ನವಂಬರ 28, 2021
ಶ್ರೀ ತಿರು ಶ್ರೀಧರ್ ಅವರ ಲೇಖನ (ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದು.)
MEMORIES OF BIRTHIMANE,BIRTHDAYS, POOJA, CELEBRATIONS, FESTIVALS, VISITS, DRAMA, MUSIC, YAKSHAGANA, GET-TOGETHERS, WEDDING ENGAGEMENTS, WEDDINGS, WEDDING ANNIVERSARY, BRAHMOPADESHA, NAMAKARANA, SEEMANTHA, BOOK RELEASE, BOOK REVIEW, AND SHRADDHANJALI....
ನವಂಬರ 28, 2021
ಶ್ರೀ ತಿರು ಶ್ರೀಧರ್ ಅವರ ಲೇಖನ (ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದು.)
ಭಾನುವಾರ, 28 ನವಂಬರ 2021
ತರಳಬಾಳು ಗ್ರಂಥಾಲಯ , ಅರ್.ಟಿ. ನಗರ, ಬೆಂಗಳೂರು.
ಲಕ್ಷಿನಾರಾಯಣ ಚಡಗ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಹಾಗೂ ರೂವಾರಿ ಪಾ. ಚಂದ್ರಶೇಖರ ಚಡಗ ಅವರ ನೇತೃತ್ವದಲ್ಲಿ, ಶಿವರಾಮ ಕಾರಂತ ವೇದಿಕೆ, ಮತ್ತು ತರಳಬಾಳು ಗ್ರಂಥಲಯದ ಸಹಯೋಗದಲ್ಲಿ ಎಂದಿನಂತೆ ಈ ವರ್ಷವೂ ಪುಸ್ತಕ ಸಪ್ತಾಹದ ಅಂಗವಾಗಿ ಗ್ರಂಥಾಲಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಂಗಮವಾಣಿ (ಮೊಬೈಲ್) ಯ ವ್ಯಸನವನ್ನು ಕಡಿಮೆಮಾಡಿ ಪುಸ್ತಕ ಓದುವಿಕೆ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಶ್ರೀ ಜಯರಾಂ ರಾಯಪುರ |
ಶ್ರೀಮತಿ ರಾಧಾ ರಾಮಸ್ವಾಮಿ |
ಶ್ರೀ ಸಿ. ಅರ್. ಸತ್ಯ ಅವರು ಪುಸ್ತಕದ ದಿಜಿಟಲೀಕರಣದಿಂದ ಗ್ರಂಥಾಲಯದ ಮಹತ್ವ ಕಡಿಮೆಯಗುತಿದ್ದು ಹೆಚ್ಚು ಹೆಚ್ಚು ಓದುಗರು ಮನೆಯಿಂದಲೇ ಕಂಪ್ಯೂಟರ್, ಮೊಬೈಲ್ ಮೂಲಕ ಓದುವ ಹವ್ಯಾಸ ಬಳಸಿಕೊಳ್ಳುವುದೂ ಸಂತೋಷದ ವಿಷಯ ಎಂದೂ ತಿಳಿಸಿದರು.
ಬರೆದಿರುವುದು 29 ನವಂಬರ 2021
ವೇದಿಕೆಯ ಪರವಾಗಿ ವರದಿ :
ಶಶಿಕಲಾ ಆರ್
ಸಹ ಕಾರ್ಯದರ್ಶಿ, ಶಿವರಾಮ ಕಾರಂತ ವೇದಿಕೆ
ಆತ್ಮೀಯರೇ,
ದಿನಾಂಕ 28.11.2021 ಸಂಜೆ 4.30ಕ್ಕೆ, ತರಳಬಾಳು ಗ್ರಂಥಾಲಯ, ಆರ್ ಟಿ ನಗರ ಇಲ್ಲಿ
ಲಕ್ಷೀನಾರಾಯಣ ಚಡಗ ಮೆಮೋರಿಯಲ್ ಟ್ರಸ್ಟ್ ಮತ್ತು ತರಳಬಾಳು ಕೇಂದ್ರ ಸಂಯುಕ್ತ ಆಶ್ರಯ ಹಾಗೂ ಥೋರೋ ಫೌಂಡೇಶನ್ ಸಹಕಾರ ದಲ್ಲಿ ಶಿವರಾಮ ಕಾರಂತ ವೇದಿಕೆಯಿಂದ "ಗ್ರಂಥಾಲಯ ದಿನ " ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪಾ.ಚಂದ್ರಶೇಖರ್ ಚಡಗರವರು, ಮ್ಯಾನೇಜಿಂಗ್ ಟ್ರಸ್ಟಿ ಇವರ ನೇತೃತ್ವದಲ್ಲಿ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಜಯರಾಮ್ ರಾಯಪುರ ರವರು, ಮುಖ್ಯ ಅತಿಥಿಗಳಾಗಿ ಶ್ರೀಮತಿ ರಾಧಾ ರಾಮಸ್ವಾಮಿ, ಶಿಕ್ಷಣ ತಜ್ಞೆ ಮತ್ತು ಶ್ರೀ ಶ್ರೀನಿವಾಸ ತಿವಾರಿ, ಸಹಾಯಕ ಪ್ರಾಧ್ಯಾಪಕರು, ಸಂಜಯಗಾಂಧಿ ಬಿಎಡ್ ಕಾಲೇಜು ಇವರುಗಳು ಭಾಗವಹಿಸಿದ್ದರು. ವೇದಿಕೆಯ ಅಧ್ಯಕ್ಷತೆಯನ್ನು ಡಾ. ನಿರ್ಮಲ ಪ್ರಭು ವಹಿಸಿದ್ದರು.
ಉದ್ಘಾಟಕರ ಭಾಷಣ:
ಶ್ರೀ ಜಯರಾಮ್ ರಾಯಪುರ. ವಿದ್ಯಾರ್ಥಿ ಜೀವನದ ಬಹುಪಾಲು ಗ್ರಂಥಾಲಯಗಳಲ್ಲಿ ಕಳೆದಿರುವುದಾಗಿ, ಮೈಸೂರಿನಲ್ಲಿ ಗ್ರಂಥಾಲಯ ಸ್ಥಾಪಿಸಿದ್ದು, ಕನ್ನಡದಲ್ಲಿ ವೈಚಾರಿಕ ಬರಹಗಳಿಗೆ ಪೂರಕವಾದ ನಿಯತಕಾಲಿಕೆ " ಸಮಾಜಮುಖಿ" ಮಾಸ ಪತ್ರಿಕೆ ಹೊರತರುತ್ತಿರುವುದರ ಉದ್ದೇಶ ತಿಳಿಸಿದರು. ಕರ್ನಾಟಕ ಮತ್ತು ಭಾರತದ ಇತಿಹಾಸದ ಸುತ್ತ ಅನೇಕ ನಾಟಕಗಳು ಬರೆದಿದ್ದು, ಶಹಜಹಾನ್ ನ ನಾಲ್ಕು ಮಕ್ಕಳ ಮಧ್ಯೆ ಯುದ್ಧ,ಇದು ನಮ್ಮ ಮಹಾಭಾರತದ ತರ ಕಾಣಿಸಿತು. ಅಲ್ಲಿ ಕಾಣುವ ಯುದ್ಧ, ಸೋಲು, ಗೆಲವು, ಧರ್ಮ ಜಿಜ್ಞಾಸೆ ಮುಂತಾದವುಗಳ ಬಗ್ಗೆ ಅನೇಕ ತುಲನೆಗಳನ್ನು ತಾವು ಬರೆದ ಶಹಜಹಾನ್ ನಾಟಕದಲ್ಲಿ ಕಾಣಬಹುದು, ಹಲವಾರು ಪ್ರದರ್ಶನಗಳನ್ನು ಇದು ಕಾಣುತ್ತಿರುವುದಾಗಿ ಮಾತನಾಡಿದರು.
ಕರ್ನಾಟಕ ಇತಿಹಾಸಕ್ಕೆ ಬಂದರೆ ಚಾವುಂಡರಾಯ ದೊಡ್ಡ ಮಟ್ಟದ ಕವಿ. ರನ್ನನಿಗೆ ಆಶ್ರಯ ಕೊಟ್ಟವನು. ಬಾಹುಬಲಿ ವಿಗ್ರಹ ಕೆತ್ತಿಸಿ, ಅದರಲ್ಲಿ ತನ್ನತನ ಕಂಡುಕೊಂಡಿದ್ದಾನೆ. ಸಾಂಸ್ಕೃತಿಕ, ಸಾಹಿತ್ಯಿಕ ಪರಂಪರೆಗೆ ಬಹುದಾಡ್ಡ ಕೊಡುಗೆ ಕೊಟ್ಟಿದ್ದು, ಆ ವಿಷಯಗಳ ಬಗೆ ನಾಟಕ ಬರೆದಿರುವುದರ ಬಗ್ಗೆ ವಿಸ್ತಾರವಾಗಿ ಹೇಳಿದರು.
ಸಾಧನೆ? ಯಾವುದು ನನ್ನ ಸಾಧನೆ ಆಗಬೇಕು. ಮಕ್ಕಳಿಗೆ ತಿಳುವಳಿಕೆ ಬರಬೇಕು ಅಂದರೆ ಗ್ರಂಥಗಳನ್ನು ಓದಬೇಕು, ಅದು ಸಾಧಿಸುವ ಜ್ಞಾನ ಕೊಡುತ್ತದೆ. ಗ್ರಂಥಾಲಯ ನಮ್ಮ ಮನಸ್ಸಿನ ಅವಾಸಸ್ಥಾನವಾಗಬೇಕು ಎಂದು ಮಕ್ಕಳನ್ನುದ್ದೇಶಿಸಿ ಹೇಳಿ ಮಾತು ಮುಗಿಸಿದರು
ಅತಿಥಿ ಭಾಷಣ:
ರಾಧಾ ರಾಮಸ್ವಾಮಿಯವರು ಶಿಕ್ಷಣ ತಜ್ಞೆ, ಮಾತನಾಡುತ್ತ ಪುಸ್ತಕಗಳು ನಮ್ಮ ಜೀವನದ ಅವಿಭಾಜ್ಯ ಅಂಗ, ಅತ್ಯುತ್ತಮ ಸ್ನೇಹಿತ ಕೂಡ. ವೇದಿಕೆಯಲ್ಲಿ ಮಕ್ಕಳಿದ್ದೀರಿ ನೀವು ಪುಸ್ತಕಗಳನ್ನು ಓದಿ, ಅಯಸ್ಕಾಂತದಂತೆ ನಿಮ್ಮನ್ನು ಸೆಳೆಯುತ್ತವೆ. ಓದುವ ಹವ್ಯಾಸ ಮಾಡಿಕೊಳ್ಳಿ ಮನಸ್ಸು ತೀಕ್ಷ್ಣವಾಗುತ್ತೆ, ತೀಡಿದಂತೆ ಆಗುತ್ತೆ, ಸಾಕಷ್ಟು ಕ್ರಿಯಾಶೀಲತೆಯಾಗುತ್ತೆ. ಪುಸ್ತಕದ ಮೂಲಕ ಪರಿಹಾರ ಇದೆ ಎಂಬ ಸತ್ಯವನ್ನು ತಾವು ಕಂಡುಕೊಂಡಿದ್ದು, ಮೊಬೈಲ್ ಕಡಿಮೆ ಉಪಯೋಗಿಸಿ, ಪುಸ್ತಕ ಜಾಸ್ತಿ ಓದಿ ಅದ್ಭುತ ನಾಗರೀಕರಾಗುತ್ತೀರಿ ಹೀಗೆ ಅದ್ಭುತ ವಾಗಿ ಮಕ್ಕಳಿಗಗ ಮಾರ್ಗದರ್ಶನ ನೀಡಿದರು.
