Sunday, September 29, 2024

ಮಲೆನಾಡು ಉತ್ಸವ

 Sunday, 29th September 2024

ಇಂದು ನಾವು ಬೇರೆ ಕಾರ್ಯಕ್ರಮಗಳ ಜತೆಗೆ, ಜಯನಗರದಲ್ಲಿ ನಡೆಯುತ್ತಿರುವ ಮಲೆನಾಡು ಉತ್ಸವಕ್ಕೆ ಸಹಾ ಹಾಜರಾಗಿದ್ದೆವು.

ಇದೇ ಸೆಪ್ಟೆಂಬರ್ 29 ರ ಭಾನುವಾರ   ಮಲೆನಾಡು ಉತ್ಸವ  ಎಂಬ ಸಾಂಸ್ಕೃತಿಕ ಮೇಳ ಬೆಂಗಳೂರು ನ  ಜಯನಗರ 7 ನೇ ಹಂತದ ನ್ಯಾಷನಲ್ ಕಾಲೇಜ್ ಆವರಣದಲ್ಲಿ ಇರುವ ಹೆಚ್ ಎನ್  ಕಲಾಕ್ಷೇತ್ರ ದಲ್ಲಿ ಆಯೋಜಿಸಿದ್ದೇವೆ.

ಬೆಳಿಗ್ಗೆ 10 ರಿಂದ  ರಾತ್ರಿ 10 ರ ವರೆಗೂ ಬ್ಯಾಕ್ ಟು ಬ್ಯಾಕ್  ಕಲ್ಚರಲ್ ಇವೆಂಟ್ಸ್ ನಡೆಯಲಿದೆ.

 1 ) ಬೆಳಿಗ್ಗೆ 10 ಕ್ಕೆ ಯಕ್ಷಗಾನ ಗಾನವೈಭವ 

 




ರಾಘವೇಂದ್ರ ಮಯ್ಯ, ಸೃಜನ್ ಗಣೇಶ ಹೆಗ್ಡೆ ಮತ್ತು ಭರತ್ ಶೆಟ್ಟಿ ಸಿದ್ಧಕಟ್ಟೆ ಇವರಿಂದ 

ಹಿಮ್ಮೆಳ : ಕೋಟ ಶಿವಾನಂದ ಮತ್ತು ಅಕ್ಷಯ್ ಆಚಾರ್ ಬಿದ್ಕಲ್ ಕಟ್ಟೆ.

2 )ಬೆಂಗಳೂರು ನ ವ್ಯೂಹ ತಂಡ ದಿಂದ 

 ನವರಸ ರಾಮಾಯಣ -  ನೃತ್ಯ ರೂಪಕ.

3,)  ಶೃಂಗೇರಿ ರಂಗಮಿತ್ರ ತಂಡದಿಂದ - ಮಲೆನಾಡು ಭಾಷೆ ಯ ಹಾಸ್ಯ ನಾಟಕ -    ಗುಡುಗು ಹೇಳಿದ್ದೇನು?

ಮೂಲಕಥೆ : ಪೂರ್ಣಚಂದ್ರ ತೇಜಸ್ವಿ ,  ನಿರ್ವಹಣೆ : ಬಿ ಎಲ್ ರವಿಕುಮಾರ್ 

4 ) ಗುತ್ತಳಿಕೆ ಕೇಶವ ಮತ್ತು ತಂಡದಿಂದ -     ಗಾನ ಗೌಜಿ ಗಮ್ಮತ್ತು 

 5 ) ಉಡುಪಿ ಜಿಲ್ಲೆ ಹಾಲಾಡಿ ಯ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಯಿಂದ 


ಮಂದ್ರ ಬೆಳಕಿನ ಯಕ್ಷಗಾನ - 
    ಅಭಿಮನ್ಯು ಕಾಳಗ.

 *+ಜೊತೆಗೆ ಮಲೆನಾಡ ಆಹಾರ ಮೇಳ -   *+  ಸ್ನೇಹ ಮಿಲನ -  *+  ಸಾಧಕ ಗೌರವ - *+ ಸೆಲ್ಫಿ ಸ್ಟ್ಯಾಂಡ್ 

 ಮಧ್ಯಾಹ್ನ ಮಲೆನಾಡ ಶೈಲಿ ಯ ಸರಳ ಭೋಜನ ಉಚಿತವಾಗಿ ನೀಡಲಾಗುವುದು.

ಪ್ಲೀಸ್ ನೊಟ್...   ಎಲ್ಲಾ ಕಾರ್ಯಕ್ರಮ ಗಳಿಗೆ ಉಚಿತ ಪ್ರವೇಶ ವಿದೆ 


ಮತ್ತು ಎಲ್ಲರಿಗೂ ಮುಕ್ತ ಪ್ರವೇಶವಿದೆ.

 ಹಿಂದಿನ 2 ವರ್ಷ ಅತ್ಯುತ್ತಮ ಸಹಕಾರ ಪ್ರೋತ್ಸಾಹ ನೀಡಿ ಸಹಕರಿಸಿದ್ದೀರಿ.

 ಹಾಗೇ ಈ ವರ್ಷವೂ ದಿನವಿಡೀ ಉಪಸ್ಥಿತರಿದ್ದು ಉತ್ತೇಜನ ನೀಡಬೇಕಾಗಿ ಮನವಿ.

  ನಿಮ್ಮ ಆಗಮನ ವೇ ಅತ್ಯಂತ ದೊಡ್ಡ ಸಹಕಾರ.-   ಧನ ಸಹಾಯ ಕ್ಕೆ ಸ್ವಾಗತ ವಿದೆ.- ದೇಣಿಗೆ ಕಡ್ಡಾಯ ಅಲ್ಲ.

ಇದೊಂದು ವೈಯಕ್ತಿಕ ಮೆಸೇಜ್ ಆಗಿದೆ. 

ಕುಟುಂಬ ಸಮೇತ ಬನ್ನಿ ,ಸ್ನೇಹಿತರ ಒಡಗೂಡಿ ಬನ್ನಿ. ಕಾಯುತ್ತಿರುತ್ತೇನೆ..... ಕರೆ ಮುಗಿಸುವ ಮುನ್ನ..

ನಾನು ರಮೇಶ್ ಬೇಗಾರ್ ಶೃಂಗೇರಿ. 


Posted 30/9/2024

No comments:

Post a Comment