ಆಯಸ್ಸು ಮತ್ತು ನೀನು
1. ನೂರು ಕೋಟಿಗೆ ಅಧಿಪತಿಯಾದರೂ ಒಂದು ನಿಮಿಷದ ಆಯುಷ್ಯವನ್ನು ಕೊಳ್ಳಲಾಗದೆಂದು ತಿಳಿದುಕೊ.
2. ಕೋಟಿಕೋಟಿಗಳಿಗೆ ವಾರಸುದಾರನಾದರೂ ಉಸಿರು ನಿಂತ ತಕ್ಷಣ ಹೊರಗಡೆ ಎಸೆಯುತ್ತಾರೆಂದು ತಿಳಿದುಕೊ.
3. ಲಕ್ಷಾಧಿಪತಿಯಾದರೂ, ಭಿಕ್ಷಾಧಿಪತಿಯಾದರೂ ಸ್ಮಶಾನದಲ್ಲಿ ಇಬ್ಬರೂ ಸರಿಸಮಾನರೆಂದು ತಿಳಿದುಕೊ.
4. ನೂರು ಜನ ವೈದ್ಯರು ನಿನ್ನ ಸುತ್ತಲೂ ಇದ್ದರೂ ನಿನ್ನ ಪರಲೋಕ ಪ್ರಯಾಣವನ್ನು ತಡೆಯಲಾರರೆಂದು ತಿಳಿದುಕೊ.
5. ಪ್ರಪಂಚಕ್ಕೆಲ್ಲಾ ಅಧಿಪತಿಯಾದರೂ ನಿನ್ನ ಆಯುಷ್ಯಕ್ಕೆ ಅಧಿಪತಿ ಯಾರೆಂದು ತಿಳಿದುಕೊ.
6. ಸಮಸ್ತ ಪ್ರಪಂಚವನ್ನು ಜಯಿಸಿದರೂ ಮೃತ್ಯುವನ್ನು ಜಯಿಸಲಾರೆ ಎಂದು ತಿಳಿದುಕೊ.
7. ಸಮಯ ಬಹಳ ಮಹತ್ವವಾದದ್ದು. ಒಳ್ಳೆಯ ಕೆಲಸಗಳನ್ನು ನಾಳೆಗೆ ಎಂದು ಮುಂದೂಡದಿರು.
8. ಲಕ್ಷಗಳಿವೆ, ಕೋಟಿಗಳಿವೆ ಎಂದು ಉಬ್ಬಬೇಡ. ಆ ಲಕ್ಷಗಳು ನಿನ್ನ ಹಿಂದೆ ಬಾರವೆಂದು, ಮೃತ್ಯುವಿನಿಂದ ತಪ್ಪಿಸಲಾರವೆಂದು ತಿಳಿದುಕೊ.
9. ನೀನು ಕೂಡಿಟ್ಟಿದ್ದು ಜಾರಿ ಹೋಗುತ್ತದೆ. ಇನ್ನೊಬ್ಬರಿಗೆ ಸಹಕರಿಸಿದರೆ ನಿನ್ನ ಖಾತೆಯಲ್ಲಿ ಜಮಾ ಆಗುತ್ತದೆ ತಿಳಿದುಕೊ.
10. ಭೋಗಗಳಿಗೆ ವ್ಯಯಮಾಡಿ ರೋಗಗಳನ್ನು ತಂದುಕೊಳ್ಳಬೇಡ. ಒಳ್ಳೆಯ ಕೆಲಸಗಳಿಗೆ ವ್ಯಯಮಾಡಿ ಪುಣ್ಯವನ್ನು ಹೆಚ್ಚಿಸಿಕೊ. ಆ ಪುಣ್ಯವೇ ನಿನ್ನ ಹಣೆಯ ಬರಹ.
WhatsApp forwarded
29/3/2023
No comments:
Post a Comment