Wednesday, February 23, 2022

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬ್ರಹ್ಮಾವರ

 ಗುರುವಾರ, 17 ಫೆಬ್ರವರಿ, 2022 

ಬ್ರಹ್ಮಾವರ

ಎಷ್ಟೋ ವರುಷಗಳ ನಂತರ ಬ್ರಹ್ಮಾವರದ ಶ್ರೀ ಮಹಾಲಿಂಗೇಶ್ವರ ದೇವರ ದರುಶನವಾಯಿತು.



ಅಂದು ಸಂಜೆ ಹೀಗೇ ಬ್ರಹ್ಮಾವರಕ್ಕೆ ಏನೋ ಖರೀದಿಸಲು ಹೋಗಿದ್ದಾಗ ದೇವಸ್ಥಾನದ ಆವರಣಕ್ಕೆ ಹೋದೆವು.

ಆಗ ಸಂಜೆಯ ಪೂಜೆಯೂ ನಡೆಯುತ್ತಿತ್ತು.






ಬಾಲ್ಯದ ದಿನಗಳ ನೆನಪು ಮರುಕಳಿಸಿತು.

ಹೈಸ್ಕೂಲಿಗೆ ಹೋಗುವಾಗ, ರಜ ದಿನಗಳಲ್ಲಿ ಈ ದೇವಸ್ಥಾನದಲ್ಲಿ ಬಹಳಷ್ಟು ಮದುವೆಯ ಸಮಾರಂಭಗಳು  ನಡೆಯುತ್ತಿತ್ತು. ಶ್ರೀ ಹಂದಾಡಿ ಲಕ್ಷ್ಮೀನಾರಾಯಣ ಭಟ್ಟರು ಉಸ್ತುವಾರಿಯಾಗಿ ನೋಡಿ ಕೊಳ್ಳುತಿದ್ದರು.

ನೂರಾರು ಜನರು ಸಮಾರಂಭಕ್ಕೆ ಊಟದ ವ್ಯವಸ್ತೆಯನ್ನು ಭಟ್ಟರು ಮಾಡುತಿದ್ದರು. ಅದಕ್ಕೆ ಬಳಸುವಿಕೆಗೆ ಅವರು ಕರೆಯುತಿದ್ದರು, ಆಗ ನೂರು ರೂಪಾಯಿಯ ಸಂಭಾವನೆ (ದಕ್ಷಿಣೆ) ಮತ್ತು ಊಟ. ಹೀಗೆ ಹಲವರು ರಜಾ ದಿನಗಳನ್ನು ಕಳೆದ ನೆನಪಾಯಿತು.



ಬ್ರಹ್ಮಾವರದ ಜಾತ್ರೆಯ ಸಮಯದಲ್ಲಿ ಕೆಲವು ವರ್ಷ ಹೋಗಿದ್ದೂ ಇದೆ.

ಎಂ. ಜಿ.ಎಂ. ಕಾಲೇಜಿನ ಗಣಿತ ಪ್ರಾಧ್ಯಾಪಕರು ಶ್ರೀ ಬಿ ವಿ. ಆಚಾರ್ಯರ ಮನೆ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಇತ್ತು. ಅವರು ಕಾಲವಾಗಿ ಹಲವಾರು ವರ್ಷಗಳೇ ಕಳೆದವು.


ಇಂದು ದೇವಸ್ಥಾನದ ಆವರಣದಲ್ಲಿ ಸ್ವಲ್ಪ ಸಮಯ ಕಳೆದು ದರ್ಶನವೂ ಆಗಿ ಹಿಂತಿರುಗಿದೆವು.



ಬರೆದಿರುವುದು, ಗುರುವಾರ, 24 ಫೆಬ್ರವರಿ 2022 





No comments:

Post a Comment