ಸೋಮವಾರ, 17/2/2025
ಬಾರಕೂರು, ಬ್ರಹ್ಮಾವರ
ಆಲೆಮನೆ ಬೆಲ್ಲ (Aalemane Jaggery)ಎಂದರೆ ನೈಸರ್ಗಿಕವಾಗಿ ಕಬ್ಬಿನ ರಸದಿಂದ ತಯಾರಿಸಿದಂತಹ ಬೆಲ್ಲ ಉತ್ತರ ಕನ್ನಡದ ಆಲೆಮನೆ ಬೆಲ್ಲ ಕರ್ನಾಟಕದಲ್ಲಿ ಅತ್ಯಂತ ಖ್ಯಾತಿಗೆ ಒಳಗಾಗಿದೆ. ಏಕೆಂದರೆ ನೈಸರ್ಗಿಕ ಆಲೆಮನೆ ಬೆಲ್ಲ ದಿನನಿತ್ಯದ ಸೇವನೆಯಿಂದ ರಕ್ತದಲ್ಲಿ ಇರುವಂತಹ ಹಿಮೋಗ್ಲೋಬಿನ್ ಹೆಚ್ಚಾಗಲು ಸಹಾಯ ಮಾಡುತ್ತದೆ. ಅದು ಕೂಡ ಔಷಧ ತೆಗೆದುಕೊಂಡು ಹೆಚ್ಚಾಗದೇ ಸಹಜ ನೈಸರ್ಗಿಕ ಆಹಾರದಿಂದಲೇ ಹೆಚ್ಚಾಗುವಂತೆ ಆಲೆಮನೆ ಬೆಲ್ಲ ಸಹಾಯಮಾಡುತ್ತದೆ ಇದನ್ನೇ ಅಡಿಗೆಮನೆಯಲ್ಲಿ ಧನ್ವಂತರಿ ಯೂಟ್ಯೂಬ್ ಸರಣಿಯಲ್ಲಿ ಮಾಹಿತಿ ನೀಡಿದ್ದು ಇದರಿಂದ ಹಿಮೋಗ್ಲೋಬಿನ್ ಹೆಚ್ಚಾದ ಶ್ರೋತೃಗಳು ಹಲವರು ಈಗಾಗಲೇ ನನಗೆ ಮಾಹಿತಿ ನೀಡಿರುತ್ತಾರೆ. ಆಲೆಮನೆ ಬೆಲ್ಲ ಮಕ್ಕಳಿಗೆ ಅಚ್ಚುಮೆಚ್ಚು.
ಬೃಹತ್ ಗಾತ್ರದ ಒಲೆ, ಮೇಲೊಂದು ಕಪ್ಪಗಿನ ಬಾಣಲೆ, ಇನ್ನೇನು ಮೂಗಿಗೆ ಬಡಿಯುವ ಪರಿಮಳ. ಇದುವೇ ಆಲೆಮನೆ ಬೆಲ್ಲದ (Special Jaggery) ತಯಾರಿಯ ಶೈಲಿ.. ಆದ್ರೀಗ ಬೆಲ್ಲ ತಯಾರಕರ ಪಾಲಿಗೆ ಬೆಲ್ಲದ ಅಚ್ಚು ಕಹಿಯಾಗಿದೆ. ಸಹಜವಾಗಿಯೇ ಕಬ್ಬು ಬೆಳೆಗಾರರಲ್ಲೂ ನಿರಾಶೆ ಉಂಟು ಮಾಡಿದೆ. ಆಲೆಮನೆ ಬೆಲ್ಲದ ಅರಮನೆಯ ಶೈಲಿಯೇ ಹೀಗೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಕ್ಕರೆ ಕಾರ್ಖಾನೆಯಿಂದ ಕಬ್ಬು ಸಿಗುವ ವರೆಗೆ ಬೆಲ್ಲ ತಯಾರು ಮಾಡುತ್ತಾರೆ.
ಅಂದು ನಾವು ಈ ಪರಿಯ ಬೆಲ್ಲವನ್ನು ಹುಡುಕಿಕೊಂಡು ಬಾರಕೂರು, ಮತ್ತು ಸನಿಹದ ಬೆಣ್ಣೆ ಕುದುರಿಗೆ ಹುಡುಕಿಕೊಂಡು ಹೋಗಿ, ಅಲ್ಲಿ ಓರ್ವ ಬೆಲ್ಲ ತಯಾರಕನನ್ನು ಭೇಟಿಯಾಗಿ ಆಲೆ ಮನೆ ಬೆಲ್ಲವನ್ನೂ ಖರೀದಿಸಿದೆವು.
ಒಂದು ಬಾಕ್ಹಿಗೆ 100 ರುಪಾಯಿ.
Posted 26/2/2025
No comments:
Post a Comment