ಭಾನುವಾರ, ಮಾರ್ಚ್ 5, 2023 , ಬೆಳಿಗ್ಗೆ 7 ಗಂಟೆ.
ರಾಮಾಂಜನೇಯ ಗುಡ್ಡ, ಬೆಂಗಳೂರು.
ಅಂದು ಮುಂಜಾನೆ 6 ಗಂಟೆಗೆ ಮನೆಯಿಂದ ಹೊರಟು, ಹನುಮಂತ ನಗರದಲ್ಲಿರುವ ರಾಮಾಂಜನೇಯ ಗುಡ್ಡದ ಕೆಳಗೆ 7 ಗಂಟೆಗೆ ತಲುಪಿ, ಅಲ್ಲಿ ಇಲ್ಲಿ ಕಾರು ನಿಲ್ಲಿಸಲು ಸ್ಥಳ ಹುಡುಕಿ ಸುಮಾರು 50 ಮೆಟ್ಟಿಲುಗಳು ಇರುವ ಬೆಟ್ಟದ ಮೇಲೆ ತಲುಪಿದೆವು.
ನಿರುಪಮ - ರಾಜೇಂದ್ರ ಅವರ ಅಭಿನವ ಡ್ಯಾನ್ಸ್ ಕಂಪನಿಯವರ ಮದನೋತ್ಸವ ಕಾರ್ಯಕ್ರಮದ ಪೂರ್ವ ತಯಾರಿ. ಸುಂದರವಾದ ವಾತಾವರಣ ದಲ್ಲಿಯ, ಆಯೋಜಕರ ಓಡಾಟ, ನ್ರತ್ಯದಲ್ಲಿ ಭಾಗವಹಿಸುವರ ಆತಂಕ, ಆಗಲೇ ಹಲವಾರು ಮಂದಿ ಆಸೀನರಾಗಿರುವುದು .....
ಸುಮಾರು 7 .30 ಗಂಟೆಗೆ ಪ್ರಾರಂಭವಾದ "ಸುಪ್ರಭಾತ" ನ್ರತ್ಯ ಸಂಯೋಜನೆ, ಪ್ರವೀಣ್ . ಡಿ. ರಾವ್ ಸಂಗೀತ, ರು ನೂರಕ್ಕೂ ಹೆಚ್ಚು ನ್ರತ್ಯಧಾರಿಗಳು ಭಾಗವಹಿಸಿದರು. ಸುಮಾರು 15 ನಿಮಿಷಗಳ ಕಾಲದ ಪ್ರಸ್ತುತಿ.
ಅವರ ನ್ರತ್ಯದ ಚಲನ ವಲನೆ, ಭಾವ ಭಂಗಿ, ಮುಖದ ಮುಗ್ಧತೆ ಮನಸ್ಸಿಗೆ ಉಲ್ಲಾಸ ಕರವಾಗಿತ್ತು.
ನಂತರದ ಕಾರ್ಯಕ್ರಮ ವೆಂಕಟೇಶ್ ಕುಮಾರ್ ಅವರ ಹಿಂದುಸ್ತಾನಿ ಗಾಯನ.....
ಬರೆದಿರುವುದು 6/3/2023
No comments:
Post a Comment