ಅತಿಥಿ ಭಾಷಣ:
ಶ್ರೀನಿವಾಸ ತಿವಾರಿ, ಸಹಾಯಕ ಪ್ರಾಧ್ಯಾಪಕರು
ವೇದಿಕೆಯಲ್ಲಿ ಪ್ರಜ್ಞಾವಂತ ಹಿರಿಯರಿದ್ದೀರಿ, ಆದ್ದರಿಂದ ನಾನು ಮಕ್ಕಳನುದ್ದೇಶಿಸಿ ನಾಲ್ಕು ಮಾತು ಆಡುವೆ ಎನ್ನುತ್ತಾ ವಿಧ್ಯಾರ್ಥಿಗಳು ಪಠ್ಯಪುಸ್ತಕಗಳ ಜೊತೆಗೆ ಇತರೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ಅಂತಹ ಹವ್ಯಾಸ ನಿಮ್ಮನ್ನು ರೂಪಿಸುತ್ತದೆ. ಮೊಬೈಲ್ addiction ಜಾಸ್ತಿ ಆಗಿದ್ದು, ಅದು ಡ್ರಗ್ಸ್ addictionಗೆ ಸಮವಾಗಿದೆ. ಕೆಲವರು ನಿದ್ದೆ ಬರುವುದಿಲ್ಲ ಎಂದು ಏನೇನೋ ಪ್ರಯತ್ನಗಳನ್ನು ಮಾಡ್ತಾರೆ. ಓದುತ್ತಾ ಮಲಗಿಕೊಳ್ಳಿ, ನಿದ್ದೆ ತಾನಾಗಿಯೇ ಬರುವುದು. ಮಕ್ಕಳಿಗೆ ಬಡತನದ ಬೆಲೆ ಗೊತ್ತಾಗಬೇಕು. ಆಗ ಹಣಕ್ಕೆ, ಸಮಯಕ್ಕೆ ಬೆಲೆ ಕೊಡುವುದು ತಿಳಿಯುತ್ತಾರೆ. ಗ್ರಂಥಾಲಯಗಳನ್ನು ಬಳಸಿಕೊಳ್ಳಿ, ಹವ್ಯಾಸವಾಗಿ ರೂಢಿಸಿಕೊಳ್ಳಿ, ವ್ಯಕ್ತಿತ್ವ ರೂಪಿತವಾಗುತ್ತದೆ. ಶಿಕ್ಷಣದ ಮೂಲಕ ನಿರಂತರ ಓದುವ ಸಮಾಜ ಸೃಸ್ಠಿಸಬೇಕು. ಅದೇ ನಮ್ಮ ರಾಷ್ಟ್ರೀಯ ಗುರಿ. ಹೀಗೆ ಮಕ್ಕಳು ತಮ್ಮನ್ನು ರೂಪಿಸಿಕೊಳ್ಳಲು ಗ್ರಂಥಾಲಯ ಮತ್ತು ಓದಿನ ಪ್ರಾಮುಖ್ಯತೆಯ ಬಗ್ಗೆ ಮಾತನಾಡಾದರು.
ವಿಶೇಷ ಭಾಷಣ:
ಸಿ.ಆರ್. ಸತ್ಯ ರವರು ವಿಜ್ಞಾನಿ, ಸಾಹಿತಿ ಇವರು
ಕನ್ನಡ ಪುಸ್ತಕಗಳ ಓದುವುದು, ಕೊಂಡುಕೊಳ್ಳುವುದರ ಬಗ್ಗೆ ಬಹಳ ವ್ಯತ್ಯಾಸ ಬರ್ತಾ ಇರುವುದು ಸಾಮಾನ್ಯವಾಗಿದೆ. ನಮ್ಮ ಕನ್ನಡಿಗರು ದೇಶದ ಮತ್ತು ಪ್ರಪಂಚದಾದ್ಯಂತ ಹರಡಿಕೊಂಡರು. ಇರುವಲ್ಲಿಯೇ ಕನ್ನಡ ಸಂಘಗಳ ಕಟ್ಟಿಕೊಂಡರು. ನಮ್ಮ ಹಾಗೆ ಪುಸ್ತಕ ಭಂಡಾರ ಉಪಯೋಗಿಸಲು ಅವರಿಗೆ ಸಾದ್ಯವಿಲ್ಲ. ಗಣಕೀಕರಣ (ಡಿಜಿಟಲೀಕರಣ), ದಿಂದ upload ಮಾಡುವ ವಿಷಯ ಹತ್ತೇ ನಿಮಿಷದಲ್ಲಿ (ಮೊಬೈಲ್ ಮತ್ತು ಲ್ಯಾಪ್ಟಾಪ್ ಗಳ ಮೂಲಕ) ಸಾವಿರಾರು ಓದುಗರು ಓದುತ್ತಾರೆ. ಬರುವ ಐದು ಹತ್ತು ವರ್ಷಗಳಲ್ಲಿ ವಿಧ್ಯಾಭ್ಯಾಸ, ಸಾಹಿತ್ಯಾಭ್ಯಾಸ ಮೊಬೈಲ್ ಅಥವಾ ಲ್ಯಾಪ್ಟಾಪ್ ಮೂಲಕವೇ ಆಗಬಹುದು. ಬದಲಾಗುವ ಪದ್ಧತಿಯನ್ನು ಒಪ್ಪಿಕೊಳ್ಳಬೇಕು ಎಂದು ಆಧುನಿಕ ಸಮಾಜದ ಓದು ಮತ್ತು ತಾಂತ್ರಿಕತೆಯ ಮಹತ್ವ ತಿಳಿಸಿದರು.
ಅಧ್ಯಕ್ಷೀಯ ಭಾಷಣ :
ನಿರ್ಮಲ ಪ್ರಭು ಬರಹಗಾರರು, ಶಿ.ರಾ ಕಾರಂತ ವೇದಿಕೆ ಅಧ್ಯಕ್ಷರು
ಪುಸ್ತಕಗಳ ಬಗ್ಗೆ ಜನಜಾಗೃತಿ ಮೂಡಿಸಬೇಕು, ಸದ್ಭಳಕೆ ಮಾಡಿಕೊಳ್ಳಬೇಕು, ಓದಬೇಕು. ನಮ್ಮ ಮಕ್ಕಳಿಗೂ ಅಭಿರುಚಿ ಹುಟ್ಟಿಸುವ ಪ್ರಯತ್ನವನ್ನು ಮಾಡಬೇಕು. ಜ್ಞಾನಕ್ಕೆ ಸಮಾನವಾದುದು ಮತ್ತೊಂದಿಲ್ಲ. ಜ್ಞಾನ ಬರುವುದು ಪುಸ್ತಕಗಳಿಂದ, ಪುಸ್ತಕಾಲಯಗಳಿಂದ. ಇದರ ಉತ್ತಮ ಸದುಪಯೋಗವಾಗಬೇಕು ಮುಂತಾಗಿ ಮಾತನಾಡಿದರು, ವೇದಿಕೆಯ ಭಾಷಣಕಾರರ ಮಾತುಗಳನ್ನು ಪ್ರಶಂಸಿಸಿದರು.
ವೇದಿಕೆಯಲ್ಲಿ ಹಿಂದಿನ ದಿನ ಶಾಲಾ ಮಕ್ಕಳಿಗೆ
ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಪ್ರಬಂಧ ಹಾಗೂ ರಸಪ್ರಶ್ನೆ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿತ್ತು. ಎಲ್ಲದರಲ್ಲೂ ಮೊದಲ ಮೂರು ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನದ ರೂಪವಾಗಿ ಸ್ವಪ್ನ ಬುಕ್ ಹೌಸ್ ನ (ಹಣದ ಮೌಲ್ಯದ) ವೋಚರ್ ಗಳನ್ನು ನೀಡಿ ವೇದಿಕೆಯಲ್ಲಿ ಮಕ್ಕಳನ್ನು ಅಭಿನಂದಿಸಲಾಯಿತು.
ಎಂದಿನಂತೆ ಅರ್ಥಪೂರ್ಣವಾದ ನಿರೂಪಣೆ ಶ್ರೀಮತಿ ಇಂದಿರಾ ಶರಣ್ ರವರಿಂದ, ಪ್ರಾರ್ಥನೆ ಶ್ರೀಮತಿ ಮಂಜುಳಾ ಭಾರ್ಗವಿಯವರಿಂದ, ವೇದಿಕೆಯಲ್ಲಿ ಸ್ವಾಗತ ಮತ್ತು ಅತಿಥಿಗಳ ಪರಿಚಯ ಮತ್ತು ತಮ್ಮ ಗ್ರಂಥಾಲಯದ ಹುಟ್ಟು ಮತ್ತು ಇಲ್ಲಿಯವರೆಗೂ ನಡೆದುಬಂದ ಹಾದಿಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು ತರಳಬಾಳು ಕೇಂದ್ರದ ಗ್ರಂಥಾಲಯ ಸ್ಥಾಪಕರು, ಮ್ಯಾನೇಜಿಂಗ್ ಟ್ರಸ್ಟಿ ಆದಂತಹ ಹಿರಿಯರಾದ ಶ್ರೀ ಪಾ. ಚಂದ್ರಶೇಖರ ಚಡಗರವರು.
ಕಮಿಟಿಯ ಸದಸ್ಯರು, ಸಂಸ್ಥೆಗಳ ಮುಖ್ಯಸ್ಥರು, ಸಭಿಕರು, ಶಾಲಾಮಕ್ಕಳು ಮತ್ತು ಪೋಷಕರಿಂದ ಗ್ರಂಥಾಲಯ ಸಭಾಂಗಣ ತುಂಬಿ ವಿಶೇಷ ಕಳೆಯಿಂದ ಕಂಗೊಳಿಸುತ್ತಿತ್ತು.
ಧನ್ಯವಾದಗಳು🙏
Sunday, 28th November 2021
SHRI GAJANANA SEVA, R T. NAGARA, BENGALURU
It was a different kind of Birthday celebrations.
Jagrithi's father is software engineer, learnt Pourohitya, pooja vidhi vidhana etc and a very nice gentleman.
He has performed "AYUSHA HOMA" for long life, happiness of his daughter JAGRUTHI.
Saturday, 27th November 2021
ICON HONEY POOL.
Hennagara Main Road, Kachanayakanahalli
Bommasandra, Bengaluru .560099
Sujatha (Ramakrishna's mother) and Vijaya came from Udupi.
We went from Hebbal, a distance of 46 km through the city traffic, taking about two hours, passing though Electronic city Toll gate.
Udupi Pejavara Matha Sabhangana 27/11/2020 |
Written 28/11/2021
26th November 2021
ಐಷಾರಾಮಿ
*70 ರ ದಶಕದಲ್ಲಿ ದೂರದರ್ಶನವು ಒಂದು ಐಷಾರಾಮಿಯಾಗಿತ್ತು,
*80 ರ ದಶಕದಲ್ಲಿ ಟೆಲಿಫೋನ್ ಒಂದು ಐಷಾರಾಮಿಯಾಗಿತ್ತು,
*90 ರ ದಶಕದಲ್ಲಿ ಕಂಪ್ಯೂಟರ್ ಒಂದು ಐಷಾರಾಮಿಯಾಗಿತ್ತು.
ಇನ್ನು ಮುಂದೆ ಐಷಾರಾಮಿಯೆಂದರೆ ವಿಹಾರಕ್ಕೆ ಹೋಗುವುದಲ್ಲ ಮತ್ತು
ಹೆಸರಾಂತ ಬಾಣಸಿಗರಿಂದ ತಯಾರಿಸಿದ ಆಹಾರವನ್ನು ಸೇವಿಸುವುದಲ್ಲ.
ನಮ್ಮ ಸ್ವಂತ ಹಿತ್ತಲಿನಲ್ಲಿ ಬೆಳೆದ ತಾಜಾ ಸಾವಯವ ಆಹಾರವನ್ನು ತಿನ್ನುವುದೇ ಐಷಾರಾಮಿ.
**ಐಷಾರಾಮಿಯೆಂದರೆ ನಮ್ಮ ಮನೆಯಲ್ಲಿ ಲಿಫ್ಟ್ ಇರುವುದಲ್ಲ ,
**ಐಷಾರಾಮಿಯೆಂದರೆ ಮನೆಯ 3-4 ಮಹಡಿಗಳ ಮೆಟ್ಟಿಲುಗಳನ್ನು ಕಷ್ಟವಿಲ್ಲದೆ ಹತ್ತಿ ಇಳಿಯುವ ಸಾಮರ್ಥ್ಯ,
**ಐಷಾರಾಮಿಯೆಂದರೆ ದೊಡ್ಡ ರೆಫ್ರಿಜರೇಟರನ್ನು ಖರೀದಿಸುವ ಸಾಮರ್ಥ್ಯವಲ್ಲ,
**ಐಷಾರಾಮಿಯೆಂದರೆ ಆಗಾಗ ಬೇಯಿಸಿದ ಆಹಾರವನ್ನು ದಿನಕ್ಕೆ 2-3 ಬಾರಿ ತಿನ್ನುವ ಸಾಮರ್ಥ್ಯ.
**ಐಷಾರಾಮಿಯೆಂದರೆ ಹೋಮ್ ಥಿಯೇಟರ್ ವ್ಯವಸ್ಥೆಯನ್ನು ಹೊಂದುವುದಲ್ಲ,
**ಹಿಮಾಲಯದ ಯಾತ್ರೆಯನ್ನು ವೀಕ್ಷಿಸುವುದಲ್ಲ,
**ಐಷಾರಾಮಿಯೆಂದರೆ ಹಿಮಾಲಯದ ಯಾತ್ರೆಯನ್ನು ಭೌತಿಕವಾಗಿ ಅನುಭವಿಸುವುದು,
**ಅಮೇರಿಕಾದ ಅತ್ಯಂತ ದುಬಾರಿ ಆಸ್ಪತ್ರೆಯಿಂದ ಐಷಾರಾಮಿ ಚಿಕಿತ್ಸೆ ಪಡೆಯುವುದಲ್ಲ.
ಹಾಗಾದರೆ ಈಗ ಐಷಾರಾಮಿ ಎಂದರೇನು ??
