Tuesday, March 7, 2023

ಹೋಂ ರೂಲು - ಕನ್ನಡ ನಾಟಕ

 ಭಾನುವಾರ, ಮಾರ್ಚ್ 5, 2023 

ಸೇವಾ ಸದನ, ಮಲ್ಲೇಶ್ವರ, ಬೆಂಗಳೂರು.

ಕೈಲಾಸಂ ಅವರ ನಗೆ ನಾಟಕ "ಹೋಂ ರೂಲು"



ಕೈಲಾಸಂ ಎಂದರೆ ನಗೆಯಬುಗ್ಗೆ, ಮಾತುಗಳ ಆಗರ. ವಿಡಂಬನೆಗೂಡು, ಇವು ಅವರ ಕೃತಿಗಳಲ್ಲಿ ಎದ್ದುಕಾಣುವ, ಓದುಗ ನಿರೀಕ್ಷಿಸುವ ಅಂಶಗಳು.


ವೈ. ವಿ. ಗುಂಡೂ ರಾವ್ 

ಹೋಂರೂಲ್ ನಾಟಕದ ವಸ್ತು ಹೀಗಿದೆ. ಮೈದಾನದಲ್ಲಿ ಹೆಬ್ಬುಲಿ ಮನೇಲಿ ಮೂಗಿಲಿ ಈ ನಾಟಕದ ಪಾತ್ರಧಾರಿ ರಾಮಣ್ಣ. ಮನೆಯ ಯಜಮಾನಿಕೆ ತನ್ನ ಹಿಡಿತದಲ್ಲಿಟ್ಟುಕೊಳ್ಳು ಪ್ರಯತ್ನಿಸುವ ಹೆಂಡತಿ ತಾಯಿ ಮಧ್ಯೆ ನರಳುವ ಅಸಹಾಯಕ ಪ್ರಾಣಿಯೆ ಈ ರಾಮಣ್ಣ.




ಖ್ಯಾತ ವಿಮರ್ಶಕ, ವಾಗ್ಮಿ, ನಾಟಕಕಾರ ವೈ,ವಿ, ಗುಂಡೂ ರಾವ್ ಅವರ ನಿರ್ದೇಶನ ಹಾಗೂ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ನಗೆ ನಾಟಕ "ಹೋಂ ರೂಲು"


ಗುಂಡೂ ರಾವ್ ಅವರು ಸುಮಾರು 20 ನಿಮಿಷಗಳ ಕಾಲ "ಟಿ. ಪಿ. ಕೈಲಾಸಂ ಜಲಕ್" ಎಂಬ ವಿಶಯವಾಗಿ ಕೈಲಾಸಂ ಅವರ ಹಾಸ್ಯ ಪ್ರಜ್ಞೆ, ನಾಟಕಗಳ ಬಗ್ಗೆ ಮಾತನಾಡಿದರು.


ರಾಮಣ್ಣ ಪಾತ್ರದಲ್ಲಿ ಗುಂಡೂ ರಾವ್ ಅಭಿನಯಿಸಿ, ಹೆಂಡತಿ ಮತ್ತು ತಾಯಿಯ ನಡುವಿನ ಘರ್ಷಣೆ, ರಸವತ್ತಾಗಿ ರಂಗದ ಮೇಲೆ ನಟಿಸಿದರು.

ರಾಮಣ್ಣನ ಹೆಂಡತಿ, ಅಜ್ಜಿಯ  ಪಾತ್ರವೂ ಚೆನ್ನಾಗಿ ಮೂಡಿ ಬಂದಿತ್ತು.

ಬರೆದಿರುವುದು 8/3/2023 




No comments:

Post a Comment