Sunday, September 4, 2022

ಒಂದು ಲಕ್ಷ ಹೂವಿನ ಗಣಪ

 ಭಾನುವಾರ, ಸಪ್ಟಂಬರ 4, 2022 

ಶ್ರಂಗೇರಿ ಶಾರದಾ ಮಠ, ಚಾಮರಾಜಪೇಟೆ, ಬೆಂಗಳೂರು 

60 ನೇ ಬೆಂಗಳೂರು ಗಣೇಶ ಉತ್ಸವ ದ ಅಂಗವಾಗಿ, ಒಂದು ಲಕ್ಷ ಹೂವಿನ 25 ಅಡಿ ಗಣಪನನ್ನು ಶಾರದಾ ಮಠದ ಸಭಾಂಗಣದಲ್ಲಿ ಇರಿಸಲಾಗಿದೆ. ಸಾವಿರಾರು ಭಕ್ತರು ಇದನ್ನು ವೀಕ್ಷಿಸಲು ನಾನಾ ಕಡೆಗಳಿಂದ ಬಂದು ಕಣ್ತುಂಬಿ ಕೊಳ್ಳುತ್ತಿರುವರು, ಫೋಟೋ, ಸೆಲ್ಫಿ ಗಳನ್ನು ಕ್ಲಿಕ್ಕಿಸಿಕೊಳ್ಳುತಿದ್ದರು.




ನಾವೂ ಇಂದು ಮಧ್ಯಾಹ್ನದ ಹೊತ್ತಿಗೆ ಅಲ್ಲಿಗೆ ಹೋಗಿ ಈ ಗಣಪನನ್ನು ನೋಡಿ ಬಂದೆವು. 


ಬೇರೆ ಬೇರೆ ಬಣ್ಣದ ಹೂವುಗಳನ್ನು ಕಲಾತ್ಮಕವಾಗಿ ಆರಿಸಿ, ಅವುಗಳನ್ನು ಗಣಪನ ಆಕಾರದಲ್ಲಿ ಮಾಡಿದ ಪೀಠಕ್ಕೆ ಹೂವುಗಳನ್ನು ಸೇರಿಸಲಾಗಿತ್ತು.


ಹತ್ತಿರದಲ್ಲೇ ಇನ್ನೊಂದು ತಾತ್ಕಾಲಿಕ "ಉಲ್ಲಾಸ" ಮಂಟಪ ದಲ್ಲಿ, ಮತ್ತೊಂದು ಬ್ರಹತ್ ಗಣಪನ ಮೂರ್ತಿಯನ್ನೂ ಇರಿಸಲಾಗಿತ್ತು.




ಈ ಮಂಟಪದಲ್ಲಿ ಹಲವಾರು ಭಕ್ತರು ತಮ್ಮ ಇಷ್ಟಾರ್ಥ, ಹರಕೆ ಗಳಿಗೆ ಪೂಜೆ, ಅರ್ಚನೆ, ಹೋಮಗಳನ್ನೂ ಮಾಡಿಸು ತಿದ್ದರು.



ಅದೊಂದು ಹಬ್ಬದ ವಾತಾವರಣ, ಗಣೇಶ ಉತ್ಸವದ ಸಂಭ್ರಮ.



ನಾವು ಸುಮಾರು ಒಂದು ಗಂಟೆ ಅಲ್ಲಿದ್ದು, ಅಲ್ಲಿಂದ ಹೊರಟೆವು.
ಬರೆದಿರುವುದು ಸೋಮವಾರ, 5/9/2022

No comments:

Post a Comment