👉 ಆರೋಗ್ಯವಾಗಿರುವುದೇ ಐಷಾರಾಮಿ ,
👉 ಸಂತೋಷವಾಗಿರುವುದೇ ಐಷಾರಾಮಿ ,
👉 ದಾಂಪತ್ಯದಲ್ಲಿ ಆನಂದ ವಾಗಿರುವುದೇ ಐಷಾರಾಮಿ ,
👉 ಪ್ರೀತಿಯ ಕುಟುಂಬವನ್ನು ಹೊಂದುವುದೇ ಐಷಾರಾಮಿ ,
👉 ಪ್ರೀತಿಯ ಸ್ನೇಹಿತರೊಂದಿಗೆ ಇರುವುದೇ ಐಷಾರಾಮಿ ,
👉 ಮಾಲಿನ್ಯರಹಿತ ಸ್ಥಳದಲ್ಲಿ ವಾಸಿಸುವುದೇ ಐಷಾರಾಮಿ ,
ಈ ಎಲ್ಲಾ ಸಂಗತಿಗಳು ಅಪರೂಪವಾಗಿ ಮಾರ್ಪಟ್ಟಿವೆ ಮತ್ತು ಇವೇ ನಿಜವಾದ "ಐಷಾರಾಮಿ".
Thursday, 25th November 2021
B705, Ilife Apartment, DevaraBeesanahalli, Bengaluru.
RishiKavitha boy.... Atharv..... 8 months now....
The boy is cute and active.... Fun to play and spend time....
There was nice cake prepared by Mom (Dodda) and it was cut.... with
HAPPY BIRTH DAY...... to you.....
Nice pulav, raitha prepared by Kavitha for lunch.....
Spent some quality time spent....
Seena, the beagle dog. is also part of Celebration.....
ಬೆಂಗಳೂರಿನ ನಾರಾಯಣ ಹೃದಯಾಲಯದ ನಿರ್ದೇಶಕರು ಹಾಗೂ ವಿಶ್ವದ ಅಗ್ರಮಾನ್ಯ ಹೃದಯತಜ್ಞರಲ್ಲಿ ಒಬ್ಬರಾದ ಡಾ ದೇವಿಶೆಟ್ಟಿ ಯವರ ಸಂದೇಶ..
ಇತ್ತೀಚಿನ ಕೆಲ ವರ್ಷಗಳಿಂದ ನಾನು, ನನಗೆ ವೈಯಕ್ತಿಕವಾಗಿ ತೀರಾ ಪರಿಚಿತರಿದ್ದ 8-10 ಜನರನ್ನು ಕಳೆದು ಕೊಂಡಿದ್ದೇನೆ.. ಅದರಲ್ಲೂ 40 ರ ಆಸುಪಾಸಿನಲ್ಲಿದ್ದ ಕೆಲ ಸೆಲೆಬ್ರಿಟಿಗಳು 'ಫಿಟ್ ' ಆಗಿರಲು ಅತೀ ಹೆಚ್ಚು ಶ್ರಮಿಸಿ ಮರಣಿಸಿದ್ದಾರೆ.. ಆದರೆ ಅವರೆಲ್ಲಾ ಕೇವಲ ಫಿಟ್ ಆಗಿರುವಂತೆ, ಸಿಕ್ಸ್ ಪ್ಯಾಕ್ ಹೊಂದಿರುವಂತೆ ಕಾಣುತ್ತಿದ್ದರಷ್ಟೆ....
ಇಂದು ಆ ಪಟ್ಟಿಗೆ ಪುನೀತ್ ರಾಜ್ ಕುಮಾರ್ ಸೇರ್ಪಡೆಯಾಗಿದ್ದಾರೆ.
ಜೀವನದಲ್ಲಿ ಎಲ್ಲದಕ್ಕೂ 'ಮಿತ' ವೇ ಮಂತ್ರ.. ಸೊನ್ನೆ ಅಥವಾ ನೂರು ಈ ಎರಡರಲ್ಲಿ ಯಾವುದರ ಕಡೆಗಿನ ತೀವ್ರ ತುಡಿತವಿದ್ದರೂ ಅದು ತಪ್ಪು. ಒಂದಿಪ್ಪತು ನಿಮಿಷಗಳ ಕಾಲದ ಮಿತವಾದ ವ್ಯಾಯಾಮ, ಎಲ್ಲವನ್ನೂ ತಿನ್ನುವುದು, ಅತಿ ಪಥ್ಯ ಬೇಕಿಲ್ಲ.. ಕಿವಿ ಹಣ್ಣು.. ಆಲೀವ್ ಎಣ್ಣೆ.. ಇವೆಲ್ಲಾ ಅಲ್ಲ.. ನಿಮ್ಮ ಪೂರ್ವಜರು ಏನೆಲ್ಲಾ ತಿನ್ನುವುದನ್ನು ರೂಢಿ ಮಾಡಿದ್ದಾರೋ ಅಂತಹ ಸ್ಥಳೀಯ, ಆಯಾ ಋತುಮಾನದಲ್ಲಿ ಸಿಗುವ, ನಿಮ್ಮ ಊರಿನಲ್ಲೇ ಲಭ್ಯವಾಗುವ ಎಲ್ಲವನ್ನೂ ಮಿತವಾಗಿ ತಿನ್ನಿ.. ಪೂರ್ಣ ಏಳು ಗಂಟೆಗಳ ನಿದ್ರೆ ಮಾಡಿ.. ನಿಮ್ಮ ದೇಹವನ್ನು ಸ್ಟೀರಾಯ್ಡ್ ಅಥವಾ ಸಾಧನೆ ಹೆಚ್ಚಿಸುವ ಔಷಧಗಳನ್ನು ಸೇವಿಸದೇ ಗೌರವಿಸಿ.
ನೀವು ಏನೆಲ್ಲಾ ತಿನ್ನುತ್ತಾ ಬೆಳೆದಿರೋ ಅವನ್ನೇ ಮಿತ ಪ್ರಮಾಣದಲ್ಲಿ ತಿನ್ನಿ . ದಿನನಿತ್ಯ 20 ರಿಂದ 30 ನಿಮಿಷಗಳ ಕಾಲ ವ್ಯಾಯಾಮ, ಒಂದು ಉತ್ತಮ ನಡಿಗೆ.. ಇವಿಷ್ಟು ಸಾಕು.. ಎಲ್ಲಾ ರೀತಿಯ ಶಕ್ತಿವರ್ಧಕ, ಪೂರಕ ಆಹಾರ ನಿಲ್ಲಿಸಿ..ಕುಡಿಯುವ ಅಭ್ಯಾಸವಿದ್ದರೆ ವಾರಕ್ಕೆ ಕೆಲವು ಪೆಗ್ ಗಳಿಗಷ್ಟೇ ಸೀಮಿತಗೊಳಿಸಿ.. ಧೂಮಪಾನ ಬಿಡಲು ಸಾಧ್ಯವೇ ಇಲ್ಲ ಎನ್ನುವುದಾದರೆ ದಿನಕ್ಕೆ ಒಂದೆರಡಕ್ಕೆ ಸೀಮಿತಗೊಳಿಸಿ. ನನ್ನ ಮಾತಿನ ಸಾರಾಂಶ ನಿಮಗೆ ಅರ್ಥವಾಗಿರಬೇಕು.. ಎಲ್ಲವೂ ಇರಲಿ.. ಮಿತವಾಗಿರಲಿ.. ನಿಮ್ಮ ನಿತ್ಯಕರ್ಮದಲ್ಲಿ ಸ್ವಲ್ಪ ಮೌನ ಧ್ಯಾನವನ್ನು ಸೇರಿಸಿಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ದೇಹದ ಮಾತಿಗೆ ಕಿವಿಗೊಡಿ.. ಅದನ್ನು ಅರ್ಥಮಾಡಿ ಕೊಳ್ಳಿ..
40 ಕ್ಕೆ ನಿಮ್ಮ ದೇಹ ಸಾಕಷ್ಟು ಬದಲಾವಣೆಗೊಳಗಾಗುತ್ತದೆ, 50 ಕ್ಕೆ ಇನ್ನಷ್ಟು ಹೆಚ್ಚು.. 60 ಮೀರಿದೊಡನೆ ದೇಹ ಮಂದವಾಗತೊಡಗುತ್ತದೆ.. 70 ಮೀರಿದೊಡನೆ ಅಂತ್ಯಕ್ಕೆ ಅಣಿಗೊಳ್ಳಲಾರಂಭಿಸುತ್ತದೆ..80 ಮೀರಿತೆಂದರೆ ಪ್ರತಿ ವರ್ಷವೂ ಒಂದೊಂದು ಬೋನಸ್.. ಆದ್ದರಿಂದ ಅರವತ್ತು ಎಂದರೆ ಹೊಸ ನಲವತ್ತು, ಐವತ್ತು ಎಂದರೆ ಹೊಸ ಮೂವತ್ತು, ಎನ್ನುವುದನ್ನೆಲ್ಲಾ ಬಿಟ್ಟು ಬಿಡಿ. ಅದು ಹಾಗಲ್ಲ..ನೀವು 40 ಅಥವಾ 50 ಮೀರಿ ಆರೋಗ್ಯವಂತರಾಗಿದ್ದರೆ ಅದಕ್ಕಾಗಿ ಧನ್ಯತೆ ಭಾವ ಹೊಂದಿರಿ.. ನಿಮ್ಮ ಹೃದಯದ ವೇಗಕ್ಕೆ ಹೊಂದುವಂತೆ ನಿಮ್ಮ ವೇಗವನ್ನೂ ವಯೋ ಮಾನಕ್ಕನುಗುಣವಾಗಿ ತಗ್ಗಿಸಿ ಸಂಯಮ ತೋರಿ. ನಿವೃತ್ತಿಯನ್ನು ಒಂದು ಸಕಾರಣಕ್ಕಾಗಿ ಸಲಹೆ ಮಾಡಲಾಗುತ್ತದೆ ಎಂಬುದನ್ನು ಅರಿಯಿರಿ.. ನೀವು ಹಿಂದೊಮ್ಮೆ ಸಹಿಸುತ್ತಿದ್ದ ಒತ್ತಡಗಳನ್ನು ಇದೀಗ ನಿಮ್ಮ ದೇಹ ಮತ್ತು ಮನಸ್ಸುಗಳು ಸಹಿಸಲಾರವು. ಹೊರಗಿನಿಂದ ನೀವು ಚೆನ್ನಾಗಿಯೇ ಕಾಣುತ್ತಿರಬಹುದು, ಅದಕ್ಕಾಗಿ ನಿಮ್ಮ ವಂಶವಾಹಿನಿಗೆ ಒಂದು ಕೃತಜ್ಞತೆ ಇರಲಿ.. ಆದರೆ ಒಳಗೆ, ನಿಮ್ಮ ಅಂಗಾಂಗಗಳಿಗೆ ವಯಸ್ಸಾಗುತ್ತಿದೆ..
*ನೀವು 40 ಮೀರಿದ ವಯೋಮಾನದವರಾದರೆ ಈ ಮೇಲಿನದೆಲ್ಲಾ ಓದಿ. ಮೇಲೆ ತಿಳಿಸಿದ್ದಕ್ಕಿಂತ ತೀರಾ ಭಿನ್ನವಾದದ್ದನ್ನೇನಾದರೂ ನೀವು ಮಾಡುತ್ತಿದ್ದರೆ, ಈ ಕೂಡಲೇ ಬದಲಿಸಿ.. ನೀವು ಸಹಾ ಇನ್ನೊಂದು ಅಂಕಿ - ಅಂಶವಾಗಿ ಕೊನೆಯಾಗಲು ಬಯಸಲಾರಿರಿ ಎಂಬ ವಿಶ್ವಾಸ ನನಗಿದೆ."
ಅಮೇರಿಕಾದಲ್ಲಿ ವೈದ್ಯಕೀಯ ಅಧಿಕಾರಿಗಳು ಪ್ರತಿಯೊಬ್ಬರಿಗೂ ಮತ್ತು ಎಲ್ಲರಿಗೂ ಸಹಾಯ ಮಾಡಲು ಇದನ್ನು ಕಳುಹಿಸಿದ್ದಾರೆ. ದಯವಿಟ್ಟು ಓದಿ ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸಿ - ಡಾ. ಒಕಿರೆ.
ಕಿಡ್ನಿ ಕಾಯಿಲೆಯಿಂದ ಯುವಕರು ಯಾವ ಪ್ರಮಾಣದಲ್ಲಿ ಬಳಲುತ್ತಿದ್ದಾರೆ ಎಂಬುದು ಆತಂಕಕಾರಿ. ನಾನು ನಮಗೆ ಸಹಾಯ ಮಾಡುವಂತಹ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿದ್ದೇನೆ.
ದಯವಿಟ್ಟು ಕೆಳಗೆ ಓದಿ:
ಪ್ರಮುಖ - ಕಿಡ್ನಿ ಅತ್ಯುತ್ತಮವಾದುದನ್ನು ನಿರ್ಧರಿಸುತ್ತದೆ.
