Tuesday, August 30, 2022

"ವೃದ್ಧರಾಗಬೇಡಿ, "ಹಿರಿಯರಾಗಿರಿ"

 "ವೃದ್ಧರಾಗಬೇಡಿ, "ಹಿರಿಯರಾಗಿರಿ"

ವೃದ್ಧಾಪ್ಯ 

ಎರಡರ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಿ ಮತ್ತು ಜೀವನವನ್ನು ಪೂರ್ತಿಯಾಗಿ ಆನಂದಿಸಿ...

ಒಬ್ಬ ವ್ಯಕ್ತಿಯು ವಯಸ್ಸಾದಾಗ ... 

'ವೃದ್ಧ' ಅಲ್ಲ *"ಹಿರಿಯ" ನಾಗಬೇಕು.

"ವೃದ್ಧಾಪ್ಯ"...ಇತರ ಜನರನ್ನು ಆಧಾರಕ್ಕಾಗಿ ಹುಡುಕುತ್ತದೆ.

 "ಹಿರಿತನ"... ಜನರಿಗೆ ಆಧಾರ ನೀಡುತ್ತದೆ

 " ವೃದ್ಧಾಪ್ಯ"... ಮರೆ ಮಾಚಲು ಬಯಸುತ್ತದೆ

  "ಹಿರಿತನ"... ಬೆಳಕಿಗೆ ತರಲು ಬಯಸುತ್ತದೆ.

 " ವೃದ್ಧಾಪ್ಯ"... ಅಹಂಕಾರಿಯಾಗಿರುತ್ತದೆ.

 "ಹಿರಿತನ"...ಅನುಭವಿ, ವಿನಯಶೀಲ ಮತ್ತು  ಸಂಯಮಶೀಲವಾಗಿರುತ್ತದೆ.     

"ವೃದ್ಧಾಪ್ಯ"...ಹೊಸ ತಲೆಮಾರಿನ ವಿಚಾರಗಳಲ್ಲಿ ಕೈ ಹಾಕಿ ತಿದ್ದಲು ಹೊರಡುತ್ತದೆ.

"ಹಿರಿತನ"...ಯುವ ಪೀಳಿಗೆಗೆ ಬದಲುತ್ತಿರುವ ಕಾಲಕ್ಕೆ ತಕ್ಕಂತೆ ಬದುಕಲು ಅನುವು ಮಾಡಿ ಕೊಡುತ್ತದೆ

"ವೃದ್ಧಾಪ್ಯ".. * ನಮ್ಮ ಕಾಲದಲ್ಲಿ ಹೀಗಿತ್ತು ಎಂದು ಚಿಟ್ಟು ಹಿಡಿಸುತ್ತದೆ.

 "ಹಿರಿತನ"...ಬದಲಾಗುತ್ತಿರುವ ಕಾಲದೊಡನೆ ತನ್ನ ನಂಟು ಬೆಳೆಸುತ್ತದೆ ಮತ್ತು ಅದನ್ನು ತನ್ನದಾಗಿಸಿಕೊಳ್ಳುತ್ತದೆ.

"ವೃದ್ಧಾಪ್ಯ"...ಹೊಸ ಪೀಳಿಗೆಯ ಮೇಲೆ ತನ್ನ ಅಭಿಪ್ರಾಯವನ್ನು ಹೇರುತ್ತದೆ.

"ಹಿರಿತನ"...ಯುವ ಪೀಳಿಗೆಯ ಅಭಿಪ್ರಾಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ

 "ವೃದ್ಧಾಪ್ಯ"...ಜೀವನದ ಸಂಜೆಯಲ್ಲಿ ಅದರ ಅಂತ್ಯವನ್ನು ಹುಡುಕುತ್ತದೆ.

 "ಹಿರಿತನ"...ಜೀವನದ ಸಂಜೆಯಲ್ಲೂ ಹೊಸ ಉದಯವನ್ನು ಕಾಯುತ್ತದೆ ಹಾಗೂ ಯುವಕರ ಸ್ಫೂರ್ತಿಯಿಂದ ಪ್ರೇರಿತವಾಗುತ್ತದೆ.

ಹಿರಿಯರು 

"ಹಿರಿತನ" ಮತ್ತು "ವೃದ್ಧಾಪ್ಯ" ಗಳ ನಡುವಿನ ವ್ಯತ್ಯಾಸವನ್ನು ಗಂಭೀರತಾಪೂರ್ವಕವಾಗಿ ಅರ್ಥ ಮಾಡಿಕೊಂಡು ಮೂಲಕ ಜೀವನವನ್ನು ಪೂರ್ಣವಾಗಿ ಆನಂದಿಸಲು ಸಮರ್ಥರಾಗಿ.

ವಯಸ್ಸು ಎಷ್ಟೇ ಇರಲಿ.... ಸದಾ ಹೂವಿನಂತೆ ಅರಳಿ...

ಉಲ್ಲಾಸ, ಉತ್ಸಾಹಗಳಿಂದ ಬದುಕಿರಿ... ಮತ್ತು ಇತರರ ಜೀವನಕ್ಕೆ ಸ್ಫೂರ್ತಿಯಾಗಿರಿ.

No comments:

Post a Comment