ಭಾನುವಾರ, ಆಗೋಸ್ಟ್ 7, 2022
ಗಾಯನ ಸಮಾಜ, ಬೆಂಗಳೂರು.
ಪರಿಮಳ ಗೆಳೆಯರ ಬಳಗದ 47 ನೇ ವಾರ್ಷಿಕೋತ್ಸವವು ಅತ್ಯಂತ ಸುಂದರವಾಗಿ, ಅಚ್ಚುಕಟ್ಟಾಗಿ ಬೆಂಗಳೂರು ಗಾಯನ ಸಮಾಜದ ಸಭಾಂಗಣದಲ್ಲಿ ಸಂಪನ್ನ ಗೊಂಡಿತು.
ರಾಘವೇಂದ್ರ ಸ್ವಾಮಿಯವರ ಆರಾಧಕ ರಾಗಿರುವ ಗೆಳೆಯರ ಬಳಗ ದವರು, ಮಂತ್ರಾಲಯದ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುವಿಧಿಂದ್ರ ತೀರ್ಥ ಶ್ರೀ ಪಾದಂಗಳವರು, ಉಡುಪಿಯ ಫಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿಧ್ಯಾಧೀಶ ತೀರ್ಥ ಶ್ರೀ ಪಾದಂಗಳವರನ್ನು ಆಶೀರ್ವಚನಕ್ಕೆ ಆಮಂತ್ರಿಸಿದ್ದರು.
ಹಾಗೆಯೇ, ಅತಿ ಗಣ್ಯ ವ್ಯಕ್ತಿಗಳಾದ ನಿವೃತ್ತ ಮುಖ್ಯ ನ್ಯಾಯಾಧೀಶರುಗಳಾದ ಶ್ರೀ ವೆಂಕಟಾಚಲಯ್ಯ, ಹಾಗೂ ಶ್ರೀ ಸಂತೋಷ್ ಹೆಗ್ಡೆಯವರು ವಿಶೇಷ ಅತಿಥಿಗಳಾಗಿದ್ದರು.
ಗೆಳೆಯರ ಬಳಗದ ಮುಖ್ಯಸ್ಥರು ಡಾ ಜಯಸಿಂಹ ಶ್ರೀನಿವಾಸಮೂರ್ತಿ, ಹರಿದಾಸ ಸಾಹಿತ್ಯದ ಸಂಶೋಧಕ, ಲೇಖಕ, ಅವರ 102 ನೇ ಪುಸ್ತಕ 'ಕನಕದಾಸ ದರ್ಶನ" ಪುಸ್ತಕ ಬಿಡುಗಡೆಯನ್ನು ಸ್ವಾಮಿಜಿಯವರು ಮಾಡಿದರು.
ನಿಗದಿತ ಸಮಯದಲ್ಲಿ ಪ್ರಾರಂಭವಾದ ಕಾರ್ಯಕ್ರಮ, ಪ್ರಾರ್ಥನೆ, ಕನಕದಾಸರ ಹಾಡುಗಳು, ಮಂಗಳಾರತಿ, ಸ್ವಾಗತ ಭಾಷಣದೊಂದಿಗೆ ಮುಂದುವರಿಯಿತು.
ದೀಪ ಬೆಳಗುವಿಕೆ , ಜಯಸಿಂಹ, ವೆಂಕಟಚಲಯ್ಯ, ಸಂತೋಷ್ ಹೆಗ್ಡೆ |
ನ್ಯಾ. ಸಂತೋಷ್ ಹೆಗ್ಡೆ |
ಉಲ್ಲಾಸ್ ಕಾರಂತ್ |
ತಿರು ಶ್ರೀಧರ್ |
ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದ 12 ಜನ ಗಣ್ಯ ವ್ಯಕ್ತಿಗಳನ್ನು ಹಾರ, ಶಾಲು, ಸ್ಮರಣಿಕೆಗಳನ್ನು ನೀಡಿ ಸನ್ಮಾಸಿಲಾಯಿತು.
ಉಲ್ಲಾಸ್ ಕಾರಂತ್ ಅವರೊಡನೆ |
ನೆರೆದಿದ್ದ ಎಲ್ಲ ಸಭಿಕರಿಗೆ ಮಂತ್ರಾಲಯ ಶ್ರೀಪಾದರು ಇವರಿಂದ ಮಂತ್ರಾಕ್ಷತೆ, ಪ್ರಸಾದವನ್ನು ನೀಡಲಾಯಿತು.
ಖ್ಯಾತ ಗಾಯಕ ರಾಯಚೂರು ಶೇಷಗಿರಿದಾಸ್ ಮತ್ತು ಅವರ ತಂಡದವರಿಂದ ಹರಿದಾಸ ಕೀರ್ತನೆಯೂ ಅದ್ಭುತವಾಗಿತ್ತು.
ಅದೊಂದು ಸಂಜೆಯ ಸುಂದರವಾದ ಕಾರ್ಯಕ್ರಮವಾಗಿತ್ತು.
ಬರೆದಿರುವುದು ಮಂಗಳವಾರ, ಆಗೋಸ್ಟ್ 9, 2022
No comments:
Post a Comment