ಕೇವಲ ಎರಡು (2) ದಿನಗಳ ಹಿಂದೆ, ಮೂತ್ರಪಿಂಡದ ಕಾಯಿಲೆಯ ಪರಿಣಾಮವಾಗಿ ನೈಜೀರಿಯಾದ ನಟನ ನಿಧನದ ಸುದ್ದಿಯನ್ನು ನಾವೆಲ್ಲರೂ ಸ್ವೀಕರಿಸಿದ್ದೇವೆ.
ಸಾರ್ವಜನಿಕ ಕಾರ್ಯಗಳ ನಮ್ಮ ಸಚಿವರಾದ ಗೌರವಾನ್ವಿತ ಟೆಕೊ ಲೇಕ್ ಪ್ರಸ್ತುತ ಆಸ್ಪತ್ರೆಯಲ್ಲಿ ಮೂತ್ರಪಿಂಡದ ಸಮಸ್ಯೆಗಳೊಂದಿಗೆ ಲೈಫ್ ಸಪೋರ್ಟ್ ನ ಬೆಂಬಲ ದಲ್ಲಿದ್ದಾರೆ. ಮೂತ್ರಪಿಂಡದ ಕಾಯಿಲೆಯ ಈ ಭೀತಿಯನ್ನು ತಪ್ಪಿಸುವುದು ಹೇಗೆ ಎಂದು ನಾನು ನಿಮಗೆ ತೋರಿಸಲು ಬಯಸುತ್ತೇನೆ.
ಇಲ್ಲಿ ಕಿಡ್ನಿ ಕಾಯಿಲೆಯ ಮೊದಲ 6 ಕಾರಣಗಳು:
1. ಶೌಚಾಲಯಕ್ಕೆ ಹೋಗಲು ವಿಳಂಬ. ನಿಮ್ಮ ಮೂತ್ರವನ್ನು ನಿಮ್ಮ ಮೂತ್ರಕೋಶದಲ್ಲಿ ಹೆಚ್ಚು ಹೊತ್ತು ಇಡುವುದು ಕೆಟ್ಟ ಸಂಗತಿಯಾಗಿದೆ. ಪೂರ್ಣ ಬ್ಲಾ ಡರ್, ಬ್ಲಾ ಡರ್ ಗೆ
ಹಾನಿಗೆ ಕಾರಣವಾಗಬಹುದು. ಮೂತ್ರಕೋಶದಲ್ಲಿ ಉಳಿಯುವ ಮೂತ್ರವು ಬ್ಯಾಕ್ಟೀರಿಯಾವನ್ನು ತ್ವರಿತವಾಗಿ ಗುಣಿಸುತ್ತದೆ. ಮೂತ್ರವು ಮೂತ್ರನಾಳ ಮತ್ತು ಮೂತ್ರಪಿಂಡಗಳಿಗೆ ಹಿಂತಿರುಗಿದ ನಂತರ, ವಿಷಕಾರಿ ವಸ್ತುಗಳು ಮೂತ್ರಪಿಂಡದ ಸೋಂಕು, ನಂತರ ಮೂತ್ರದ ಸೋಂಕು, ಮತ್ತು ನಂತರ ನೆಫ್ರೈಟಿಸ್ ಮತ್ತು ಯುರೇಮಿಯಾಗಳಿಗೆ ಕಾರಣವಾಗಬಹುದು. ಪ್ರಕೃತಿ ಕರೆ ಮಾಡಿದಾಗ - ಸಾಧ್ಯವಾದಷ್ಟು ಬೇಗ ಅದನ್ನು ಮಾಡಿ.
2. ಹೆಚ್ಚು ಉಪ್ಪು ತಿನ್ನುವುದು. ನೀವು ಪ್ರತಿದಿನ 5.8 ಗ್ರಾಂ ಗಿಂತ ಹೆಚ್ಚಾಗಿ ಉಪ್ಪನ್ನು ಸೇವಿಸಬಾರದು.
3. ಹೆಚ್ಚು ಮಾಂಸ ತಿನ್ನುವುದು. ನಿಮ್ಮ ಆಹಾರದಲ್ಲಿ ಹೆಚ್ಚು ಪ್ರೋಟೀನ್ ನಿಮ್ಮ ಮೂತ್ರಪಿಂಡಗಳಿಗೆ ಹಾನಿಕಾರಕವಾಗಿದೆ. ಪ್ರೋಟೀನ್ ಜೀರ್ಣಕ್ರಿಯೆಯು ಅಮೋನಿಯಾವನ್ನು ಉತ್ಪಾದಿಸುತ್ತದೆ - ಇದು ನಿಮ್ಮ ಮೂತ್ರಪಿಂಡಗಳಿಗೆ ಬಹಳ ಹಾನಿಕಾರಕವಾಗಿದೆ. ಹೆಚ್ಚು ಮಾಂಸವು ಹೆಚ್ಚು ಮೂತ್ರಪಿಂಡದ ಹಾನಿಗೆ ಸಮನಾಗಿರುತ್ತದೆ.
4. ಹೆಚ್ಚು ಕೆಫೀನ್ ಕುಡಿಯುವುದು. ಕೆಫೀನ್ ಅನೇಕ ಸೋಡಾಗಳು ಮತ್ತು ತಂಪು ಪಾನೀಯಗಳ ಒಂದು ಅಂಶವಾಗಿದೆ. ಇದು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಮೂತ್ರಪಿಂಡಗಳು ಬಳಲುವುದಕ್ಕೆ ಎಡೆ ಯಗಿದೆ. ಆದ್ದರಿಂದ ನೀವು ಪ್ರತಿದಿನ ಕುಡಿಯುವ ಕೋಕ್ ಪ್ರಮಾಣವನ್ನು ಕಡಿತಗೊಳಿಸಬೇಕು.
5. ನೀರು ಕುಡಿಯುವುದಿಲ್ಲ. ನಮ್ಮ ಮೂತ್ರಪಿಂಡಗಳು ಅವುಗಳ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸಲು ಸರಿಯಾಗಿ ಹೈಡ್ರೀಕರಿಸಬೇಕು. ನಾವು ಸಾಕಷ್ಟು ಕುಡಿಯದಿದ್ದರೆ, ಮೂತ್ರಪಿಂಡಗಳ ಮೂಲಕ ಹರಿಯುವಷ್ಟು ದ್ರವವಿಲ್ಲದ ಕಾರಣ ವಿಷವು ರಕ್ತದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸಬಹುದು. ಪ್ರತಿದಿನ 10 ಗ್ಲಾಸ್ ಗಿಂತ ಹೆಚ್ಚು ನೀರು ಕುಡಿಯಿರಿ. ನೀವು ಕುಡಿಯುತ್ತೀರಾ ಎಂದು ಪರೀಕ್ಷಿಸಲು ಸುಲಭವಾದ ಮಾರ್ಗವಿದೆ
ಸಾಕಷ್ಟು ನೀರು: ನಿಮ್ಮ ಮೂತ್ರದ ಬಣ್ಣವನ್ನು ನೋಡಿ; ಹಗುರವಾದ ಬಣ್ಣವಾದರೆ ಉತ್ತಮ.
6. ತಡವಾಗಿ ಚಿಕಿತ್ಸೆ. ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಸರಿಯಾಗಿ ಚಿಕಿತ್ಸೆ ನೀಡಿ ಮತ್ತು ನಿಮ್ಮ ಆರೋಗ್ಯವನ್ನು ನಿಯಮಿತವಾಗಿ ಪರೀಕ್ಷಿಸಿ. ನಾವೇ ಸಹಾಯ ಮಾಡೋಣ ... ದೇವರು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಈ ವರ್ಷ ಪ್ರತಿಯೊಂದು ಕಾಯಿಲೆಯಿಂದ ರಕ್ಷಿಸುತ್ತಾನೆ.
(3) ಈ ಮಾತ್ರೆಗಳನ್ನು ತಪ್ಪಿಸಿ, ಅವು ತುಂಬಾ ಅಪಾಯಕಾರಿ:
* ಡಿ-ಕೋಲ್ಡ್
* ವಿಕ್ಸ್ ಆಕ್ಷನ್ -500
* ಆಕ್ಟಿಫೈ ಡ್
* ಕೋಲ್ಡಾರಿನ್
* ಕಾಸೋಮ್
* ನೈಸ್
* ನಿಮುಲಿಡ್
* ಸೆಟ್ರಿಜೆಟ್-ಡಿ
ಅವುಗಳು ಫೆನೈಲ್ ಪ್ರೊಪನಾಲ್-ಅಮೈಡ್, ಪಿಪಿಎ ಅನ್ನು ಒಳಗೊಂಡಿರುತ್ತವೆ
ಪಾರ್ಶ್ವವಾಯು ಗೆ ಕಾರಣ ವಾಗಿದ್ದು ಮತ್ತು ಯುಎಸ್ಎ ದಲ್ಲಿ ನಿಷೇದ ಪಡಿಸಿದ್ದಾರೆ.
ದಯವಿಟ್ಟು, ಅಳಿಸುವ ಮೊದಲು, ಅದನ್ನು ಹಾದುಹೋಗುವ ಮೂಲಕ ನಿಮ್ಮ ಸ್ನೇಹಿತರಿಗೆ ಸಹಾಯ ಮಾಡಿ ..! ಇದು ಯಾರಿಗಾದರೂ ಸಹಾಯ ಮಾಡಬಹುದು. ಎಷ್ಟು ಸಾಧ್ಯವೋ ಅಷ್ಟು ಫಾರ್ ವರ್ಡ್ ಮಾಡಿ.
ವಾಟ್ಸಾಪ್ ಉಚಿತ, .... ದಯವಿಟ್ಟು ಫಾರ್ಡ್ ವರ್ಡ್ ಮಾಡಿ..ಇದನ್ನು ಓದಿ ಮತ್ತು ಫಾರ್ವರ್ಡ್ ಮಾಡಿ.
ಯುನೈಟೆಡ್ ಸ್ಟೇಟ್ಸ್ನ ವೈದ್ಯರು ಸಿಲ್ವರ್ ನೈಟ್ರೋ ಆಕ್ಸೈಡ್ನಿಂದ ಉಂಟಾಗುವ ಮಾನವರಲ್ಲಿ ಹೊಸ ಕ್ಯಾನ್ಸರ್ ಅನ್ನು ಕಂಡುಕೊಂಡಿದ್ದಾರೆ.
ನೀವು ರೀಚಾರ್ಜ್ ಕಾರ್ಡ್‌ಗಳನ್ನು ಖರೀದಿಸಿದಾಗಲೆಲ್ಲಾ, ನಿಮ್ಮ ಉಗುರುಗಳಿಂದ ಸ್ಕ್ರಾಚ್ ಮಾಡಬೇಡಿ, ಏಕೆಂದರೆ ಇದು ಸಿಲ್ವರ್ ನೈಟ್ರೋ ಆಕ್ಸೈಡ್ ಲೇಪನವನ್ನು ಹೊಂದಿರುತ್ತದೆ ಮತ್ತು ಚರ್ಮದ ಕ್ಯಾನ್ಸರ್ಗೆ ಕಾರಣವಾಗಬಹುದು.
ಪ್ರಮುಖ ಆರೋಗ್ಯ ಸಲಹೆಗಳು:
1. ಎಡ ಕಿವಿಯಿಂದ ಫೋನ್ ಕರೆಗಳಿಗೆ ಉತ್ತರಿಸಿ.
2. ನಿಮ್ಮ ಔಷಧಿ ಯನ್ನು ತಣ್ಣೀರಿನ ಜೊತೆ ತೆಗೆದುಕೊಳ್ಳಬೇಡಿ ....
3. ಸಂಜೆ 5 ರ ನಂತರ ಹೆಚ್ಚಿನ ಊಟ ಸೇವಿಸಬೇಡಿ.
4. ಬೆಳಿಗ್ಗೆ ಹೆಚ್ಚು ನೀರು ಕುಡಿಯಿರಿ, ರಾತ್ರಿಯಲ್ಲಿ ಕಡಿಮೆ.
5. ರಾತ್ರಿ 10 ರಿಂದ ಬೆಳಿಗ್ಗೆ 4 ರವರೆಗೆ ಉತ್ತಮ ನಿದ್ರೆ ಸಮಯ.
6. ಔಷಧಿ ತೆಗೆದುಕೊಂಡ ನಂತರ ಅಥವಾ ಊಟ ಮಾಡಿದ ಕೂಡಲೇ ಮಲಗಬೇಡಿ.
7. ಫೋನ್‌ನ ಬ್ಯಾಟರಿ ಕೊನೆಯ ಬಾರ್‌ಗೆ ಕಡಿಮೆ ಇರುವಾಗ, ಫೋನ್‌ಗೆ ಉತ್ತರಿಸಬೇಡಿ, ಏಕೆಂದರೆ ವಿಕಿರಣವು 1000 ಪಟ್ಟು ಬಲವಾಗಿರುತ್ತದೆ.
ನೀವು ಕಾಳಜಿವಹಿಸುವ ಜನರಿಗೆ ಇದನ್ನು ರವಾನಿಸಬಹುದೇ?
ಈಗಷ್ಟೇ ಮಾಡಿದ್ದೇನೆ.
ದಯೆ ಏನೂ ಖರ್ಚಾಗುವುದಿಲ್ಲ ಆದರೆ ಜ್ಞಾನವೇ ಶಕ್ತಿ ...
