ಭಾನುವಾರ, ಮಾರ್ಚ್ 19, 2023
ವಿನಾಯಕ ದೇವಸ್ಥಾನ ಸಭಾಂಗಣ, ಅರ್.ಟಿ. ನಗರ, ಬೆಂಗಳೂರು.
ಶಿವರಾಮ ಕಾರಂತ ವೇದಿಕೆಯ ಮಾರ್ಚ್ ತಿಂಗಳ ಕಾರ್ಯಕ್ರಮವು "ಮಹಿಳಾ ದಿನಾಚರಣೆ" - ನೆಲಮುಗಿಲಿನ ಮಾತುಗಳು, ಮಹಿಳಾ ಕವಿಗಳ ಹನಿ ಮಾತು ಯೊಂದಿಗೆ ಸಂಪನ್ನ ಗೊಂಡಿತು.
ಅಧ್ಯಕ್ಷೆ ಶ್ರೀಮತಿ ಡಾ ದೀಪಾ ಫಡ್ಕೆ |
ಭಾಗವಹಿಸಿದ ಕವಿಗಳು:
ಶ್ರೀಮತಿ ಲಲಿತಾ ಹೊಸಪ್ಯಾಟಿ
ಶ್ರೀಮತಿ ಪಿ. ಚಂದ್ರಿಕಾ
ಶ್ರೀಮತಿ ವಸುಂಧರಾ ಕಡಲೂರು
ಶ್ರೀಮತಿ ಪೂರ್ಣಿಮಾ ಮಾಳಗಿಮನಿ
ಶ್ರೀಮತಿ ಅಮ್ರತ ಮೆಹೆಂದಳೆ
ಹಾಗೂ ಹಿರಿಯ ಕವಿಯ "ಹಿರಿ ಮಾತು" ಶ್ರೀಮತಿ ಲಲಿತಾ ಸಿದ್ದಬಸವಯ್ಯ
ಎಲ್ಲಾ ಕವಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ಕವಿತೆಯ ರೂಪದಲ್ಲಿ, ಭಾಷಣದ ಮೂಲಕ ಅರುಹಿದರು.
ಮುಖ್ಯವಾಗಿ ಸ್ತ್ರೀ ಶಕ್ತಿ ಮತ್ತು ಮಹಿಳೆಗೆ ಸಮಾನ ಅವಕಾಶ, ಅಬಲೆಯಲ್ಲ ಸಬಲೆ, ಪುರುಷರಂತೆ ಸ್ತ್ರೀಯೂ ಎಲ್ಲಾ ಸ್ತರದಲ್ಲಿ ಜವಾಬ್ದಾರಿಯನ್ನು ನಿಭಾಯಿಸಬಳ್ಳಲು ಎಂಬುದು ಮುಖ್ಯವಾದ ವಿಷಯವಾಗಿತ್ತು.
ಪ್ರಾರಂಭದಲ್ಲಿ ಶ್ರೀಮತಿ ಮಂಜುಳಾ ಭಾರ್ಗವಿಯವರಿಂದ ಪ್ರಾರ್ಥನೆಯಾದ ನಂತರ ಕಾರಂತ ವೇದಿಕೆಯ ಅಧ್ಯಕ್ಷೆ ಶ್ರೀಮತಿ ದೀಪಾ ಫದ್ಕೆಯವರು ಪ್ರಾಸ್ತಾವಿಕ ನುಡಿ ಮತ್ತು ಅತಿಥಿ ಕವಿಗಳನ್ನು ಹಾಗೂ ಸಭಿಕರನ್ನು ಸ್ವಾಗತಿಸಿದರು.
ಸಂಸ್ಥಾಪಕ ಶ್ರೀ ಪಾ ಚಂದ್ರಶೇಖರ ಚಡಗ |
ಹಿರಿಯ ಕವಿ ಶ್ರೀಮತಿ ಲಲಿತಾ ಸಿದ್ದಬಸವಯ್ಯ ತಮ್ಮ ಹಿರಿಮಾತಿನಲ್ಲಿ ರಾಮಾಯಣ, ಮಹಾಭಾರತದಲ್ಲಿ ಆದ ಸ್ತ್ರೀ ಶೋಷಣೆಯನ್ನು ಉಲ್ಲೇಖಿಸಿ ಎಲ್ಲಾ ಸ್ತ್ರೀಯರಿಗೂ ಸಮಾನ ಹಕ್ಕುಗಳಿಗಾಗಿ ಪ್ರತಿಪಾದಿಸಿ, ಇತರ ಕವಿಗಳ ಕವಿತೆಗಳನ್ನು, ವಿಚಾರಗಳನ್ನು ಪ್ರಶಂಸಿದರು.
ಕಾರ್ಯಕಾರಿ ಸಮಿತಿ ಸದಸ್ಯ ಶ್ರೀ ಸುಧೀಂದ್ರ ಅವರು ಧನ್ಯವಾದ ಸಮರ್ಪಣೆ ಮಾಡಿ, ಅತಿಥಿಗಳಿಗೆ ಗೌರವ ಸಮರ್ಪನೆಯನ್ನೂ ಮಾಡಲಾಯಿತು.
"ಬಲ್ಲಿರೇನಯ್ಯ" - ಚಿತ್ಪಾವನ ಮಹಿಳಾ ಯಕ್ಷಗಾನ ಮಂಡಳಿ, ಬೆಂಗಳೂರು ಇವರಿಂದ ಒಂದು ಗಂಟೆಯ ಕಾಲದ ಯಕ್ಷಗಾನ ನಡೆಯಿತು.
ಪ್ರಸಂಗ : ಪಾರ್ತಿ ಸುಬ್ಬ ವಿರಚಿತ "ಪಂಚವಟಿ"
ನಿರ್ದೇಶನ " ಶ್ರೀ ಅನಂತ ಪದ್ಮನಾಭ ಪಾಟಕ್ , ತರಬೇತಿ : ಶ್ರೀ ಮನೋಜ್ ಭಟ್
ಫೇಸ್ಬುಕ್ ನ ಲಿಂಕ್ ಅಡ್ರೆಸ್:
https://m.facebook.com/story.php?story_fbid=895711168377788&id=100085636043383&mibextid=Nif5oz
https://www.facebook.com/shiva.subramanya/videos/1415903542516354/?mibextid=Nif5oz
ಬರೆದಿರುವುದು 20/3/2023
No comments:
Post a Comment