಯವೇ?
ಒಂದು ದೇಶ ಕಠಿಣ ಶಿಕ್ಷಾತ್ಮಕ ಸಾಧನೆಗಳಿಂದ ಒಲಿಂಪಿಕ್ ಕ್ರೀಡೆಗಳಲ್ಲಿ ಹೆಚ್ಚು ಪದಕ ಗಳಿಸಿದ್ದೇ ದೊಡ್ಡ ಸಾಧನೆಯೇ? ಸಂಗೀತದಲ್ಲೋ, ಕಲೆಯಲ್ಲೋ ಕಠಿಣ ರೀತಿಯಲ್ಲಿ ಸಾಧನೆ ಮಾಡಿದ ಮಹನೀಯರ ಪ್ರತಿಭಾ ಪ್ರದರ್ಶನ ಎಷ್ಟೇ ಹೆಸರು ಮಾಡಿದ್ದರೂ, ಅವರ ನಡೆ, ನಿಷ್ಠುರ ಗುಣ, ಅವಿಧೇಯತೆ, ಸಿಡುಕುತನ ಮುಂತಾದವು ಅವರಲ್ಲಿ ಅವರ ಪ್ರತಿಭೆಗೆ ಮೀರಿದ ಮಾನಸಿಕ ಅನಾರೋಗ್ಯ ಲಕ್ಷಣಗಳನ್ನು ಕಾಣಿಸಿಕೊಟ್ಟಿದೆ.
ಯಾರು ಹೆಚ್ಚು ನಯ, ವಿನಯ, ಸುಸಂಸ್ಕೃತ ನಡವಳಿಕೆಗಳನ್ನು ಬಿಂಬಿಸಿದ್ದಾರೋ ಅವರು ತಮ್ಮ ಪ್ರತಿಭೆಗೆ ಒಂದು ವಿಶಿಷ್ಟ ಸ್ವಾಭಾವಿಕ ಎನಿಸುವಂತಹ ಸರಳ-ಸುಂದರ-ಸಹಜ ಆಭರಣದಂತಹ ಮೆರುಗನ್ನು ತೊಟ್ಟುಕೊಂಡು ಅಪಾರ ಜನಪ್ರೀತಿ ಗಳಿಸಿಕೊಂಡಿರುವುದು ಸುಳ್ಳಲ್ಲ.
ಸಂಕಲನ 6/9/2022
No comments:
Post a Comment