ಸೂಚನೆ:
ಈ ಸಂದೇಶವನ್ನು ಉಳಿಸಬೇಡಿ, ನೀವು ಸೇರಿರುವ ಇತರ ಗುಂಪುಗಳಿಗೆ ಈಗ ಕಳುಹಿಸಿ.
ಇದು ನಿಮ್ಮ ಒಳಿತಿಗಾಗಿ ಮತ್ತು ಇತರರಿಗೆ, ಯಾರಿಗಾದರೂ ಪರಿಹಾರ ನೀಡುವುದು ಯಾವಾಗಲೂ ಲಾಭದಾಯಕ.
ಪರಿಪೂರ್ಣತೆ ಎಂದರೇನು?*
ಆದಿ ಶಂಕರಾಚಾರ್ಯರಿಂದ
1.ಮತ್ತೊಬ್ಬರನ್ನು ಬದಲಾಯಿಸುವ ಪ್ರಯತ್ನ ಬಿಟ್ಟು…ನೀನು ಬದಲಾದರೆ.. ಅದು ಪರಿಪೂರ್ಣತೆ
2.ಜನ ಹೇಗಿದ್ದಾರೋ..ಹಾಗೆಯೇ ಸ್ವೀಕರಿಸಿದರೆ…. ಅದು ಪರಿಪೂರ್ಣತೆ
3. ಪ್ರತಿಯೊಬ್ಬರೂ…ಅವರ ದಾರಿಯಲ್ಲಿ ಅವರು ಸರಿಯಿದ್ದಾರೆ…ಎಂದು ತಿಳಿದರೆ…ಅದು ಪರಿಪೂರ್ಣತೆ
4. ಎಲ್ಲರೊಂದಿಗೂ ಹೊಂದಾಣಿಕೆಯಿಂದ ನೀನೂ ಹೊರಟರೆ…ಅದು ಪರಿಪೂರ್ಣತೆ
5. ಬೇರೆಯವರಿಂದ ನೀನು ಅಪೇಕ್ಷಿಸುವುದನ್ನು ಬಿಟ್ಟರೆ.. ಅದು ಪರಿಪೂರ್ಣತೆ*
6. ನೀನು ಮಾಡುತ್ತಿರುವ ಕೆಲಸದಿಂದ ನಿನಗೆ ಆತ್ಮವಿಶ್ವಾಸ ಮತ್ತು ಶಾಂತಿ ಸಿಕ್ಕರೆ…. ಅದು ಪರಿಪೂರ್ಣತೆ
7. ನಿನ್ನ ಜಾಣ್ಮೆ ಹಾಗೂ ಶಕ್ತಿಯನ್ನು ಪ್ರದರ್ಶಿಸುವುದನ್ನು ನಿಲ್ಲಿಸಿದರೆ…ಅದು ಪರಿಪೂರ್ಣತೆ
8. ಮತ್ತೊಬ್ಬರು ನಿನ್ನನ್ನು ತೆಗಳಿದಾಗ ಸ್ವೀಕರಿಸುವ ಗುಣವಿದ್ದರೆ…. ಅದು ಪರಿಪೂರ್ಣತೆ
9.ನಿನ್ನನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳುವುದನ್ನು ಬಿಟ್ಟರೆ…. ಅದು ಪರಿಪೂರ್ಣತೆ
10 ನಿನ್ನಲ್ಲಿ ನಿನಗೆ ಭರವಸೆ ಇದ್ದು ಶಾಂತನಾಗಿ ಇರಲು ಸಾಧ್ಯ ವಾದರೆ ….ಅದು ಪರಿಪೂರ್ಣತೆ
11) ನೀನು ನಿನ್ನ ಜೀವನದ ಅವಶ್ಯಕತೆ ಮತ್ತು ಬೇಕು” ಗಳನ್ನು ಬೇರ್ಪಡಿಸಿ ನೋಡಲು ಶಕ್ತನಾಗಿ “ಬೇಕು”ಗಳನ್ನು ತ್ಯಾಗ ಮಾಡಿದರೆ…. ಅದು ಪರಿಪೂರ್ಣತೆ
ಇನ್ನೊಂದು ಪ್ರಮುಖ ಅಂಶ
12. ಪ್ರತಿಯೊಂದು ವಸ್ತು ವಿಷಯಗಳಿಂದಲೇ ಸುಖ-ಸಂತೋಷ ಸಿಗುವುದೆಂದು ನಂಬುವುದನ್ನು ಬಿಟ್ಟರೆ…. ಅದು ಪರಿಪೂರ್ಣತೆ
WhatsApp forwarded
ಮಂಗಳವಾರ, 23 ನವಂಬರ 2021
ಪೂರ್ವ ಜನ್ಮದ ಸುಕೃತಗಳು
ಪಂಚೈತಾನಿ ಹಿ ಸೃಜ್ಯಂತೆ
ಗರ್ಭಸ್ಥಸ್ಯೈವ ದೇಹಿನಃ॥.
(೧)ಆಯುಷ್ಯ,
(೨)ಹಿಂದಿನ ಜನ್ಮದಿಂದ ಬರುವ ಕರ್ಮಫಲ,
(೩)ಹಣ,
(೪)ಗಳಿಸಬಹುದಾದ ವಿದ್ಯೆ
(೫) ಮರಣ.
ಈ ಐದು ವಿಷಯಗಳು ಶಿಶು ತಾಯಿಯ ಗರ್ಭದಲ್ಲಿರುವಾಗಲೇ ನಿರ್ಣಯವಾಗಿರುತ್ತದೆ.
ಭಾರತೀಯ ಸಂಸ್ಕೃತಿಯಲ್ಲಿ ಹಿಂದಿನ ಜನ್ಮಗಳಲ್ಲಿ ಮಾಡಿದ ಪಾಪ-ಪುಣ್ಯಗಳಿಗೆ ಅನುಗುಣವಾಗಿ ನೀಚ- ಉಚ್ಚ , ಬಡವ- ಬಲ್ಲಿದ, ಸಾಕ್ಷರ- ನಿರಕ್ಷರ, ರೋಗಿ ನಿರೋಗಿ ಜನ್ಮ ಬರುವದೆಂದು ನಂಬಲಾಗುತ್ತದೆ.
ಅದರ ವಿವರವನ್ನು ಈ ಸುಭಾಷಿತದಲ್ಲಿ ಕಾಣ ಬಹುದು.
ಮೊದಲನೆಯದಾಗಿ ಆಯುಷ್ಯ.
ಇಂಥ ವ್ಯಕ್ತಿಗೆ ಇಷ್ಟೇ ಆಯುಷ್ಯ ,
ಇಂಥಲ್ಲಿ ಹೀಗೇ ಮರಣ ಎಂದು ಗರ್ಭದಲ್ಲಿರುವಾಗಲೇ ಬರೆಯಲ್ಪಡುತ್ತದೆ.
ಈ ಹಣೆಬರಹವನ್ನು ತಪ್ಪಿಸಲು ಹರಿಹರ ಬ್ರಹ್ಮರಿಂದಲೂ ಸಾಧ್ಯವಿಲ್ಲ.
ಕರ್ಮ
ಎಂದರೆ ನಾವು ಹಿಂದಿನ ಜನ್ಮದಲ್ಲಿ ಮಾಡಿದ ಪಾಪ - ಪುಣ್ಯ ಕರ್ಮಗಳು .ಇವು ನೆರಳಿನಂತೆ ಮುಂದಿನ ಜನ್ಮದಲ್ಲಿ ನಮ್ಮನ್ನು ಹಿಂಬಾಲಿಸುತ್ತವೆ.
ಕರು ಸಾವಿರಾರು ಹಸುಗಳಲ್ಲಿ ತನ್ನ ತಾಯಿಯನ್ನೇ ಹುಡುಕಿಕೊಂಡು ಹೋಗುವಂತೆ ಪೂರ್ವಾರ್ಜಿತ ಕರ್ಮಗಳು ನಮ್ಮನು ಬೆಂಬೆತ್ತಿ ಬರುತ್ತವೆ.
ಹಣ
ಲಕ್ಷ್ಮಿ ಚಂಚಲೆ. ಎಲ್ಲೂ ಕಾಲೂರಿ ನಿಂತವಳಲ್ಲ. ಒಮ್ಮೆ ಏರಿಸುತ್ತಾಳೆ. ದಿಢೀರನೆ ಕೆಡವುತ್ತಾಳೆ. ತಮ್ಮ ಜೀವನದಲ್ಲಿ ಅನೇಕ ಜನ ಕೃಷಿ,ವಾಣಿಜ್ಯೋದ್ಯಮ ,ಕೈಗಾರಿಕೆ ಮುಂತಾದುವುಗಳ ಮೂಲಕ ಶ್ರೀಮಂತರಾಗಲು ಹೊರಟು ಭಾರೀ ಸೋಲುಂಡವರನ್ನು ಕಾಣುತ್ತೇವೆ.
ಆತ ಪಡೆದದ್ದು ಉಣ್ಣಬೇಕೆ ಹೊರತು ದುಡಿದದ್ದಲ್ಲ.ಇದನ್ನೇ .ಕವಿವಾಣಿ ಹೇಳುವುದು
"ಸಿರಿಯದು ನೀರಿನ ತೆರೆಯಂತೆ
ಜೀವನ ಮಿಂಚಿನ ಸೆಳಕಂತೆ
ಅರಿತಿದ ನಡೆ ನೀ ನಿನ್ನಂತೆ
ಅಳಿದೂ ಉಳಿಯುವ ತೆರನಂತೆ......
ಎಂದು ನಮ್ಮನ್ನು ಎಚ್ಚರಿಸಿದೆ.
ಶುಚೀನಾಂ ಶ್ರೀಮತಾಂ ಗೇಹೆ ಯೋಗಭ್ರಷ್ಟೋ ಅಭಿಜಾಯತೇ
ಅಂದರೆ ಯೋಗಿಯಾಗ ಹೊರಟು ಪೂರ್ಣ ಸಿದ್ಧಿ ಪಡೆಯಲಾಗದೇ ಮಡಿದವನು ಮುಂದಿನ ಜನ್ಮದಲ್ಲಿ ಶ್ರೀಮಂತರ ಮನೆಯಲ್ಲಿ ಜನಿಸುತ್ತಾನೆ ಎಂದು ಗೀತೆ ಸಾರುತ್ತದೆ.
ವಿದ್ಯೆ
ಹಿಂದಿನ ಜನ್ಮದಲ್ಲಿ ದೊಡ್ಡ ವಿದ್ಯಾವಂತನಾಗಲು ಹೊರಟು ಅಲ್ಲಿ ಸಫಲತೆ ಯನ್ನು ಪಡೆಯದೇ ಹೋದವನು , ಆ ಸಂಸ್ಕಾರ ಬಲ ದಿಂದ ಮುಂದಿನ ಜನ್ಮದಲ್ಲಿ ಹುಟ್ಟಿನಿಂದಲೇ ಪ್ರತಿಭಾವಂತನಾಗಿ ಜನಿಸುತ್ತಾನೆ. ಒಂದೇ ತರಗತಿಯಲ್ಲಿ ಓದುವ ಮಕ್ಕಳಲ್ಲಿ ಅಜ-ಗಜಾಂತರವಿರುವುದನ್ನು ಕಾಣುತ್ತೇವೆ. ಅದಕ್ಕೆ ಪೂರ್ವ ಜನ್ಮದ
ಸಂಸ್ಕಾರ ಹಾಗೂ ಅದರ ಅಭಾವವೇ ಕಾರಣ.
ಮರಣ
ಮರಣವೂ ಅಷ್ಟೆ.ಇಂಥವನಿಗೆ ಹೀಗೆ , ಇಂತಲ್ಲಿ ಮರಣವೆಂಬುದು ಮೊದಲೇ ಬರೆದಿರುತ್ತದೆ.
ಆದ್ದರಿಂದ ಮುಂದೆ ಒಳ್ಳೆಯ ಜನ್ಮ ,ದೀರ್ಘ ಆಯುಷ್ಯ ,ಆರೋಗ್ಯ , ವಿದ್ಯೆ , ವಿತ್ತ,(ಹಣ)ಎಲ್ಲವೂ ಬೇಕೆಂದು ಬಯಸುವವರು ಈ ಜನ್ಮದಲ್ಲೇ ಎಚ್ಚೆತ್ತು ಒಳ್ಳೆಯ ಕಾರ್ಯದಲ್ಲಿ ನಿರತರಾಗುವುದು ಒಳಿತು.
ಶ್ರೀ ಕೃಷ್ಣಾರ್ಪಣಮಸ್ತು
ವಾಟ್ಸ್ ಅಪ್ಪ್ ಕೃಪೆ
ಭಾನುವಾರ, 21 ನವಂಬರ 2021
ತರಳಬಾಳು ಗ್ರಂಥಾಲಯ, ಅರ್.ಟಿ.ನಗರ, ಬೆಂಗಳೂರು.
