ಭಾನುವಾರ, ಫೆಬ್ರುವರಿ 16 , 2025
ವಿನಾಯಕ ದೇವಸ್ಥಾನ ಸಭಾಂಗಣ, ಅರ,ಟಿ. ನಗರ, ಬೆಂಗಳೂರು.
ಪ್ರತಿ ವರ್ಷ ನಡೆಯುವಂತೆ, ಪಾ. ವೆಂ. ಟ್ರಸ್ಟ್ ನ ಸಹಯೋಗದಲ್ಲಿ ನಡೆಯುವ ಶಿವರಾಮ ಕಾರಂತ ವೇದಿಕೆಯ ಕಾರ್ಯಕ್ರಮವು ಶ್ರೀಯುತ ಪುರುಶೋತಮ ಬಿಳಿಮಲೆ ಹಾಗೂ ಬಿ.ಕೆ. ಸುಮತಿ ಅವರು ಅತಿಥಿಗಲಾಗಿದ್ದು , ಸಂಪನ್ನಗೊಂಡಿತು.
ಕಾರಂತ ವೇದಿಕೆಯ ಅಧ್ಯಕ್ಷೆ ಡಾ ದೀಪ ಫಡ್ಕೆ ಯವರು ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನೂ, ನೆರೆದ ಸಭಿಕರನ್ನೂ ಸ್ವಾಗತಿಸಿದರು.
ಹಿರಿಯ ಸಾಹಿತಿ, ಲೆಖಕಿ , ಬಿ.ಕೆ. ಸುಮತಿ ತಮ್ಮ ಉಪನ್ಯಾಸದಲ್ಲಿ ಪಾ.ವೆಂ ಅವರ ಕೃತಿಗಳ ಬಗ್ಗೆ, ಅವರ ಸಾಹಿತ್ಯಾಸಕ್ತಿಯ ಪರಿಚಯ ಮಾಡಿದರು.
![]() |
ಪುರುಷೋತ್ತಮ ಬಿಳಿಮಲೆ |
ಶ್ರೀ ಪೂರುಶೊತ್ತಮ ಬಿಳಿಮಲೆ, ಹಿರಿಯ ಸಾಹಿತಿ, ಅಧ್ಯಕ್ಷರು ಕನ್ನಡ ಅಭಿವ್ರದ್ಧಿ ಪ್ರಾಧಿಕಾರ, ತಮ್ಮ ಭಾಷಣದಲ್ಲಿ ಪಾ.ವೆಂ . ಅವರು ಶ್ರೇಷ್ಠ ಸಾಹಿತಿಯಾಗಿದ್ದು "ಪದಾರ್ಥ ಚಿಂತಾಮಣಿ" ಎಂಬ ಕೃತಿಯನ್ನು ರಚಿಸಿದ್ದು ಸಾಹಿತ್ಯ ಲೋಕಕ್ಕೆ ಅತ್ಯನ್ನುತ ಕೊಡುಗೆಯಾಗಿದೆ ಎಂದರು.
ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರು ಅಚ್ಚುಕಟ್ಟಾಗಿ ನಿರೂಪಣೆ ಮಾಡಿದ್ದು, ಶ್ರೀಮತಿ ಛಾಯ ಉಪಾಧ್ಯ ಧನ್ಯವಾದ ಸಮರ್ಪನೆ ಮಾಡಿದರು.
ಶಿವರಾಮ ಕಾರಂತ ವೇದಿಕೆಯ ಫೆಬ್ರವರಿ ತಿಂಗಳ ಕಾರ್ಯಕ್ರಮವು ಅರ್ಥವತ್ತಾಗಿ ಮೂಡಿಬಂತು.
ಬರೆದಿರುವುದು 20/2/2025
No comments:
Post a Comment