ಪಾ. ಚಂದ್ರಶೇಖರ ಚಡಗ |
ವೂಡೆ ಪಿ. ಕೃಷ್ಣ |
ವನಮಾಲಾ ಸಂಪನ್ನಕುಮಾರ್ |
ಕಾದಂಬರಿ, ನಾಟಕ, ಯಕ್ಷಗಾನ, ಕಲೆ, ಅಭಿನಯ, ರಾಜಕೀಯ, ಶಿಕ್ಷಣ, ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು.
ಡಾ. ನಿರ್ಮಲಾ ಪ್ರಭು |
ಶ್ರೀಮತಿ ಇಂದಿರಾ ಶರಣ್ |
ಶ್ರೀಮತಿ ಮಂಜುಳಾ ಭಾರ್ಗವಿ ಅವರು ತಮ್ಮ ಮಧುರ ಕಂಠದಿಂದ ಕನ್ನಡ ಭಾವಗೀತೆಯನ್ನು ಹಾಡಿ ಸಭಿಕರ ಮನರಂಜಿಸಿದರು.
ಶ್ರೀ ವೀರಶೇಖರ ಸ್ವಾಮಿ ಯವರು ಧನ್ಯವಾದ ಸಮರ್ಪಿಸಿದರು.
ಬರೆದಿರುವುದು ಸೋಮವಾರ 22 ನವಂಬರ 2021
Shashikala C: ಕನ್ನಡ ರಾಜ್ಯೋತ್ಸವ" -2021
ಹೀಗೊಂದು ವಿಶೇಷ ಕನ್ನಡ ರಾಜ್ಯೋತ್ಸವ ಆಚರಣೆ,
ಆರ್.ಟಿ ನಗರದ ತರಳಬಾಳು ಕೇಂದ್ರದಲ್ಲಿ ಪಾ. ಚಂದ್ರಶೇಖರ್ ಚಡಗರವರು ಕಟ್ಟಿ ಬೆಳಸಿದ ಸಂಸ್ಥೆ ಶಿವರಾಮ ಕಾರಂತ ಸಾಹಿತ್ಯ ವೇದಿಕೆ ಯಿಂದ
ದಿನಾಂಕ 21.11.2021, ಭಾನುವಾರ ಸಂಜೆ 4.30 ಗೆ ಹಮ್ಮಿಕೊಳ್ಳಲಾಗಿತ್ತು.
ಎಲ್ಲರಿಗೂ ಪ್ರೀತಿಪೂರ್ವಕವಾದ ಸ್ವಾಗತ, ನಾಲ್ಕು ಭೌಗೋಳಿಕ ವಿಶೇಷತೆಗಳು, ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಅತ್ಯಂತ ಪ್ರಗತಿಶೀಲ ಭಾಷೆ ನಮ್ಮದು. ಕನ್ನಡ ರಾಜ್ಯೋತ್ಸವ ಅನ್ನುವುದು ನಮ್ಮ ಬದುಕು, ಭಾವನೆಗಳಿಗೆ ವಿಶೇಷ ಬೆಚ್ಚನೆಯ ಭಾವವನ್ನು ನೀಡುತ್ತದೆ ಎಂಬಂತಹ ಚಿನ್ನುಡಿಗಳೊಂದಿಗೆ ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಇಂದಿರಾ ಶರಣ್ ರವರಿಂದ ನಿರೂಪಣೆ ಆರಂಭವಾಯಿತು.
ವಿಶೇಷ ಆಹ್ವಾನಿತ ಅತಿಥಿಗಳಾಗಿ ಶ್ರೀ ವೊಡೆ ಪಿ ಕೃಷ್ಣ , ನಾಡೋಜ ಗೌರವ ಸನ್ಮಾನಿತರು ಹಾಗೂ
ಉಪನ್ಯಾಸಕರಾಗಿ ಶ್ರೀಮತಿ ವನಮಾಲಾ ಸಂಪನ್ನಕುಮಾರ, ಅಧ್ಯಕ್ಷರು, ಕರ್ನಾಟಕ ಲೇಖಕಿಯರ ಸಂಘ ಇವರು ಭಾಗವಹಿಸಿದ್ದರು.
ವೇದಿಕೆಯ ಅಧ್ಯಕ್ಷರಾದ ಡಾ.ನಿರ್ಮಲ ಪ್ರಭುರವರು ಅದ್ಯಕ್ಷತೆಯನ್ನು ವಹಿಸಿದ್ದರು.
ಸುಂದರ, ಅರ್ಥಪೂರ್ಣವಾದ ಉಪನ್ಯಾಸಗಳು, ಎಂದಿನಂತೆ ನಮ್ಮ ರಾಜ್ಯೋತ್ಸವದ ವಿಶೇಷತೆಗಳು.
ನಾಡಗೀತೆ:
ವೇದಿಕೆಯ ಮಹಿಳಾ ಸದಸ್ಯರಿಂದ ನಾಡಗೀತೆಯೊಂದಿಗೆ ಸಂಭ್ರಮದ ಕಾರ್ಯಕ್ರಮ ಗರಿಗೆದರಿತು.
ಸ್ವಾಗತ ಭಾಷಣ:
ವೇದಿಕೆಯ ಸಂಸ್ಥಾಪಕ ಸದಸ್ಯರು, ಕಾರ್ಯಧ್ಯಕ್ಷರಾದ ಶ್ರೀ ಚಂದ್ರಶೇಖರ ಚಡಗ ರವರು ಬೆಂಗಳೂರು ಉತ್ತರ ಭಾಗದಲ್ಲಿ ನಮ್ಮ ವೇದಿಕೆ ವಿಶಿಷ್ಠವಾದ ಪ್ರತಿಷ್ಠೆಯ ಸಂಸ್ಥೆಯಾಗಿ ಬೆಳೆದಿರುವ ಹಿನ್ನಲೆಯನ್ನು, ಸರಳ ಮತ್ತು ಅರ್ಥಪೂರ್ಣವಾದ ಕಾರ್ಯಕ್ರಮಗಳ ಆಯೋಜನೆ, 25ಸಾವಿರ ಪುಸ್ತಕಗಳ ನಮ್ಮ ಗ್ರಂಥಾಲಯ ಮತ್ತಷ್ಟು ಉಪಯೋಗವಾಗಬೇಕಾದುದರ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುತ್ತಾ ಅತಿಥಿಗಳ ಕಿರುಪರಿಚಯದೊಂದಿಗೆ ಸ್ವಾಗತಭಾಷಣ ನಡೆಸಿಕೊಟ್ಟರು.
ಉದ್ಘಾಟಕರ ಪರಿಚಯ:
ಶ್ರೀ ವೊಡೆ ಪಿ ಕೃಷ್ಣ , ನಾಡೋಜ ಗೌರವ ಸನ್ಮಾನಿತರು
ರಾಜ್ಯೋತ್ಸವ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ವಿಶೇಷವಾಗಿ ನಾಡೋಜ ಪ್ರಶಸ್ತಿ ನೀಡಿ ಗೌರವ. ಸ್ವಾತಂತ್ರ್ಯ ಹೋರಾಟಗಾರರ ಮನೆತನದಿಂದ ಬಂದ, ಮೈಸೂರಿನ ಹೆಸರಾಂತ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ವ್ಯಾಸಂಗ, ಪಿಎಚ್ ಡಿ ಪದವಿ. ವೃತ್ತಿಯಲ್ಲಿ ಚಾಟೆಂಡ್ ಅಕೌಂಟೆಂಟ್, ಭಾರತೀಯ ಇಂಜನೀಯರುಗಳ ಅಧ್ಯಕ್ಷರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಮೌಲ್ಯಮಾಪನದಲ್ಲಿ ಪರಿಣಿತರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕ್ಷಯರೋಗ ಸಂಸ್ಥೆ, ಭಾರತೀಯ ಸೇವಾದಳ, ಶೇಷಾದ್ರಿ ಪುರಂ ಶಿಕ್ಷಣ ಸಂಸ್ಥೆ ಇವುಗಳಲ್ಲಿ ಅತ್ಯಂತ ಜವಾಬ್ದಾರಿಯುತ ಸ್ಥಾನ ಅಲಂಕರಿಸಿ ಪಾರದರ್ಶಕ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಭಾರತೀಯ ಉತ್ಪಾದನಾ ಇಂಜನೀಯರುಗಳ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.
ಕಾರ್ಯಕ್ರಮ ಉದ್ಘಾಟನೆ:
ಜ್ಯೋತಿಯನ್ನು ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆಯಲ್ಲಿ ಉದ್ಘಾಟಕರ ಜೊತೆಯಾದ ವೇದಿಕೆಯ ಗಣ್ಯರು.
ಉದ್ಘಾಟನಾ ಭಾಷಣ:
ನಾಡೋಜ ಶ್ರೀ ವೊಡೆ ಪಿ ಕೃಷ್ಣ ರವರಿಂದ
21ನೇ ಸಾಲಿನ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ವೇದಿಕೆಗೆ ತಿಳಿಸಿದರು. "ಕನ್ನಡ ರಾಜ್ಯೋತ್ಸವ" ಎಂದು ಬರೆದಿದ್ದ ಪತ್ರಿಕೆ ನೋಡಿ ತುಂಬಾ ಸಂತೋಷವಾಯಿತು. ಯಾಕೆಂದರೆ ತುಂಬ ಕಡೆ ಕರ್ನಾಟಕ ರಾಜ್ಯೋತ್ಸವ ಎಂದು ಬರೀತಾರೆ. ಆದರೆ ನಾನು ಕನ್ನಡ ರಾಜ್ಯೋತ್ಸವ ತುಂಬಾ ಇಷ್ಟಪಡುತ್ತೇನೆ. ಕರ್ನಾಟಕಕ್ಕೆ ಗಡಿ ಇದೆ, ಆದರೆ ಕನ್ನಡಕ್ಕೆ ಗಡಿ ಇಲ್ಲ, ಇದು ಮುಖ್ಯವಾದ ಮೆಸೇಜ್ ಎಂದು ಭಾವಿಸುತ್ತೇನೆ. ರಾಜ್ಯೋತ್ಸವ ನಮಗೆಲ್ಲಾ ಹೆಚ್ಚಿನ ಶಕ್ತಿ ಚೈತನ್ಯ ಮತ್ತು ಪ್ರೇರಣೆ ನೀಡಲಿ ತುಂಬಲಿ.
ನಾನು ಆಂಗ್ಲ ಮಾಧ್ಯಮದಲ್ಲಿ ಪ್ರಥಮ ಭಾಷೆ ಹಿಂದಿ, ಕನ್ನಡ ದ್ವಿತೀಯ ಭಾಷೆ ಓದಿದವನು. ಆದರೆ ಮನೆಯಲ್ಲಿ ಕನ್ನಡ ವಾತಾವರಣವಿತ್ತು. ಎಲ್ಲವನ್ನೂ ಕನ್ನಡದಲ್ಲಿ ವ್ಯವಹರಿಸುವ ಕುಟುಂಬ ನಮ್ಮದಾಗಿತ್ತು. ರಾಷ್ಟ್ರೀಯ ಆಂದೋಲನದಲ್ಲಿದ್ದ ನಮ್ಮ ಮನೆಯವರು ,ಗಾಂಧಿಯವರ ತ್ರಿಭಾಷಾ ಸೂತ್ರ ಒಪ್ಪಿದ್ದ ಅವರು ಆಂಗ್ಲ ಮತ್ತು ಹಿಂದಿ ಭಾಷೆ ಕಲಿತರೆ ದೇಶದ ಯಾವುದೇ ಭಾಗದಲ್ಲಿ ಬದುಕಬಹುದು ಎಂಬ ಕಾರಣದಿಂದ ಹಿಂದಿ ಪ್ರಥಮ ಭಾಷೆಯಾಗಿ ನಮಗೆ ಕೊಡಿಸಿರಬಹುದು.
ಭಾಷೆ ಬದುಕಿನ ಭಾಗ ಎಂದು ನಾನು ನಂಬಿದ್ದೇನೆ. ನಮಗೆ ಆಹಾರ ಹೇಗೆ ಮುಖ್ಯವೋ ಹಾಗೆಯೇ ಭಾಷೆಯೂ ಬಹಳ ಮುಖ್ಯ. ಮುಖ್ಯವಾಗಿ ಭಾಷೆಯನ್ನು ಸರಿಯಾಗಿ ಬಳಸುವುದನ್ನು ಕಲಿಯಬೇಕು. ರಾಜಕುಮಾರ್ ರವರು ಸ್ಪಷ್ಟವಾಗಿ ಕನ್ನಡ. ಮಾತನಾಡುತ್ತಿದ್ದರು. ಲಕ್ಷಾಂತರ ಜನ ಸಿನಿಮಾ ನೋಡಿದವರ ಮೇಲೆ ಪ್ರಭಾವ ಬೀರಿದೆ. ಒಳ್ಳೇ ಭಾಷಣ ಮಾಡಿದರೆ ಹಬ್ಬದ ಊಟ ಮಾಡಿದ ಹಾಗೆ ಆಗುತ್ತದೆ. ಅದು ಭಾಷೆಗಿರುವ ತಾಕತ್ತು ಮತ್ತು ಶಕ್ತಿ. ಸ್ಪಷ್ಟವಾಗಿ, ಸರಳವಾಗಿ ಭಾಷೆ ಮನೆ ಅಥವಾ ವ್ಯವಹರಿಸುವ ಸ್ಥಳದಲ್ಲಿ ಇರಬೇಕು, ಇದರಿಂದ ಬಹಳ ಒಳ್ಳೆಯದಾಗುತ್ತದೆ. ಬೇರೆ ಭಾಷೆ ವ್ಯವಹಾರಿಕವಾಗಿ ಬೇಕಾಗುತ್ತದೆ. ಅದನ್ನೇ ಪ್ರಧಾನ ಮಾಡಿಕೊಂಡು ಹೋದರೆ ನಮ್ಮ ಭಾಷೆ ಸಂಸ್ಕೃತಿಗೆ ಮಾಡಿವ ದ್ರೋಹ ಎಂದು ಭಾವಿಸುವೆ. ಅಂತರರಾಷ್ಟ್ರೀಯ ಭಾಷೆಗಳನ್ನು ಕಲಿಯಲಿ, ಆದರೆ ಮಾತೃ ಭಾಷೆಯ ಮೇಲಿನ ಪ್ರೀತಿ ಪ್ರೇಮ ಯಾವತ್ತೂ ಕುಂದಬಾರದ ನಮ್ಮ ಸಂಸ್ಕೃತಿ, ಪರಂಪರೆಯ ಮೇಲೆ ಪ್ರೀತಿ ಬಂದಿದ್ದು ನಮ್ಮ ಹಿರಿಯರಿಂದ. ಗುಡಿಗೋಪುರ,ಮಠಮಾನ್ಯಗಳನ್ನು ಕಟ್ಟಿಕೊಂಡು ಹೋಗುತ್ತಿದ್ದರು. ಇದನ್ನು ನೋಡಿ ಕಲಿತಿದ್ದು ಬಹಳವಿದೆ. ಬೆಳಿಯುತ್ತಾ ಬೆಳಿಯುತ್ತಾ ಅದರ ಮೇಲೆ ನಮಗೆ ಗೌರವವಿದೆ. ಓದಿನ ಭರಾಟೆಯಲ್ಲಿ ನಮ್ಮ ಮಕ್ಕಳಿಗೆ ಒಂದು ಮುಂಜಿ, ಮದುವೆ, ನಾಮಕರಣ ಇವುಗಳಿಗೆ ಕರೆದುಕೊಂಡು ಹೋಗುವುದಿಲ್ಲ. ಮಕ್ಕಳಿಗೆ ವಿಧಿವಿಧಾನಗಳು ಅರ್ಥ ಆಗುವುದಿಲ್ಲ. ಇವುಗಳ ಬಗ್ಗೆ ಮಕ್ಕಳಿಗೆ ತೋರಿಸಿದರೆ ಸಾಕು ಎಷ್ಟೋ ವಿಚಾರಗಳನ್ನು ತಿಳಿದುಕೊಂಡ ಹಾಗೆ ಆಗುತ್ತದೆ. ಭಾಷೆಯು ಸಂಸ್ಕೃತಿಯೊಂದಿಗೆ ಸೇರಿರುವಂತಹದು. ಕನ್ನಡ ಭಾಷೆಯಲ್ಲಿ ತುಳು, ಕೊಡವ ಭಾಷೆಗಳೂ ಸೇರಿವೆ. ನಿತ್ಯ ಜೀವನದ ಭಾಷೆ ನಮ್ಮದಾಗಬೇಕು.
ನಾನು ಹುಟ್ಟಿದಾಗಿನಿಂದಲೂ ಪ್ರಜಾವಾಣಿ ಪತ್ರಿಕೆ ಓದುತ್ತಾ ಇದ್ದೇನೆ. ಇವತ್ತಿಗೂ ನಮ್ಮ ಮನೆಯಲ್ಲಿ ಪ್ರಜಾವಾಣಿ ಪತ್ರಿಕೆ ಬರುತ್ತದೆ. ಆಗ ಸುಧಾ,ಕರ್ಮವೀರ ಪತ್ರಿಕೆ ಬರ್ತಾ ಇತ್ತು. ಪತ್ರಿಕೆ ಬರೋದಕ್ಕೆ ಕಾಯ್ತಾ ಇರೋರು ಮನೆಯಲ್ಲಿ. ಒಬ್ಬರಾದ ಮೇಲೆ ಒಬ್ಬರು ಮನೆಯವರೆಲ್ಲಾ ಓದುತ್ತಾ ಇದ್ದರು. ಇವತ್ತು ತಾಂತ್ರಿಕತೆ ಬಂದಿರಬಹುದು. ಆದರೆ ಓದುವ ಸಂಸ್ಕೃತಿ ಇಟ್ಟುಕೊಂಡವರಿಂದ ಮಾತ್ರ ಇಷ್ಟು ಕೆಲಸ ಆಗ್ತಾ ಇದೆ. ತಾಂತ್ರಿಕತೆ ಬಳಸಿಕೊಂಡು ಕನ್ನಡ ವೃದ್ಧಿ ಹೇಗೆ ಮಾಡಬಹುದು ಎಂಬ ಯೋಚನೆ ಆಗಬೇಕು. ತಾಯಿಯಷ್ಟೇ ಮುಖ್ಯ ನಮ್ಮ ಭಾಷೆ. ಹಾಗೆಯೇ ಮಾತನಾಡುವುದರ ಬಗ್ಗೆಯೂ ಕೂಡ ಎಚ್ಚರಿಕೆ ಇರಬೇಕು. ನಿತ್ಯಜೀವನದಲ್ಲಿ ಮಾತನಾಡುವುದರ ಬಗ್ಗೆ ಮಕ್ಕಳಿಗೆ ಹೇಳಿಕೊಡಬೇಕು. ನಮ್ಮ ನಾಲಿಗೆಯ ಮೇಲೆ ಸರಸ್ವತಿ ಯಾವಾಗಲೂ ನೆಲೆಸಿರುತ್ತಾಳೆ, ನಾವು ಕೆಟ್ಟಪದಗಳನ್ನು ಬಳಸಬಾರದು, ಒಳ್ಳೇ ಪದಗಳನ್ನೇ ಮಾತನಾಡಬೇಕು ಎಂಬುದನ್ನು ಚಿಕ್ಕವಯಸ್ಸಿನಲ್ಲಿಯೇ ಮಕ್ಕಳಿಗೆ ತಿಳಿಸುತ್ತಾ ಬನ್ನಿ. ನಾವೆಲ್ಲ ಆಗರ್ಭ ಶ್ರೀಮಂತರು ಎಂತಹ ಭಾಷೆ, ಎಂತಹ ವೈಭವದ ಭಾಷೆ ಅಂತಹ ಹೆಮ್ಮೆ ನಮ್ಮಲ್ಲಿ ಯಾವತ್ತೂ ಇರಬೇಕು. ಕೆಲವು ಮೈಲಿಗಳ ಪ್ರವಾಸ ಮಾಡಿ ನಮ್ಮ ಭಾಷೆ ಹೇಗೆ ಬದಲಾಗುತ್ತದೆ. ಕೋಲಾರಕ್ಕೆ ಹೋಗಿ, ತುಮಕೂರಿನ ಹೋಗಿ, ಮೈಸೂರಿಗೆ, ಮಂಗಳೂರು, ಉತ್ತರ ಕರ್ನಾಟಕಕ್ಕೆ ಹೋಗಿ ಭಾಷೆ, ಆಹಾರ ಪದ್ಧತಿ ಎಲ್ಲವೂ ಬದಲಾಗುತ್ತದೆ. ಆದರೂ ಒಟ್ಟಾಗಿ ಹಿಡಿಯುವ ನಮ್ಮ ಸಂಸ್ಕೃತಿ ಅದೇ ಕನ್ನಡ, ಅದೇ ಭಾಷೆಯ ಶಕ್ತಿ.
ಭಾಷೆ ಅಂದರೆ ಕೇವಲ ಅಕ್ಷರ ಸೇವೆ ಮಾಡಿದವರನ್ನು ಮಾತ್ರ ಗುರುತಿಸುವುದಲ್ಲ. ಬೇಕಾದಷ್ಟು ವೈದ್ಯಕೀಯ, ಕೃಷಿ, ಬಾಹ್ಯಾಕಾಶದಲ್ಲಿ ಸೇವೆ ಮಾಡಿದ್ದಾರೆ. ನಾನು ಹೋದ ಕಡೆಯಲ್ಲಾ ವಿಶ್ವೇಶ್ವರಯ್ಯ ನವರ ಬಗ್ಗೆ ಹೇಳುತ್ತೇನೆ. ಅವರು ಕನ್ನಡ ಸಾಹಿತ್ಯ ಪರಿಷತ್ ನ್ನು ಹುಟ್ಟು ಹಾಕಿದ್ದಾರೆ. ಸಾಂಸ್ಕೃತಿಕ ವಾಗಿ ಸಾಹಿತ್ಯಕವಾಗಿ ಭಾಷೆ ಹಿಡಿಯಲಿಕ್ಕೆ ತಳಹದಿ ಹಾಕಿಕೊಟ್ಟರು. ಈ ಕ್ಷಣ ಅವರನ್ನು ನೆನೆಯಬೇಕಾಗಿದೆ. ಬದುಕಿನ ಎಲ್ಲಾ ರಂಗಗಳಲ್ಲಿ ಸೇವೆ ಮಾಡಿದವರೂ ಕೂಡ ಕನ್ನಡ ಸೇವೆ ಮಾಡಿದವರೇ. ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಪ್ರಯತ್ನ ಮಾಡಬೇಕು. ಅವರನ್ನು ಕನ್ನಡದಲ್ಲಿ ಮಾತನಾಡಿಸುವ ಪ್ರಯತ್ನ ಮಾಡಬೇಕು. ನಮ್ಮ ಕನ್ನಡ ಭಾಷೆಯ ಮೇಲಿನ ಪ್ರೀತಿ ಬೆಳೆದದ್ದು ನಮ್ಮ ಕನ್ನಡ ಮೇಸ್ಟ್ರು ಗಳಿಂದ.
ಸ್ನೇಹಿತರೇ ನಾವು ರಾಷ್ಟ್ರ ದೃಷ್ಟಿ, ವಿಶ್ವದೃಷ್ಪಿ ಮತ್ತು ರಾಜ್ಯ ದೃಷ್ಟಿ ಯನ್ನು ಇಟ್ಟುಕೊಳ್ಳಬೇಕು. ಕುವೆಂಪುರವರು "ಜಯಭಾರತಿ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ" ಮೂಲಕ ಸಂದೇಶ ಕೊಟ್ಟಿದ್ದಾರೆ. ನಮ್ಮದೇ ಆದ ರಾಷ್ಟ್ರ ಗೀತೆ, ನಾಡಗೀತೆ ಇದೆ ಬಹಳ ಸಂತೋಷವಾದ ವಿಷಯ. ಅದೇ ರೀತಿ ರಾಷ್ಟ್ರ ಧ್ವಜ ಇದೆ. ರಾಜ್ಯ ಧ್ವಜ ಕೂಡ ಅಧಿಕೃತವಾಗಿ ಆಗಲಿ ಎಂಬುದು ನಮ್ಮ ಆಸೆ. ಕನ್ನಡಿಗರ ಮನಸ್ಸು ಬಹಳ ಶುದ್ಧ ನಿರ್ಮಲ ಮನಸ್ಸು. ಕಾಯಾ ವಾಚಾ ಒಂದೇ ಆಗಿರುವುದು. ನಾವು ಆಲೋಚನೆ ಮಾಡುತ್ತೇವೂ ಅದನ್ನು ಅಕ್ಷರ ರೂಪದಲ್ಲಿ ಬರೆಯುತ್ತೇವೆ. ಅದು ಆಂಗ್ಲ ಭಾಷೆಯಲ್ಲಿ ಸಾಧ್ಯವಿಲ್ಲ. ನೇರವಾಗಿ ಹೃದಯದ ಭಾಷೆ ನಮ್ಮ ಕನ್ನಡ. ಅಷ್ಟು ಅದ್ಭುತವಾದ ಭಾಷೆ.
ಪಂಪ ಹೇಳಿದ ಹಾಗೆ ಮನುಷ್ಯರಾಗಿ ಬದುಕೋಣ. ಬಸವಣ್ಣನವರ ಮಾತಿನಂತೆ ದಯೆಯೇ ಧರ್ಮದ ಮೂಲವಯ್ಯ ಎಂಬಂತೆ ಇನ್ನೊಬ್ಬರಿಗೆ ಸ್ಪಂದಿಸುತ್ತಾ ಪ್ರೀತಿಸುತ್ತಾ, ಶಾಂತಿಯುತ ಸಮಾಜ, ಸೌಹಾರ್ದಯುತ ಸಮಾಜ, ಅಹಿಂಸಾತ್ಮಕ ಸಮಾಜ, ಸಮುದಾಯಕ ಸಮಾಜದ ಕರ್ತವ್ಯ ನಮ್ಮದಾಗಬೇಕು. ನಾವೆಲ್ಲ ಸೌಹಾರ್ದಯುತೆಯಿಂದ ಬದುಕಬೇಕು.
ಕನ್ನಡ ಸಂಸ್ಕೃತಿ ನಮ್ಮನ್ನು ಬಹಳ ಎತ್ತರದ ಸ್ಥಿತಿಗೆ ತೆಗೆದುಕೊಂಡು ಹೋಗುತ್ತದೆ ಎಂಬ ಮಾತುಗಳೊಂದಿಗೆ ಕನ್ನಡದ ವಾತಾವರಣದ ಜೊತೆಗೆ ಕರ್ತವ್ಯ, ಸೌಹಾರ್ದತೆಗಳ ಸುಂದರ ಸಂದೇಶವನ್ನು ವೇದಿಕೆಗೆ ಕೊಟ್ಟು ಗಣ್ಯರು ಮಾತು ಮುಗಿಸಿದರು.
ಗಾನಸುಧೆ:
ನಮ್ಮ ವೇದಿಕೆಯ ಆಸ್ಥಾನ ಗಾಯಕಿ ಮಂಜುಳಾ ಭಾರ್ಗವಿ ಯವರ ಕಂಠದಲ್ಲಿ " ಕನ್ನಡವೆಂದರೆ ಬರಿ ನುಡಿಯಲ್ಲ" ನಿಸಾರ್ ಅಹಮದ್ ರವರ ಕವನ ಭಾವಮಾಧೂರ್ಯದಿಂದ ಸಭಿಕರ ತಣಿಸಿತು.
ಶ್ರೀಮತಿ ವನಮಾಲಾ ಸಂಪನ್ನಕುಮಾರ, ಅಧ್ಯಕ್ಷರು, ಕರ್ನಾಟಕ ಲೇಖಕಿಯರ ಸಂಘ, ಇವರು ವಾಸುಕಿ ಪಡುಕೋಣೆ ಜೀವನ ಚರಿತ್ರೆ ಹೊರತಂದಿದ್ದಾರೆ. "ಗ್ರಹಿಕೆ" ಅದ್ಭುತ ಕೃತಿ- ಉದಯೋನ್ಮುಖ ಬರಹಗಾರ್ತಿಯರ ಕವಿತೆಗಳ ಸಂಗ್ರಹ ತಂದಿದ್ದಾರೆ. "ನಮ್ಮ ಬದುಕಿನ ಪುಟಗಳು"- ಲೇಖಕಿಯರ ಆತ್ಮ ಕಥನ ಸಂಗ್ರಹ, "ನಮ್ಮ ಬದುಕು ಬರಹ" ಹಿರಿಯ ಲೇಖಕಿಯರ ಆತ್ಮಕಥನಗಳು ಸಂಪಾದನೆ. ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಸುಧೀರ್ಘ ಸೇವೆ ಮಾಡಿ ಈಗ ಅಧ್ಯಕ್ಷ ಸ್ಥಾನ ಅಲಂಕಾರ. ಇವರು ಸಾಮಾನ್ಯ ಕಿರಿಯ ಲೇಖಕಿಯ ಪ್ರೊತ್ಸಾಹಿಸುತ್ತಾ, ಅವರಲ್ಲಿ ಆತ್ಮವಿಶ್ವಾಸ, ಆತ್ಮಗೌರವ ಹೆಚ್ಚಿಸುವ ಕೆಲಸ ಮಾಡುತ್ತಿರುವುದು ಕನ್ನಡ ನುಡಿ ಸಂಪತ್ತಿಗೆ ನೀಡುತ್ತಿರುವ ಅಪಾರ ಕೊಡುಗೆಯಾಗಿದೆ.
ಉಪನ್ಯಾಸ:
ಶ್ರೀಮತಿ ವನಮಾಲಾ ಸಂಪನ್ನಕುಮಾರ, ಇವರು ಶಿವರಾಮ ಕಾರಂತರ ಅಪ್ಪಟ ಅಭಿಮಾನಿಯಾಗಿದ್ದು , ಕಾರಂತರ ಬಗ್ಗೆ ಸುಧೀರ್ಘ ವಾಗಿ ಉಪನ್ಯಾಸ ನೀಡಿದರು.
ಕಾರಂತರು ದೊಡ್ಡ ಕಡಲಿನಂತೆ ವಿಶಿಷ್ಟ ವ್ಯಕ್ತಿತ್ವದವರು, ದೇಶವಿದೇಶಗಳಲ್ಲಿ ಪ್ರಸಿದ್ಧರು. ಬದುಕಿದಂತೆ ಬರೆದವರು ಬರೆದಂತೆ ಬದುಕಿದವರು. ಅವರ ವೈಜ್ಞಾನಿಕ ಮನೋಭಾವ, ಸಾಮಾಜಿಕ ಚಿಂತನೆ, ಸಾಂಸ್ಕೃತಿಕ ಪ್ರೀತಿ, ಯಕ್ಷಗಾನ ಇತ್ಯಾದಿ ಗಳ ಸಮಗ್ರ ವಿಷಯ ಮಾತನಾಡಿದರು. "ಚೋಮನ ದುಡಿ" ಕಾದಂಬರಿ, ಚೋಮನ ಭಾವನೆಗಳು, ಹೋರಾಟ, ಅಸ್ಪೃಶ್ಯತೆ ಅಸಮಾನತೆಗಳನ್ನು ಸಮಾಜದ ಮುಂದೆ ತೆರೆದಿಟ್ಟ ಬಗ್ಗೆ ವಿವರಿಸಿದರು. ಕಾರಂತರು ಪ್ರಾತಃ ಸ್ಮರಣೀಯರು ಎನ್ನುತ್ತ ಅವರ ಮರಳಿ ಮಣ್ಣಿಗೆ, ಬೆಟ್ಟದ ಜೀವ, ಮೂಕಜ್ಜಿಯ ಕನಸುಗಳು, ಮೈಮನಗಳ ಸುಳಿಯಲ್ಲಿ ಇತ್ಯಾದಿ ಪುಸ್ತಕಗಳ ಆಂತರ್ಯವನ್ನು ತೆರೆದಿಟ್ಟರು. ಅವರ ಪರಿಸರ ಚಿಂತನೆ ಉದಾಹರಣೆ ಕೈಗಾ ಅಣುಸ್ಥಾವರದ ವಿರುದ್ಧ ಹೋರಾಟ. ಮಕ್ಕಳ ಸಾಹಿತ್ಯ, ಯಕ್ಷಗಾನಕ್ಕೆ ನೀಡಿದ ಕೊಡುಗೆ. ದೂರದೃಷ್ಟಿಯ ಅವರ ಚಿಂತನೆಗಳು. ಅವರ ಅರಸಿ ಬಂದ ಪ್ರಶಸ್ತಿಗಳು. ಒಂದು ಜೀವನದಲ್ಲಿ ಬೆರಗುಗೊಳ್ಳುವಷ್ಟು ಮಾಡಿದ ಕೆಲಸ. ಯಾರೂ ತುಳಿಯದ ಹಾದಿಯಲ್ಲಿ ಕ್ರಮಿಸಿ 92 ವಸಂತಗಳ ಕಾರಂತರ ಶತಮಾನದ ಪಯಣವನ್ನು ತೆರಿದಿಟ್ಟು ವೇದಿಕೆಯ ಸಾರ್ಥಕ ಕನ್ನಡ ರಾಜ್ಯೋತ್ಸವ ಆಚರಣೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿ ಉಪನ್ಯಾಸ ಮುಗಿಸಿದರು.
ಗಾನಸುಧೆ:
ಮತ್ತೊಮ್ಮೆ ಮಂಜುಳಾ ಭಾರ್ಗವಿಯವರ ಕಂಠದಲ್ಲಿ
ಬಿ.ಎಸ್ ಕರ್ಕಿಯವರ "ಹಚ್ಚೇವು ಕನ್ನಡದ ದೀಪ" ಗಾಯನ ಸಭೆಗೆ ಗಾನ ಬೆಳಕು ನೀಡಿತು.
ಗಾನಸುಧೆ:
ಹೌದು ವೇದಿಕೆಯ ಉತ್ಸವದಲ್ಲಿ, ದೇಶದ ರಾಜಧಾನಿಯಲ್ಲಿ ಕನ್ನಡದ ಕಂಪು ಹರಡುತ್ತಾ, ಮಧುರ ಮನಸೊರೆಯುವ ಕಂಠದಲ್ಲಿ ಸಂಗೀತ ಹೃದಯಗಳ ರಂಜಿಸುತ್ತಿರುವ ಗಾಯಕ ಶ್ರೀ ಚಿದಂಬರ ಕೋಟೆಯವರ
ಕಂಠಮಾಧುರ್ಯದಲಿ ಹೊಮ್ಮಿದ "ಪುಷ್ಯಮಾಸದಲ್ಲಿ ಒಂದು ಪ್ರಥಮ ಪ್ರಾತಃಕಾಲ ಭಾವಗೀತೆ, ಶುಭ್ರನವಮಿಯ ಆಕಾಶದ ಶುಭ್ರನೀಲ, ಶೃಂಗಾರದ ಹೂವು......ಭಾವಸಿಂಚನದಲಿ ಮನಸೋತು ಮೈಮರೆತು ತಲೆತೂಗಿದ ಸಭೆ.
ಅಧ್ಯಕ್ಷೀಯ ಭಾಷಣ: ಡಾ.ನಿರ್ಮಲ ಪ್ರಭು, ವಿಶೇಷ ಕನ್ನಡ ಸಾಹಿತ್ಯ ಕೃಷಿ ಮಾಡಿರುವ ಇವರು
ಕನ್ನಡ ಮತ್ತು ಕರುನಾಡು ಉದಯಕ್ಕೆ ಕಾರಣೀಭೂತರಾದ
ಆಲೂರು ವೆಂಕಟರಾಯರ ಕೊಡುಗೆ, 1973 ರಲ್ಲಿ ಕರ್ನಾಟಕ ವಾಗಿ ನಾಮಕರಣದವರೆಗಿನ ಸಂಕ್ಷಿಪ್ತವಾಗಿ ತಿಳಿಸುತ್ತಾ ಅತಿಥಿಗಳ ಭಾಷಣದಲ್ಲಿನ ವಿಷಯಗಳ ಬಗ್ಗೆ ಮೆಚ್ಚುಗೆ ನುಡಿಗಳೊಂದಿಗೆ ಉತ್ಕೃಷ್ಟ ನಮ್ಮ ಕನ್ನಡ ಭಾಷೆಯ ಬೆಳವಣಿಗೆಗೆ ನಮ್ಮ ಕರ್ತವ್ಯ ಗಳನ್ನು ಮುಂದಿಟ್ಟರು.
ವಂದನಾರ್ಪಣೆ:
ವೇದಿಕೆಯ ಉಪಾಧ್ಯಕ್ಷರಾದ ಶ್ರೀ ವೀರಶೇಖರ ಸ್ವಾಮಿಯವರು ಅರ್ಥ ಪೂರ್ಣವಾದ ವಂದನಾರ್ಪಣೆ ಮಾಡುವ ಮೂಲಕ ನಮ್ಮ ವೇದಿಕೆಯ ಕನ್ನಡ ರಾಜ್ಯೋತ್ಸವದ ವಿಶೇಷ ಕಾರ್ಯಕ್ರಮ ಮುಗಿಯಿತು.
ಕಾರ್ಯಕ್ರಮಗಳ ಆಯೋಜನೆ, ಕಷ್ಟದ ಲೆಕ್ಕ ಬರೆಯುವ,
ಕಾರ್ಯಕ್ರಮಗಳ ಯಶಸ್ಸಿಗೆ ತೊಡಗಿಸಿಕೊಳ್ಳುವ ಕೋಶಾಧಿಕಾರಿ ಶ್ರೀ ಜಯರಾಮ ಸೋಮಯಾಜಿಯವರು ಸದಾ ಅಭಿನಂದನಾರ್ಹರು.
~~~~~~~
ಎಂಟು ಜ್ಞಾನಪೀಠ ಪ್ರಶಸ್ತಿಗಳ ಮುಡಿಗೇರಿಸಿಕೊಂಡ ಕಸ್ತೂರಿ ಕನ್ನಡ ನಮ್ಮದು- ಸಿರಿಗನ್ನಡ ಗೆಲ್ಲಲಿ ಬಾಳಲಿ🙏
ಧನ್ಯವಾದಗಳು
ವೇದಿಕೆಯ ಪರವಾಗಿ
ಶಶಿಕಲಾ ಆರ್
ಸಹ ಕಾರ್ಯದರ್ಶಿ
ಭಾನುವಾರ, 21 ನವಂಬರ 2021
ಮೂರು ವರ್ಷಕ್ಕೊಮ್ಮೆ ನಡೆಯುವ ಕನ್ನಡ ಸಾಹಿತ್ಯ ಪರಷತ್ ಚುನಾವಣೆಯು ನಿನ್ನೆ ನಡೆಯಿತು.